ಮೈಸೂರು ಅರಮನೆಯಲ್ಲಿ ಎಷ್ಟು ಕೋಣೆಗಳಿವೆ, ಯದುವೀರರಿಗೂ ಗೊತ್ತಿಲ್ಲವಂತೆ!
ಮೈಸೂರು ಮಹಾರಾಜರ ಅರಮನೆಯಲ್ಲಿ ಎಷ್ಟು ಕೋಣೆಗಳಿರಬಹುದು ಎಂಬುದು ಒಂದು ಕುತೂಹಲದ ಪ್ರಶ್ನೆಯೇ ಸರಿ. ಆದರೆ ಈ ಪ್ರಶ್ನೆಗೆ ಉತ್ತರ ಹುಡುಕಲು ನೀವು ಮುಂದಾದರೆ ನಿಮಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಅದ್ಯಾಕೆ?
ಇತ್ತೀಚೆಗೆ ಒಂದು ಇಂಟರ್‌ವ್ಯೂನಲ್ಲಿ ಸಂದರ್ಶಕಿಯೊಬ್ಬರು ಮೈಸೂರು ಸಂಸದ, ಅರಸು ಮನೆತನದ ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಒಂದು ಪ್ರಶ್ನೆ ಕೇಳುತ್ತಿದ್ದಳು. "ಮೈಸೂರು ಅರಮನೆಯಲ್ಲಿ ಎಷ್ಟು ಕೋಣೆಗಳಿವೆ?" ಅದಕ್ಕೆ ಯದುವೀರ್ ಕೊಟ್ಟ ಉತ್ತರ ಸ್ವಾರಸ್ಯಕರವಾಗಿತ್ತು:
"ನನಗೆ ನಿಜಕ್ಕೂ ಗೊತ್ತಿಲ್ಲ ಎಷ್ಟು ರೂಮುಗಳಿದಾವೆ ಅಂತ. ಆದರೆ ಅವೆಲ್ಲವೂ ಒಂದರಿಂದ ಇನ್ನೊಂದಕ್ಕೆ ಕನೆಕ್ಟ್ ಆಗುವಂಥ ರೂಮುಗಳು. ನಾವೀಗ ವಾಸವಾಗಿರುವ ಜಾಗ ಬಹಳ ಹಳೇದು, 1800ರಲ್ಲಿ ನಿರ್ಮಾಣ ಆದದ್ದು. ಅದು ಸುಟ್ಟುಹೋಗಿರಲಿಲ್ಲ. ಅದು ಅಂದಿನ ಕಾಲದ ವಾಸ್ತುಶಿಲ್ಪದಲ್ಲಿ ನಿರ್ಮಾಣ ಆಗಿದೆ. ಆ ಥರ ಪ್ರತ್ಯೇಕ ರೂಮು ಅಂತಿಲ್ಲ. ಎಲ್ಲ ರೂಮುಗಳೂ ಒಂದೇ ಥರ. ಎಲ್ಲ ಕೋಣೆಗಳೂ ಇನ್ನೊಂದು ಕೋಣೆಗೆ ಓಪನ್ ಆಗುತ್ತೆ. ಆ ಥರ ಪ್ರೈವೆಸಿ ಕೂಡ ಅಲ್ಲಿ ಇಲ್ಲ. ಹಾಗೆ ನೋಡಿದಾಗ ನಾವೇ ಒಂದು ಕಡೆ ಸೇರಿ, ಪ್ರತ್ಯೇಕ ಭಾಗ ಮಾಡಿಕೊಂಡು ಇರಬೇಕಾಗಿದೆ."
"ಹಾಗೆ ನೋಡಕ್ಕೆ ಹೋದರೆ ಅದೇ ದೂರು ಆಗಿತ್ತು. ನಾಲ್ವಡಿ ಅರಸರ ಕಾಲದಲ್ಲಿ ಅವರ ತಾಯಿಯವರು ಅಂದಿನ ಆರ್ಕೆಟೆಕ್ಟ್‌ಗೆ ಹೇಳಿದ್ದರು- ಖಾಸಗಿತನಕ್ಕೆ ಆಸ್ಪದ ಕೊಡುವಂಥ ಭಾಗ ಅರಮನೆಯಲ್ಲಿ ಇಲ್ಲ ಅಂತ. ಹಾಗೆ ಅದರಲ್ಲಿ ವಾಸ್ತವ್ಯದ ಭಾಗ ಇಲ್ಲವೇ ಇಲ್ಲ" ಎಂದಿದ್ದಾರೆ ಯದುವೀರರು. ಅಂದರೆ ಈ ಸಮಸ್ಯೆ ಅವರಿಗೂ ಇದೆ ಎಂದಾಯಿತು. ಮೈಸೂರು ಅರಮನೆಗೆ ಭೇಟಿ ಕೊಡುವ ಎಲ್ಲ ಪ್ರವಾಸಗರಿಗೂ ಇದು ಗೊತ್ತಾಗಿಯೇ ಇರುತ್ತದೆ. ಅಂದರೆ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ನೀವು ಸಾಗುತ್ತಲೇ ಇರುತ್ತೀರಿ. ಅದಕ್ಕೆ ಕೊನೆಯೇ ಇರುವುದಿಲ್ಲ!
ಜಗತ್ತಿನ ಅಸಂಖ್ಯಾತ ಪ್ರವಾಸಿಗರನ್ನು ಮೈಸೂರ ಅರಮನೆ ಸೆಳೆಯುತ್ತದೆ. ಗೂಗಲ್‌ನಲ್ಲಿ ಅತ್ಯಧಿಕ ಪರಾಮರ್ಶೆಗೊಳಪಟ್ಟ ಪ್ರವಾಸಿ ತಾಣಗಳಲ್ಲಿ ವಿಶ್ವದಲ್ಲೇ ಮೈಸೂರು ಅರಮನೆಯು 15ನೇ ಸ್ಥಾನದಲ್ಲಿದೆ. ಮೈಸೂರನ್ನು ಅರಮನೆಗಳ ನಗರಿ ಎಂದೇ ಕರೆಯಲಾಗುತ್ತದೆ. ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆಯಾಗಿದೆ. ಮೈಸೂರು ಅರಮನೆ ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ಮುಖ್ಯವಾಗಿ ಹೇಳಲಾಗುತ್ತದೆ.
ಬರೋಬ್ಬರಿ 95 ದೇಶಗಳನ್ನ ಸುತ್ತಿದ ಫ್ಲೈಯಿಂಗ್ ಪಾಸ್‌ಪೋರ್ಟ್ ಜೋಡಿ... ಇನ್ನು ಬಾಕಿ ಇರೋದು 102 ದೇಶಗಳಷ್ಟೇ..!
ಮೈಸೂರು ಅರಮನೆ ಅಥವಾ ಅಂಬಾ ವಿಲಾಸ ಅರಮನೆಯನ್ನು ಐದನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ಅರಮನೆಯನ್ನು ಹಲವಾರು ಬಾರಿ ಪುನರ್ನಿರ್ಮಿಸಲಾಗಿದೆ. ಹಿಂದೂ, ಮೊಘಲ್, ರಜಪೂತ ಮತ್ತು ಗೋಥಿಕ್ ಶೈಲಿಯ ವಾಸ್ತುಶಿಲ್ಪದ ಮಿಶ್ರಣಗಳೊಂದಿಗೆ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ಮೂರು ಅಂತಸ್ತಿನ ಅರಮನೆಯನ್ನು ನಿರ್ಮಿಸಲಾಗಿದೆ. ಈಗ ಹಳೆಯ ಅರಮನೆ ಅಥವಾ ಮರದ ಅರಮನೆ ಎಂದು ಕರೆಯಲ್ಪಡುವ ಕೊನೆಯ ಅರಮನೆಯು 1896 ರಲ್ಲಿ ಚಾಮರಾಜ ಒಡೆಯರ್ ಅವರ ಹಿರಿಯ ಮಗಳು ಜಯಲಕ್ಷಮ್ಮಣ್ಣಿಯ ವಿವಾಹದ ಸಮಯದಲ್ಲಿ ಸುಟ್ಟು ಬೂದಿಯಾಯಿತು. ಮಹಾರಾಜ ನಾಲ್ಮಡಿ ಕೃಷ್ಣರಾಜ ಒಡೆಯರ್ ಮತ್ತು ಅವರ ತಾಯಿ ಮಹಾರಾಣಿ ಕೆಂಪನಂಜಮ್ಮಣ್ಣಿ ದೇವಿ ಅವರು ಬ್ರಿಟಿಷ್ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್ ಸಹಾಯ ಪಡೆದು ಹೊಸ ಅರಮನೆ ಕಟ್ಟಿಸಿದರು. ಆಗ ಇದಕ್ಕೆ ಆದ ವೆಚ್ಚ 41.47 ಲಕ್ಷ ರೂಪಾಯಿ.
ಐಸ್ಲ್ಯಾಂಡ್‌ನಲ್ಲಿ ಉಕ್ಕಿದ ಜ್ವಾಲಾಮುಖಿ: ವಿಮಾನದ ಕಿಟಕಿಯಿಂದ ಸೆರೆಯಾದ ಅದ್ಭುತ ದೃಶ್ಯ
ಚಚ್ಚೌಕದ ಕಂಬಗಳು, ಮೇಲೆ ಸುಂದರ ವಿನ್ಯಾಸದ ಗೋಪುರ, ವಿಶಾಲವಾದ ಮೈದಾನ, ಸುಂದರ ಹಾಗೂ ಮನಮೋಹಕ ಶಿಲ್ಪಗಳಿಂದ, ನುಣುಪಾದ ನೆಲಹಾಸು, ಗಾಜಿನ ಅಲಂಕಾರಿಕ ವಿನ್ಯಾಸದಿಂದ ಕೂಡಿದ ದರ್ಬಾರ್ ಹಾಲ್, ಅರಮನೆಯ ಸುತ್ತ ಇರುವ ಸಿಂಹ ಲಾಂಛನಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ದಸರೆ, ಮಾಗಿ ಉತ್ಸವ , ಯುಗಾದಿ ಸಂಗೀತ, ಯೋಗ ದಿನ ಸೇರಿ ಅರಮನೆಯಲ್ಲಿ ವರ್ಷಕ್ಕೆ 4 ದೊಡ್ಡ ಕಾರ್ಯಕ್ರಮ ನಡೆಯುತ್ತವೆ. ದಸರಾ ಸಂದರ್ಭದಲ್ಲಿ ದಿನನಿತ್ಯ ದೀಪಾಲಂಕಾರದಿಂದ ಕಂಗೊಳಿಸುವ ಅರಮನೆಗೆ 97 ಸಾವಿರಕ್ಕೂ ಹೆಚ್ಚು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ.