Asianet Suvarna News Asianet Suvarna News

ವಿಮಾನ ನಿಲ್ದಾಣದಲ್ಲಿ ಲಗೇಜ್ ನಾಪತ್ತೆ; ಸಿಟ್ಟಿಗೆದ್ದ ನಟ ರಾಣಾ ದಗ್ಗುಬಾಟಿ ಮಾಡಿದ್ದೇನು?

ರಾಣಾ ದಗ್ಗುಬಾಟಿ ಅವರ ಲಗೇಜ್ ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಏರ್‌ಲೈನ್ ವಿರುದ್ಧ ರಾಣಾ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. 

Actor Rana Daggubati Shares Worst Experience With IndiGo sgk
Author
First Published Dec 5, 2022, 4:54 PM IST

ತೆಲುಗು ಸ್ಟಾರ್, ಪ್ಯಾನ್ ಇಂಡಿಯಾ ಹೀರೋಗಳಲ್ಲಿ ಒಬ್ಬರಾಗಿರುವ ನಟ ರಾಣಾ ದಗ್ಗುಬಾಟಿ ಅವರ ಲಗೇಜ್ ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿರುವ ರಾಣಾ ಏರ್‌ಲೈನ್ಸ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಆಗಾಗ ವಿಮಾನದಲ್ಲಿ ಪಯಣ ಮಾಡುವ ರಾಣಾ ದಗ್ಗುಬಾಟಿ, ಇದು ಆದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇತ್ತೀಚೆಗೆ ‘ಇಂಡಿಗೋ’  ವಿಮಾನದಲ್ಲಿ ಪ್ರಯಾಣ ಮಾಡಿದ ರಾಣಾಗೆ ಕೆಟ್ಟ ಅನುಭವ ಆಗಿದೆ. ಪ್ರಯಾಣಿಸುವಾಗ ರಾಣಾ ದಗ್ಗುಬಾಟಿ ಅವರ ಲಗೇಜ್​ ಮಾಯವಾಗಿದೆ. ಈವರೆಗೂ ಅದು ಪತ್ತೆ ಆಗಿಲ್ಲ. ಇದರಿಂದ ಕೋಪಕೊಂಡ ಅವರು ನೇರವಾಗಿ ಟ್ವೀಟ್​ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ತನ್ನ ಟ್ವೀಟ್ ಅನ್ನು ಇಂಡಿಗೋ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಇದರಿಂದ ಇಂಡಿಗೋ ಕಂಪನಿಗೆ ಮುಜುಗರ ಆಗಿದ್ದು ಕ್ಷಮೆ ಕೇಳಿದೆ. ಅಂದಹಾಗೆ ಇಂಡಿಗೋ ವಿರುದ್ಧ ಗರಂ ಆಗಿರುವುದು ರಾಣಾ ಮಾತ್ರವಲ್ಲ, ಈ ಹಿಂದೆ ನಟಿ ಪೂಜಾ ಹೆಗ್ಡೆ ಕೂಡ ಈ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳ ವರ್ತನೆ ವಿರುದ್ಧ ಬೇಸರ ಹೊರಹಾಕಿದ್ದರು. 

ಭಾರತದ ಅತ್ಯಂತ ಕೆಟ್ಟ ವಿಮಾನ ಅನುಭವ ಎಂದು ರಾಣಾ ದಗ್ಗುಬಾಟಿ ಕಿಡಿ ಕಾರಿದ್ದಾರೆ. ರಾಣಾ ಟ್ವೀಟ್‌ನಲ್ಲಿ, 'ಭಾರತದ ಅತ್ಯಂತ ಕೆಟ್ಟ ಏರ್‌ಲೈನ್ ಅನುಭವ ಇಂಡಿಗೋ. ವಿಮಾನದ ಸಮಯದ ಬಗ್ಗೆಯೂ ಯಾವುದೇ ಸುಳಿವು ಇಲ್ಲ. ಲಗೇಜ್‌ಗಳು ಕಾಣೆಯಾಗಿವೆ' ಎಂದು ರಾಣಾ ದಗ್ಗುಬಾಟಿ ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ಹೊರಹಾಕಿದ್ದಾರೆ.

 Actor Rana Daggubati Shares Worst Experience With IndiGo sgk

Puneeth Parva ನಾನು ಅಪ್ಪು ಸ್ನೇಹಿತ, ಗಂಧದ ಗುಡಿ ಮಾಡಲು ನನ್ನ ಜೊತೆ ಕಾರಣ ಹಂಚಿಕೊಂಡಿದ್ದಾರೆ:ರಾಣಾ ದಗ್ಗುಬಾಟಿ

ರಾಣಾ ದಗ್ಗುಬಾಟಿ ಟ್ವೀಟ್ ವೈರಲ್ ಆಗುತ್ತಿದ್ದಂತೆ ಇಂಡಿಗೋ ಏರ್‌ಲೈನ್ ಈ ವಿಷಯದ ಬಗ್ಗೆ ಕ್ಷಮೆಯಾಚಿಸಿದೆ.  'ಅನಾನುಕಾಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ಲಗೇಜ್ ಅನ್ನು ಆದಷ್ಟು ಬೇಗ ನಿಮಗೆ ತಲುಪಿಸಲು ನಮ್ಮ ತಂಡ ಸಕ್ರಿಯವಾಗಿದೆ ಕಾರ್ಯನಿರ್ವಹಿಸುತ್ತಿದೆ' ಎಂದು ಪ್ರತಿಕ್ರಿಯೆ ನೀಡಿದರು. ಇಂಡಿಯೋ ಪ್ರತಿಕ್ರಿಯೆ ಬಳಿಕ ರಾಣಾ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದರು. ಆದರೆ ರಾಣಾ ಟ್ವೀಟ್ ಆಗಲೇ ವೈರಲ್ ಆಗಿತ್ತು. ಕೆಲವರು ರಾಣಾ ಪರ ಬ್ಯಾಟ್ ಬಿಸಿದರು. ಇನ್ನೂ ಕೆಲವರು ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಇಂಡಿಯೋ ತಕ್ಷಣ ಪ್ರತಿಕ್ರಿಯೆ ನೀಡಿದೆ ಜನ ಸಾಮಾನ್ಯರ ಕಥೆ ಏನು ಪ್ರಶ್ನೆ ಮಾಡಿದ್ದಾರೆ. 

Puneeth Rajkumar ರಾಣಾ ದಗ್ಗುಬಾಟಿ ಆಫೀಸ್‌ನಲ್ಲಿ ಅಪ್ಪು ಪುತ್ಥಳಿ!

ರಾಣಾ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಣಾ ನಾಯ್ಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಜೊತೆಗೆ ರಾಣಾ ವೆಬ್ ಸರಣಿಯಲ್ಲೂ ಬ್ಯುಸಿಯಾಗಿದ್ದಾರೆ. ಕರಣ್ ಅಂಶುಮಾನ್ ಮತ್ತು ಸುಪರ್ಣ ವರ್ಮಾ ನಿರ್ದೇಶನದ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರಿಸ್ ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದರಲ್ಲಿ ರಾಣಾ ಜೊತೆ ವೆಂಕಟೇಶ್ ದಗ್ಗುಬಾಟಿ, ಸುಚಿತ್ರಾ ಪಿಳ್ಳೈ, ಗೌರವ್ ಚೋಪ್ರಾ ಮತ್ತು ಸುರ್ವೀನ್ ಚಾವ್ಲಾ ಕೂಡ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಾಣಾ ದಗ್ಗುಬಾಟಿ ಸಿನಿಮಾ ಜೊತೆಗೆ ಆಗಾಗ ವೈಯಕ್ತಿಕ ವಿಚಾರಗಳು ಸುದ್ದಿಯಾಗುತ್ತಿರುತ್ತೆ. ಸದ್ಯ ಏರ್‌ಲೈನ್ಸ್ ವಿರುದ್ಧ ಸಿಡಿದೆದ್ದಿದ್ದಾರೆ. 
 

Follow Us:
Download App:
  • android
  • ios