ಇರಾನ್‌ಗೆ ಪ್ರಯಾಣಿಸೋ ಭಾರತೀಯರು ಸೇರಿ 33 ದೇಶಗಳಿಗೆ ಇನ್ಮುಂದೆ ವೀಸಾ ಬೇಡ: ಇಸ್ಲಾಂ ದೇಶದ ಮಹತ್ವದ ನಿರ್ಧಾರ!
ಮಲೇಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಸಹ ಭಾರತದ ಪ್ರವಾಸಿಗರಿಗೆ ವೀಸಾ ಅವಶ್ಯಕತೆಗಳನ್ನು ಮನ್ನಾ ಮಾಡಿದ್ದು, ಈಗ ಇರಾನ್ ಸಹ ಭಾರತೀಯರಿಗೆ ವೀಸಾ ಮನ್ನಾ ಮಾಡಿದೆ.
ಹೊಸದಿಲ್ಲಿ (ಡಿಸೆಂಬರ್ 15, 2023): ಭಾರತದಿಂದ ಭೇಟಿ ನೀಡುವವರಿಗೆ ವೀಸಾ ಅವಶ್ಯಕತೆಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲು ಇರಾನ್ ಕ್ಯಾಬಿನೆಟ್ ನಿರ್ಧರಿಸಿದೆ. ಈ ಸಂಬಂಧ ಇರಾನ್‌ನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಕರಕುಶಲ ಸಚಿವ ಎಜ್ಜತೊಲ್ಲಾಹ್ ಜರ್ಘಮಿ ಹೇಳಿದ್ದಾರೆ. ಭಾರತ ಮಾತ್ರವಲ್ಲದೆ 33 ದೇಶಗಳಿಗೆ ವೀಸಾ ಅವಶ್ಯಕತೆಗಳನ್ನು ಮನ್ನಾ ಮಾಡಲು ಇರಾನ್ ಬುಧವಾರ ನಿರ್ಧರಿಸಿದೆ.
ಬುಧವಾರ ನಡೆದ ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜರ್ಗಾಮಿ, ಪ್ರವಾಸೋದ್ಯಮ ಆಗಮನವನ್ನು ಹೆಚ್ಚಿಸುವ ಮತ್ತು ವಿಶ್ವಾದ್ಯಂತ ದೇಶಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಹೇಳಿದರು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನಗಳು ಇರಾನೋಫೋಬಿಯಾ ಅಭಿಯಾನಗಳನ್ನು ತಟಸ್ಥಗೊಳಿಸಬಹುದು ಎಂದೂ ಹೇಳಿದರು.
ಇದನ್ನು ಓದಿ: ವೀಸಾ ಕಚೇರಿಯಲ್ಲಿ ಪೋರ್ನ್ ವಿಡಿಯೋ ಪ್ರಸಾರ: ಕ್ಯೂ ನಿಂತಿದ್ದ ಜನರು ಶಾಕ್; ವಿಡಿಯೋ ವೈರಲ್
ಇತ್ತೀಚೆಗೆ ಮಲೇಷ್ಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಸಹ ಭಾರತದ ಪ್ರವಾಸಿಗರಿಗೆ ವೀಸಾ ಅವಶ್ಯಕತೆಗಳನ್ನು ಮನ್ನಾ ಮಾಡಿದೆ. 2022 ರಲ್ಲಿ 13 ಮಿಲಿಯನ್ ಭಾರತೀಯ ಪ್ರವಾಸಿಗರು ವಿದೇಶದಲ್ಲಿ ಪ್ರವಾಸ ಮಾಡಿದ್ದಾರೆ. ಈ ಮೂಲಕ ಭಾರತವು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯನ್ನು ಹೊಂದಿದೆ ಎಂದು ಇತ್ತೀಚಿನ ಮೆಕಿನ್ಸೆ ವಿಶ್ಲೇಷಣೆ ಹೇಳುತ್ತದೆ.
ಭಾರತ ಮಾತ್ರವಲ್ಲದೆ, ರಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಸೌದಿ ಅರೇಬಿಯಾ, ಕತಾರ್, ಕುವೈತ್, ಲೆಬನಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಟುನೀಶಿಯಾ, ಮಾರಿಟಾನಿಯಾ, ತಾಂಜಾನಿಯಾ, ಜಿಂಬಾಬ್ವೆ, ಮಾರಿಷಸ್, ಸೀಶೆಲ್ಸ್, ಇಂಡೋನೇಷಿಯಾ, ದರುಸ್ಸಲಾಮ್, ಜಪಾನ್, ಸಿಂಗಾಪುರ, ಕಾಂಬೋಡಿಯಾ, ಮಲೇಷ್ಯಾ , ಬ್ರೆಜಿಲ್, ಪೆರು, ಕ್ಯೂಬಾ, ಮೆಕ್ಸಿಕೋ, ವೆನೆಜುವೆಲಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಸೆರ್ಬಿಯಾ, ಕ್ರೊಯೇಷಿಯಾ ಮತ್ತು ಬೆಲಾರಸ್ - ಒಟ್ಟಾರೆ 33 ದೇಶಗಳ ಪ್ರವಾಸಿಗರಿಗೆ ಇರಾನ್‌ಗೆ ಹೋಗಲು ಇನ್ಮಂದೆ ವೀಸಾ ಬೇಕಿಲ್ಲ.
ಭಾರತೀಯ ಪ್ರವಾಸಿಗರಿಗೆ ಸಿಹಿ ಸುದ್ದಿ: ಈ ದೇಶಕ್ಕೆ ಹೋಗಲು ಇನ್ಮುಂದೆ ವೀಸಾನೇ ಬೇಕಿಲ್ಲ!
ಕಳೆದ ಬಾರಿ ಟರ್ಕಿ, ರಿಪಬ್ಲಿಕ್ ಆಫ್ ಅಜರ್‌ಬೈಜಾನ್, ಓಮನ್, ಚೀನಾ, ಅರ್ಮೇನಿಯಾ, ಲೆಬನಾನ್ ಮತ್ತು ಸಿರಿಯಾ ಪ್ರವಾಸಿಗರಿಗೆ ಇರಾನ್ ವೀಸಾ ಮನ್ನಾ ಮಾಡಿತ್ತು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಇರಾನ್ ವರ್ಷದ ಮೊದಲ ಎಂಟು ತಿಂಗಳಲ್ಲಿ (ಮಾರ್ಚ್ 21 ರಂದು ಪ್ರಾರಂಭವಾದ) ಇರಾನ್‌ಗೆ ವಿದೇಶಿ ಆಗಮನದ ಸಂಖ್ಯೆ 4.4 ಮಿಲಿಯನ್ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 48.5% ಹೆಚ್ಚಳವಾಗಿದೆ ಎಂದೂ ತಿಳಿದುಬಂದಿದೆ.
7 ದೇಶದ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಶ್ರೀಲಂಕಾ, ಭಾರತೀಯರಿಗೂ ಇದೆಯೇ ಸೌಲಭ್ಯ?