ಬಾಳೆಹಣ್ಣಿಗೆ ಒಲಿಯುವ ಗಣಪ, ಮನೆ, ತೋಟದಲ್ಲಿ ಇಲಿ ಕಾಟವಿದ್ರೆ ಇಲ್ಲಿ ಹರಕೆ ಹೇಳಿದ್ರೆ ಸಾಕು
ಎಷ್ಟು ದೊಡ್ಡದಾಗಿ, ಎಷ್ಟ್ ನೀಟಾಗಿ ಮನೆ ಕಟ್ಟಿದ್ರೂ ಮನೆಯೊಳಗೆ ಇಲಿ ಕಾಟವಂತೂ ತಪ್ಪಲ್ಲ.ಇನ್ನು ಕೃಷಿ ಭೂಮಿಗೆ ಇಲಿ ಹಿಂಡು ನುಗ್ಗಿದ್ರಂತೂ ಕಥೆ ಮುಗೀದೆ ಹೋಯ್ತು ಅಂತರ್ಥ.ಆದ್ರೆ ಈ ಊರಿನಲ್ಲಿರೋ ಈ ದೇವಸ್ಥಾನದಲ್ಲಿ ಹರಕೆ ಹೇಳಿದ್ರೆ ಸಾಕು ಮತ್ತೆ ತಪ್ಪಿಯೂ ಇಲ್ಲಿ ಎಲ್ಲಿಯೂ ಕಾಣಿಸ್ಕೊಳ್ಳಲ್ಲ.
ಇಲಿ ಮನೆಯೊಳಗೆ ಬಂದ್ ಬಿಟ್ರೆ ಸಾಕು ಮತ್ತೇನಾಗುತ್ತೆ ಅನ್ನೋದನ್ನು ಊಹಿಸಿ ಬಿಡ್ಬೋದು. ಪುಟ್ಟ ಮೂಷಿಕ ಮನೆಯೊಳಗೆ ಎಂಟ್ರಿ ಕೊಟ್ರೂ ಸಾಕು ಮತ್ತೆಲ್ಲಾ ಅನಾಹುತಾನೇ. ಇಲಿಗಳ ಹಿಂಡು ಮನೆಯೊಳಗೆ ಸೇರಿದ್ರಂತೂ ಬಟ್ಟೆ, ಪುಸ್ತಕ ಎಲ್ಲವೂ ಚೂರು ಚೂರಾಗಿ ಬಿಡುತ್ತೆ. ಪಾತ್ರೆ-ಇತರ ವಸ್ತುಗಳು ಮನೆ ತುಂಬಾ ಚೆಲ್ಲಿರುತ್ತೆ. ಈಗೆಲ್ಲಾ ಇಲಿಗಳ ಕಾಟ ಬೇಡ ಅಂತಾನೇ ದೊಡ್ಡ ದೊಡ್ಡ ಮನೆ ಕಟ್ಟಿಕೊಳ್ತಾರೆ. ಆದ್ರೂ ಅದ್ಹೇಗೋ ಇಲಿಗಳು ಮನೆಯೊಳಗೆ ಸೇರಿಕೊಂಡು ಬಿಡ್ತವೆ. ಸಾಲದ್ದಕ್ಕೆ ತೋಟಗಳಲ್ಲೂ ಇಲಿಗಳ ಕಾಟ ತಪ್ಪಲ್ಲ. ಹೊಲ-ಗದ್ದೆಗಳಿಗೆ ಇಳಿದು ಎಲ್ಲಾ ಬೆಳೆಯನ್ನು ನಾಶ ಮಾಡಿ ಬಿಡುತ್ತವೆ. ಇಲಿಯನ್ನು ಹಿಡೋಕೆ ರ್ಯಾಟ್ ಪಾಯಿಸನ್, ಇಲಿ ಬೋನು ಅಂತ ಏನೇನೂ ಸಿದ್ಧಪಡಿಸಿದ್ರೂ ಅಷ್ಟು ಪ್ರಯೋಜನವಾಗಲ್ಲ.
ಇಲಿಗಳ ಕಾಟದಿಂದ ಕೆಲವೊಂದು ಮನೆಗಳಲ್ಲಿ ಜನರು ಸಾಕಷ್ಟು ನಾಶ-ನಷ್ಟವನ್ನು ಅನುಭವಿಸುತ್ತಾರೆ. ಮನೆ, ತೋಟ-ಗದ್ದೆ ಅಂತ ಇಲಿಯ (Rat) ಕಾಟದಿಂದ ಹೈರಾಣಾಗುತ್ತಾರೆ. ಹೀಗೆ ತೊಂದರೆ ಅನುಭವಿಸುತ್ತಿರುವಾಗ ಜನರ ಸಮಸ್ಯೆ ಪರಿಹಾರ ನೀಡೋ ದೇಗುಲವೇ (Temple) ಉಡುಪಿಯ ಇನ್ನಂಜೆ ಗ್ರಾಮದ ಮಡುಂಬು ಶ್ರೀ ಮಹಾಗಣಪತಿ ದೇವಸ್ಥಾನ.
ಕೇರಳದ ಈ ದೇಗುಲಕ್ಕೆ ನಾಯಿಯೂ ಪ್ರವೇಶಿಸಬಹುದು, ಸಿಗೋದು ಮೀನಿನ ಪ್ರಸಾದ
ಇಲಿ, ಕೀಟಗಳ ಸಮಸ್ಯೆಗೆ ಪರಿಹಾರ ಕೊಡುವ ಗಣಪ
ಮಡುಂಬು ಶ್ರೀ ಮಹಾಗಣಪತಿ ದೇವಸ್ಥಾನ, ಇಲಿ ಕಾಟಕ್ಕೆ ಪರಿಹಾರ ಕೊಡೋ ವಿಶೇಷ ದೇವಸ್ಥಾನ. ಈ ದೇವಾಲಯದಲ್ಲಿ ಗಣೇಶನನ್ನು ಪೂಜಿಸಲಾಗುತ್ತದೆ. ಇಲಿ, ಕೀಟ ಮೊದಲಾದ ಸಮಸ್ಯೆಗಳನ್ನು ಹೇಳಿಕೊಂಡು ಬರುವ ಭಕ್ತರಿಗೆ (Devotees) ಇಲ್ಲಿನ ಗಣಪ ಪರಿಹಾರ ನೀಡುತ್ತಾನೆ. ಇಲ್ಲಿ ಗಣಪ ಬಾಳೆಹಣ್ಣಿಗೆ (Banana) ಒಲಿಯುತ್ತಾನೆ. ಜನರು ಇಲ್ಲಿಗೆ ಬಂದು ಬಾಳೆಹಣ್ಣು ನೀರುವ ಹರಕೆ ಹೇಳಿಕೊಂಡರೆ ಮತ್ತೆ ಇಲಿಯ ಕಾಟವಿರೋದಿಲ್ಲ.
ಉಡುಪಿಯ ಇನ್ನಂಜೆ ಗ್ರಾಮದಲ್ಲಿ ಮಡುಂಬು ಶ್ರೀ ಮಹಾಗಣಪತಿ ದೇವಸ್ಥಾನವಿದೆ. ಇದು ಸುಮಾರು ಎರಡು ಶತಮಾನಗಳಷ್ಟು ಪ್ರಾಚೀನವಾದ ದೇವಾಲಯ. ವರ್ಷಗಳ ಹಿಂದೆಯಷ್ಟೇ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಯಿತು. ಇಲ್ಲಿನ ದೇವರಿಗೆ ಇಷ್ಟವಾದ ನೈವೇದ್ಯ ಬಾಳೆಹಣ್ಣು. ಭಕ್ತರು ಭಕ್ತಿಯಿಂದ ಬಾಳೆಹಣ್ಣಿನ ಹರಕೆ ಹೇಳಿಕೊಂಡರೆ ಸಾಕು ಮನೆಯಲ್ಲಿರುವ ಇಲಿಯ ಕಾಟ ಪರಿಹಾರವಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಕೃಷಿಗೆ ಕ್ರಿಮಿಕೀಟಗಳ ಹಾವಳಿ ಕಾಣಿಸಿಕೊಂಡಾಲೂ ಜನರು ಇಲ್ಲಿ ಹರಕೆ ಹೇಳಿಕೊಳ್ಳುತ್ತಾರೆ.
ಈ ದೇಗುಲದ ಗೇಟೊಂದರಲ್ಲೇ 125 ಕೆಜಿ ಚಿನ್ನವಿದೆ! ಇನ್ನು ದೇವಾಲಯ ವೈಭವ ಹೇಗಿರಬಹುದು?!
ಮಡಂಬು ಮಹಾಗಣಪತಿ ದೇವಸ್ಥಾನದಲ್ಲಿ ಉತ್ಸವದ ಸಂದರ್ಭದಲ್ಲಿ ವಿಶಿಷ್ಟವಾದ ಸೇವೆಗಳು ಸಹ ನಡೆಯುತ್ತವೆ. ಭಕ್ತಾಧಿಗಳು ಈ ಸಂದರ್ಭದಲ್ಲಿಯೂ ತಮ್ಮ ಹರಕೆಯನ್ನು ತೀರಿಸಿಕೊಳ್ಳಲು ಅವಕಾಶವಿದೆ. ಇಲಿಗಳು, ಕೀಟಗಳ ಕಾಟದಿಂದ ಬೇಸತ್ತಿರೋ ಜನರು ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಂದು ಹರಕೆ ತೀರಿಸಿಕೊಂಡು ಧನ್ಯರಾಗುತ್ತಾರೆ. ಅದೇನೆ ಇರ್ಲಿ, ಇಲಿಗಳ ಕಾಟವನ್ನು ತಪ್ಪಿಸೋ ವಿಶೇಷ ದೇವಸ್ಥಾನ ನಿಜಕ್ಕೂ ಅಚ್ಚರಿಯ ತಾಣವೇ ಸರಿ.
ಸೌತಡ್ಕದಲ್ಲಿ ಬಯಲು ಆಲಯ ಗಣಪತಿ
ಗುಡಿ ಗೋಪುರಗಳಿಲ್ಲದೆ ಬಯಲೇ ಆಲಯವನ್ನಾಗಿ ಮಾಡಿಕೊಂಡ ಗಣಪತಿ ಇರುವುದು ಸೌತಡ್ಕದಲ್ಲಿ. ಇದೇ ಇಲ್ಲಿನ ವಿಶೇಷತೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಕೊಕ್ಕಡದಿಂದ ಮೂರು ಕಿ.ಮೀ. ದೂರದಲ್ಲಿರುವ ಸೌತಡ್ಕದಲ್ಲಿರುವ ಶ್ರೀ ಮಹಾಗಣಪತಿ ದೇವಾಲಯ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಯಾವುದೇ ಗುಡಿಯಿಲ್ಲದೆ ಗಣೇಶನ ವಿಗ್ರಹವಿದ್ದು, ಅಲ್ಲಿಯೇ ಪೂಜೆ, ಪ್ರಸಾದ ವಿನಿಯೋಗ ನಡೆಯುವುದು ಇಲ್ಲಿನ ವಿಶೇಷ.
ಸುಮಾರು 800 ವರ್ಷಗಳ ಹಿಂದೆ ಈ ಪ್ರದೇಶದ ಸಮೀಪದ ರಾಜವಂಶವೊಂದಕ್ಕೆ ದೇವಾಲಯವು ಸೇರಿತ್ತು. ಸಂಗ್ರಾಮವೊಂದರಲ್ಲಿ ಅರಸೊತ್ತಿಗೆ ನಾಶವಾದಾಗ ದೇವಾಲಯವೂ ಅವನತಿ ಹೊಂದಿತ್ತು. ಅನಾಥವಾಗಿ ಬಿದ್ದಿದ್ದ ವಿಗ್ರಹವನ್ನು ದನ ಕಾಯುತ್ತಿದ್ದ ಬಾಲಕರು ಈಗಿನ ಜಾಗಕ್ಕೆ ತಂದು ಮರದ ಬುಡದಲ್ಲಿ ಕಲ್ಲುಗಳನ್ನು ಇಟ್ಟು ಗಣೇಶನ ವಿಗ್ರಹವನ್ನು ಇಟ್ಟು, ಸೌತೆ ಮಿಡಿಗಳನ್ನು ಪ್ರತಿ ದಿನ ನೈವೇದ್ಯವಾಗಿ ಇಟ್ಟು ಪೂಜಿಸುತ್ತಾ ಬಂದರು. ಅಂದಿನಿಂದ ಈ ಕ್ಷೇತ್ರವು ಸೌತಡ್ಕ ಎಂದು ಹೆಸರನ್ನು ಪಡೆಯಿತು ಎನ್ನುವ ಸ್ಥಳ ಪುರಾಣವಿದೆ.