ವೀಸಾ ಕಚೇರಿಯಲ್ಲಿ ಪೋರ್ನ್ ವಿಡಿಯೋ ಪ್ರಸಾರ: ಕ್ಯೂ ನಿಂತಿದ್ದ ಜನರು ಶಾಕ್; ವಿಡಿಯೋ ವೈರಲ್
ವೀಸಾ ಕಚೇರಿಯಲ್ಲಿ ಜನರು ತಮ್ಮ ದಾಖಲೆಗಳೊಂದಿಗೆ ಸರತಿ ಸಾಲಿನಲ್ಲಿ ನಿಂತಿರುವಾಗ ದೊಡ್ಡ ಪರದೆಯ ಮೇಲೆ ವಯಸ್ಕರ ವಿಡಿಯೋ ಪ್ರದರ್ಶನಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಕರಾಚಿ (ನವೆಂಬರ್ 25, 2023): ಪಾಕಿಸ್ತಾನದ ಕರಾಚಿಯಲ್ಲಿರುವ ಯುಕೆ ವೀಸಾ ಕಚೇರಿಯ ಟಿವಿ ಸ್ಕ್ರೀನ್‌ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದು, ಇದರಿಂದ ಕಚೇರಿಯಲ್ಲಿ ಕ್ಯೂನಲ್ಲಿ ನಿಂತಿದ್ದ ಜನತೆ ಆಘಾತಕ್ಕೊಳಗಾಗಿದ್ದಾರೆ. ಪಾಕ್‌ನ ಯುಕೆ ವೀಸಾ ಕಚೇರಿಯ ಅಧಿಕೃತ ಆವರಣದಲ್ಲಿರುವ ಟಿವಿ ಪರದೆಯೊಂದರಲ್ಲಿ ಇದು ಪ್ರಸಾರವಾಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೀಸಾ ಕಚೇರಿಯಲ್ಲಿ ಜನರು ತಮ್ಮ ದಾಖಲೆಗಳೊಂದಿಗೆ ಸರತಿ ಸಾಲಿನಲ್ಲಿ ನಿಂತಿರುವಾಗ ಗೆರ್ರಿಯ ವೀಸಾ ಕೇಂದ್ರ ಆಕಸ್ಮಿಕವಾಗಿ ದೊಡ್ಡ ಪರದೆಯ ಮೇಲೆ ವಯಸ್ಕರ ವಿಡಿಯೋ ಪ್ರದರ್ಶಿಸಿದೆ. ಈ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿದ್ದು, ದೃಶ್ಯಾವಳಿ ಇದೀಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ಇದನ್ನು ಓದಿ: ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಟೆಸ್ಲಾದ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು!
ಕರಾಚಿಯ ವೀಸಾ ಕಚೇರಿಯಲ್ಲಿದ್ದ ಜನರು ತಮ್ಮ ಪ್ರಯಾಣದ ಕಾರ್ಯವಿಧಾನವನ್ನು ಮಾಡಲು ಆಗಮಿಸಿದ ದೃಶ್ಯಗಳನ್ನು ವಿಡಿಯೋ ಆರಂಭದಲ್ಲಿ ತೋರಿಸುತ್ತದೆ. ಬಳಿಕ, ಸಾರ್ವಜನಿಕ ದೂರದರ್ಶನದಲ್ಲಿ ಬರುತ್ತಿರುವ ವಿಡಿಯೋವನ್ನು ಹೈಲೈಟ್ ಮಾಡಲು ಕ್ಯಾಮರಾ ಜೂಮ್ ಮಾಡಿದೆ. ಅಲ್ಲಿ ತಪ್ಪಾಗಿ ದೊಡ್ಡ ಸ್ಕ್ರೀನ್ ಮೇಲೆ ಪೋರ್ನ್ ವಿಡಿಯೋ ತೋರಿಸಿದೆ.
ಮಹಿಳೆಯರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಜನರ ಸಮ್ಮುಖದಲ್ಲಿ ಪರದೆಯ ಮೇಲೆ ಕಾಣಿಸಿಕೊಂಡಿತು. ಸ್ವಲ್ಪ ಸಮಯದ ನಂತರ, ಕಚೇರಿಯ ಸಿಬ್ಬಂದಿ ಅದನ್ನು ಗಮನಿಸಿ ಟಿವಿ ಸ್ವಿಚ್ ಆಫ್ ಮಾಡಿದ್ದಾರೆ.
ಇದನ್ನು ಓದಿ: ಮಸಾಲಾ ಟೀ ಸಿಗದೇ ಉಜ್ಬೇಕಿಸ್ತಾನದಲ್ಲಿ ಹೋಟೆಲ್ ತೆರೆದ ಬೆಂಗ್ಳೂರಿಗ: ಮಸಾಲೆ ದೋಸೆ, ಚಿಕನ್ ಬಿರಿಯಾನಿಗೂ ಫುಲ್ ಕ್ಯೂ!
ಈ ಹಿಂದೆ 2023ರಲ್ಲೇ ಪಾಟ್ನಾ ರೈಲು ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಮಾರ್ಚ್‌ನಲ್ಲಿ, ಪಟ್ನಾ ಜಂಕ್ಷನ್‌ನಲ್ಲಿ ಕಿಕ್ಕಿರಿದ ಪ್ಲಾಟ್‌ಫಾರ್ಮ್‌ನಲ್ಲಿ ರೈಲು ವೇಳಾಪಟ್ಟಿಯನ್ನು ಘೋಷಿಸಲು ವಾಸ್ತವವಾಗಿ ಸ್ಥಾಪಿಸಲಾದ ದೂರದರ್ಶನದಲ್ಲಿ ವಯಸ್ಕ ಚಲನಚಿತ್ರ ತಾರೆ ಕೇಂದ್ರಾ ಲಸ್ಟ್ ವಿಡಿಯೋ ಪ್ರದರ್ಶನವಾಗಿದ್ದು, ಇದು ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸಿದೆ.
ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ಘಟನೆಯ ವೈರಲ್ ವಿಡಿಯೋಗೆ ಪೋರ್ನ್‌ಸ್ಟಾರ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಇದು ನಿಮ್ಮದೇ ವಿಡಿಯೋ ಎಂದು ಬಳಕೆದಾರರೊಬ್ಬರು ಸೂಚಿಸಿದ್ದು, ಇದಕ್ಕೆ ಉತ್ತರಿಸಿದ ಪೋರ್ನ್ ಸ್ಟಾರ್ ಹೌದೆಂದು, ನಾನು ಭಾವಿಸುತ್ತೇನೆ, lol ಎಂದು ಎಕ್ಸ್ (ಈ ಹಿಂದಿನ ಟ್ವಿಟ್ಟರ್) ನಲ್ಲಿ ಬರೆದುಕೊಂಡಿದ್ದರು. ಅವರ ಈ ಟ್ವೀಟ್ ಸಹ ವೈರಲ್ ಆಗಿತ್ತು.
ಇದನ್ನು ಓದಿ: ಇಸ್ರೇಲ್‌ಗೆ ರಹಸ್ಯವಾಗಿ ಪಾಕ್‌ನಿಂದ ಶಸ್ತ್ರಾಸ್ತ್ರ ಪೂರೈಕೆ? ಹಮಾಸ್ ವಿರುದ್ಧದ ಯುದ್ಧದಲ್ಲಿ ಯಹೂದಿ ರಾಷ್ಟ್ರಕ್ಕೆ ಬೆಂಬಲ!