ವಿಶ್ವದ ವಿಷಪೂರಿತ ಗಾರ್ಡನ್ ಇದು.. ಗಿಡ ಮುಟ್ಟಿದ್ರೂ ಸಾಕು, ಸತ್ತೇ ಹೋಗುತ್ತಾರೆ! ಅದ್ರೂ ಯಾಕಿದೆ?
ಹಣ್ಣು, ಹೂ ನೀಡುವ ಜೊತೆಗೆ ವಿಷಕಾರಿ ಗಿಡಗಳ ಸಂಖ್ಯೆ ಸಾಕಷ್ಟಿದೆ. ಅದ್ರ ಬಗ್ಗೆ ನಾವು ಮಾಹಿತಿ ತಿಳಿಯೋದು ಸೂಕ್ತ. ಇಲ್ಲವೆಂದ್ರೆ ನಮ್ಮ ಸಾವಿಗೆ ಈ ಗಿಡ ಕಾರಣವಾಗಬಹುದು. ವಿಷಯುಕ್ತ ಗಿಡದ ಮಾಹಿತಿ ಬೇಕೆಂದ್ರೆ ಈ ಉದ್ಯಾನವನಕ್ಕೆ ಹೋಗಿ.
ದಾರಿಯಲ್ಲಿ ನಡೆಯುವಾಗ ಸುಂದರ ಗಿಡ ಕಂಡ್ರೆ ಅದ್ರ ಮುಂದೆ ನಿಂತು ಫೋಟೋ ಕ್ಲಿಕ್ಕಿಸೋದು ಈಗಿನವರ ಅಭ್ಯಾಸ. ಆ ಗಿಡ ಯಾವುದು, ಅದರಿಂದ ಯಾವ ರೀತಿ ಸುವಾಸನೆ ಬರ್ತಿದೆ, ಎಲೆ ರುಚಿ ಹೇಗಿದೆ ಹೀಗೆ ನಾನಾ ವಿಷ್ಯಗಳನ್ನು ತಿಳಿದುಕೊಳ್ಳಲು ಜನರು ಕುತೂಹಲಗೊಂಡಿರುತ್ತಾರೆ. ಮಕ್ಕಳು ಮಾತ್ರವಲ್ಲ ಕೆಲ ಹಿರಿಯರು ಕೂಡ ಕೈಗೆ ಸಿಕ್ಕ ಗಿಡದ ಎಲೆ ಹರಿದು ವಾಸನೆ ತೆಗೆದುಕೊಳ್ತಾರೆ. ಅದ್ರ ಹೂ ಕಿತ್ತು ಕೈನಲ್ಲಿ ಇಟ್ಟುಕೊಳ್ತಾರೆ. ಎಲೆಯನ್ನು ಬಾಯಿಗೆ ಹಾಕುವವರಿದ್ದಾರೆ. ನೀವೂ ಈ ಅಭ್ಯಾಸವನ್ನು ಹೊಂದಿದ್ದರೆ ಎಲ್ಲ ಕಡೆ ಹೀಗೆ ಮಾಡೋಕೆ ಹೋಗ್ಬೇಡಿ. ಇದ್ರಿಂದ ಲಾಭದ ಬದಲು ನಷ್ಟವೇ ಆಗುತ್ತೆ. ಕೆಲವೊಮ್ಮೆ ನಿಮ್ಮ ಸಾವಿಗೆ ಇದೇ ಕಾರಣವಾಗಬಹುದು. ನಾವು ಇಷ್ಟೆಲ್ಲ ಏಕೆ ಹೇಳ್ತಿದ್ದೇವೆ ಅಂದ್ರೆ ಜಗತ್ತಿನಲ್ಲಿ ಅನೇಕ ವಿಷಯುಕ್ತ ಗಿಡಗಳಿವೆ. ಅವುಗಳನ್ನು ತಿನ್ನೋದಿರಲಿ ವಾಸನೆ ತೆಗೆದುಕೊಂಡ್ರೂ ಸಾವು ಸಂಭವಿಸುತ್ತದೆ. ಅಂಥ ಗಿಡಗಳನ್ನು ಬೆಳೆಸಿ ಅದ್ರ ಬಗ್ಗೆ ಮಾಹಿತಿ ನೀಡ್ತಿರುವ ಪಾರ್ಕ್ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.
ವಿಷ (Poison) ಯುಕ್ತ ಪಾರ್ಕ್ ಇದು : ಇಂಗ್ಲೆಂಡ್ (England) ನ ನಾರ್ತಂಬರ್‌ಲ್ಯಾಂಡ್ ಈ ವಿಷಯುಕ್ತ ಪಾರ್ಕ್ (Park) ಇದೆ. ಆಲ್ನ್‌ವಿಕ್ ಪಾಯ್ಸನ್ ಗಾರ್ಡನ್ ಆ ಪಾರ್ಕ್ ಹೆಸರು. ಒಂದಲ್ಲ ಎರಡಲ್ಲ ಈ ಪಾರ್ಕ್ ನಲ್ಲಿ 100ಕ್ಕೂ ಹೆಚ್ಚು ವಿಷಕಾರಿ ಗಿಡಗಳಿವೆ. ಈ ಗಿಡಗಳು ಎಷ್ಟು ಅಪಾಯಕಾರಿ ಅಂದ್ರೆ ಆ ಗಿಡದ ಬಳಿ ಹೋದ್ರೆ, ಅದನ್ನು ಮುಟ್ಟಿದ್ರೂ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ನಿಮಗೆ ಅಚ್ಚರಿ ಆಗ್ಬಹುದು, ಇಷ್ಟೊಂದು ವಿಷಕಾರಿ ಗಿಡವಿದ್ದರೂ ಈ ಪಾರ್ಕ್ ಗೆ ಲಕ್ಷಾಂತರ ಮಂದಿ ಪ್ರತಿ ವರ್ಷ ಬರ್ತಾರೆ. ಈ ಪಾರ್ಕ್ ನಲ್ಲಿ ಮಾಂಕ್ಸ್‌ಹುಡ್ ಅಥವಾ ವುಲ್ಫ್ಸ್ ಬೇನ್, ರಿಸಿನ್ ಸೇರಿದಂತೆ ಅನೇಕ ಅಪಾಯಕಾರಿ ಗಿಡಗಳಿವೆ. ರಿಸಿನ್ ಗಿಡವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿಶ್ವದ ಅತ್ಯಂತ ವಿಷಕಾರಿ ಸಸ್ಯವೆಂದು ಪರಿಗಣಿಸುತ್ತದೆ. ಇನ್ನು ಮಾಂಕ್ಸ್‌ಹುಡ್ ಅಥವಾ ವುಲ್ಫ್ಸ್ ಬೇನ್ ಅಕೋನಿಟೈನ್ ಎಂಬ ವಿಷವನ್ನು ಬಿಡುಗಡೆ ಮಾಡುತ್ತದೆ. ಇದು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.
ಎಂಟು ಕಣ್ಣಿನ ಹೊಸ ಚೇಳು ಥೈಲ್ಯಾಂಡಲ್ಲಿ ಪತ್ತೆ: ಈ ಜೀವಜಾಲದಲ್ಲಿ ಇನ್ನೂ ಎಂತಹ ಅಚ್ಚರಿಗಳಿವೆಯೋ?!
ಉದ್ಯಾನವನ್ನು 2005 ರಲ್ಲಿ ನಿರ್ಮಿಸಲಾಗಿದೆ. ಸುಮಾರು 14 ಎಕರೆ ಪ್ರದೇಶದಲ್ಲಿ ಈ ಉದ್ಯಾನವನವಿದೆ. ಇಲ್ಲಿ ಸುಮಾರು 7000 ಸಸ್ಯಗಳಿವೆ. ಇಲ್ಲಿನ ಯಾವುದೇ ಹೂವನ್ನಾಗ್ಲಿ, ಎಲೆಯನ್ನಾಗ್ಲಿ ಪ್ರವಾಸಿಗರು ಮುಟ್ಟುವಂತಿಲ್ಲ. ಉದ್ಯಾನವನದ ಮುಂದೆ ದೊಡ್ಡ ಕಪ್ಪು ಗೇಟ್ ಇದೆ. ಅದ್ರಲ್ಲಿ ಯಾವ ಗಿಡಗಳು ಅಪಾಯಕಾರಿ ಎಂದು ಬರೆಯಲಾಗಿದೆ. ಆ ಗಿಡಗಳನ್ನು ಪ್ರವಾಸಿಗರು ಯಾವುದೇ ಕಾರಣಕ್ಕೂ ಟಚ್ ಮಾಡುವಂತಿಲ್ಲ. ಪ್ರವಾಸಿಗರಿಗೆ, ಗೈಡ್ ಸಹಾಯವಿಲ್ಲದೆ ಹೋಗಬಾರದು ಎಂಬ ಎಚ್ಚರಿಕೆ ನೀಡಲಾಗುತ್ತದೆ. ಪ್ರತಿಯೊಬ್ಬ ಪ್ರವಾಸಿಗರಿಗೆ ಕೆಲ ಎಚ್ಚರಿಕೆಯನ್ನು ನೀಡಿಯೇ ಒಳಗೆ ಬಿಡಲಾಗುತ್ತದೆ.
ಈ ಉದ್ಯಾನದಲ್ಲಿ ಲ್ಯಾಬರ್ನಮ್ ಎಂಬ ಸಸ್ಯವಿದೆ. ಇದರ ಹಳದಿ ಹೂ ಎಲ್ಲರನ್ನೂ ಆಕರ್ಷಿಸುತ್ತದೆ. ಆದ್ರೆ ಇದು ತುಂಬಾ ವಿಸಕಾರಿ. ಮರದ ಕೊಂಬೆ ಕೆಳಗೆ ಬಿದ್ದು, ಹಲವಾರು ತಿಂಗಳ ನಂತ್ರ ನಾಯಿ ಅದನ್ನು ಮೂಸಿದ್ರೂ ಅದು ಸಾವನ್ನಪ್ಪುತ್ತದೆ ಎಂದು ತಜ್ಞರು ಹೇಳ್ತಾರೆ.
ಈ ಉದ್ಯಾನವನದಲ್ಲಿರುವ ಕೆಲ ಹೂಗಳು ವಾಸನೆ ಗಾಳಿಗೆ ಬೆರೆತು ಜನರನ್ನು ತಲುಪುತ್ತದೆ. ಅದ್ರ ವಾಸನೆ ಜನರನ್ನು ಮೂರ್ಛೆಗೊಳಿಸುವಷ್ಟು ಅಪಾಯಕಾರಿಯಾಗಿರುತ್ತದೆ.
ಭಾರತದ ನಂಬರ್ ಒನ್ ಇಂಡಿಗೋ ವಿಶ್ವದ ಲೀಸ್ಟಲ್ಲಿ ಎಲ್ಲಿದೆ?
ಪ್ರತಿ ವರ್ಷ ಎಂಟು ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಸ್ವಾಗತಿಸುವ ಈ ಪಾರ್ಕ್ ನಲ್ಲಿ ವಿಷಕಾರಿ ಗಿಡ ನೆಡಲು ಮುಖ್ಯ ಉದ್ದೇಶವಿದೆ. ಜನರಿಗೆ ಈ ಗಿಡದ ಬಗ್ಗೆ ಮಾಹಿತಿ ನೀಡಿ ಅವರನ್ನು ಜಾಗೃತಿಗೊಳಿಸುವುದು ಪಾರ್ಕ್ ನ ಮುಖ್ಯ ಗುರಿಯಾಗಿದೆ.