ಕೇತನ್ ಅಗರ್ವಾಲ್ ಲೋಹಘಡ ಬೆಟ್ಟದಿಂದ ತಳ್ಳಿ ಹಾಕಿ ಕೊಂದ ಭಾವಿ ಪತ್ನಿ ಸಿಯಾ ಗೊಯೆಲ್ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಸಿಯಾ ಹಾಗೂ ಪ್ರಿಯತಮ ಚೇತನ್ ಪ್ರೀತಿಗೆ ಕ್ರಿಕೆಟ್ ಕನೆಕ್ಷನ್ ಇದೆ. ಇವರಿಬ್ಬರ ನಡುವೆ ಕ್ರಿಕೆಟ್ ಪಾತ್ರವೇನು?

ಪುಣೆ (ಜೂ.27) ಉದ್ಯಮಿ ಪುತ್ರ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಪೊಲೀಸ್ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಕೇತನ್ ಹಾಗೂ ಸಿಯಾ ಗೊಯೆಲ್ ನಡುವೆ ನಿಶ್ಚಿತಾರ್ಥ ನಡೆದು ಮದುವೆಗೆ ಸಿದ್ದತೆ ಅಂತಿಮ ಹಂತದಲ್ಲಿತ್ತು. ಇದರ ನಡುವೆ ಭಾವಿ ಪತ್ನಿ ಸಿಯಾ ಗೊಯೆಲ್ ಪುಣೆಯ ಲೋಹಘಡ ಬೆಟ್ಟದ ಮೇಲಿನಿಂದ ಕೇತನ್ ತಳ್ಳಿ ಹಾಕಿ ಹತ್ಯೆ ಮಾಡಿದ್ದಳು. ಈ ಪ್ರಕರಣ ಸಂಬಂಧ ಇದೀಗ ಮತ್ತೊಂದು ಮಾಹಿತಿ ಬಯಲಾಗಿದೆ. ಹತ್ಯೆ ಮಾಡಿದ ಸಿಯಾ ಗೊಯೆಲ್ ಹಾಗೂ ಆಕೆಯ ಪ್ರಿಯತಮ ಚೇತನ್ ಚೌಧರಿ ನಡುವಿನ ಪ್ರೀತಿ ಹುಟ್ಟಲು ಕ್ರಿಕೆಟ್ ಕಾರಣವಾಗಿತ್ತು ಅನ್ನೋ ಮಾಹಿತಿ ಬಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಯಾ ಹಾಗೂ ಚೇತನ್ ಪ್ರೀತಿಗೆ ಇದೆ ಕ್ರಿಕೆಟ್ ಕನೆಕ್ಷನ್

ಸಿಯಾ ಗೊಯೆಲ್ ಹಾಗೂ ಚೇತನ್ ಚೌಧರಿ ಪ್ರೀತಿಯಲ್ಲಿ ಬಿದ್ದಿದ್ದರು. ಇದ್ಯಾವುದರ ಅರಿವಿಲ್ಲದ ಪೋಷಕರು ಕೇತನ್ ಅಗರ್ವಾಲ್ ಜೊತೆ ಮದುವೆ ಮಾಡಲು ಮುಂದಾಗಿದ್ದರು. ಕೇತನ್ ಮದುವೆಯಾಗಲು ಸಿಯಾ ಗೊಯೆಲ್‌ಗೆ ಇಷ್ಟವರಿಲ್ಲ. ಸಿಯಾ ಗೊಯೆಲ್ ಹಾಗೂ ಗೆಳೆಯ ಚೇತನ್ ಚೌಧರಿ ನಡುವಿನ ರಿಲೇಶನ್‌ಶಿಪ್ ಗಾಢವಾಗಿ ಇರಲಿಲ್ಲ. ಬಿಟ್ಟಿರಲಾರದ ಪ್ರೀತಿ ಆಗಿರಲಿಲ್ಲ. ಇವರಿಬ್ಬರು ಕ್ರಿಕೆಟ್ ಪಂದ್ಯದಿಂದ ಪರಿಚಯಸ್ಥರಾಗಿದ್ದರು. ಸಿಯಾ ಗೊಯೆಲ್ ಸಹೋದರ ಸಾಹಿಲ್ ಗೊಯೆಲ್ ಕ್ರಿಕೆಟಿಗನಾಗಿದ್ದ. ಸಾಹಿಲ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಸಿಯಾ ಕೂಡ ಹಾಜರಾಗುತ್ತಿದ್ದರು. ಸಾಹಿಲ್ ಆಡುತ್ತಿದ್ದ ತಂಡದಲ್ಲೇ ಚೇತನ್ ಚೌಧರಿ ಕೂಡ ಕ್ರಿಕೆಟ್ ಆಡುತ್ತಿದ್ದರು. ಹೀಗಾಗಿ ಸಿಯಾ ಹಾಗೂ ಚೇತನ್ ಪರಿಯಸ್ಥರಾಗಿದ್ದಾರೆ.

2025ರ ದೀಪಾವಳಿ ಪಾರ್ಟಿಯಲ್ಲಿ ಮತೆ ಭೇಟಿ

ಕ್ರಿಕೆಟ್‌ನಲ್ಲಿ ಪರಿಚಯವಾಗಿದ್ದ ಚೇತನ್ ಚೌಧರಿ ಜೊತೆ ಮೆಸೇಜ್, ಚಾಟ್ ಶುರುವಾಗಿತ್ತು. ದಿಢೀರ್ ಸಿಯಾ ಗೊಯೆಲ್ ಚೇತನ್ ಚೌಧರಿಯಿಂದ ದೂರವಾಗಿದ್ದಳು. 2025ರಲ್ಲಿ ಇವರಿಬ್ಬರ ಗೆಳೆಯರೊಬ್ಬರು ದೀಪಾವಳಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಮಿಂದೆದ್ದ ಸಿಯಾ ಹಾಗೂ ಚೇತನ್ ಚೌಧರಿ ಮತ್ತೆ ಮಾತುಕತೆ ಆರಂಭಿಸಿದ್ದರು.

2004 ಕರೆ, 238 ಗಂಟೆ ಮಾತುಕತೆ

ಜನವರಿಯಿಂದ ಸಿಯಾ ಹಾಗೂ ಚೇತನ್ ಚೌಧರಿ ಬರೋಬ್ಬರಿ 2004 ಬಾರಿ ಕರೆ ಮಾಡಿ ಮಾತನಾಡಿದ್ದಾರೆ. ಇವರಿಬ್ಬರು ಒಟ್ಟು ಮಾತನಾಡಿದ ಗಂಟೆ ಬರೋಬ್ಬರಿ 238 ಗಂಟೆ. ಕ್ರಿಕೆಟ್ ಮೂಲಕ ಸಿಯಾ ಹಾಗೂ ಚೇತನ್ ಪರಿಚಯವಾಗಲು ಸಾಹಿಲ್ ಗೊಯೆಲ್ ಕಾರಣವಾಗಿದ್ದ. ಹೀಗಾಗಿ ಸಾಹಿಲ್ ವಿಚಾರಣೆ ನಡೆಸಲಾಗಿದೆ.

ಜೂನ್ 17ರಂದು ಕೆಫೆಯಲ್ಲಿ ಮೀಟಿಂಗ್

ಕೇತನ್ ಅಗರ್ವಾಲ್ ಹತ್ಯೆಗೂ ಮೊದಲು ಜೂನ್ 17 ರಂದು ಪುಣೆಯ ಲುಲ್ಲಾನಗರದಲ್ಲಿರುವ ಕೆಫೆಯಲ್ಲಿ ಸಿಯಾ ಹಾಗೂ ಚೇತನ್ ಚೌಧರಿ ಭೇಟಿಯಾಗಿದ್ದರು. ಸಂಜೆ ಸುಮಾರು 4.30 ರಿಂದ 5.30ರ ಸಮಯದಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ಇದೀಗ ಈ ಭೇಟಿಯಲ್ಲೇ ಕೇತನ್ ಹತ್ಯೆಗೆ ಪ್ಲಾನ್ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಭೇಟಿಯ ಚರ್ಚೆ ಮಾಹಿತಿ ಪಡೆಯಲು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

ಕೇತನ್ ಪೋಷಕರು ಕಂಗಾಲು

ಪುಣೆಯ ಆಗರ್ಭ ಶ್ರೀಮಂತನಾಗಿ ಗುರುತಿಸಿಕೊಂಡಿರುವ ಉದ್ಯಮಿ ವಿಶಾಲ್ ಅಗರ್ವಾಲ್ ಇದೀಗ ಮಗನ ಕಳೆದುಕೊಂಡು ಅಸ್ವಸ್ಥರಾಗಿದ್ದಾರೆ. ಕೇತನ್ ಪೋಷಕರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದಿದ್ದಾರೆ. ಆದರೆ ಮಗನ ಕಳೆದುಕೊಂಡ ನೋವಿನಿಂದ ಹೊರಬರಲು ಸಾಧ್ಯವಾಗದೆ ಮನೆಯಲ್ಲೇ ಕುಳಿತಿದ್ದಾರೆ. ಉದ್ಯಮ ಸಾಮ್ರಾಜ್ಯ ನಡೆಸುತ್ತಿರುವ ವಿಶಾಲ್ ಅಗರ್ವಾಲ್ ಮಗನ ಸಾವಿನ ಬಳಿಕ ಯಾರ ಫೋನ್ ಸ್ವೀಕರಿಸುತ್ತಿಲ್ಲ. ಯಾರ ಜೊತೆಗೂ ಮಾತನಾಡಲು ಬಯಸುತ್ತಿಲ್ಲ ಎಂದು ವರದಿಯಾಗಿದೆ.

ಇತ್ತ ಸಿಯಾ ಗೊಯೆಲ್ ಪೋಷಕರು ಘಟನೆಯಿಂದ ತೀವ್ರ ನೊಂದಿದ್ದಾರೆ. ತಮ್ಮ ಮಗಳು ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ, ಅಥವಾ ಅದೇ ಕೋಟೆಯಿಂದ ತಳ್ಳಿ ಹಾಕಿ ಸಾಯಿಸಲಿ ಎಂದಿದ್ದಾರೆ. ಮಗಳ ಕೃತ್ಯವನ್ನು ಪೋಷಕರು ಖಂಡಿಸಿದ್ದು ಕಠಿಣ ಶಿಶ್ರಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.