ಅಬ್ಬಬ್ಬಾ, ಭಾರತದ ಈ ರೈಲು ನಿಲ್ದಾಣದಲ್ಲಿದೆ ವಿಮಾನ ನಿಲ್ದಾಣವನ್ನೂ ಮೀರಿಸುವ ಸೌಲಭ್ಯ!

ಇದೊಂದು ವಿಶ್ವ ದರ್ಜೆಯ ರೈಲ್ವೆ ಸ್ಟೇಶನ್.‌ ಇದೀಗ ಮರು ಅಭಿವೃದ್ಧಿಪಡಿಸಲಾಗಿರುವ ಈ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಮಾನ ನಿಲ್ದಾಣವನ್ನೂ ಮೀರಿಸುವ ಸೌಕರ್ಯಗಳು ಇವೆ. ಏನೆಲ್ಲಾ ಇವೆ ಅಂತ ನೋಡೋಣ ಬನ್ನಿ.

 

Rani Kamalapati Railway station in India has a facility that surpasses the airport bni

ಅದರ ಮೊದಲಿನ ಹೆಸರು ಹಬೀಬ್‌ಗಂಜ್.‌ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ರೈಲ್ವೆ ನಿಲ್ದಾಣ ಇರುವ ಜಾಗದ ಹೆಸರದು. ಈಗಿನ ಹೊಸ ಹೆಸರು ರಾಣಿ ಕಮಲಾಪತಿ ರೈಲು ನಿಲ್ದಾಣ. ಹೆಸರು ಹೊಸದಾದಂತೆ ಅಲ್ಲಿ ಸೌಲಭ್ಯಗಳೂ ವರ್ಲ್ಡ್‌ ಕ್ಲಾಸ್‌ ಆಗಿವೆ. ವಿಶ್ವಮಟ್ಟದ ರೈಲು ನಿಲ್ದಾಣಗಳ ಸರಿಸಮನಾಗಿ ನಿಲ್ಲುವ ರೈಲ್ವೆ ಸ್ಟೇಶನ್‌ ಆಗಿದೆ ಅದೀಗ. ಏನೆಲ್ಲಾ ಇದೆ ನೋಡೋಣ.  


1) ಕ್ಲಾಕ್ ರೂಮ್ಸ್/ ಸೇಫ್ಟಿ ಲಾಕರ್ಸ್
ರಾಣಿ ಕಮಲಾಪತಿ ರೈಲ್ವೇ ನಿಲ್ದಾಣದಲ್ಲಿ ಸುರಕ್ಷತಾ ಲಾಕರ್‌ಗಳೊಂದಿಗೆ ಕ್ಲೋಕ್ ರೂಮ್‌ಗಳ ಸೌಲಭ್ಯ ಲಭ್ಯವಿದೆ. ಲಗೇಜ್ ಇಡುವುದಕ್ಕೆ ಮತ್ತು ಭದ್ರತೆಗಾಗಿ ಪ್ರಯಾಣಿಕರಿಗೆ ಕ್ಲೋಕ್‌ರೂಮ್‌ಗಳನ್ನು ಒದಗಿಸಲಾಗಿದೆ. 


2) ವಿಶ್ರಾಂತಿ ಕೊಠಡಿಗಳು/ ವಸತಿ ನಿಲಯಗಳು
RKMP ರೈಲ್ವೇ ನಿಲ್ದಾಣ ದೀರ್ಘ ಪ್ರಯಾಣಕ್ಕೆ ಮುನ್ನ ಸ್ವಲ್ಪ ಸಮಯ ಉಳಿಯಲು ಬಯಸುವ ಪ್ರಯಾಣಿಕರಿಗೆ ಸ್ವಚ್ಛವಾದ ಸಿಂಗಲ್, ಡಬಲ್ ಮತ್ತು ಡಾರ್ಮಿಟರಿ ಆಕ್ಯುಪೆನ್ಸಿ ಕೋಣೆಗಳನ್ನು ಒದಗಿಸಿದೆ. ಕೊಠಡಿಗಳು 24X7 ಪವರ್ ಬ್ಯಾಕಪ್‌ನೊಂದಿಗೆ ಸುಸಜ್ಜಿತವಾಗಿವೆ.


3) ಗಾಲಿಕುರ್ಚಿ ಸೌಲಭ್ಯಗಳು
ಅಂಗವಿಕಲರು ಮತ್ತು ದೈಹಿಕವಾಗಿ ಅಶಕ್ತ ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಗಾಲಿಕುರ್ಚಿಗಳು ಮತ್ತು ಬ್ಯಾಟರಿ ಚಾಲಿತ ಕಾರುಗಳನ್ನು ಒದಗಿಸಲಾಗಿದೆ.


4) ಕಿಡ್ಸ್ ಪ್ಲೇ ಝೋನ್ 
ರಾಣಿಕಮಲಪತಿ ರೈಲು ನಿಲ್ದಾಣದಲ್ಲಿ ಮಕ್ಕಳಿಗಾಗಿ ಸುರಕ್ಷಿತ ಆಟದ ವಲಯ ಒದಗಿಸಲಾಗಿದೆ. ಈ ವಲಯ ಆಟಿಕೆ ರೈಲುಗಳನ್ನು ಒಳಗೊಂಡಿದೆ. ಮಕ್ಕಳು ಆನಂದಿಸಲು, ರೈಲು ಪ್ರಯಾಣದ ದಣಿವಿನ ನಂತರ ಅಥವಾ ಮೊದಲು ತಮ್ಮ ಸಮಯವನ್ನು ಕಳೆಯಲು ಹೊಂದಲು ಸ್ಥಳವನ್ನು ಮೀಸಲಿಟ್ಟಿದೆ. 


5) ಫುಡ್ ಕೋರ್ಟ್ ಏರಿಯಾ 
ನಿಲ್ದಾಣ ಆಹಾರ ಮಳಿಗೆಗಳಿಗೆ ಮೀಸಲಾದ ಸ್ಥಳವನ್ನು ಒದಗಿಸಿದೆ. ಅಲ್ಲಿ ನಿಮ್ಮ ಹಸಿವಿನ ಕ್ರೇವಿಂಗ್‌ ಪೂರೈಸಲು ಬೇಕಾದ ಪ್ರತಿಯೊಂದು ಆಹಾರ ಪದಾರ್ಥದ ಮಳಿಗೆಯನ್ನೂ ಕಾಣಬಹುದು. ಇದು ಎಲ್ಲಾ ಸ್ವಾದ, ರುಚಿ ವೈವಿಧ್ಯಗಳನ್ನು ಹೊಂದಿದೆ. ಪ್ರಯಾಣಿಕರ ವಿವಿಧ ಆಯ್ಕೆಗಳನ್ನು ಪೂರೈಸಲು ವೈವಿಧ್ಯಮಯ ಹಿನ್ನೆಲೆಗಳಿಂದ ಲಭ್ಯವಿದೆ. ಫುಡ್ ಕೋರ್ಟ್‌ನಿಂದ ನೀವು ಖರೀದಿಸುವ ಆಹಾರದ ಗುಣಮಟ್ಟ, ರುಚಿ ಮತ್ತು ಪ್ರಕಾರ ಅವಲಂಬಿಸಿ ಬೆಲೆ ಬದಲಾಗುತ್ತದೆ.


6) ಸಿಸಿಟಿವಿ ಕಣ್ಗಾವಲು
ಪ್ರಯಾಣಿಕರಿಗೆ ಸುರಕ್ಷಿತ ಕ್ಯಾಂಪಸ್ ಒದಗಿಸಲು ಮತ್ತು ಭದ್ರತಾ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು RKMP ಕಾಯುವ ಕೊಠಡಿಗಳು, ಮೀಸಲಾತಿ ಕೌಂಟರ್, ಪಾರ್ಕಿಂಗ್ ಪ್ರದೇಶ, ಪ್ರವೇಶ / ನಿರ್ಗಮನ, ಕಾಲು ಸೇತುವೆಗಳಲ್ಲಿ ವೀಡಿಯೊ ಕಣ್ಗಾವಲು ವ್ಯವಸ್ಥೆ ಇಡಲಾಗಿದೆ. ನಿಲ್ದಾಣದ ಆವರಣದಲ್ಲಿ ಯಾವುದೇ ಕುಚೇಷ್ಟೆ, ಕಿಡಿಗೇಡಿತನ ಮಾಡುವಂತಿಲ್ಲ. ಇದರಿಂದ ಪ್ರಯಾಣಿಕರು ಸುರಕ್ಷಿತ ಪ್ರಯಾಣದ ಅನುಭವ.


7) ಲಿಫ್ಟ್‌ಗಳು, ಎಲಿವೇಟರ್‌, ಎಸ್ಕಲೇಟರ್‌ 
ವಯಸ್ಸಾದವರು, ಮಕ್ಕಳು, ಅಶಕ್ತರು ಸುಗಮವಾಗಿ ಓಡಾಡಲು, ತಮ್ಮ ಬ್ಯಾಗುಗಳನ್ನು ಸಾಗಿಸಲು, ಕಾನ್ಕೋರ್ಸ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಿಗೆ ಒಯ್ಯಲು ಸುಲಭವಾಗುವಂತೆ, ವಯಸ್ಸಾದವರ ವೇಗವನ್ನು ಹೊಂದಿಸುವ ನಿಧಾನವಾದ ಇಳಿಜಾರುಗಳು ಮತ್ತು ಎಸ್ಕಲೇಟರ್‌ಗಳು ಇವೆ. ಜೊತೆಗೆ ವಿಶಾಲವಾದ ಲಿಫ್ಟ್‌ಗಳು.


8) ಅಂಗವಿಕಲರಿಗೆ ಪಾರ್ಕಿಂಗ್ 
ನಿಲ್ದಾಣದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳವಿದೆ. ಇದು ಸಾಮಾನ್ಯ ಪಾರ್ಕಿಂಗ್‌ ಜಾಗದ ದಟ್ಟಣೆಯ ತೊಂದರೆ ಇವರಿಗೆ ಆಗದಂತೆ ನೋಡಿಕೊಳ್ಳುತ್ತದೆ. ಅವರಿಗೆ ಯಾವುದೇ ಅನನುಕೂಲತೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಕೊನೆಯ ಕ್ಷಣದ ತೊಂದರೆ ತಪ್ಪಿಸಲು ಪಾರ್ಕಿಂಗ್ ಪ್ರದೇಶದ ಕಾಯ್ದಿರಿಸುವಿಕೆಯೂ ಲಭ್ಯ.

ವಿಶ್ವದಲ್ಲಿಯೇ ಸುಂದರ ಪ್ರದೇಶವಾಗಿರೋ ಟಿಬೆಟ್ ಮೇಲೆ ಎಂದಿಗೂ ವಿಮಾನ ಹಾರಾಟ ನಡೆಸಲ್ಲ ಯಾಕೆ?


9) ವಾಶ್‌ರೂಮ್‌ಗಳು ಮತ್ತು ಕುಡಿಯುವ ನೀರು 
ಪ್ರಯಾಣಿಕರಿಗೆ ನೈರ್ಮಲ್ಯದ ವಾತಾವರಣವನ್ನು ಖಚಿತಪಡಿಸಿಕೊಳ್ಳಲು RKMPಯ ಪ್ರತಿ ಪ್ಲಾಟ್‌ಫಾರ್ಮ್‌ನಲ್ಲಿ ಪುರುಷ ಮತ್ತು ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ವಾಶ್‌ರೂಮ್‌ಗಳಿವೆ. ಜೊತೆಗೆ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಸಹ. 


10) ವಿಐಪಿ ಲೌಂಜ್ ಮತ್ತು ವೈಫೈ ಸೌಲಭ್ಯ
ನಿಲ್ದಾಣದಲ್ಲಿ ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯಗಳೊಂದಿಗೆ ಎಕ್ಸಿಕ್ಯೂಟಿವ್‌ ಲಾಂಜ್‌ಗಳನ್ನು ಒದಗಿಸಲಾಗಿದೆ. ಅಲ್ಲಿ ರೈಲ್ವೇ ಪ್ರಯಾಣಿಕರು ತಮ್ಮ ರೈಲುಗಳಿಗಾಗಿ ಕಾಯುತ್ತಿರುವಾಗ ಉಳಿಯಬಹುದು. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉಚಿತ ವೈಫೈ ಸೌಲಭ್ಯವೂ ಇದೆ. 

ಇವೆಲ್ಲವೂ ಈ ನಿಲ್ದಾಣ ಉಳಿದ ನಿಲ್ದಾಣಗಳಿಗಿಂತ ಎದ್ದು ಕಾಣುವಂತೆ ಮಾಡುತ್ತದೆ. ಇವೆಲ್ಲದರ ಹೊರತಾಗಿ RKMPಯಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ನೀರು ನಿರ್ವಹಣಾ ವ್ಯವಸ್ಥೆ, ಸೌರ ಫಲಕಗಳು ಮತ್ತು ಭವ್ಯವಾದ ಏರ್ ಕಾನ್ಕೋರ್ಸ್ ಇವೆ.

ಬೆಂಗಳೂರು ಏರ್‌ಪೋರ್ಟ್ ನೋಡಿ ಅಮೇರಿಕಾಕ್ಕಿಂತಲೂ ಸೂಪರ್ ಆಗಿದೆ ಎಂದ ಯುಎಸ್ ಖ್ಯಾತ ಯ್ಯೂಟೂಬರ್!
 

Latest Videos
Follow Us:
Download App:
  • android
  • ios