Travel Tips: ವೀಕೆಂಡ್‌ನಲ್ಲಿ ಬೆಂಗಳೂರಿಗರು ಸುತ್ತಿ ಬರೋಕೆ ಇಷ್ಟೊಂದು ಜಾಗವಿದೆ!
ವೀಕೆಂಡ್ ನಲ್ಲಿ ಮನೆಯಲ್ಲಿರೋಕೆ ಬೋರ್, ಸುತ್ತಾಡೋಕೆ ಜಾಗ ಕಾಣಿಸ್ತಿಲ್ಲ ಎನ್ನುವವರಿದ್ದಾರೆ. ಬಹುತೇಕರಿಗೆ ಶನಿವಾರ, ಭಾನುವಾರ ಎರಡೂ ದಿನ ರಜೆ ಇರುವ ಕಾರಣ, ಮನೆಯಲ್ಲಿದ್ದು ಏನ್ ಮಾಡೋದು ಎನ್ನುವ ಸಮಸ್ಯೆ. ನೀವು ಇದ್ರಲ್ಲಿ ಒಬ್ಬರಾಗಿದ್ರೆ ಇಲ್ಲಿರೋ ಪ್ಲೇಸ್ ಗಳನ್ನು ಸುತ್ತಿಬನ್ನಿ.
ಎಷ್ಟೋ ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆ ನಿಂತಿರುವ ಜನರು ಸಾಕಷ್ಟು ಮಂದಿ ಇದ್ದಾರೆ. ಆದ್ರೆ ಬೆಂಗಳೂರಿನಲ್ಲಿ ನೋಡುವ ಸ್ಥಳ ಯಾವುದಿದೆ ಅಂತಾ ಸ್ನೇಹಿತರು ಕೇಳಿದ್ರೆ ತಲೆ ಕೆರೆದುಕೊಂಡು ನಾಲ್ಕೈದು ಸ್ಥಳ ಹೇಳೋದ್ರಲ್ಲಿ ಸುಸ್ತಾಗಿರ್ತಾರೆ. ಅದೂ ಜನಜಂಗುಳಿ ಇರುವ, ವಾಹನದ ಸದ್ದು ಹೆಚ್ಚಿರುವ ಪ್ರದೇಶವನ್ನೇ ಹೇಳ್ತಾರೆ ವಿನಃ, ಶಾಂತವಾದ, ಸುಂದರವಾದ, ಕಣ್ಮನ ಸೆಳೆಯುವ, ವೀಕೆಂಡನ್ನು ಆರಾಮವಾಗಿ ಕಳೆಯಬಲ್ಲ ಸ್ಥಳಗಳನ್ನು ಹೇಳೋದು ಕಡಿಮೆ. ನಮ್ಮ ಬೆಂಗಳೂರಿ (Bengaluru ) ನ ಒಳಗೆ ವಾಹನ ಓಡಾಟ, ಜನರ ಸಂಖ್ಯೆ ಹೆಚ್ಚಿರುವ ಕಾರಣ ನಾವು ವೀಕೆಂಡ್ ನಲ್ಲಿ ಬೆಂಗಳೂರಿನಿಂದ ಸ್ವಲ್ಪ ಹೊರಗೆ ಹೋಗಿ ಬರಬಹುದು. ವಾರಾಂತ್ಯದ ಪ್ರವಾಸಕ್ಕೆ ಹೋಗಲು ಬೆಂಗಳೂರಿನ ಸಮೀಪದಲ್ಲಿ ಸಾಕಷ್ಟು ಸ್ಥಳಗಳಿವೆ. ನಾವಿಂದು ಬೆಂಗಳೂರಿನ ಸುತ್ತಮುತ್ತ ಯಾವೆಲ್ಲ ಸುಂದರ ಸ್ಥಳಗಳಿವೆ ಅನ್ನೋದನ್ನು ನಿಮಗೆ ಹೇಳ್ತೇವೆ.
ವೀಕೆಂಡ್ (Weekend) ನಲ್ಲಿ ಬೆಂಗಳೂರು ಸಮೀಪದ ಈ ಸ್ಥಳ ಸುತ್ತಿ ಬನ್ನಿ :
ಜಲಪಾತಗಳು : ನೀವು ಜಲಪಾತಗಳನ್ನು ಇಷ್ಟಪಡುತ್ತೀರಿ ಎಂದಾದ್ರೆ ಬೆಂಗಳೂರು ಸುತ್ತಮುತ್ತ ಅನೇಕ ವಾಟರ್ ಫಾಲ್ಸ್ ಗಳಿವೆ. ಈಗ ಮಳೆ ಬೀಳ್ತಿರುವ ಕಾರಣ ಅಲ್ಲಿನ ಸೌಂದರ್ಯ ದುಪ್ಪಟ್ಟಾಗಿರುತ್ತದೆ. ನೀವು ಹೊಗೆನ್ನಕಲ್ ಫಾಲ್ಸ್ ಗೆ ಹೋಗಿ ಬರಬಹುದು. ಬೆಂಗಳೂರಿನಿಂದ ಅದು 140 ಕಿಲೋಮೀಟರ್ ದೂರದಲ್ಲಿದೆ. ಲಾಂಗ್ ವೀಕೆಂಡ್ ಬಂದಿದೆ, ಬೆಂಗಳೂರಿನಿಂದ ಸ್ವಲ್ಪ ದೂರ ಹೋಗಿ ಒಂದೆರಡು ದಿನ ಇದ್ದು ಬರ್ತಿರಿ ಅಂದ್ರೆ ನೀವು ಜೋಗ್ ಫಾಲ್ಸ್ ಗೆ ಹೋಗ್ಬಹುದು. ಅದಕ್ಕೆ ನೀವು 400 ಕಿಲೋಮೀಟರ್ ಪ್ರಯಾಣ ಮಾಡ್ಬೇಕಾಗುತ್ತೆ.
ವಿಮಾನಗಳಲ್ಲೂ ಆರಂಭವಾಯ್ತು ‘’ವಯಸ್ಕರಿಗೆ ಮಾತ್ರ’’ ಸೆಕ್ಷನ್: ವಿಶೇಷತೆ ಹೀಗಿದೆ..
ಇನ್ನು ಶಿವನಸಮುದ್ರ ಫಾಲ್ಸ್ ಬೆಂಗಳೂರಿನಿಂದ ಕೇವಲ 140 ಕಿಲೋಮೀಟರ್ ದೂರದಲ್ಲಿದ್ದು, ನೀವು ಆರಾಮಾಗಿ ವೀಕೆಂಡ್ ಮಜಾ ಮಾಡಿ ಬರಬಹುದು. ಹೆಬ್ಬೆ ಫಾಲ್ಸ್, ಅಬ್ಬೆ ಫಾಲ್ಸ್ ಮತ್ತು ಮಲ್ಲಳ್ಳಿ ಫಾಲ್ಸ್ ಗಳು ಬೆಂಗಳೂರಿನ ಸುತ್ತಮುತ್ತಲೇ ಇವೆ. ಈ ಫಾಲ್ಸ್ ಗಳು 250 ಕಿಲೋಮೀಟರ್ ದೂರದಲ್ಲಿವೆ.
ಅರಣ್ಯ ಪ್ರದೇಶ : ಜಲಪಾತಗಳು ಬೇಡ, ವನ್ಯಜೀವಿಗಳು, ಅರಣ್ಯವನ್ನು ನೋಡ್ತೇವೆ ಎನ್ನುವವರು ನೀವಾಗಿದ್ದರೆ, ಬನ್ನೇರಘಟ್ಟ ನ್ಯಾಷನಲ್ ಪಾರ್ಕ್ ಗೆ ಹೋಗಿ ಬನ್ನಿ. ಅದು ಕೇವಲ 15 – 20 ಕಿಲೋಮೀಟರ್ ದೂರದಲ್ಲಿ ನಿಮಗೆ ಸಿಗುತ್ತದೆ. ಒಂದೇ ದಿನದಲ್ಲಿ ಇದನ್ನು ಆರಾಮವಾಗಿ ನೋಡಿ ಬರಬಹುದು. ಇನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನ 230 ಕಿಲೋಮೀಟರ್ ದೂರದಲ್ಲಿದೆ. ಕಬಿನಿ ಅರಣ್ಯ 220 ಕಿಲೋಮೀಟರ್ ದೂರದಲ್ಲಿದ್ರೆ BRT ವನ್ಯಜೀವಿ ಅಭಯಾರಣ್ಯ 175 ಕಿಲೋಮೀಟರ್ ಸಮೀಪತದಲ್ಲಿದೆ. ನೀವು ಭದ್ರಾ ವನ್ಯಜೀವಿ ಅಭಯಾರಣ್ಯ, ನಾಗರಹೊಳೆ ವನ್ಯಜೀವಿ ಅಭಯಾರಣ್ಯಕ್ಕೂ ಭೇಟಿ ನೀಡ್ಬಹುದು. ಇವೆರಡು ಕ್ರಮವಾಗಿ 290 ಕಿಲೋಮೀಟರ್ ಹಾಗೂ 200 ಕಿಲೋಮೀಟರ್ ದೂರದಲ್ಲಿವೆ.
SUN NEVER SETS : ಈ 6 ಸ್ಥಳಗಳಲ್ಲಿ ಸೂರ್ಯ ಮುಳುಗುವುದೇ ಇಲ್ಲ; ರಾತ್ರಿ 2 ಗಂಟೆಯಾದ್ರೂ ಏನು ಅನ್ಸಲ್ಲ..!
ಬೆಂಗಳೂರು ಸುತ್ತಮುತ್ತಲ ಗಿರಿಧಾಮಗಳು : ಬೆಂಗಳೂರಿನ ಸುತ್ತಮುತ್ತ ಸಾಕಷ್ಟು ಗಿರಿಧಾಮಗಳನ್ನೂ ನೀವು ಕಣ್ತುಂಬಿಕೊಳ್ಳಬಹುದು. ಆದ್ರೆ ಅದ್ಯಾವುದನ್ನೂ ನೀವು ಒಂದು ದಿನದಲ್ಲಿ ನೋಡಿ ಬರೋಕೆ ಸಾಧ್ಯವಿಲ್ಲ. ಬೆಂಗಳೂರಿನಿಂದ ಗಿರಿಧಾಮಗಳು ಸ್ವಲ್ಪ ದೂರದಲ್ಲಿರುವ ಕಾರಣ ಲಾಂಗ್ ವೀಕೆಂಡ್ ಪ್ಲಾನ್ ಮಾಡಿದ್ರೆ ಬೆಸ್ಟ್. ಗಿರಿಧಾಮಗಳ ಪಟ್ಟಿ ನೀಡೋದಾದ್ರೆ ಮುನ್ನಾರ್ 475 ಕಿಲೋಮೀಟರ್ ದೂರದಲ್ಲಿದೆ. ಕೋಟಗಿರಿ 320 ಕಿಲೋಮೀಟರ್ ದೂರದಲ್ಲಿದೆ. ವಯನಾಡ್ 275 ಕಿಲೋಮೀಟರ್ ಹಾಗೂ ಕೂರ್ಗ್ 250 ಕಿಲೋಮೀಟರ್ ದೂರದಲ್ಲಿದೆ. ಚಿಕ್ಕಮಗಳೂರಿಗೆ ನೀವು 240 ಕಿಲೋಮೀಟರ್ ಪ್ರಯಾಣ ಬೆಳೆಸಬೇಕು. ಸಕಲೇಶಪುರಕ್ಕೆ ಹೋಗ್ತೀರಿ ಎಂದಾದ್ರೆ 220 ಕಿಲೋಮೀಟರ್ ಹಾಗೂ ಕೊಡೈಕೆನಾಲ್ ಗೆ 460 ಕಿಲೋಮೀಟರ್ ಪ್ರಯಾಣ ಬೆಳೆಸಬೇಕಾಗುತ್ತದೆ. ಕೂನೂರಿಗೆ ನೀವು 275 ಕಿಲೋಮೀಟರ್ ಹೋಗ್ಬೇಕು.
ವಾರಕ್ಕೆ ಮೊದಲೇ ನೀವು ಪ್ಲಾನ್ ಮಾಡಿದ್ರೆ ವಾರಕ್ಕೊಂದರಂತೆ ಈ ಎಲ್ಲ ಪ್ರದೇಶವನ್ನು ನೋಡಿ ಬರಬಹುದು.