ವಿಶ್ವದಲ್ಲಿಯೇ ಸುಂದರ ಪ್ರದೇಶವಾಗಿರೋ ಟಿಬೆಟ್ ಮೇಲೆ ಎಂದಿಗೂ ವಿಮಾನ ಹಾರಾಟ ನಡೆಸಲ್ಲ ಯಾಕೆ?
ಈ ಪ್ರದೇಶದಲ್ಲಿ ವಿಶ್ವದ ಸುಂದರ ಮತ್ತು ಎತ್ತರವಾದ ಹಿಮಾಲಯ ಪರ್ವತಗಳಿವೆ. ಆದ್ರೆ ಈ ಭಾಗದಲ್ಲಿ ವಿಮಾನ ಹಾರಾಟ ನಡೆಸಲು ಪೈಲಟ್‌ಗಳು ಹೆದರುತ್ತಾರೆ. ಪೈಲಟರ್‌ಗಳ ಭಯಕ್ಕೆ ಕಾರಣ ಏನು?
ನವದೆಹಲಿ: ವಿಮಾನದಲ್ಲಿ ಪ್ರಯಾಣ ಮಾಡೋದು ಕೆಲವರಿಗೆ ರೋಮಾಂಚನಕಾರಿ ಅನುಭವ ನೀಡಬಹುದು. ಆದ್ರೆ ಪೈಲಟ್‌ಗಳಿಗೆ] ವಿಮಾನ ಹಾರಾಟ ನಡೆಸೋದು ಸವಾಲಿನ ಕೆಲಸವಾಗಿರುತ್ತದೆ. ಭೂಮಿಯ ಮೇಲೆ ಸಾವಿರಾರ ಮೀಟರ್ ಎತ್ತರದಲ್ಲಿ ಹಾರಾಟ ನಡೆಸೋದು ಅಂದ್ರ ಸಾಮಾನ್ಯದ ವಿಷಯವಲ್ಲ. ನೂರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯ ಸ್ಥಾನಕ್ಕೆ ಕರೆದೊಯ್ಯದೋ ಪೈಲಟ್ ಜವಾಬ್ದಾರಿಯಾಗಿರುತ್ತದೆ. ಆದರೆ ಭೂಮಿಯ ಮೇಲಿರುವ ಈ ಪ್ರದೇಶದ ಮೇಲೆ ಹಾರಾಟ ನಡೆಸಲು ಪೈಲಟ್‌ಗಳು ಹೆದರುತ್ತಾರೆ. ವಿಮಾನ ಹಾರಾಟಕ್ಕೆ ಈ ಪ್ರದೇಶದ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಭಯೋತ್ಪಾದಕರ ಭಯವೂ ಇರಲ್ಲ. ಆದರೂ ಈ ಸ್ಥಳದ ಮೇಲೆ ಯಾವುದೇ ವಿಮಾನ ಹಾರಾಟ ನಡೆಸಲ್ಲ.
ಇಂದು ನಾವು ಹೇಳುತ್ತಿರೋದು ಟಿಬೆಟ್ ಪ್ರದೇಶ. ಭಾರತದ ಸಮೀಪದಲ್ಲಿಯೇ ಇರೋ ಚೀನಾದ ಜೊತೆ ಗಡಿ ಹಂಚಿಕೊಂಡಿರುವ ಟಿಬೆಟ್ ವಿಶ್ವದ ಸುಂದರ ಸ್ಥಳಗಳಲ್ಲಿ ಒಂದಾಗಿದೆ. ಇಡೀ ಟಿಬೆಟ್ ಸಂಪೂರ್ಣವಾಗಿ ಪರ್ವತಗಳನ್ನು ಒಳಗೊಂಡಿರುವ ಪ್ರದೇಶವಾಗಿದೆ. ಈ ಹಿನ್ನೆಲೆ ಏಷಿಯಾದ ಯಾವುದೇ ವಿಮಾನಗಳ ಟಿಬೆಟ್ ಮಾರ್ಗವಾಗಿ ಹಾರಾಟ ನಡೆಸಲಲ್ಲ. ಈ ಮಾರ್ಗವಾಗಿ ಹಾರಾಟ ನಡೆಸಲು ಪೈಲಟ್‌ಗಳು ಹೆದರುತ್ತಾರೆ. ವಿಮಾನ ಹಾರಾಟಕ್ಕೆ ಈ ಪ್ರದೇಶ ಅತ್ಯಂತ ಅಪಾಯಕಾರಿ ಎಂದು ಗುರುತಿಸಲಾಗಿದೆ. ಇದು ಅತ್ಯಂತ ಎತ್ತರದ ಪ್ರದೇಶವಾಗಿದ್ದು, ಅನೇಕ ಎತ್ತರದ ಪರ್ವತಗಳು ಇದೇ ಭಾಗದಲ್ಲಿವೆ. ಈ ಪ್ರದೇಶವನ್ನು ವಿಶ್ವದ ಛಾವಣಿ ಎಂದು ಕರೆಯಲಾಗುತ್ತದೆ.
ಇದು 2.5 ಮಿಲಿಯನ್ ಚದರ ಕಿಲೋಮೀಟರ್ ವಿಸ್ತಾರವಾಗಿ ಹರಿಡಿದ್ದು, 4,500 ಮೀಟರ್ (14,764 ಅಡಿ) ಎತ್ತರವಾಗಿದೆ. ವಿಶ್ವದ ಅತಿ ಎತ್ತರದ ಪ್ರದೇಶಗಳಾದ ಮೌಂಟ್ ಎವರೆಸ್ಟ್, ಕೆ2 ಸಹ ಇದೇ ಭಾಗದಲ್ಲಿವೆ. ಈ ಭಾಗದಲ್ಲಿ ಆಕ್ಸಿಜನ್ ಕೊರತೆಯುಂಟಾಗುವ ಕಾರಣ ಯಾವುದೇ ಸಂದರ್ಭದಲ್ಲಿ ಇಂಜಿನ್ ಫೇಲ್ ಆಗುವ ಸಾಧ್ಯತೆಗಳಿರುತ್ತವೆ. ಈ ಭಾಗದಲ್ಲಿ ಹಾರಾಟ ಇಂಜಿನ್ ಸಕ್ರಿಯವಾಗರಲು ಹೆಚ್ಚು ಇಂಧನ ಬೇಕಾಗುತ್ತದೆ.
ಸುರಂಗದೊಳಗೆ ಹೋಗ್ತಿದ್ದಂತೆ ಕಣ್ಮರೆಯಾದ 104 ಜನರನ್ನು ಹೊತ್ತ ರೈಲು; 71 ವರ್ಷದ ಹಿಂದೆ ಹೋಯ್ತಾ ಟ್ರೈನ್?
ಎತ್ತರದ ಪರ್ವತಗಳಿರುವ ಕಾರಣ ಅವುಗಳಕ್ಕಿಂತಲೂ ಎತ್ತರದ ಪ್ರದೇಶದಲ್ಲಿ ವಿಮಾನಗಳು ಹಾರಾಟ ನಡಸಬೇಕಾಗುತ್ತದೆ. ಇದೆಲ್ಲದರ ಜೊತೆಯುಲ್ಲಿ ಇಲ್ಲಿ ಯಾವುದೇ ವೇಳೆ ಹವಾಮಾನ ವೈಪರೀತ್ಯ ಉಂಟಾಗುತ್ತದೆ. ಈ ಸಂದರ್ಭದಲ್ಲಿ ವಿಮಾನಗಳು ಪರ್ವತಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳಿರುತ್ತವೆ. ಈ ಎಲ್ಲಾ ಕಾರಣಗಳಿಂದ ಟಿಬೆಟ್ ಮಾರ್ಗವಾಗಿ ವಿಮಾನಗಳು ಹಾರಾಟ ನಡೆಸಲ್ಲ.
ಇಲ್ಲಿ ಹವಾಮಾನ ಬದಲಾವಣೆಯಿಂದ ವಿಮಾನಗಳು ಒತ್ತಡದ ಸುಳಿಗೆ ಸಿಲುಕಿ ನಿಯಂತ್ರಣ ಕಳೆದುಕೊಳ್ಳುವ ಅಪಾಯ ಅಧಿಕವಾಗಿರುತ್ತದೆ. ಈ ಸಂದರ್ಭದಲ್ಲಿ ವಿಮಾನಗಳಿಗೆ ಲ್ಯಾಂಡಿಂಗ್ ಮಾಡಲು ಸುರಕ್ಷಿತ ಸ್ಥಳ ಮತ್ತು ಆಪರೇಷನ್ ರಕ್ಷಣಾ ಕಾರ್ಯ ನಡೆಸಲು ಇಲ್ಲಿಂದ ಸಾಧ್ಯವಾಗಲ್ಲ. ಟಿಬೆಟಿಯನ್ ಪ್ರಸ್ಥಭೂಮಿ ತನ್ನ ಕಠಿಣ ಮತ್ತು ಅನಿರೀಕ್ಷಿತ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಬಲವಾದ ಗಾಳಿ ಮತ್ತು ಹವಾಮಾನದಲ್ಲಿನ ಹಠಾತ್ ಬದಲಾವಣೆಗಳು ವಿಮಾನಗಳ ಹಾರಾಟಕ್ಕೆ ಸೂಕ್ತವಲ್ಲ ಎಂದು ಹವಾಮಾನ ತಜ್ಞರು ಸಲಹೆ ನೀಡುತ್ತಾರೆ. ಹವಾಮಾನ ಪರಿಸ್ಥಿತಿ ಪೈಲಟ್‌ಗಳಿಗೆ ಸರಿಯಾಗಿ ನ್ಯಾವಿಗೇಟ್ ಮಾಡಲು ಕಷ್ಟವಾಗಬಹುದು. ಈ ಎಲ್ಲ ಕಾರಣಗಳಿಂದ ಅಪಘಾತ ಸಂಭವಿಸುವ ಅಪಾಯವಿದೆ. ಎತ್ತರದ ಭೂಪ್ರದೇಶದ ಮೇಲೆ ಹಾರುವುದು ಅಪಾಯ ಅಂತಾನೇ ಪರಿಗಣಿಸುತ್ತದೆ.
ಚೀನಾಕ್ಕಿಂತ ಶಕ್ತಿಶಾಲಿಯಾಗಿವೆ ಕೇವಲ 2 ದೇಶಗಳು: ಇಲ್ಲಿಯವರೆಗೂ ಈ ಸೇನೆಯ ಯೋಧರು ಹುತಾತ್ಮರಾಗಿಲ್ಲ