ಬಹುತೇಕರು ರೈಲು ಪ್ರಯಾಣವನ್ನು ತುಂಬಾ ಇಷ್ಟಪಡುತ್ತಾರೆ. ಕಡಿಮೆ ವೆಚ್ಚ ಮತ್ತು ಆರಾಮದಾಯಕ ಅನ್ನೋ ಕಾರಣಕ್ಕೆ ಟ್ರೈನ್ ಟ್ರಾವೆಲ್ ಫ್ರಿಪರ್ ಮಾಡುತ್ತಾರೆ. ಸಂಪೂರ್ಣ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಪ್ರಯಾಣಿಸುವಾಗ ರೈಲಿನಲ್ಲಿ ಹೆಚ್ಚು ಸೀಟ್ ಕಾಯ್ದಿರಿಸಬೇಕಾಗುತ್ತದೆ. ಹಾಗಿದ್ರೆ ರೈಲಿನಲ್ಲಿ ಸಂಪೂರ್ಣ ಬೋಗಿ ಬುಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.

ರೈಲಿನಲ್ಲಿ ಪ್ರಯಾಣಿಸುವುದು ಹಲವರ ಪಾಲಿಗೆ ತುಂಬಾ ಕಂಫರ್ಟೆಬಲ್. ಹೀಗಾಗಿ ಹತ್ತಿರದ ಸ್ಥಳವೇ ಇರಲಿ, ದೂರದ ಪ್ರಯಾಣವೇ ಆಗಿರಲಿ ಟ್ರೈನ್ ಟ್ರಾವೆಲ್‌ನ್ನು ಇಷ್ಟಪಡುತ್ತಾರೆ. ಅದರಲ್ಲೂ ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಪ್ರಯಾಣಿಸಲು ಟ್ರೈನ್ ತುಂಬಾ ಆರಾಮದಾಯಕವಾಗಿರುತ್ತದೆ. ಒಂದೇ ಕೋಚ್‌ನಲ್ಲಿ ಕುಳಿತು ಆರಾಮವಾಗಿ ಜೊತೆಯಲ್ಲೇ ಪ್ರಯಾಣಿಸಬಹುದು. ಆದರೆ ಭಾರತೀಯ ರೈಲ್ವೇ ಮೂಲಕ ರೈಲಿನಲ್ಲಿ ದೃಢೀಕೃತ ಸೀಟ್ ಪಡೆಯಲು ಹೆಚ್ಚು ಸಮಯ ಬೇಕಾಗುತ್ತದೆ. ಹೀಗಿರುವಾಗ ಸಂಪೂರ್ಣ ರೈಲಿನ ಕೋಚ್ ಬುಕ್ಕಿಂಗ್ ಮಾಡುವುದು ಹೇಗೆ? ಈ ಕುರಿತಾದ ರೈಲಿನ ನಿಯಮಗಳೇನು? ಅನ್ನೋ ಮಾಹಿತಿ ಇಲ್ಲಿದೆ. 

ಹೆಚ್ಚಿನ ಪ್ರಯಾಣಿಕರನ್ನು (Passengers) ಕಾಯ್ದಿರಿಸಲು ಅನುಮತಿ ಪಡೆಯಲು ಸಂಬಂಧಪಟ್ಟ ಮೀಸಲಾತಿ ಕಚೇರಿಯ ನಿಯಂತ್ರಣ ಅಧಿಕಾರಿ/ಮುಖ್ಯ ಮೀಸಲಾತಿ ಮೇಲ್ವಿಚಾರಕರನ್ನು ಸಂಪರ್ಕಿಸುವ ಮೂಲಕ ನೀವು ರೈಲಿನಲ್ಲಿ ಕೋಚ್‌ನ್ನು ಬುಕ್ ಮಾಡಬಹುದು. ದೊಡ್ಡ ಪ್ರಮಾಣದಲ್ಲಿ ವಸತಿ ಸೌಕರ್ಯವನ್ನು ಒಳಗೊಂಡಿರುವ ಈ ಬುಕಿಂಗ್‌ಗಳು ಆನ್‌ಲೈನ್ ಕಾಯ್ದಿರಿಸುವಿಕೆ (Online booking) ವ್ಯವಸ್ಥೆಯಲ್ಲಿ 10.00 ಗಂಟೆಗಳ ನಂತರ ಲಭ್ಯವಿರುತ್ತವೆ. 

ರೈಲಿನಲ್ಲಿ ಪ್ರಯಾಣಿಸುವಾಗ ಯಾರೂ ನೋಡ್ತಿಲ್ಲಾಂತ ಹೀಗೆಲ್ಲಾ ಮಾಡಿದ್ರೆ ಜೈಲೂಟ ಗ್ಯಾರಂಟಿ!

ಕೋಚ್ ಬುಕ್ಕಿಂಗ್: ಒಂದು ಕುಟುಂಬ ಅಥವಾ ಒಂದು ಗುಂಪಿನ ಗ್ರಾಹಕರು ಒಂದೇ ರೈಲಿನಲ್ಲಿ ಎಫ್‌ಟಿಆರ್ ಮೂಲಕ ಗರಿಷ್ಠ 2 ಕೋಚ್‌ಗಳನ್ನು ಬುಕ್ ಮಾಡಬಹುದಾಗಿದೆ. ಒಂದು ಗುಂಪು ಎಫ್‌ಟಿಆರ್ ಅಡಿಯಲ್ಲಿ ಗರಿಷ್ಠ 24 ಕೋಚ್‌ಗಳನ್ನು ಬುಕ್ ಮಾಡಬಹುದು. ಇದರಲ್ಲಿ ಎಸ್‌ಎಲ್‌ಆರ್‌ ಕೋಚ್‌/ ಜನರೇಟರ್ ಕಾರ್ ಇರುವುದು ಕೂಡಾ ಕಡ್ಡಾಯವಾಗಿದೆ. ಕನಿಷ್ಠ ಕೋಚ್ ಬುಕ್ಕಿಂಗ್ ಸಂಖ್ಯೆ 18 ಆಗಿರುತ್ತದೆ.

ಸೆಕ್ಯೂರಿಟಿ ಡೆಪಾಸಿಟ್: ಕೋಚ್‌ಗಳನ್ನು ಅಥವಾ ರೈಲನ್ನು ಬುಕ್ ಮಾಡುವವರು ಬುಕ್ಕಿಂಗ್ ವಿಧಾನ, ಪ್ರಯಾಣ ವಿವರ (Travel details), ಪ್ರಯಾಣ ಮಾರ್ಗ ಇತರೆ ಮಾಹಿತಿಯನ್ನು ಆನ್‌ಲೈನ್ ಫಾರ್ಮ್ ಮೂಲಕ ನೀಡಬೇಕಾಗುತ್ತದೆ. ರಿಜಿಸ್ಟ್ರೇಷನ್ ಶುಲ್ಕ ಮತ್ತು ಸೆಕ್ಯೂರಿಟಿ ಡೆಪಾಸಿಟ್ ಆಗಿ ಪ್ರತಿ ಬೋಗಿಗೆ 50 ಸಾವಿರ ರೂಪಾಯಿ ಪಾವತಿ (Payment) ಮಾಡಬೇಕು. 18 ಕೋಚ್‌ಗಳಿಗೂ ಕಡಿಮೆ ಬೋಗಿಯನ್ನು ಬುಕ್ ಮಾಡುವುದಾದರೂ, 18 ಕೋಚ್‌ಗಳ ರಿಜಿಸ್ಟ್ರೇಷನ್ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.

ಭಾರತದ ಈ ರೈಲು ಹತ್ತೋಕೆ ಟಿಕೆಟ್ ಬೇಕಾಗಿಲ್ಲ, ಎಷ್ಟು ದೂರ ಬೇಕಾದ್ರೂ ಫ್ರೀಯಾಗಿ ಹೋಗ್ಬೋದು!

ಸಂಪೂರ್ಣ ರೈಲು, ಕೋಚ್ ಬುಕ್ ಮಾಡುವುದು ಹೇಗೆ?
- ಐಆರ್‌ಸಿಟಿಸಿ ಅಧಿಕೃತ ಎಫ್‌ಟಿಆರ್ ವೆಬ್‌ಸೈಟ್ www.ftr.irctc.co.in ಗೆ ಭೇಟಿ ನೀಡಿ
- ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ ಮೂಲಕ ಲಾಗಿನ್ ಆಗಿ. ಈ ಕ್ರೆಡೆನ್ಶಿಯಲ್ ಇಲ್ಲವಾದರೆ ಕ್ರಿಯೇಟ್ ಮಾಡಿಕೊಳ್ಳಿ.
- ಸಂಪೂರ್ಣ ಕೋಚ್ ಬುಕ್ ಮಾಡಬೇಕಾದರೆ ಎಫ್‌ಟಿಆರ್ ಸೇವಾ ಆಯ್ಕೆಯನ್ನು ಮಾಡಿಕೊಳ್ಳಿ,
- ಪಾವತಿ ಮಾಡಬೇಕಾದರೆ ಎಲ್ಲ ಮಾಹಿತಿಯನ್ನು ನೀಡಬೇಕಾಗುತ್ತದೆ.
- ಅದಾದ ಬಳಿಕ ಪಾವತಿ ಆಯ್ಕೆ ಮಾಡಿ
- ಸಂಪೂರ್ಣ ಕೋಚ್ ಬುಕ್ ಮಾಡುವಾಗ ಈ ಮಾಹಿತಿ ತಿಳಿದಿರಿ
- ನೀವು ಕನಿಷ್ಠವೆಂದರೆ ಆರು ತಿಂಗಳಿಗೂ ಮುನ್ನವೇ ಕೋಚ್ ಬುಕ್ ಮಾಡಬೇಕಾಗುತ್ತದೆ.
- ಸೆಕ್ಯೂರಿಟಿ ಡೆಪಾಸಿಟ್ ಅನ್ನು ನೀಡಬೇಕಾಗುತ್ತದೆ. ಅದು ಪ್ರಯಾಣ ಮುಕ್ತಾಯವಾದ ಬಳಿಕ ರಿಫಂಡ್ ಆಗುತ್ತದೆ.
-ಐಆರ್‌ಸಿಟಿಸಿ ನಿಮಗೆ ಕ್ಯಾಟೆರಿಂಗ್ ಸೇವೆಯನ್ನು ನೀಡುತ್ತದೆ. ನೀವು ಅದರಲ್ಲಿ ಬೇಕಾದ ಆಯ್ಕೆಗಳನ್ನು ಮಾಡಬಹುದು.

ಕೋಚ್‌ ಬುಕ್ಕಿಂಗ್ ಅವಧಿಯು ಭಿನ್ನವಾಗಿರುತ್ತದೆ. ಎಫ್‌ಟಿಆರ್ ಎಫ್‌ಟಿಆರ್ ನೋಂದಣಿಯನ್ನು ಗರಿಷ್ಠ 6 ತಿಂಗಳ ಮುಂಚಿತವಾಗಿ ಮತ್ತು ಪ್ರಯಾಣದ ದಿನಾಂಕಕ್ಕೆ ಕನಿಷ್ಠ 30 ದಿನಗಳ ಮೊದಲು ಮಾಡಬೇಕಾಗುತ್ತದೆ.

Indian Railways New Rules: ರಾತ್ರಿ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೊಳಿಸಿದ ಭಾರತೀಯ ರೈಲ್ವೆ!