ಭಾರತದ ನಂಬರ್ ಒನ್ ಇಂಡಿಗೋ ವಿಶ್ವದ ಲೀಸ್ಟಲ್ಲಿ ಎಲ್ಲಿದೆ?
ಭಾರತದಲ್ಲಿ ನಡೆಯುವ ವಿಮಾನ ಹಾರಾಟವೇ ಹೆಚ್ಚು ಎಂದುಕೊಳ್ತೇವೆ ನಾವು. ಆದ್ರೆ ವಿದೇಶದಲ್ಲಿ ನಮ್ಮ ಮೂರ್ನಾಲ್ಕು ಪಟ್ಟು ಹೆಚ್ಚು ವಿಮಾನಗಳು ಪ್ರತಿ ದಿನ ಹಾರಾಟ ನಡೆಸುತ್ತವೆ. ಸಕ್ರಿಯ ವಿಮಾನಗಳ ಪಟ್ಟಿಯಲ್ಲಿ ಯಾವುದು ಮೊದಲ ಸ್ಥಾನದಲ್ಲಿದೆ ಗೊತ್ತಾ?
ಹಿಂದೆ ಆಗಾಗ ಒಂದೋ ಎರಡೋ ವಿಮಾನ ಹಾರಾಟ ನಡೆಸ್ತಾ ಇತ್ತು. ವಿಮಾನದ ಸದ್ದು ಕೇಳ್ತಿದ್ದರೆ ಮನೆಯಿಂದ ಓಡಿ ಬಂದು ಜನರು ಮೇಲೆ ನೋಡ್ತಿದ್ದರು. ಆಗ ವಿಮಾನದಲ್ಲಿ ಪ್ರಯಾಣ ಬೆಳೆಸುವವರ ಸಂಖ್ಯೆ ಕಡಿಮೆ ಇತ್ತು. ಶ್ರೀಮಂತರ, ಅನಿವಾರ್ಯ ಇದ್ದವರು ಮಾತ್ರ ವಿಮಾನ ಏರುತ್ತಿದ್ದರು. ಆ ಕಾಲ ಮುಗಿದು ಎಷ್ಟೋ ವರ್ಷ ಕಳೆದಿದೆ. ಈಗ ವಿಮಾನ ಹಾರಾಟ ಬಹುತೇಕ ಸಾಮಾನ್ಯ ಎನ್ನುವಂತಾಗಿದೆ. ವಿದೇಶ ಪ್ರಯಾಣಕ್ಕೆ ಮಾತ್ರವಲ್ಲ ದೇಶದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಲು ಜನರು ವಿಮಾನ ಬಳಸ್ತಾರೆ. ಸಮಯ ಉಳಿತಾಯ, ಸಾಮಾನ್ಯರಿಗೆ ಅನುಕೂಲವಾಗುವ ಬೆಲೆ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಜನರು ವಿಮಾನವನ್ನು ಹೆಚ್ಚು ನೆಚ್ಚಿಕೊಳ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗ್ತಿದ್ದಂತೆ ವಿಮಾನಗಳ ಹಾರಾಟ ಕೂಡ ಜಾಸ್ತಿಯಾಗಿದೆ. ರಸ್ತೆಯಲ್ಲಿ ವಾಹನ ದಟ್ಟಣೆ ನಮ್ಮ ಕಣ್ಣಿಗೆ ಕಾಣುತ್ತೆ. ಆದ್ರೆ ವಿಮಾನ ಹಾರಾಟದ ದಟ್ಟಣೆ ನಮ್ಮ ಕಣ್ಣಿಗೆ ನಿಲುಕದ್ದು. ನೀವು ಫೈಲ್ಟ್ ಟ್ರೇಡರ್ 24 ವೆಬ್ಸೈಟ್ ಗೆ ಹೋದ್ರೆ ದಂಗಾಗ್ತೀರಿ. ಒಂದರ ಹಿಂದೆ ಒಂದರಂತೆ ದಿನಕ್ಕೆ ಲಕ್ಷಾಂತರ ವಿಮಾನ ಹಾರಾಡೋದನ್ನು ಅಲ್ಲಿ ನೋಡ್ಬಹುದು.
ಭಾರತ (India) ದ ವಿಷ್ಯಕ್ಕೆ ಬರೋದಾದ್ರೆ ಭಾರತದಲ್ಲಿ ಅತಿದೊಡ್ಡ ವಿಮಾನಯಾನ ಸಂಸ್ಥೆ ಅಂದ್ರೆ ಇಂಡಿಗೋ (Indigo). ಪ್ರತಿದಿನ 1,900 ಕ್ಕೂ ಹೆಚ್ಚು ಬಾರಿ ಇಂಡಿಗೋ ವಿಮಾನ ಹಾರಾಟ ನಡೆಸುತ್ತದೆ. ಆದ್ರೆ ನೀವು ವಿಶ್ವದಾದ್ಯಂತ ವಿಮಾನ (Airlines) ಹಾರಾಟವನ್ನು ಗಮನಿಸಿದ್ರೆ ನಮ್ಮ ದೇಶದ ದೊಡ್ಡ ಸಂಸ್ಥೆ ಇಂಡಿಗೋ ಚಿಕ್ಕದಾಗಿ ಕಾಣುತ್ತದೆ. ಪಟ್ಟಿಯಲ್ಲಿ ಇಂಡಿಗೋ ಎಂಟನೇ ಸ್ಥಾನದಲ್ಲಿದೆ.
ಟೆಕ್ ಸಿಇಒಗಳಿಗಿಂತ ಹೆಚ್ಚಿದೆ ಸುಧಾಮೂರ್ತಿ ಸಂಪತ್ತು, ಹಾಗಾದ್ರೆ ಇನ್ಫೋಸಿಸ್ ನಲ್ಲಿ ಅವರ ಪಾಲು ಎಷ್ಟಿದೆ?
ವಿಶ್ವದ ಅತ್ಯಂತ ಜನನಿಬಿಡ ವಿಮಾನಯಾನ ಸಂಸ್ಥೆಗಳಲ್ಲಿ ಅಮೆರಿಕಾ ಮುಂದಿದೆ. ಅಮೆರಿಕಾದ ನಾಲ್ಕು ವಿಮಾನ ಸಂಸ್ಥೆಗಳ ವಿಮಾನಗಳು ಅತಿ ಹೆಚ್ಚು ಹಾರಾಟ ನಡೆಸುತ್ತವೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ, ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ವಿಶ್ವದ ಅತ್ಯಂತ ಸಕ್ರಿಯ ವಿಮಾನಯಾನ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸಕ್ರಿಯ ವಿಮಾನಯಾನ ಸಂಸ್ಥೆಗಳ ಪಟ್ಟಿಯನ್ನು ನೋಡೋದಾದ್ರೆ ಅಮೆರಿಕನ್ ಏರ್‌ಲೈನ್ಸ್ ಮೊದಲ ಸ್ಥಾನದಲ್ಲಿದೆ. ನಂತ್ರ ಅಮೆರಿಕಾದ ಡೆಲ್ಟಾ ಏರ್‌ಲೈನ್ಸ್ ಎರಡನೇ ಸ್ಥಾನದಲ್ಲಿದೆ. ಅಮೆರಿಕಾದ ಯುನೈಟೆಡ್ ಏರ್‌ಲೈನ್ಸ್ ಮೂರನೇ ಸ್ಥಾನದಲ್ಲಿದ್ದು, ಸೌತ್‌ವೆಸ್ಟ್ ಏರ್‌ಲೈನ್ಸ್ ನಾಲ್ಕನೇ ಸ್ಥಾನ ಪಡೆದಿದೆ. ಐದನೇ ಸ್ಥಾನದಲ್ಲಿ ಚೀನಾ ಈಸ್ಟರ್ನ್ ಏರ್‌ಲೈನ್ಸ್ ಬರುತ್ತದೆ. ಆರನೇ ಸ್ಥಾನ ಕೂಡ ಚೈನಾ ಕಬಳಿಸಿಕೊಂಡಿದೆ. ಚೈನಾ ಸದರ್ನ್ ಏರ್‌ಲೈನ್ಸ್ ಆರನೇ ಸ್ಥಾನದಲ್ಲಿದ್ದರೆ ರಯಾನ್ಏರ್ ಏಳನೇ ಸ್ಥಾನದಲ್ಲಿದೆ. ನಮ್ಮ ದೇಶದ ಇಂಡಿಗೋ ಎಂಟನೇ ಸ್ಥಾನದಲ್ಲಿದೆ. ಒಂಭತ್ತು ಮತ್ತು ಹತ್ತನೇ ಸ್ಥಾನವನ್ನು ಕ್ರಮವಾಗಿ ಬೀಜಿಂಗ್ ಏರ್‌ಲೈನ್ಸ್ ಮತ್ತು ಟರ್ಕಿಶ್ ಏರ್‌ಲೈನ್ಸ್ ಪಡೆದಿದೆ. ವಿಶ್ವದ ಟಾಪ್ ಹತ್ತು ಸಕ್ರಿಯ ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಇಂಡಿಗೋ ಮಾತ್ರ ಸ್ಥಾನ ಪಡೆದಿದೆ. ಪ್ರತಿ ದಿನ ಇಂಡಿಗೋ 1,940 ಬಾರಿ ವಿಮಾನ ಹಾರಾಟ ನಡೆಸುತ್ತದೆ. ಟಾಪ್ ಒನ್ ನಲ್ಲಿರುವ ಅಮೇರಿಕನ್ ಏರ್ಲೈನ್ಸ್ ಪ್ರತಿದಿನ 5,648 ಬಾರಿ ವಿಮಾನಗಳು ಹಾರಾಟ ನಡೆಸುತ್ತವೆ.
ಇಂಡಿಗೋ 2006 ರ ಆರಂಭವಾಗಿದೆ. ಇಂಟರ್ ಗ್ಲೋಬ್ ಎಂಟರ್‌ಪ್ರೈಸಸ್‌ನ ರಾಹುಲ್ ಭಾಟಿಯಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುವ ಅನಿವಾಸಿ ಭಾರತೀಯರಾದ ರಾಕೇಶ್ ಎಸ್ ಗಂಗ್ವಾಲ್ ಇಂಡಿಗೋ ಸಂಸ್ಥೆ ಸ್ಥಾಪಕರಾಗಿದ್ದಾರೆ.
SIP for Marriage: ವಿದೇಶಗಳಲ್ಲಿ ಮದ್ವೆಯಾಗ್ಬೇಕಾ? ನಿಮ್ಮ ಕನಸು ಪೂರೈಸೋಕೆ ಸಿಪ್ ಯೋಜನೆ ಬಂದಿದೆ!
ಭಾರತದ ಟಾಪ್ ವಿಮಾನಯಾನ ಸಂಸ್ಥೆಗಳು : ಭಾರತದಲ್ಲಿ ಇಂಡಿಗೋ ಮೊದಲ ಸ್ಥಾನದಲ್ಲಿದ್ದರೆ ಏರ್ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ವಿಸ್ತಾರಾ ಮೂರನೇ ಸ್ಥಾನದಲ್ಲಿದ್ದು, ಸ್ಪೈಸ್ ಜೆಟ್ ನಾಲ್ಕನೇ ಸ್ಥಾನದಲ್ಲಿದೆ. ಗೋ ಫಸ್ಟ್ ಐದನೇ ಸ್ಥಾನದಲ್ಲಿದ್ದರೆ AIX ಕನೆಕ್ಟ್ ಆರನೇ ಸ್ಥಾನದಲ್ಲಿದೆ.