ಭಾರತೀಯ ಪ್ರವಾಸಿಗರಿಗೆ ಸಿಹಿ ಸುದ್ದಿ: ಈ ದೇಶಕ್ಕೆ ಹೋಗಲು ಇನ್ಮುಂದೆ ವೀಸಾನೇ ಬೇಕಿಲ್ಲ!
ಮುಂದಿನ ತಿಂಗಳಿನಿಂದ ಅಂದರೆ ನವೆಂಬರ್‌ನಿಂದ ಮೇ 2024 ರವರೆಗೆ ಭಾರತ ಮತ್ತು ತೈವಾನ್‌ನಿಂದ ಆಗಮನಕ್ಕೆ ವೀಸಾ ಅವಶ್ಯಕತೆಗಳನ್ನು ಥೈಲ್ಯಾಂಡ್ ರದ್ದು ಮಾಡಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೋವಿಡ್ - 19 ಬಳಿಕ ವಿದೇಶಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಅದರಲ್ಲೂ, ಥೈಲ್ಯಾಂಡ್, ಮಾಲ್ಡೀವ್ಸ್, ಯುಎಇ, ಶ್ರೀಲಂಕಾದಂತಹ ನೆರೆಯ ದೇಶಗಳಿಗೆ ಹೆಚ್ಚು ಪ್ರವಾಸಿಗರು ಹೋಗುತ್ತಾರೆ. ಈ ಹಿನ್ನೆಲೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲು ಈ ದೇಶ ವೀಸಾ ಅಗತ್ಯತೆಯನ್ನೇ ರದ್ದು ಮಾಡಿದೆ.
ಅಷ್ಟಕ್ಕೂ ಯಾವುದೀ ದೇಶ ಅಂತೀರಾ..? ಹೆಚ್ಚಿನ ಭಾರತೀಯರು ಪ್ರವಾಸ ಹೋಗುವ ದೇಶಗಳಲ್ಲೊಂದಾದ ಥೈಲ್ಯಾಂಡ್ ವೀಸಾ ಅವಶ್ಯಕತೆ ರದ್ದು ಮಾಡಿದೆ.
ಮುಂದಿನ ತಿಂಗಳಿನಿಂದ ಅಂದರೆ ನವೆಂಬರ್‌ನಿಂದ ಮೇ 2024 ರವರೆಗೆ ಭಾರತ ಮತ್ತು ತೈವಾನ್‌ನಿಂದ ಆಗಮನಕ್ಕೆ ವೀಸಾ ಅವಶ್ಯಕತೆಗಳನ್ನು ಥೈಲ್ಯಾಂಡ್ ಮನ್ನಾ ಮಾಡಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
ವರ್ಷಾಂತ್ಯ, ಹೊಸ ವರ್ಷಾರಂಭ, ಬೇಸಿಗೆ ಕಾಲದ ರಜೆಗಳು ಸೇರಿ ಋತುವಿನಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಪ್ರಯತ್ನದಲ್ಲಿ ಥೈಲ್ಯಾಂಡ್ ಸರ್ಕಾರ ಈ ಕ್ರಮ ಕೈಗೊಂಡಿದೆ.
ಸೆಪ್ಟೆಂಬರ್‌ನಲ್ಲಿ ಥೈಲ್ಯಾಂಡ್ ಚೀನಾದ ಪ್ರವಾಸಿಗರಿಗೆ ವೀಸಾ ಅವಶ್ಯಕತೆಗಳನ್ನು ರದ್ದುಗೊಳಿಸಿತ್ತು. ಇದಕ್ಕೆ ಕಾರಣ 2019 ರಲ್ಲಿ ದಾಖಲೆಯ 39 ಮಿಲಿಯನ್ (3.9 ಕೋಟಿ) ಪ್ರವಾಸಿಗರ ಪೈಕಿ 11 ಮಿಲಿಯನ್ (1.1 ಕೋಟಿ) ಚೀನಾ ಪ್ರವಾಸಿಗರು ಥೈಲ್ಯಾಂಡ್‌ಗೆ ಹೋಗಿದ್ದರು. ಇದು ದೇಶದ ನಂ. 1 ಸಾಂಕ್ರಾಮಿಕ ಪೂರ್ವ ಪ್ರವಾಸೋದ್ಯಮ ಮಾರುಕಟ್ಟೆಯಾಗಿದೆ.
ಇನ್ನು, ಈ ವರ್ಷ ಅಂದರೆ 2023ರ ಜನವರಿಯಿಂದ ಅಕ್ಟೋಬರ್ 29 ರವರೆಗೆ, ಥೈಲ್ಯಾಂಡ್‌ಗೆ 22 ಮಿಲಿಯನ್ ಅಂದರೆ 2.2 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಿಂದ 927.5 ಬಿಲಿಯನ್ ಬಹ್ಟ್ ಅಂದರೆ (25.67 ಬಿಲಿಯನ್ ಡಾಲರ್) ಆದಾಯ ಹರಿದುಬಂದಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಭಾರತ ಮತ್ತು ತೈವಾನ್ ಪ್ರವಾಸಿಗರಿಗೆ 30 ದಿನಗಳವರೆಗೆ ಥೈಲ್ಯಾಂಡ್‌ಗೆ ವೀಸಾ ಇಲ್ಲದೆ ಪ್ರವೇಶಿಸಬಹುದು ಎಂದು ಅಲ್ಲಿನ ವಕ್ತಾರ ಚಾಯ್ ವಾಚರೋಂಕೆ ಹೇಳಿದ್ದಾರೆ.
ಮಲೇಷ್ಯಾ, ಚೀನಾ ಮತ್ತು ದಕ್ಷಿಣ ಕೊರಿಯಾದ ನಂತರ ಸುಮಾರು 1.2 ಮಿಲಿಯನ್ ಪ್ರವಾಸಿಗರೊಂದಿಗೆ ಭಾರತವು ಈ ವರ್ಷ ಇಲ್ಲಿಯವರೆಗೆ ಪ್ರವಾಸೋದ್ಯಮಕ್ಕಾಗಿ ಥೈಲ್ಯಾಂಡ್‌ನ ನಾಲ್ಕನೇ ಅತಿದೊಡ್ಡ ಮೂಲ ಮಾರುಕಟ್ಟೆಯಾಗಿದೆ.
ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಮತ್ತು ಹಾಸ್ಪಿಟಾಲಿಟಿ ಚೈನ್‌ಗಳು ಆ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದರಿಂದ ಭಾರತದಿಂದ ಒಳಬರುವ ಪ್ರವಾಸೋದ್ಯಮವು ಬೆಳವಣಿಗೆಯ ಲಕ್ಷಣಗಳನ್ನು ತೋರಿಸಿದೆ.
ಥೈಲ್ಯಾಂಡ್ ಈ ವರ್ಷ ಸುಮಾರು 28 ಮಿಲಿಯನ್ (2.8 ಕೋಟಿ) ಪ್ರವಾಸಿಗರನ್ನು ಗುರಿಯಾಗಿಸಿಕೊಂಡಿದೆ. ಈ ಹಿನ್ನೆಲೆ ಪ್ರಯಾಣ ವಲಯವು ಆರ್ಥಿಕ ಬೆಳವಣಿಗೆಯನ್ನು ನಿರ್ಬಂಧಿಸಿರುವ ಮುಂದುವರಿದ ದುರ್ಬಲ ರಫ್ತುಗಳನ್ನು ಸರಿದೂಗಿಸಬಹುದು ಎಂದು ಹೊಸ ಸರ್ಕಾರವು ಆಶಿಸುತ್ತಿದೆ.