Bengaluru: ಒಂದೇ ಆಟೋ ಮೂರು ನೋಂದಣಿ ನಂಬರ್…! ವೈರಲ್ ಆಗಿದೆ ಪೋಸ್ಟ್

RTO ಎಲ್ಲ ವಾಹನಗಳಿಗೂ ನೋಂದಣಿ ಸಂಖ್ಯೆ ನೀಡುತ್ತದೆ. ಒಂದು ವಾಹನಕ್ಕೆ ಒಂದು ನೋಂದಣಿ ಸಂಖ್ಯೆ. ಆದ್ರೆ ಇಲ್ಲೊಬ್ಬ ಆಟೋ ಚಾಲಕ ಮೂರು ನೋಂದಣಿ ಸಂಖ್ಯೆ ಹೊಂದಿದ್ದಾನೆ. ಟ್ವಿಟರ್ ನಲ್ಲಿ ಇದು ಚರ್ಚೆಗೆ ಕಾರಣವಾಗಿದೆ.
 

Bengaluru One Autorickshaw Three Registration Numbers Twitter Debates

ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಅಪ್ಲಿಕೇಷನ್ ಮೂಲಕ ನಡೆಯುವ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. ಅನೇಕರು ರಾಪಿಡೋ, ಓಲಾ, ಉಬರ್  ನಂತಹ ಅಪ್ಲಿಕೇಷನ್ ಬೇಸ್ಡ್ ವಾಹನಗಳ ಸೇವೆ ಪಡೆಯುತ್ತಿದ್ದಾರೆ. ಆಟೋ, ಬೈಕ್, ಕಾರ್ ಸೌಲಭ್ಯವನ್ನು ಈ ಕಂಪನಿಗಳು ನೀಡ್ತೇವೆ. ಈ ಅಪ್ಲಿಕೇಷನ್ ಗಳಲ್ಲಿ ಕೆಲವೊಮ್ಮೆ ವಾಹನದ ಸಂಖ್ಯೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆನ್ಲೈನ್ ನಲ್ಲಿ ತೋರಿಸುವ ಆಟೋ ಸಂಖ್ಯೆ ಒಂದಾದ್ರೆ ಪಿಕಪ್ ಮಾಡಲು ಬರುವ ವಾಹನದ ಸಂಖ್ಯೆ ಬೇರೆಯಾಗಿರುತ್ತದೆ. ಚಾಲಕ ಹತ್ತಿರ ಬಂದು, ಬುಕ್ ಮಾಡಿದ್ದು ಇದೇ ವಾಹನ, ನೋಂದಣಿ ಸಂಖ್ಯೆ ಚೇಂಜ್ ಇದೆ ಎಂದಾಗ ಪ್ರಯಾಣಿಕರು ಅನುಮಾನಿಸುತ್ತಲೇ ವಾಹನ ಏರ್ತಾರೆ. 

ಅಪ್ಲಿಕೇಷನ್ (Application) ಆಧಾರಿತ ವಾಹನಕ್ಕೆ ಬೇಡಿಕೆ ಬಂದ ಕಾರಣ ಸಾಮಾನ್ಯ ಆಟೋ (Auto) ಚಾಲಕರು ಈ ಕಂಪನಿಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಒಂದೇ ಆಟೋ ಚಾಲಕ, ರಾಪಿಡೋ, ಓಲಾ, ಉಬರ್ ಎಲ್ಲ ಕಂಪನಿಯಲ್ಲಿ ಕೆಲಸ ಮಾಡ್ತಾರೆ. ಪ್ರತಿ ಕಂಪನಿಯೂ ವಾಹನಕ್ಕೆ ತನ್ನದೇ ನೋಂದಣಿ (Registration) ಸಂಖ್ಯೆ ನೀಡುತ್ತಾ ಎಂಬ ಅನುಮಾನವೊಂದು ಈಗ ಮೂಡಿದೆ. ಇದಕ್ಕೆ ಕಾರಣ ಆಟೋ ಒಂದರ ಫೋಟೋ. 
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬೆಂಗಳೂರು ಆಟೋದ ಫೋಟೋ ಒಂದು ವೈರಲ್ ಆಗಿದೆ. ಈ ಆಟೋದ ಹಿಂದೆ ಮೂರು ನೋಂದಣಿ ಸಂಖ್ಯೆ ಇರೋದು ಟ್ವಿಟರ್ ಬಳಕೆದಾರರ ಗಮನ ಸೆಳೆದಿದೆ. ಈಗ ಈ ಆಟೋ ಫೋಟೋ ವೈರಲ್ ಆಗಿದ್ದು, ಕೆಲ ಪ್ರಶ್ನೆ ಹಾಗೂ ಚರ್ಚೆ ಹುಟ್ಟುಹಾಕಿದೆ. 

Health Tips: ಮಹಿಳೆಯರ ಮೆದುಳು ಪುರುಷರ ಮೆದುಳಿಗಿಂತ ಚಿಕ್ಕದಾಗಿದೆ ಗೊತ್ತಾ?

ಟ್ವಿಟರ್ ಪೋಸ್ಟ್ ನಲ್ಲಿ ಏನಿದೆ? : ಸುಪ್ರಿತ್ ಎಂಬ ಬಳಕೆದಾರರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಆಟೋದ ಫೋಟೋ ಹಂಚಿಕೊಂಡಿದ್ದಾರೆ. ಈ ಆಟೋದಲ್ಲಿ ಮೂರು ನೋಂದಣಿ ಸಂಖ್ಯೆಯಿದೆ. ಓಲಾ ನೋಂದಣಿ ಸಂಖ್ಯೆ ಎಂದು ಒಂದು ಸಂಖ್ಯೆಯನ್ನು ಹಾಕಲಾಗಿದೆ. ಅದ್ರ ಕೆಳಗೆ ರಾಪಿಡೋ ನೋಂದಣಿ ಸಂಖ್ಯೆ ಎಂದು ಇನ್ನೊಂದು ಸಂಖ್ಯೆ ಹಾಕಲಾಗಿದೆ. ಮತ್ತೊಂದು ಹಳದಿ ನೋಂದಣಿ ಸಂಖ್ಯೆ ಆಟೋಕ್ಕಿದೆ. ಕೆಎ 01 ಎಇ 973 ನಂಬರ್ ನ ಆಟೋ ಈಗ ವೈರಲ್ ಆಗಿದೆ.

ಇಸಿಟಿಯಲ್ಲಿ ಮತ್ತೊಂದು #ಪೀಕ್ ಬೆಂಗಳೂರು ಕ್ಷಣ. ಎಷ್ಟು ನೋಂದಣಿ, ಎಷ್ಟೊಂದು ನೋಂದಣಿ ಎಂದು ಶೀರ್ಷಿಕೆ ಹಾಕಿರುವ ಸುಪ್ರಿತ್, ಫೋಟೋವನ್ನು ಹಂಚಿಕೊಂಡಿದ್ದಾರೆ. ಟ್ವಿಟರ್ ನಲ್ಲಿ ವೈರಲ್ ಆಗಿರುವ ಇದಕ್ಕೆ ಸಾಕಷ್ಟು ಕಮೆಂಟ್ ಬಂದಿದೆ.  ಟ್ವಿಟರ್ ನ ಅನೇಕ ಬಳಕೆದಾರರು, ಈ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮತ್ತೆ ಕೆಲವರು ಕಾನೂನು ವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಓಲಾದಲ್ಲಿ ವಾಹನ ಬುಕ್ ಮಾಡಿದಾಗ ಬೇರೆ ಬೇರೆ ವಾಹನಗಳು ಬೇರೆ ಬೇರೆ ನೋಂದಣಿ ಸಂಖ್ಯೆಯೊಂದಿಗೆ ಬರುತ್ತದೆ. ಇದು ನನ್ನನ್ನು ಆಶ್ಚರ್ಯಗೊಳಿಸಿದೆ. ನನ್ನ ಸುರಕ್ಷತೆ  ಬಗ್ಗೆ ನಾನು ಭಯಪಡ್ತೇನೆ. ಅಪಘಾತದ ಸಂದರ್ಭದಲ್ಲಿ ಪೊಲೀಸರು ಮತ್ತು @ ವೋಲಾ ಸಪೋರ್ಟ್ ಇದನ್ನು ಹೇಗೆ ಟ್ರ್ಯಾಕ್ ಮಾಡ್ತಾರೆ ಎಂದು ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವೋಲಾ ಸಪೋರ್ಟ್ ಪ್ರತಿಕ್ರಿಯೆ ನೀಡಿದೆ. ಈ ಬಗ್ಗೆ ನಾವು ಪರಿಶೀಲನೆ ನಡೆಸ್ತೇವೆ. ಇಂಥ ಸಂದರ್ಭದಲ್ಲಿ ನಮಗೆ ಮೇಲ್ ಮಾಡಿ ಎಂದು ವೋಲಾ ಹೇಳಿದೆ. 

ಸೆಕ್ಸ್‌ ಅನ್ನೋದು ದೇವರು ಮಾನವನಿಗೆ ನೀಡಿದ ಅದ್ಭುತ ಸಂಗತಿ, ಪೋಪ್‌ ಫ್ರಾನ್ಸಿಸ್‌ ಮಾತು!

ಇನ್ನೊಬ್ಬ ಬಳಕೆದಾರರು, ಇದು ಕಾನೂನುಬದ್ಧವೇ ಎಂದು ಪ್ರಶ್ನೆ ಮಾಡಿದ್ದಾರೆ. ವೋಲಾ, ಉಬರ್, ರಾಪಿಡೋ ಆರ್‌ಟಿಒ ನೋಂದಣಿ ಸಂಖ್ಯೆಯನ್ನು ಬಳಸುತ್ತದೆಯೇ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಯಾರೂ ಆಟೋ ಹಿಂಭಾಗವನ್ನು ನೋಡಿಲ್ಲ. ಅದು ಎಷ್ಟು ಕ್ಲೀನ್ ಆಗಿದೆ ನೋಡಿ. ಯಾವುದೇ ಸ್ಟಿಕ್ಕರ್, ಯಾವುದೇ ಸಂದೇಶ, ತಂದೆ – ತಾಯಿ ಆಶೀರ್ವಾದ ಯಾವುದೂ ಇಲ್ಲ. 
 

Latest Videos
Follow Us:
Download App:
  • android
  • ios