ಐಟಿಬಿಟಿ ನಗರದಲ್ಲಿ ಆಟೋ ಚಾಲಕರು ಸಹ ಸಿಕ್ಕಾಪಟ್ಟೆ 'ಸ್ಮಾರ್ಟ್', ಕೈಯಲ್ಲೇ ಕ್ಯೂಆರ್ ಕೋಡ್!
ಬೆಂಗಳೂರಿನ ಇನ್ನೊಂದು ಹೆಸರೇ ಐಟಿಬಿಟಿ ನಗರ. ತಂತ್ರಜ್ಞಾನದಲ್ಲಿ ಎಲ್ಲರೂ ನಿಬ್ಬೆರಗಾಗುವ ಸಾಧನೆಯನ್ನೂ ಮಾಡಿದೆ. ಹೀಗಾಗಿ ಐಟಿಯ ದಿಗ್ಗಜ ಕಂಪೆನಿಗಳಿಗೆ ಸಿಲಿಕಾನ್ ಸಿಟಿ ಫೇವರಿಟ್ ಪ್ಲೇಸ್. ಟೆಕ್ನಾಲಜಿಯ ವಿಷಯಕ್ಕೆ ಬಂದಾಗ ನಗರದ ಆಟೋ ಚಾಲಕರು ಸಹ ಸಿಕ್ಕಾಪಟ್ಟೆ ಸ್ಮಾರ್ಟ್ ಅನ್ನೋದನ್ನು ಇಲ್ಲೊಂದು ಘಟನೆ ಸಾಬೀತುಪಡಿಸಿದೆ.
ಬೆಂಗಳೂರಿನಲ್ಲಿ ಜನಜಂಗುಳಿ, ಟ್ರಾಫಿಕ್, ಗದ್ದಲ-ಕಿರಿಕಿರಿ ಹೊಸತೇನಲ್ಲ. ಮನೆ, ಆಫೀಸ್, ಸ್ಕೂಲ್-ಕಾಲೇಜ್ ಅಂತ ಜನ್ರು ಈ ಒತ್ತಡದ ಮಧ್ಯೆ ಹೈರಾಣಾಗಿ ಹೋಗುತ್ತಾರೆ, ಹೀಗಾಗಿಯೇ ಜನರು ಟೆಕ್ನಾಲಜಿಯನ್ನು ಬಳಸಿಕೊಂಡು ತಮ್ಮ ಜೀವನವನ್ನು ಈಝಿ ಗೋಯಿಂಗ್ ಆಗಿಸಲು ಯತ್ನಿಸುತ್ತಿರುತ್ತಾರೆ. ಬೆಂಗಳೂರಿನ ಇನ್ನೊಂದು ಹೆಸರೇ ಐಟಿಬಿಟಿ ನಗರ. ತಂತ್ರಜ್ಞಾನದಲ್ಲಿ ಎಲ್ಲರೂ ನಿಬ್ಬೆರಗಾಗುವ ಸಾಧನೆಯನ್ನೂ ಮಾಡಿದೆ. ಹೀಗಾಗಿ ಐಟಿಯ ದಿಗ್ಗಜ ಕಂಪೆನಿಗಳಿಗೆ ಸಿಲಿಕಾನ್ ಸಿಟಿ ಫೇವರಿಟ್ ಪ್ಲೇಸ್. ಟೆಕ್ನಾಲಜಿಯ ವಿಷಯಕ್ಕೆ ಬಂದಾಗ ನಗರದ ಆಟೋ ಚಾಲಕರು ಸಹ ಸಿಕ್ಕಾಪಟ್ಟೆ ಸ್ಮಾರ್ಟ್ ಅನ್ನೋದನ್ನು ಇಲ್ಲೊಂದು ಘಟನೆ ಸಾಬೀತುಪಡಿಸಿದೆ.
ಬೆಂಗಳೂರಿನಲ್ಲಿ ಆಟೋರಿಕ್ಷಾ ಚಾಲಕನ (Auto driver) ಸರಳವಾದ ಆದರೆ ಸ್ಮಾರ್ಟ್ ಹ್ಯಾಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದ್ದು, ಆಟೋ ಡ್ರೈವರ್ ಸ್ಮಾರ್ಟ್ ವಾಚ್‌ನ ಸ್ಕ್ರೀನ್‌ಸೇವರ್‌ನಂತೆ ಕ್ಯೂಆರ್ ಕೋಡ್‌ನ್ನು ಸೇವ್ ಮಾಡಿರುವುದನ್ನು ನೋಡಬಹುದು.
ಬೆಂಗಳೂರಿನಾದ್ಯಂತ ಮೆಟ್ರೋ ಬಳಿ ಆ್ಯಪ್ ಆಧಾರಿತ ಆಟೋ ಸೌಲಭ್ಯ, ಚಾರ್ಜ್ ಎಷ್ಟಿರುತ್ತೆ?
ಬೆಂಗಳೂರು ಆಟೋ ಚಾಲಕರೊಬ್ಬರು 'ಸ್ಮಾರ್ಟ್' ಐಡಿಯಾ
ಬೆಂಗಳೂರಿನಲ್ಲಿ ಕ್ಯಾಬ್, ಆಟೋ ಬುಕ್ ಮಾಡಿದಾಗ ಕೆಲವೊಮ್ಮೆ ಪೇಮೆಂಟ್ ಮಾಡಲು ತೊಂದ್ರೆ ಅನುಭವಿಸುವಂತಾಗುತ್ತೆ. ಆನ್‌ಲೈನ್ ಪೇಮೆಂಟ್ ಮಾಡಲು ಡೆಸ್ಟಿನೇಶನ್ ತಲುಪ ವರೆಗೆ ವೈಟ್ ಮಾಡಿ ಅವರ ಕ್ಯೂ ಆರ್ ಕೋಡ್‌ನ್ನು ಪಡೆದುಕೊಂಡು ಪೇಮೆಂಟ್ ಮಾಡಬೇಕಾಗುತ್ತದೆ. ಕೆಲವೊಬ್ಬರು ಆಟೋದೊಳಗಡೆಯೇ ಕ್ಯೂ ಆರ್‌ಕೋಡ್‌ನ ಪ್ರಿಂಟ್ ತೆಗೆದುಕೊಂಡು ಇಟ್ಟಿರುತ್ತಾರೆ. ಕೆಲವೊಬ್ಬರು ಹೀಗೆ ಮಾಡದ ಕಾರಣ ಆನ್‌ಲೈನ್ ಪೇಮೆಂಟ್ ಮಾಡುವವರು ತೊಂದ್ರೆ (Problem) ಅನುಭವಿಸಬೇಕಾಗುತ್ತೆ. ಅದಕ್ಕೆ ಇದ್ಯಾವ ತೊಂದ್ರೆನೂ ಬೇಡಾಂತ ಬೆಂಗಳೂರಿನ ಆಟೋ ಚಾಲಕರೊಬ್ಬರು ಸ್ಮಾರ್ಟ್ ಐಡಿಯಾ ಮಾಡಿದ್ದಾರೆ.
@_waabi_saabi_ ಎಂಬವರು ಟ್ವಿಟರ್ ಎಕ್ಸ್‌ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದು,ಆಟೋ ಡ್ರೈವರ್ ಸ್ಮಾರ್ಟ್ ವಾಚ್‌ನ ಸ್ಕ್ರೀನ್‌ಸೇವರ್‌ನಂತೆ ಕ್ಯೂಆರ್ ಕೋಡ್‌ನ್ನು ಸೇವ್ ಮಾಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಈ ಕುರಿತಾದ ಮಾಹಿತಿಯನ್ನೂನ ಹಂಚಿಕೊಂಡಿದ್ದಾರೆ. 'ಇಂದು ನಾನು @nammayatriಯಲ್ಲಿ ನಮ್ಮ ಟೋನಿ ಸ್ಟಾರ್ಕ್ ಅವರನ್ನು ಭೇಟಿ ಮಾಡಿದ್ದೇನೆ. ನಾನು ಆಟೋ ಡ್ರೈವರ್‌ಗೆ QR ಕೋಡ್‌ಗಾಗಿ ಕೇಳಿದೆ. ವ್ಯಕ್ತಿ ತನ್ನ ಕೈಯನ್ನು ತಿರುಗಿಸಿ ತನ್ನ ಸ್ಮಾರ್ಟ್‌ವಾಚ್‌ನ್ನು ನನಗೆ ತೋರಿಸಿದನು. ಅವನು QR ಕೋಡ್‌ನ್ನು ತನ್ನ ಸ್ಮಾರ್ಟ್‌ವಾಚ್ ಸ್ಕ್ರೀನ್‌ಸೇವರ್ ಆಗಿ ಸೇವ್ ಮಾಡಿಕೊಂಡಿದ್ದು ನೋಡಿ ನನಗೆ ಅಚ್ಚರಿಯಾಯಿತು' ಎಂದು ಅವರು ಟ್ವೀಟ್ ಮಾಡಿದ್ದಾರೆ.
Bengaluru: ಒಂದೇ ಆಟೋ ಮೂರು ನೋಂದಣಿ ನಂಬರ್…! ವೈರಲ್ ಆಗಿದೆ ಪೋಸ್ಟ್
ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಟ್ವೀಟ್ ನಾನಾ ರೀತಿಯ ಕಾಮೆಂಟ್‌ಗಳನ್ನು ಗಳಿಸಿದೆ. ಒಬ್ಬ ಬಳಕೆದಾರರು, 'ಬೆಂಗಳೂರಿನಲ್ಲಿ ಆಟೋ ಚಾಲಕರು ಬೆಂಗಳೂರಿನ ಐಟಿಬಿಟಿ ಹುಡುಗರಿಗಿಂತ ಸ್ಮಾರ್ಟ್ ಆಗಿದ್ದಾರೆ' ಎಂದು ಒಬ್ಬರು ಕಾಮೆಂಟಿಸಿದ್ದಾರೆ. ಇನ್ನೊಬ್ಬರು, 'ಮುಂಬೈನಲ್ಲಿಯೂ ಕೆಲವು ದಿನಗಳ ಹಿಂದೆ ನನಗೆ ಇಂಥದ್ದೇ ಅನುಭವ (Experience)ವಾಗಿತ್ತು' ಎಂದು ಹೇಳಿಕೊಂಡಿದ್ದಾರೆ.
ಮತ್ತೊಬ್ಬ ಬಳಕೆದಾರರು, 'ಅಚ್ಚರಿಪಡುವ ಇಂಥಾ ಹಲವಾರು ಸಣ್ಣಪುಟ್ಟ ಘಟನೆಗಳು ಬೆಂಗಳೂರಿನಲ್ಲಿ ನಡೆಯುತ್ತಿರುತ್ತವೆ' ಎಂದು ಕಾಮೆಂಟ್ ಮಾಡಿದ್ದಾರೆ. 'ಅದಕ್ಕೇ ಈ ನಗರವನ್ನು ಸಿಲಿಕಾನ್ ಸಿಟಿ ಎಂದು ಕರೆಯುತ್ತಾರೆ' ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಇನ್ನು ಹಲವರು ವಾವ್, ಡಿಜಿಟಲ್ ಇಂಡಿಯಾ, ಇಂಪ್ರೆಸಿವ್, ಕೂಲ್ ಎಂದೆಲ್ಲಾ ಸಂತಸ ವ್ಯಕ್ತಪಡಿಸಿದ್ದಾರೆ.