ಐಸ್ಲ್ಯಾಂಡ್‌ನಲ್ಲಿ ಉಕ್ಕಿದ ಜ್ವಾಲಾಮುಖಿ: ವಿಮಾನದ ಕಿಟಕಿಯಿಂದ ಸೆರೆಯಾದ ಅದ್ಭುತ ದೃಶ್ಯ

ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡ ಅದ್ಭುತ ದೃಶ್ಯವನ್ನು ವಿಮಾನ ಪ್ರಯಾಣಿಕರೊಬ್ಬರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುಮಾರು 800 ವರ್ಷಗಳ ನಂತರ ಐಸ್ಲ್ಯಾಂಡ್‌ನಲ್ಲಿ ಬೃಹತ್ ಜ್ವಾಲಾಮುಖಿ ಸ್ಫೋಟ ಸಂಭವಿಸಿದೆ.

Volcano erupts in Iceland Amazing scene captured from plane window

ನಮ್ಮ ಪ್ರಕೃತಿ ಒಂದು ವಿಸ್ಮಯ, ಅದು ಕೆಲವೊಮ್ಮೆ ನಮ್ಮ ಕಣ್ಣು ನಂಬಲಾಗದಂತಹ ಸುಂದರ ದೃಶ್ಯಾವಳಿಗಳನ್ನು ಸೃಷ್ಟಿಸುತ್ತದೆ. ಅದೇ ರೀತಿ ಈಗ ಜ್ವಾಲಾಮುಖಿಗಳು( volcanoes), ಹಿಮನದಿಗಳು (glaciers), ಜಲಪಾತಗಳು ಮತ್ತು ಲಾವಾ ಸುರಂಗಗಳು ಹಾಗೂ  ಬಣ್ಣಗಳ ದೃಶ್ಯ ವೈಭವ ಸೃಷ್ಟಿಸುವ ನಾರ್ತರ್ನ್‌ ಲೈಟ್ಸ್‌ಗಳಂತಹ ಪ್ರಾಕೃತಿಕ ವಿಸ್ಮಯಗಳಿಂದಲೇ ಫೇಮಸ್ ಆಗಿರುವ ಐಸ್‌ಲ್ಯಾಂಡ್‌ನಲ್ಲಿ ಈಗ ಅದ್ಭುತವಾದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇವರ ಸೃಷ್ಟಿ ಪ್ರಕೃತಿಯ ವಿಸ್ಮಯಕ್ಕೆ ಜನ ಬೆರಗಾಗಿದ್ದಾರೆ. ಅಂದಹಾಗೆ ಇದು ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿಯೊಂದು ಉಕ್ಕುತ್ತಿರುವ ಅದ್ಭುತ ದೃಶ್ಯವಾಗಿದ್ದು, ಇದನ್ನು ವಿಮಾನದ ಕಿಟಿಕಿಯೊಂದರ ಮೂಲಕ ವಿಮಾನ ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದಾರೆ. 

ಇದು ಯುರೋಪಿಯನ್ ರಾಷ್ಟ್ರ ಐಸ್‌ಲ್ಯಾಂಡ್‌ನ ಪ್ರವಾಸಿ ತಾಣವಾದ ಬ್ಲೂ ಲಾಗೂನ್‌ನಲ್ಲಿ ನಡೆದ ಪ್ರಾಕೃತಿಕ ವಿಸ್ಮಯವಾಗಿದ್ದು, ಇದರ ಲಾವಾ ಉಕ್ಕಿದ ಕಾರಣದಿಂದ ಅಲ್ಲಿ ಬ್ಲೂ ಲಗೂನ್ ಹಾಗೂ  ಗ್ರೀಂಡ್‌ವಿಕ್ ಪ್ರದೇಶದಲ್ಲಿ ಜನರ ಸ್ಥಳಾಂತರ ಮಾಡಲಾಗಿದೆ.  ಆದರೆ ಈ ಜ್ವಾಲಾಮುಖಿ ಉಕ್ಕುತ್ತಿರುವ ದೃಶ್ಯವೂ ಭೂಮಿಯ ಮಧ್ಯೆ ಬೆಂಕಿ ಕೆಂಡದ ಕರಗಿ ಹೊಳೆ ಹರಿಯುತ್ತಿರುವಂತೆ ಕಾಣುತ್ತಿದೆ. 

ಸುಮಾರು ಎಂಟು ಶತಮಾನಗಳ ನಂತರ ಐಸ್ಲ್ಯಾಂಡ್‌ನಲ್ಲಿ ಬೃಹತ್ ಜ್ವಾಲಾಮುಖಿ ಸ್ಫೋಟಿಸಿದೆ. ಈ ಘಟನೆಯಿಂದ ಸೃಷ್ಟಿಯಾದ ದೃಶ್ಯಾವಳಿಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿವೆ.  ಈ ವರ್ಷದಲ್ಲಿ ಏಳನೇ ಬಾರಿಗೆ ನೈಋತ್ಯ ಐಸ್ಲ್ಯಾಂಡ್‌ನ ರೇಕ್ಜಾನೆಸ್ ಪೆನಿನ್ಸುಲಾದಲ್ಲಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದೆ. ಬಿಬಿಸಿ ವರದಿಯ ಪ್ರಕಾರ ರೇಕ್ಜಾನೆಸ್ ಪೆನಿನ್ಸುಲಾದಲ್ಲಿ , 2021 ಕ್ಕೂ ಮೊದಲು 800 ವರ್ಷಗಳವರೆಗೂ ಜ್ವಾಲಾಮುಖಿ ಚಟುವಟಿಕೆ ನಡೆದಿರಲಿಲ್ಲ, 

Kayleigh ಎಂಬುವವರು ವಿಮಾನದ ಕಿಟಕಿಯಿಂದ ಈ ಅದ್ಭುತ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.   'ನನ್ನ ಜೀವನ ಉತ್ತುಂಗಕ್ಕೇರಿದೆ. ಯಾವುದೂ ಇದನ್ನು ಎಂದಿಗೂ ಮೀರುವುದಿಲ್ಲ. ಕಳೆದ ರಾತ್ರಿ ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ' ಎಂದು ಅವರು ಬರೆದಿದ್ದಾರೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ 6 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಈ ವೀಡಿಯೋ ನೋಡಿದ ಕೆಲವರು ಈ ಘಟನೆಗೆ ಸಾಕ್ಷಿಯಾಗಿದ್ದಕ್ಕೆ ಶುಭಾಶಯಗಳು ಎಂದು ಕಾಮೆಂಟ್ ಮಾಡಿದ್ದಾರೆ. ನಾನು ಇದನ್ನು ನೋಡುವುದಕ್ಕಾಗಿ ಕಳೆದ ವರ್ಷ ತೆರಳಿದೆ ಇದೊಂದು ತುಂಬಾ ಹಿತವೆನಿಸುವ ಅನುಭವ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ನಾನು ಇದನ್ನು ಮಿಸ್ ಮಾಡಿಕೊಂಡೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

ಇದನ್ನು ಓದಿ:ಅತಿದೊಡ್ಡ ಮುಸ್ಲಿಂ ರಾಷ್ಟ್ರಕ್ಕೆ ಗಣಪನ ಕಾವಲು! ಜ್ವಾಲಾಮುಖಿಯ ಬದಿ ಕುಳಿತ ಕೌತುಕದ ಸ್ಟೋರಿ ಡಾ.ಬ್ರೋ ಬಾಯಲ್ಲಿ...  
ಇದನ್ನು ಓದಿ: ಪ್ರತಿ ದಿನ 5 ಲಕ್ಷ ರೂ. ಮೌಲ್ಯದ ಚಿನ್ನದ ಮಳೆ ಸುರಿಸುತ್ತೆ ಈ ಪರ್ವತ!

Latest Videos
Follow Us:
Download App:
  • android
  • ios