ಲಾಸ್ಟ್ ಮಿನಿಟ್ ಟ್ರಿಪ್ ಪ್ಲಾನ್ ಮಾಡೋರು ನೀವಾಗಿದ್ರೆ, ಬೆಂಗಳೂರಿಗೆ ಹತ್ತಿರ ಇರೋ ಈ ಲೊಕೇಶನ್ಸ್ ಬೆಸ್ಟ್
ಅಲ್ಲಿಗೆ ಹೋಗೋಣ, ಇಲ್ಲಿಗೆ ಹೋಗೋಣ ಅಂತ ಪ್ಲಾನ್ ಮಾಡಿದ ಟ್ರಿಪ್ ರಿಯಾಲಿಟಿಗೆ ಬರೋದು ಕಡಿಮೇನೆ. ಹೀಗಾಗಿ ತುಂಬಾ ಮಂದಿ ಲಾಸ್ಟ್ ಮಿನಿಟ್ ಪ್ಲಾನ್ ಮಾಡಿ, ಥಟ್ಟಂತ ಹೋಗಿ ಬಿಡ್ತಾರೆ. ನೀವು ಕೂಡಾ ಅಂಥವರಾದ್ರೆ ಬೆಂಗಳೂರಿನಿಂದ ಲಾಸ್ಟ್ ಮಿನಿಟ್ ಪ್ಲಾನ್‌ಗೆ ಈ ಲೊಕೇಶನ್ಸ್ ಬೆಸ್ಟ್.
ಬೆಂಗಳೂರಲ್ಲಿ ಕಾಲೇಜ್, ಆಫೀಸ್ ಅನ್ನೋ ರೊಟೀನ್ ಲೈಫ್ ಯಾರಿಗಾದ್ರೂ ಬೋರ್ ಹಿಡಿಸಿಬಿಡುತ್ತೆ. ಇದ್ರಿಂದ ಹೊರಬಂದು ರಿಫ್ರೆಶ್ ಆಗೋಕೆ ಟ್ರಿಪ್ ಅಂತೂ ಹೋಗ್ಲೇಬೇಕು. ಆದ್ರೆ ಅಲ್ಲಿಗೆ ಹೋಗೋಣ, ಇಲ್ಲಿಗೆ ಹೋಗೋಣ ಅಂತ ಪ್ಲಾನ್ ಮಾಡಿದ ಟ್ರಿಪ್ ರಿಯಾಲಿಟಿಗೆ ಬರೋದು ಕಡಿಮೇನೆ. ಹೀಗಾಗಿ ತುಂಬಾ ಮಂದಿ ಲಾಸ್ಟ್ ಮಿನಿಟ್ ಪ್ಲಾನ್ ಮಾಡಿ, ಥಟ್ಟಂತ ಹೋಗಿ ಬಿಡ್ತಾರೆ. ನೀವು ಕೂಡಾ ಅಂಥವರಾದ್ರೆ ಲಾಸ್ಟ್ ಮಿನಿಟ್ ಪ್ಲಾನ್‌ಗೆ ಈ ಲೊಕೇಶನ್ಸ್ ಬೆಸ್ಟ್.
ಯೇರ್ಕಾಡ್ ಹಿಲ್ ಸ್ಟೇಷನ್
ರಿಲ್ಯಾಕ್ಸ್ ಆಗೋಕೆ ಹಿಲ್ ಸ್ಟೇಷನ್‌ಗಿಂತಲೂ ಬೆಸ್ಟ್ ಪ್ಲೇಸ್ ಯಾವುದಿದೆ ಹೇಳಿ. ಇಂಥಾ ಜಾಗಗಳಲ್ಲೊಂದು ಯೇರ್ಕಾಡ್ ಹಿಲ್ ಸ್ಟೇಷನ್. ಇದು ತಮಿಳುನಾಡಿನ ಸೇಲಂ ಜಿಲ್ಲೆಯ ಒಂದು ಗಿರಿಧಾಮವಾಗಿದೆ. ಯೆರ್ಕಾಡ್‌ನ ಅತ್ಯಂತ ಆಕರ್ಷಣೀಯ ಅಂಶವೆಂದರೆ ಅಲ್ಲಿನ ನೈಸರ್ಗಿಕವಾದ ಸರೋವರ. ಇದು ಹಸಿರು ಸರೋವರ ಅಂತಾನೇ ಹೆಸರುವಾಸಿಯಾಗಿದೆ.
Travel Tips: ವೀಕೆಂಡ್‌ನಲ್ಲಿ ಬೆಂಗಳೂರಿಗರು ಸುತ್ತಿ ಬರೋಕೆ ಇಷ್ಟೊಂದು ಜಾಗವಿದೆ!
ಚಿಕ್ಕಮಗಳೂರು
ಚಿಕ್ಕಮಗಳೂರು ನೈರುತ್ಯ ಭಾರತದ ಕರ್ನಾಟಕ ರಾಜ್ಯದ ಒಂದು ಗಿರಿಧಾಮವಾಗಿದೆ. ಉತ್ತರಕ್ಕೆ, ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಾದ ಬಾಬಾ ಬುಡನ್‌ಗಿರಿಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇಲ್ಲಿ 3 ದೊಡ್ಡ ಗುಹೆಗಳಿವೆ. ಕಾಡು ಮತ್ತು ಹುಲ್ಲುಗಾವಲಿನ ಮೂಲಕ ಮುಳ್ಳಯ್ಯನಗಿರಿ ಶಿಖರಕ್ಕೆ ಹೋಗುವ ಹಾದಿಗಳು ಕಣ್ಣಿಗೆ ಹಬ್ಬದಂತಿರುತ್ತದೆ. ಕಾಫಿ ತೋಟಗಳ ಹೊಲದಲ್ಲಿ ಧುಮ್ಮಿಕ್ಕುವ ಹೆಬ್ಬೆ ಜಲಪಾತವಿದೆ. ಬೆಂಗಳೂರಿನಿಂದ ಚಿಕ್ಕಮಗಳೂರು ನೀವು ವೀಕೆಂಡ್‌ನಲ್ಲಿ ಕಡ್ಡಾಯವಾಗಿ ಪ್ಲಾನ್ ಮಾಡಬಹುದಾದ ಪ್ರವಾಸಿ ತಾಣವಾಗಿದೆ.
ಊಟಿ
ಊಟಿಯನ್ನು ಉದಗಮಂಡಲಂ ಎಂದು ಸಹ ಕರೆಯುತ್ತಾರೆ. ತಮಿಳುನಾಡಿನ ಈ ಸುಂದರ ಗಿರಿಧಾಮ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸುಂದರವಾದ ಸ್ಥಳವಾಗಿದೆ. ಉತ್ತಮ ಹವಾಮಾನ, ನೈಸರ್ಗಿಕ ಸೌಂದರ್ಯ, ಉತ್ತಮ ರೆಸಾರ್ಟ್‌ಗಳು ಸೇರಿದಂತೆ ಇಲ್ಲಿ ನೋಡಲೇಬೇಕಾದ ಸಾಕಷ್ಟು ಸ್ಥಳಗಳಿವೆ. ಪ್ರಸಿದ್ಧ ರೋಸ್ ಗಾರ್ಡನ್ ಮತ್ತು ನೀಲಗಿರಿ ಮೌಂಟೇನ್ ರೈಲ್ವೇಸ್‌ನಿಂದ ಪೈಕಾರಾ ಸರೋವರ ಮತ್ತು ಎಕೋ ರಾಕ್‌ವರೆಗೆ ಎಲ್ಲವೂ ಕಣ್ಮನ ಸೆಳೆಯುತ್ತವೆ.
ವಯನಾಡ್
ದಕ್ಷಿಣ ಭಾರತದಲ್ಲಿನ ಈ ಹಸಿರಿನಿಂದ ಕೂಡಿದ ಜಿಲ್ಲೆಯು ಭೇಟಿ ನೀಡಲು ಹಲವಾರು ಸ್ಥಳಗಳನ್ನು ಹೊಂದಿದ್ದು, ಒಂದು ದಿನದಲ್ಲಿ ಒಂದು ಸಣ್ಣ ವಿಹಾರಕ್ಕೆ ಹೋಗಬಹುದು. ಈ ಸ್ಥಳದ ನೈಸರ್ಗಿಕ ಸೌಂದರ್ಯವನ್ನು ಪ್ರಶಂಸಿಸಲು, ನೀವು ಅನೇಕ ರಮಣೀಯ ಸರೋವರಗಳು, ಜಲಪಾತಗಳು ಮತ್ತು ಎತ್ತರದ ಬೆಟ್ಟಗಳನ್ನು ಭೇಟಿ ಮಾಡಬಹುದು. ಬೆಂಗಳೂರಿನಿಂದ ನೀವು ಇಲ್ಲಿದೆ ಒನ್ ಡೇ ಟ್ರಿಪ್ ಪ್ಲಾನ್ ಮಾಡಬಹುದು.
ಭಾರತೀಯ ಪ್ರವಾಸಿಗರಿಗೆ ಸಿಹಿ ಸುದ್ದಿ: ಈ ದೇಶಕ್ಕೆ ಹೋಗಲು ಇನ್ಮುಂದೆ ವೀಸಾನೇ ಬೇಕಿಲ್ಲ!
ಯಳಗಿರಿ
ಬೆಂಗಳೂರಿನಿಂದ ಯಳಗಿರಿಗೆ ಒಂದು ದಿನದ ಪ್ರವಾಸವಾಗಿದ್ದು, ಇದು ಪ್ರಕೃತಿಯ ಮಧ್ಯೆ ಶಾಂತವಾದ ಅನುಭವವನ್ನು ನೀಡುತ್ತದೆ. ಬೆಂಗಳೂರಿನಿಂದ ಸುಮಾರು 160 ಕಿ.ಮೀ ದೂರದಲ್ಲಿರುವ ಯಳಗಿರಿಯು ತನ್ನ ಬೆರಗುಗೊಳಿಸುವ ಪ್ರಕೃತಿ ಸೌಂದರ್ಯ ಮತ್ತು ಶಾಂತಿಯುತ ವಾತಾವರಣಕ್ಕೆ ಹೆಸರುವಾಸಿಯಾದ ಒಂದು ಸುಂದರವಾದ ಗಿರಿಧಾಮವಾಗಿದೆ. ಯಳಗಿರಿಯಲ್ಲಿರುವ ಜನಪ್ರಿಯ ಆಕರ್ಷಣೆಗಳೆಂದರೆ: ಪುಂಗನೂರ್ ಲೇಕ್ ಪಾರ್ಕ್. ಪ್ರಶಾಂತವಾದ ಸರೋವರವನ್ನು ಸುತ್ತುವರೆದಿರುವ ಒಂದು ರಮಣೀಯ ಉದ್ಯಾನವನ, ಬೋಟಿಂಗ್ ಮತ್ತು ಇತರ ಮನೋರಂಜನಾ ಚಟುವಟಿಕೆಗೆ ಅವಕಾಶ ನೀಡುತ್ತದೆ
ಇನ್ಯಾಕೆ ತಡ..ಈ ವೀಕೆಂಡ್ ನೀವೆಲ್ಲಿ ಹೋಗೋಕು ಪ್ಲ್ಯಾನ್ ಮಾಡಿಲ್ಲಾಂದ್ರೆ ಲಾಸ್ಟ್ ಮಿನಿಟ್ ಪ್ಲಾನ್ ಮಾಡಿ ಬೆಂಗಳೂರಿಗೆ ಸಮೀಪ ಇರೋ ಈ ಜಾಗಗಳಿಗೆ ಹೋಗ್ಬೋದು.