ಹೆಚ್ಚುವರಿ ಲಗೇಜ್‌ನ ಕಾರಣಕ್ಕೆ ಹಣ ಕಟ್ಟುವುದನ್ನು ತಪ್ಪಿಸುವುದಕ್ಕಾಗಿ ಆಸ್ಟ್ರೇಲಿಯಾದ  19 ವರ್ಷದ ಯುವತಿಯೊಬ್ಬಳು ಹೊಸ ಪ್ಲಾನ್ ಒಂದನ್ನು ಮಾಡಿದ್ಲು. ಆದರೆ ಯುವತಿ ಚಾಪೆ ಕೆಳಗೆ ನುಗ್ಗಿದ್ರೆ ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗಿದ್ರು ಎಂಬ ಗಾದೆಯಂತೆ ಈಕೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾಳೆ.

ಸಿಡ್ನಿ: ಬಸ್ಸು ರೈಲುಗಳಲ್ಲಿ ಹೋಗುವಾಗ ನಮ್ಮ ಜೊತೆ ನಮಗಿಂತ ಜಾಸ್ತಿ ಲಗೇಜ್ ಇದ್ದರೆ ನಾವು ಲಗೇಜ್‌ಗೂ ಎಕ್ಸ್ಟ್ರಾ ಚಾರ್ಜ್ ನೀಡಬೇಕಾಗುತ್ತದೆ. ಇನ್ನು ವಿಮಾನದಲ್ಲಿ ಇಂತಿಷ್ಟೇ ಲಗೇಜ್ ಒಯ್ಯುವುದಕ್ಕೆ ಷರತ್ತುಗಳ ಜೊತೆ ಇಂತಿಷ್ಟೇ ಲಗೇಜ್‌ ಒಯ್ಯಬೇಕು ಎಂಬ ನಿಯಮವಿದೆ. ಒಂದು ವೇಳೆ ನಿಯಮಕ್ಕಿಂತ ಹೆಚ್ಚು ಲಗೇಜ್ ಹೊತ್ತೊಯ್ಯಲು ನೋಡಿದರೆ ಲಗೇಜ್ ಸಮೇತ ನಿಮ್ಮನ್ನು ಏರ್‌ಪೋರ್ಟ್‌ನಲ್ಲಿ ಬಿಟ್ಟು ವಿಮಾನ ಹೊರಟು ಹೋಗುವುದು. ಇಲ್ಲವೇ ಹೆಚ್ಚುವರಿ ಲಗೇಜ್‌ಗಾಗಿ ನೀವು ಹೆಚ್ಚಿನ ದುಬಾರಿ ಹಣವನ್ನು ನೀಡಬೇಕಾಗಿ ಬರಬಹುದು. ಹೆಚ್ಚುವರಿ ಲಗೇಜ್‌ನ ಕಾರಣಕ್ಕೆ ಈ ರೀತಿ ಹಣ ಕಟ್ಟುವುದನ್ನು ತಪ್ಪಿಸುವುದಕ್ಕಾಗಿ ಆಸ್ಟ್ರೇಲಿಯಾದ 19 ವರ್ಷದ ಯುವತಿಯೊಬ್ಬಳು ಹೊಸ ಪ್ಲಾನ್ ಒಂದನ್ನು ಮಾಡಿದ್ಲು. ಆದರೆ ಯುವತಿ ಚಾಪೆ ಕೆಳಗೆ ನುಗ್ಗಿದ್ರೆ ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗಿದ್ರು ಎಂಬ ಗಾದೆಯಂತೆ ಈಕೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾಳೆ.

ವಿಮಾನ ಪ್ರಯಾಣದ ವೇಳೆ ನಡೆಯುವ ಕೆಲ ಕಿತಾಪತಿಗಳು ವಿಲಕ್ಷಣ ಘಟನೆಗಳು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ವರದಿ ಆಗ್ತಿವೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಲಗೇಜ್ ಬ್ಯಾಗ್ಗೆ ಎಕ್ಸ್ಟ್ರಾ ಯಾರು ಪೇ ಮಾಡ್ತಾರೆ ಅಂತ ಎಲ್ಲ ಬಟ್ಟೆಗಳನ್ನು ಒಂದರ ಮೇಲೆ ಒಂದು ಹಾಕಿಕೊಂಡು ಬಂದಿದ್ದು, ಆಕೆಗೀಗ ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಆಸ್ಟ್ರೇಲಿಯಾದ 19 ವರ್ಷದ ಆಡ್ರಿಯಾನಾ ಒಕಾಂಪೊ ಎಂಬಾಕೆಯೇ ಹೀಗೆ ಸೂಟ್‌ಕೇಸ್‌ನ ಭಾರ ಹೆಚ್ಚಾಗುವದನ್ನು ತಪ್ಪಿಸಲು ಅದರಲ್ಲಿದ್ದ ಬಟ್ಟೆಯನ್ನೆಲ್ಲಾ ಮೈಮೇಲೆ ಹಾಕಿಕೊಂಡು ಬಂದಾಕೆ. 

ಲಗೇಜ್ ಮಾಯ, ರಾಣಾ ರಣ.. ರಣ.. ಫ್ಲೈಟ್‌ನಲ್ಲಿ ರಾಣಾ ಲಗೇಜ್ ಮಿಸ್ಸಿಂಗ್!

ಆಸ್ಟ್ರೇಲಿಯಾದಲ್ಲಿ ಏರ್‌ಲೈನ್ಸ್‌ನಲ್ಲಿ ಗರಿಷ್ಟ ಎಂದರೆ 7 ಕೆಜಿಯಷ್ಟು ಲಗೇಜ್‌ನ್ನು ವಿಮಾನದಲ್ಲಿ ಸಾಗಿಸಬಹುದು. ಆದರೆ ಈಕೆಯ ಬಳಿ ಅದಕ್ಕಿಂತ ಹೆಚ್ಚು ಲಗೇಜ್ ಇದ್ದು, ಈ ಕಾರಣಕ್ಕೆ ಆಕೆ ಸೂಟ್‌ಕೇಸ್‌ನಲ್ಲಿದ್ದ ಐದೂವರೆ ಕೇಜಿಯಷ್ಟು ಬಟ್ಟೆಯನ್ನು ತಾನು ಒಂದರ ಮೇಲೊಂದರಂತೆ ಧರಿಸಿಕೊಂಡಿದ್ದಾಳೆ. ಆದರೆ ಈ ಪ್ರಯೋಗವನ್ನು ಈ ಹಿಂದೆಯೂ ಅನೇಕರು ಮಾಡಿ ಯಶಸ್ವಿಯಾಗಿದ್ದಾರೆ. ಆದರೆ ಆಡ್ರಿಯಾನಾ ಪಾಲಿಗೆ ಮಾತ್ರ ಈ ಪ್ಲಾನ್ ವರ್ಕೌಟ್ ಆಗಿಲ್ಲ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 

19 ವರ್ಷದ ಈ ಆಡ್ರಿಯಾನಾ ಒಕಾಂಪೊ (Adriana Ocampo) ತನ್ನ ಹುಡುಗಿಯರ ಗ್ಯಾಂಗ್ ಜೊತೆ ಪ್ರವಾಸ ಮಾಡಿದ ಬಳಿಕ ಮೆಲ್ಬೋರ್ನ್‌ನಿಂದ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ತನ್ನ ಮನೆಗೆ ವಿಮಾನದಲ್ಲಿ ಹೊರಟಿದ್ದಳು. ಇದಕ್ಕಾಗಿ ಆಕೆ ವಿಮಾನಯಾನ ಸಂಸ್ಥೆ ಜೆಟ್‌ಸ್ಟಾರ್‌ನಲ್ಲಿ (Jetstar) ಟಿಕೆಟ್ ಬುಕ್ ಮಾಡಿ ಪ್ರಯಾಣಕ್ಕೆ ಮುಂದಾಗಿದ್ದಳು. ಆದರೆ ತನ್ನ ಲಗೇಜ್ ಏಳು ಕಿಲೋಗಿಂತಲೂ ಗರಿಷ್ಠ ತೂಕದ ಮಿತಿಯನ್ನು ಮೀರಿದೆ ಎಂದು ತಿಳಿದ ನಂತರ, ಆಕೆ ಹೆಚ್ಚುವರಿ ಲಗೇಜ್ ಶುಲ್ಕವನ್ನು ತಪ್ಪಿಸಲು ತನ್ನ ಎಲ್ಲಾ ಹೆಚ್ಚುವರಿ ಬಟ್ಟೆಗಳನ್ನು ಧರಿಸಿದ್ದಾಳೆ. 

ವಿಮಾನ ನಿಲ್ದಾಣದಲ್ಲಿ ಲಗೇಜ್ ನಾಪತ್ತೆ; ಸಿಟ್ಟಿಗೆದ್ದ ನಟ ರಾಣಾ ದಗ್ಗುಬಾಟಿ ಮಾಡಿದ್ದೇನು?

ವೈರಲ್ ಆದ ವೀಡಿಯೊದಲ್ಲಿ ಹುಡುಗಿ ಟೀ ಶರ್ಟ್‌ಗಳು, ಜಾಕೆಟ್‌ಗಳು, ಜಂಪರ್‌ಗಳು ಮತ್ತು ಪ್ಯಾಂಟ್‌ಗಳು ಸೇರಿದಂತೆ ಸುಮಾರು ಆರು ಕಿಲೋಗಳಷ್ಟು ಬಟ್ಟೆಗಳನ್ನು ಧರಿಸಿದ್ದರಿಂದ ಆಕೆ ಸಿಕ್ಕಿಬಿದ್ದ ನಂತರ ಆಕೆ ಕರಡಿಯಂತೆ ಕಾಣಿಸುತ್ತಿದ್ದೆ ಎಂದು ಆಕೆಯೇ ಹೇಳಿಕೊಂಡಿದ್ದಾಳೆ. 

ಆಕ್ಸಿಡೆಂಟ್ ಫೋಟೋ ಅಲ್ಲ... ಇದು ವಿಮಾನ ಪ್ರಯಾಣಿಕರ ಲಗೇಜ್