Asianet Suvarna News Asianet Suvarna News

7 ದೇಶದ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಶ್ರೀಲಂಕಾ, ಭಾರತೀಯರಿಗೂ ಇದೆಯೇ ಸೌಲಭ್ಯ?

ಭಾರತ ಸೇರಿದಂತೆ  7 ದೇಶಗಳಿಗೆ ಉಚಿತ ವೀಸಾ ನೀಡಲು ಶ್ರೀಲಂಕಾ ತೀರ್ಮಾನಿಸಿದೆ. ಈ ಮೂಲಕ ಪ್ರವಾಸೋಧ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ.

Sri Lanka approves visa-free entry for visitors from India and six other countries gow
Author
First Published Oct 24, 2023, 3:16 PM IST

ಇನ್ನು ಮುಂದೆ ಶ್ರೀಲಂಕಾ ಹೋಗಬೇಕಾದರೆ ವೀಸಾ ಬೇಕಾಗಿಲ್ಲ. ಭಾರತ ಸೇರಿದಂತೆ  7 ದೇಶಗಳಿಗೆ ಉಚಿತ ವೀಸಾ ನೀಡಲು ಶ್ರೀಲಂಕಾ ತೀರ್ಮಾನಿಸಿದೆ. ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಹೀಗೆ ಒಟ್ಟು ಏಳು ದೇಶಗಳ ಪ್ರಯಾಣಿಕರಿಗೆ ಉಚಿತ ವೀಸಾ ನೀಡಲು ಶ್ರೀಲಂಕಾ ಕ್ಯಾಬಿನೆಟ್ ತನ್ನ ಒಪ್ಪಿಗೆ ನೀಡಿದೆ. 

ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ  ಅವರ ಪ್ರಕಾರ ಈ ನಿರ್ಧಾರವು ಪ್ರಾಯೋಗಿಕ ಯೋಜನೆಯಾಗಿ ತಕ್ಷಣವೇ ಪ್ರಾರಂಭವಾಗಿದೆ ಮತ್ತು ಮುಂದಿನ ವರ್ಷದ ಮಾರ್ಚ್ 31 ರವರೆಗೆ ಜಾರಿಯಲ್ಲಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಕೇವಲ 1 ರೂ ನಲ್ಲಿದ್ದ ಅನಿಲ್‌ ಅಂಬಾನಿ ಷೇರುಗಳ ಬೆಲೆ ಬಾರೀ ಜಿಗಿತ, 6 ತಿಂಗಳಲ್ಲಿ ಡಬಲ್!

ಈ ಬೆಳವಣಿಗೆಯು  ಪ್ರವಾಸಿಗರ ಆಗಮನವನ್ನು ಹೆಚ್ಚಿಸುತ್ತದೆ ಎಂದು ಅಲಿ ಸಬ್ರಿ ಭರವಸೆ ವ್ಯಕ್ತಪಡಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಪ್ರವಾಸಿಗರ ಆಗಮನವನ್ನು ಐದು ಮಿಲಿಯನ್‌ಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಶ್ರಿಲಂಕಾ ಸರಕಾರದ ಸಚಿವಾಲಯವು ಹೇಳಿದೆ. ಈ ಕ್ರಮವು ಪ್ರಯಾಣಿಕರಿಗೆ ವೀಸಾ ಪಡೆಯಲು ಖರ್ಚು ಮಾಡುವ ಹಣ ಮತ್ತು ಸಮಯವನ್ನು ಉಳಿಸುತ್ತದೆ. 

ಕಳೆದ ವಾರದ ಆರಂಭದಲ್ಲಿ, ಶ್ರೀಲಂಕಾದ ಪ್ರವಾಸೋದ್ಯಮ ಸಚಿವಾಲಯವು ಐದು ದೇಶಗಳ ಪ್ರಯಾಣಿಕರಿಗೆ ಉಚಿತ ಪ್ರವಾಸಿ ವೀಸಾಗಳನ್ನು ನೀಡುವ ಪ್ರಸ್ತಾವನೆಯನ್ನು ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸಲಾಗಿದೆ ಎಂದು ಘೋಷಿಸಿತ್ತು.

ಕ್ಯಾಬಿನೆಟ್ ಪೇಪರ್ ಅನ್ನು ಶ್ರೀಲಂಕಾದ ಪ್ರಧಾನಿ ದಿನೇಶ್ ಗುಣವರ್ಧನಾ, ಪ್ರವಾಸೋದ್ಯಮ ಮತ್ತು ಭೂ ಸಚಿವ ಹರಿನ್ ಫೆರ್ನಾಂಡೋ, ಸಾರ್ವಜನಿಕ ಭದ್ರತಾ ಸಚಿವ ತಿರಾನ್ ಅಲ್ಲೆಸ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಜಂಟಿಯಾಗಿ ಮಂಡಿಸಿದ್ದಾರೆ.

100 ಕೊಠಡಿಯ ಅರಮನೆಯಲ್ಲಿ ಭಾರತದ ಅತ್ಯಂತ ದುಬಾರಿ ರಾಜಮನೆತನದ ವಿವಾಹ, ಇಶಾ ಅಂಬಾನಿ ಮದುವೆಗೂ ಇದಕ್ಕೂ ಲಿಂಕ್ ಇಲ್ಲ

ಈ ದೇಶಗಳಿಗೆ ಹೋಗುವವರು ಮತ್ತು ಪ್ರವಾಸಿಗರು ಈಗ ಶ್ರೀಲಂಕಾಕ್ಕೆ ಯಾವುದೇ ಶುಲ್ಕವಿಲ್ಲದೆ ವೀಸಾಗಳನ್ನು ಪಡೆಯಬಹುದು. ಇದು ದೇಶದಲ್ಲಿ ಗಮನಾರ್ಹ ಬದಲಾವಣೆಯನ್ನು ಗುರುತಿಸುತ್ತದೆ. ಭಾರತವು ಐತಿಹಾಸಿಕವಾಗಿ ಶ್ರೀಲಂಕಾ ತೆರಳುವ ಪ್ರವಾಸೋದ್ಯಮದ ಪ್ರಾಥಮಿಕ ಮೂಲವಾಗಿದೆ. ಭಾರತಕ್ಕೆ ಬಂದೇ ಶ್ರೀಲಂಕಾಕ್ಕೆ ತೆರಳಬೇಕು.

ಪಿಟಿಐ ವರದಿಯಂತೆ ಸೆಪ್ಟೆಂಬರ್‌ನಲ್ಲಿ, ಭಾರತದ ಮೂಲಕ 30,000 ಕ್ಕೂ ಹೆಚ್ಚು ಜನರು ಶ್ರೀಲಂಕಾಕ್ಕೆ ತೆರೆದಿದ್ದಾರೆ.  ಒಟ್ಟು 26 ಪ್ರತಿಶತವನ್ನು ಒಳಗೊಂಡಿದೆ,  ಚೀನಾ ಮೂಲಕ 8,000 ಕ್ಕೂ ಹೆಚ್ಚು ಪ್ರವಾಸಿಗರು ಪ್ರಯಾಣಿಸಿದ್ದು ಎರಡನೇ ಸ್ಥಾನದಲ್ಲಿದೆ. 

ಇನ್ನು 2019 ರ ಈಸ್ಟರ್ ಸಂಡೇ ಬಾಂಬ್ ಸ್ಫೋಟದ ನಂತರ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಪ್ರವಾಸಿಗರ ಆಗಮನದಲ್ಲಿ ವ್ಯಾಪಕ ಇಳಿಕೆ ಕಂಡಿದೆ. ಈ ಸ್ಪೋಟದಲ್ಲಿ  11 ಭಾರತೀಯರು ಸೇರಿದಂತೆ 270 ಮಂದಿ ಮೃತಪಟ್ಟಿದ್ದರು.  500 ಕ್ಕೂ ಹೆಚ್ಚು  ಮಂದಿ ಗಾಯಗೊಂಡಿದ್ದರು.

 

 

Follow Us:
Download App:
  • android
  • ios