ರೈಲಿನಲ್ಲಿ ಪ್ರಯಾಣಿಸುವಾಗ ಯಾರೂ ನೋಡ್ತಿಲ್ಲಾಂತ ಹೀಗೆಲ್ಲಾ ಮಾಡಿದ್ರೆ ಜೈಲೂಟ ಗ್ಯಾರಂಟಿ!
ರೈಲ್ವೇ ಪ್ರಯಾಣ ಎಂದರೆ ಬಹುತೇಕರ ಪಾಲಿಗೆ ಅಶ್ಲೀಲ ವೀಡಿಯೋಗಳನ್ನು ನೋಡೋ ಫ್ಲಾಟ್‌ಫಾರ್ಮ್ ಎಂಬಂತಾಗಿಬಿಟ್ಟಿದೆ. ಲಾಂಗ್ ಜರ್ನಿಯಲ್ಲಿ ಆರಾಮವಾಗಿ ಕುಳಿತು ಇಂಥಾ ವೀಡಿಯೋಗಳನ್ನು ನೋಡಬಹುದು ಅಂದುಕೊಳ್ಳುತ್ತಾರೆ. ಆದ್ರೆ ಇನ್ಮುಂದೆ ಹೀಗೆ ಮಾಡಿದ್ರೆ ಜೈಲೂಟ ಗ್ಯಾರಂಟಿ.
ರೈಲು ಪ್ರಯಾಣ ಬಹುತೇಕರ ಪಾಲಿಗೆ ಹೆಚ್ಚು ಆರಾಮದಾಯಕವಾಗಿದೆ. ಜೇಬಿಗೆ ಹೊರೆ ಕಡಿಮೆ ಮತ್ತು ಸೇಫ್ ಅನ್ನೋ ಕಾರಣಕ್ಕೆ ಎಲ್ಲರೂ ರೈಲ್ವೇ ಪ್ರಯಾಣವನ್ನೇ ಆಯ್ದುಕೊಳ್ಳುತ್ತಾರೆ. ರೈಲು ಪ್ರಯಾಣದಲ್ಲಿ ಸಮಯ ಕಳೆಯುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಕೆಲವರು ಹಾಡು ಕೇಳುತ್ತಾ ಸಮಯ ಕಳೆದರೆ, ಇನ್ನು ಕೆಲವರು ಪುಸ್ತಕ ಓದುತ್ತಾರೆ. ಮತ್ತೆ ಬಹುತೇಕರು ಅಶ್ಲೀಲ ವೀಡಿಯೋ ನೋಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಯಾರೂ ನೋಡುದಿಲ್ಲವೆಂಬ ಧೈರ್ಯದಲ್ಲಿ ಖುಲ್ಲಂಖುಲ್ಲವಾಗಿ ಪೋರ್ನ್ ವೀಡಿಯೋಗಳನ್ನು ನೋಡುತ್ತಾರೆ. ಆದರೆ ಈ ದೇಶದಲ್ಲಿ ಇನ್ಮುಂದೆ ಹೀಗೆ ಮಾಡೋ ಹಾಗಿಲ್ಲ.
ಯುನೈಟೆಡ್ ಕಿಂಗ್ಡಮ್ ರೈಲ್ವೇ ಸಂಸ್ಥೆಯು (Railway) ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯು ರೈಲಿನಲ್ಲಿ ಅಶ್ಲೀಲ ವೀಡಿಯೊಗಳು (Porn videos) ಅಥವಾ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದರೆ, ಅವನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ರೈಲಿನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿ ಮತ್ತು ನೀವು ಮನೆಗೆ ಬರುವವರೆಗೆ ಕಾಯಿರಿ ಎಂದು ರೈಲ್ವೆ ಸಂಸ್ಥೆ ಪ್ರಯಾಣಿಕರಿಗೆ (Passengers) ಮನವಿ ಮಾಡಿದೆ.
ಅಬ್ಬಬ್ಬಾ! ಈ ರೈಲು 19 ಅಂತಸ್ತಿನ ಅಪಾರ್ಟ್ಮೆಂಟ್ ಮಧ್ಯದಲ್ಲಿ ಹಾದು ಹೋಗುತ್ತೆ!
ಇವಿಷ್ಟೇ ಅಲ್ಲದೆ, ರೈಲಿನಲ್ಲಿ ಜನರು ಪರಸ್ಪರ ಪ್ರಚಲಿತ ಸಮಸ್ಯೆಗಳ ಬಗ್ಗೆಯೂ ಗಂಭೀರ ಚರ್ಚೆ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಕೆಟ್ಟ ಭಾಷೆ ಮತ್ತು ಆಕ್ಷೇಪಾರ್ಹ ವಿಷಯಗಳನ್ನು ತಪ್ಪಿಸಲು ಪ್ರಯಾಣಿಕರಿಗೆ ಹೇಳಲಾಗಿದೆ. ಜನರ ಮಧ್ಯೆ ಘರ್ಷಣೆಯನ್ನು ಉಂಟುಮಾಡುವ ಇಂತಹ ವಿಷಯಗಳನ್ನು ರೈಲಿನಲ್ಲಿ ಪ್ರಯಾಣಿಸುವಾಗ ಚರ್ಚಿಸಬಾರದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಾರ್ಗಸೂಚಿಯನ್ನು (Guidelines) ನಾರ್ದರ್ನ್ ರೈಲ್ ಎಂಬ ಬ್ರಿಟಿಷ್ ರೈಲ್ವೇ ಕಂಪನಿ ಹೊರಡಿಸಿದೆ. ನಾರ್ದರ್ನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟ್ರಿಸಿಯಾ ವಿಲಿಯಮ್ಸ್, 'ಪ್ರತಿ ವರ್ಷ ಲಕ್ಷಾಂತರ ಮಂದಿ ರೈಲಿನಲ್ಲಿ ಓಡಾಡುತ್ತಾರೆ. ಹೀಗಾಗಿ ಎಲ್ಲರೂ ಖುಷಿಯಿಂದ, ಸುರಕ್ಷಿತವಾಗಿ (Safe) ಪ್ರಯಾಣಿಸುತ್ತಾರೆ' ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ' ಎಂದಿದ್ದಾರೆ.
ಆಕ್ಷೇಪಾರ್ಹ ವಿಷಯಗಳ ಬಗ್ಗೆ ಮಾತನಾಡಿದರೆ ಕ್ರಮ
ಬ್ರಿಟನ್‌ನ ನಾರ್ದರ್ನ್ ರೈಲ್ವೇಸ್ ಕಂಪನಿಯು ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಕರು ಯಾರಾದರೂ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿರುವುದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ರೈಲು ಪ್ರಯಾಣದ ಸಮಯದಲ್ಲಿ ಕೆಲವರು ಇತರರು ಕೇಳಲು ಮತ್ತು ನೋಡಲು ಯೋಗ್ಯವಲ್ಲದ ಇಂತಹ ವಿಷಯಗಳನ್ನು ಹುಡುಕುತ್ತಾರೆ. ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟ್ರಿಸಿಯಾ ವಿಲಿಯಮ್ಸ್ ಹೇಳಿದ್ದಾರೆ. ಈಗ ರೈಲಿನಲ್ಲಿ ಅಂತಹ ಎಲ್ಲಾ ವಿಷಯಗಳನ್ನು ನಿಷೇಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಭಾರತದ ಈ ರೈಲು ಹತ್ತೋಕೆ ಟಿಕೆಟ್ ಬೇಕಾಗಿಲ್ಲ, ಎಷ್ಟು ದೂರ ಬೇಕಾದ್ರೂ ಫ್ರೀಯಾಗಿ ಹೋಗ್ಬೋದು!
ಮಹಿಳೆಯೊಂದಿಗಿನ ಘಟನೆಯ ನಂತರ ಈ ನಿರ್ಧಾರ
ಏಪ್ರಿಲ್ 4 ರಂದು, ಉತ್ತರ ರೈಲ್ವೆಯಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿತ್ತು ಎಂಬ ಸಂಗತಿ ಇಲ್ಲಿ ಗಮನಾರ್ಹ, ನಂತರ ರೈಲ್ವೆ ಸಂಸ್ಥೆ ಈ ಮಾರ್ಗಸೂಚಿಗಳನ್ನು ನೀಡಿದೆ. ಏಪ್ರಿಲ್ 4 ರಂದು ಮಹಿಳೆ ಉತ್ತರ ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ವ್ಯಕ್ತಿಯೊಬ್ಬ ಮಹಿಳೆಗೆ ಅಶ್ಲೀಲ ಸನ್ನೆ ಮಾಡಿದ್ದು, ನಿರಾಕರಿಸಿದರೂ ಮಹಿಳೆಯ ಫೋಟೋ ತೆಗೆದಿದ್ದಾನೆ. ಇದನ್ನು ವಿರೋಧಿಸಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉಳಿದ ಪ್ರಯಾಣಿಕರು ಪ್ರತಿಭಟನೆ ನಡೆಸಿದಾಗ ಕಿಡಿಗೇಡಿ ಪರಾರಿಯಾಗಿದ್ದನು.
ಅವಳಲ್ಲ.. ಅವನು! ಸ್ಕರ್ಟ್ ಧರಿಸಿ ಮುಂಬೈ ಲೋಕಲ್ ಟ್ರೈನ್‌ನಲ್ಲಿ ಕ್ಯಾಟ್‌ವಾಕ್ ಮಾಡಿದ ಫ್ಯಾಶನ್ ಬ್ಲಾಗರ್