ಲಂಡನ್‌ನಿಂದ ಮುಂಬೈಗೆ ಹೊರಟಿದ್ದ ವರ್ಜಿನ್ ಅಟ್ಲಾಂಟಿಕ್ ವಿಮಾನವು ವೈದ್ಯಕೀಯ ತುರ್ತು ಪರಿಸ್ಥಿತಿ ಮತ್ತು ತಾಂತ್ರಿಕ ದೋಷದಿಂದಾಗಿ ಟರ್ಕಿಯಲ್ಲಿ 30 ಗಂಟೆಗಳ ಕಾಲ ಸಿಲುಕಿಕೊಂಡಿದೆ. ಇದರಿಂದ ಪ್ರಯಾಣಿಕರು ಸರಿಯಾದ ವ್ಯವಸ್ಥೆಗಳಿಲ್ಲದೆ ಪರದಾಡುವಂತಾಗಿದೆ.

ಮುಂಬೈ: ಲಂಡನ್‌ನಿಂದ ಮುಂಬೈಗೆ ಹೊರಟಿದ್ದ ವಿಮಾನವೊಂದು ಟರ್ಕಿಯಲ್ಲಿ ಬರೋಬ್ಬರಿ 30 ಗಂಟೆಗಳ ಕಾಲ ಸಿಲುಕಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣಿಕರು ಭಾರಿ ಆಕ್ರೋಶ ಹೊರ ಹಾಕಿದ್ದಾರೆ. ಬುಧವಾರ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ 265 ಪ್ರಯಾಣಿಕರಿದ್ದ ವರ್ಜಿನ್ ಅಟ್ಲಾಂಟಿಕ್ ಲಂಡನ್-ಮುಂಬೈ ವಿಮಾನವೂ ಟರ್ಕಿಯ ದಿಯರ್‌ಬಕಿರ್ ವಿಮಾನ ನಿಲ್ದಾಣದಲ್ಲಿ30 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದೆ. ಆದರೆ ನಂತರ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಇದರಿಂದ ವಿಮಾನ ಮತ್ತಷ್ಟು ವಿಳಂಬವಾಯಿತು. ಇದರಿಂದ ಸರಿಯಾದ ವ್ಯವಸ್ಥೆಗಳಿಲ್ಲದೇ ವಿಮಾನ ಪ್ರಯಾಣಿಕರು ವಿಮಾನದಲ್ಲೇ ಪರದಾಡುವಂತಾಗಿದೆ. 

ಈ ಬಗ್ಗೆ ಆಮ್ ಆದ್ಮಿ ಪಕ್ಷದ ನಾಯಕಿ ಪ್ರೀತಿ ಶರ್ಮಾ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾರಾದರೂ ಪ್ರತಿಕ್ರಿಯಿಸಬಹುದೇ ಎಂದು ಅವರು ಕೇಳಿದ್ದಾರೆ. ದಯವಿಟ್ಟು ಯಾರಾದರೂ ಪ್ರತಿಕ್ರಿಯಿಸಬಹುದೇ?! #VS358 ಲಂಡನ್ ಮುಂಬೈನ 270 ಜನರು ದಿಯರ್‌ಬಕೀರ್‌ನಲ್ಲಿ ಬಹುತೇಕ ಒಂದು ದಿನದಿಂದ ಸಿಲುಕಿಕೊಂಡಿದ್ದಾರೆ. ಅವರಿಗೆ ಶೌಚಾಲಯವೂ ಇಲ್ಲ, ಆಹಾರವೂ ಇಲ್ಲ, ಫೋನ್ ಚಾರ್ಜರ್‌ಗಳಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ @VirginAtlantic ದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ವಿಮಾನ ಟೇಕ್ ಆಫ್ ಮುಂಚೆ ಯುವತಿಯ XX ಟೇಕ್ ಆಫ್, 30 ನಿಮಿಷ ಹೈಡ್ರಾಮ ವಿಡಿಯೋ

ಪ್ರೀತಿ ಶರ್ಮಾ ಅವರ ಪೋಸ್ಟ್‌ಗೆ ನಂತರ ವರ್ಜಿನ್ ಅಟ್ಲಾಂಟಿಕ್ ಪ್ರತಿಕ್ರಿಯಿಸಿದ್ದು,ಪ್ರಯಾಣಿಕರಿಗೆ ಹೋಟೆಲ್‌ನಲ್ಲಿ ವಸತಿ ಕಲ್ಪಿಸಲಾಗಿದ್ದು, ಪ್ರಯಾಣಿಕರನ್ನು ನಾಳೆ ಮುಂಬೈಗೆ ಪ್ರಯಾಣ ಬೆಳೆಸಲು ವಿಮಾನಯಾನ ಸಂಸ್ಥೆಗಳು ಪರಿಹಾರವೊಂದನ್ನು ಹುಡುಕುತ್ತಿವೆ ಎಂದು ಹೇಳಿದೆ. ಹಾಯ್ @PreetiSMenon, ತುರ್ತು ವೈದ್ಯಕೀಯ ಸೇವೆಯಿಂದಾಗಿ ಉಂಟಾದ ಅಡಚಣೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ನಮ್ಮ ಗ್ರಾಹಕರಿಗೆ ಟರ್ಕಿಯ ಹೋಟೆಲ್‌ನಲ್ಲಿ ರಾತ್ರಿ ವಸತಿ ಕಲ್ಪಿಸಲಾಗಿದೆ. ನಾಳೆ ಅವರು ಮುಂಬೈಗೆ ತಮ್ಮ ಪ್ರಯಾಣವನ್ನು ಮುಂದುವರಿಸಲು ನಾವು ಪರಿಹಾರಕ್ಕಾಗಿ ಕೆಲಸ ಮಾಡುತ್ತೇವೆ. ಎಲ್ಲಾ ಗ್ರಾಹಕರಿಗೆ ನಾವು ಮಾಹಿತಿ ನೀಡುತ್ತೇವೆ ಎಂದು ಅದು ಇಂದು ಹೇಳಿದೆ. 

'ನಾವು ವಿಮಾನ ಲ್ಯಾಂಡ್ ಆದ ಸಮಯದಲ್ಲಿ ಮೊದಲು ಐದು ಗಂಟೆಗಳ ಕಾಲ ವಿಮಾನದಲ್ಲೇ ಇದ್ದೆವು. ನಂತರ ವಿಮಾನಯಾನ ಸಂಸ್ಥೆಗೆ ವಿಮಾನದಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಬೇಕಾಗಿದ್ದರಿಂದ ನಮ್ಮನ್ನು ಇಳಿಯಲು ಹೇಳಿದರು. ನಾವು ಈಗ 13 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿದ್ದೇವೆ, ವರ್ಜಿನ್ ಅಟ್ಲಾಂಟಿಕ್ ನಮಗೆ ಯಾವುದೇ ವ್ಯವಸ್ಥೆಗಳನ್ನು ಮಾಡಿಲ್ಲ ಅಥವಾ ನಾವು ಮುಂಬೈಗೆ ಯಾವಾಗ ಹೊರಡುತ್ತೇವೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ' ಎಂದು ಸಿಕ್ಕಿಬಿದ್ದ ಪ್ರಯಾಣಿಕರಲ್ಲಿ ಒಬ್ಬರಾದ ಸಾಗರ್ ಕೊಚ್ಚರ್ ಅಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ನಡುವೆ ಸಮಸ್ಯೆಗೆ ಶೀಘ್ರ ಪರಿಹಾರದ ಕುರಿತು ವಿಮಾನಯಾನ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಭಾರತೀಯ ರಾಯಭಾರ ಕಚೇರಿ ಭರವಸೆ ನೀಡಿದೆ. 

Video | ಅಮೆರಿಕದಲ್ಲಿ ಮತ್ತೊಂದು ವಿಮಾನ ಅಪಘಾತ! ಫ್ಲೈಟ್‌ನಲ್ಲಿದ್ದ ಅಷ್ಟು ಮಂದಿ ಏನಾದ್ರು?

ಟರ್ಕಿಯ ಅಂಕಾರದಲ್ಲಿರುವ ಭಾರತದ ರಾಯಭಾರ ಕಚೇರಿಯು ವರ್ಜಿನ್ ಅಟ್ಲಾಂಟಿಕ್ ಏರ್‌ಲೈನ್ಸ್, ದಿಯರ್‌ಬಕೀರ್ ವಿಮಾನ ನಿಲ್ದಾಣ ನಿರ್ದೇಶನಾಲಯ ಮತ್ತು ಟರ್ಕಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂವಹನದಲ್ಲಿದೆ. ಮಿಷನ್‌ನ ಸಮನ್ವಯದ ಮೂಲಕ ಪ್ರಯಾಣಿಕರಿಗೆ ಸೂಕ್ತ ಕಾಳಜಿಯನ್ನು ನೀಡಲಾಗುತ್ತಿದೆ. ಸಮಸ್ಯೆಗೆ ಶೀಘ್ರ ಪರಿಹಾರ ಮತ್ತು ಸಿಕ್ಕಿಬಿದ್ದ ಪ್ರಯಾಣಿಕರಿಗೆ ಮುಂಬೈಗೆ ಪರ್ಯಾಯ ವಿಮಾನದ ವ್ಯವಸ್ಥೆಗಾಗಿ ನಾವು ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ರಾಯಭಾರ ಕಚೇರಿ ಹೇಳಿದೆ. 

Scroll to load tweet…