Asianet Suvarna News Asianet Suvarna News

ಈ ದೇಗುಲದ ಗೇಟೊಂದರಲ್ಲೇ 125 ಕೆಜಿ ಚಿನ್ನವಿದೆ! ಇನ್ನು ದೇವಾಲಯ ವೈಭವ ಹೇಗಿರಬಹುದು?!

ಈ ಲಕ್ಷ್ಮೀ ನರಸಿಂಹ ದೇವಾಲಯದ ಗೇಟೊಂದೇ 125 ಕೆಜಿ ಬಂಗಾರವನ್ನು ಹೊತ್ತಿದೆ. ದೇವಾಲಯದ ವೈಭೋಗ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಎಲ್ಲಿದೆ ಈ ದೇವಾಲಯ? ಏನೇನು ವಿಶೇಷಗಳಿವೆ ಗೊತ್ತಾ?

Know the temple with 125Kgs Gold just on the Gate in Telangana skr
Author
Bangalore, First Published Jul 16, 2022, 2:29 PM IST | Last Updated Jul 16, 2022, 2:29 PM IST

ಈ ದೇವಾಲಯ ಸ್ವರ್ಗದ ಮರುಸೃಷ್ಟಿಯಂತೆ ಇದೆ. ಈ ದೇವಾಲಯ ನಿರ್ಮಾಣಕ್ಕೆ ತಗುಲಿದ್ದು 1800 ಕೋಟಿ ರೂಪಾಯಿ. ಈ ಬೃಹತ್ ದೇವಾಲಯದ ಪ್ರವೇಶದ್ವಾರವೊಂದರಲ್ಲಿ 125 ಕೆಜಿ ಚಿನ್ನವಿದೆ! ಇನ್ನು ಒಳಾಂಗಣದ ವೈಭೋಗ ಎಂಥದಿರಬಹುದೆಂಬುದನ್ನು ನೀವೇ ಊಹಿಸಿ. 

ಇಂಥದೊಂದು ಅದ್ಭುತ ದೇವಾಲಯ ಇರುವುದು ತೆಲಂಗಾಣದ ಯಾದಗಿರಿ ಬೆಟ್ಟದ ಮೇಲೆ. ಹೈದರಾಬಾದ್‌ನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿ ಆಂಧ್ರದ ತಿರುಪತಿಗೆ ಸರಿಸಮನಾಗಿ ಯದಾದ್ರಿ ಶ್ರೀ ಶ್ರೀ ಲಕ್ಷ್ಮಿ ನರಸಿಂಹ ದೇವಾಲಯ ನಿರ್ಮಾಣವಾಗಿದೆ. ಇದೊಂದು ಐತಿಹಾಸಿಕ ದೇವಾಲಯವಾಗಿದ್ದು, ಇದರ ಪುನರ್ನಿರ್ಮಾಣವು 2016 ರಲ್ಲಿ ಪ್ರಾರಂಭವಾಗಿ 2022ರಲ್ಲಿ ಪೂರ್ಣಗೊಂಡಿದೆ.

Know the temple with 125Kgs Gold just on the Gate in Telangana skr

ಯದಾದ್ರಿ ವೈಭವ
ಸುಮಾರು 14.5 ಎಕರೆಗಳಷ್ಟು ವಿಸ್ತಾರ ಪ್ರದೇಶದಲ್ಲಿ ದೇವಾಲಯದ ಸಂಕೀರ್ಣವಿದ್ದು, ದೇವಾಲಯದ ಪುನರ್ ನಿರ್ಮಾಣ ಕಾರ್ಯದಲ್ಲಿ ಸಿಮೆಂಟ್ ಬಳಸಿಲ್ಲ, ಬದಲಿಗೆ 2,50,000 ಟನ್ ಗ್ರಾನೈಟ್ ಬಳಸಲಾಗಿದೆ. ಇದರ ಪ್ರವೇಶದ್ವಾರಗಳನ್ನು ಹಿತ್ತಾಳೆಯಿಂದ ಮಾಡಲಾಗಿದ್ದು, ಅದರ ಮೇಲೆ ಚಿನ್ನದ ಲೇಪ(Gold coat)ವನ್ನು ಹಾಕಲಾಗಿದೆ. ದೇವಸ್ಥಾನದ ಗೋಪುರದ ನಿರ್ದಿಷ್ಟ ದ್ವಾರದಲ್ಲಿ ಬರೋಬ್ಬರಿ 125 ಕೆಜಿ ಚಿನ್ನವನ್ನು ಬಳಸಲಾಗಿದೆ. ದೇವಾಲಯವು ಕಲ್ಲಿನಿಂದ ಮಾಡಲ್ಪಟ್ಟ ಏಳು 'ಗೋಪುರಗಳನ್ನು' ಹೊಂದಿದೆ.

ಶ್ರಾವಣದಲ್ಲಿ ಶಿವನಿಗೆ ಅರ್ಪಿಸಿ ಈ ಹೂ, ಪುಣ್ಯ ಲಭಿಸುತ್ತೆ!

ಹೆಚ್ಚಿನ ದೇವಾಲಯಗಳಲ್ಲಿ ಕಂಡುಬರುವ ಸಾಮಾನ್ಯ 7 ಅಡಿ ಗರ್ಭಾಲಯ ಬಾಗಿಲಿಗಿಂತ ಭಿನ್ನವಾಗಿ, ಈ ದೇವಾಲಯದಲ್ಲಿ ಬಾಗಿಲು 11 ಅಡಿ ಎತ್ತರದಲ್ಲಿದೆ, ಚಿನ್ನದ ನವ ನರಸಿಂಹ ಸ್ವಾಮಿ ವಿನ್ಯಾಸವನ್ನು ಹೊಂದಿದೆ. ಇಲ್ಲಿ ಅಡ್ಡಲ ಮಂಟಪವೂ ಇದ್ದು, ಅಲ್ಲಿ ಪ್ರತಿ ರಾತ್ರಿ ಲಕ್ಷ್ಮೀ ನರಸಿಂಹ ದೇವರನ್ನು ಉಯ್ಯಾಲೆಯಲ್ಲಿ ತೂಗಲಾಗುತ್ತದೆ. ಈ ಸಂದರ್ಭದಲ್ಲಿ ಇಡೀ ಮಂಟಪವು ದೀಪಗಳು ಮತ್ತು ಚಿನ್ನದಿಂದ ಹೊಳೆಯುತ್ತದೆ.

ಭಕ್ತ ಪ್ರಹ್ಲಾದ(Legend of Prahlada)
ಈ ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ ಪ್ರಹ್ಲಾದನ ಚಿತ್ರಕಲೆ. ಇದನ್ನು ಕೂಡಾ ಚಿನ್ನದಿಂದ ನಿರ್ಮಿಸಲಾಗಿದೆ. ಭಕ್ತ ಪ್ರಹ್ಲಾದನ ಸಂಪೂರ್ಣ ಕಥೆಯನ್ನು ಈ ದೇವಾಲಯದಲ್ಲಿ ಶಿಲ್ಪದಲ್ಲಿ ಚಿತ್ರಿಸಲಾಗಿದೆ. ಭಗವಾನ್ ನರಸಿಂಹನ ಪ್ರತಿಮೆಯು ಈ ದೇವಾಲಯದಲ್ಲಿ ಮುಗುಳ್ನಗುತ್ತದೆ. ಹಿರಣ್ಯಕಶ್ಯಪನನ್ನು ಕೊಲ್ಲಲು ನರಸಿಂಹನು ಕಂಬವನ್ನು ಒಡೆಯುವುದು, ವಿಷ್ಣುವು ಈ ಅವತಾರದಲ್ಲಿ ರಾಕ್ಷಸ ಹಿರಣ್ಯಕಶಿಪನ ಎದೆಯನ್ನು ಸೀಳುವುದನ್ನು ಕಾಣಬಹುದು. ಇದರೊಂದಿಗೆ ದೇವಾಲಯದಲ್ಲಿ ಹನುಮಾನ್, ನರಸಿಂಹ ಸ್ವಾಮಿ ಮತ್ತು ಯಾದ ಮಹರ್ಷಿಗಳ ಪ್ರತಿಮೆಗಳೂ ಇವೆ. ಇವರೆಲ್ಲರೂ ಈ ದೇವಾಲಯದಲ್ಲಿ ತಪಸ್ಸು ಮಾಡಿದ್ದಾರೆಂಬ ಪ್ರತೀತಿ ಇದೆ. 

Know the temple with 125Kgs Gold just on the Gate in Telangana skr

ಮೂರು ರೂಪದ ನರಸಿಂಹ
ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದೇವಾಲಯದಲ್ಲಿ ನರಸಿಂಹ ದೇವರು ಮೂರು ರೂಪಗಳಲ್ಲಿ ಕುಳಿತಿದ್ದಾನೆ. ಈ ದೇವಾಲಯದಲ್ಲಿ ತಾಯಿ ಲಕ್ಷ್ಮಿ ಕೂಡ ಕುಳಿತಿದ್ದಾಳೆ. ಈ ದೇವಾಲಯವನ್ನು ಸ್ಕಂದ ಪುರಾಣದಲ್ಲೂ ಉಲ್ಲೇಖಿಸಲಾಗಿದೆ. ಸ್ಕಂದ ಪುರಾಣದ ದಂತಕಥೆಯ ಪ್ರಕಾರ, ಮಹರ್ಷಿ ಋಷ್ಯಶೃಂಗನ ಮಗ ಯಾದ ಋಷಿಯು ವಿಷ್ಣುವನ್ನು ಮೆಚ್ಚಿಸಲು ಇಲ್ಲಿ ತಪಸ್ಸು ಮಾಡಿದನು. ಭಗವಾನ್ ವಿಷ್ಣುವು ಅವನ ದೃಢತೆಯಿಂದ ಸಂತುಷ್ಟನಾದನು ಮತ್ತು ಆತನಿಗೆ ಸಂತೋಷದ ರೂಪದಲ್ಲಿ ದರ್ಶನವನ್ನು ನೀಡಿದನು. ಮಹರ್ಷಿ ಯಾದವರ ಪ್ರಾರ್ಥನೆಯ ಮೇರೆಗೆ ಈ ದೇವಾಲಯದಲ್ಲಿ ಭಗವಾನ್ ನರಸಿಂಹ ಜ್ವಾಲಾ ನರಸಿಂಹ, ಗಂಧಾಭಿರಾಂದ ನರಸಿಂಹ ಮತ್ತು ಯೋಗಾನಂದ ನರಸಿಂಹ ಮೂವರೂ ಆಗಿದ್ದಾರೆ. ಈ ದೇವಾಲಯವು ಧ್ಯಾನಸ್ಥ ಪೌರಾಣಿಕ ದೇವರಾದ ನರಸಿಂಹನ ಪ್ರತಿಮೆಯನ್ನು ಸ್ಥಾಪಿಸಿದ ವಿಶ್ವದ ಏಕೈಕ ದೇವಾಲಯವಾಗಿದೆ. ದೇವಾಲಯವು 12 ಅಡಿ ಎತ್ತರದ ಮತ್ತು 30 ಅಡಿ ಉದ್ದದ ಗುಹೆಗಳನ್ನು ಹೊಂದಿದ್ದು, ಭಗವಾನ್ ನರಸಿಂಹ ಮತ್ತು ತಾಯಿ ಲಕ್ಷ್ಮಿಯ ಮೂರು ಪ್ರತಿಮೆಗಳನ್ನು ಹೊಂದಿದೆ.

ಮೇಷಕ್ಕೆ ಮೀನದ ಕಡೆ ಯಾಕಿಷ್ಟು ಆಕರ್ಷಣೆ? ಬೆಸ್ಟ್ ಜೋಡಿ ಆಗಬಹುದು ಈ ಎರಡು ರಾಶಿಗಳು!

ಒಂದೇ ಬಾರಿಗೆ 10 ಸಾವಿರ ಭಕ್ತರು
ಏಕಕಾಲಕ್ಕೆ 10,000 ಭಕ್ತರಿಗೆ ಅನುಕೂಲವಾಗುವಂತೆ ನಿರ್ಮಿಸಲಾದ ದೇವಾಲಯ ಸಂಕೀರ್ಣವು ಸಾಕಷ್ಟು ವಿಶಾಲವಾಗಿದ್ದು ಎಲ್ಲರಿಗೂ ನೆರಳು ನೀಡುತ್ತದೆ. ಬೆಟ್ಟದ ಬುಡದಲ್ಲಿರುವ ಗಂಡಿ ಚೆರುವಿಗೆ ಸಮೀಪದಲ್ಲಿ ಕಲ್ಯಾಣಿ ತುಂಬಿದ್ದು, ಭಕ್ತರು ಪವಿತ್ರ ಸ್ನಾನ ಮಾಡಬಹುದಾಗಿದೆ.
 

Latest Videos
Follow Us:
Download App:
  • android
  • ios