ಬೆಂಗಳೂರಿನಾದ್ಯಂತ ಮೆಟ್ರೋ ಬಳಿ ಆ್ಯಪ್‌ ಆಧಾರಿತ ಆಟೋ ಸೌಲಭ್ಯ, ಚಾರ್ಜ್ ಎಷ್ಟಿರುತ್ತೆ?

ನಮ್ಮ ಮೆಟ್ರೋ ನಿಲ್ದಾಣಗಳ ಬಳಿ ಶೀಘ್ರವೇ ಮೀಟರ್‌ ಚಾಲಿತ ‘ಮೆಟ್ರೋಮಿತ್ರಾ’ ಆ್ಯಪ್‌ ಆಧಾರಿತ ಆಟೋರಿಕ್ಷಾ ಸೌಲಭ್ಯ ಆರಂಭವಾಗುತ್ತಿದೆ. ಇದರ ಉಪಯೋಗಗಳೇನು ಎಂಬುದನ್ನು ಮುಂದೆ ಓದಿ

Auto drivers to start Metro Mitra service from the metro stations across Bengaluru  gow

ಬೆಂಗಳೂರು (ಜು.14): ನಗರದ ನಮ್ಮ ಮೆಟ್ರೋ (Namma Metro) ನಿಲ್ದಾಣಗಳ ಬಳಿ ಶೀಘ್ರವೇ ಮೀಟರ್‌ ಚಾಲಿತ ‘ಮೆಟ್ರೋಮಿತ್ರಾ’ ಆ್ಯಪ್‌ ಆಧಾರಿತ ಆಟೋರಿಕ್ಷಾ ಸೌಲಭ್ಯ ಆರಂಭಿಸಲಾಗುವುದು ಎಂದು ಆಟೋರಿಕ್ಷಾ ಚಾಲಕರ ಒಕ್ಕೂಟದ (Auto Rickshaw Drivers Union -ARDU)) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ  ಮಾಹಿತಿ ನೀಡಿದ್ದಾರೆ

ಗುರುವಾರ ಬಿ.ಪ್ಯಾಕ್‌ ಮತ್ತು ಡಬ್ಲ್ಯೂಆರ್‌ಐ ಇಂಡಿಯಾ ಸಂಸ್ಥೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.15 ರಂದು ಮೆಟ್ರೋಮಿತ್ರಾ (Metro Mitra) ಎಂಬ ಆ್ಯಪ್‌ ಆಧಾರಿತ ಸೇವೆಯನ್ನು ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು. ಆಟೋ ಚಾಲಕರನ್ನು ಮತ್ತಷ್ಟು ವೃತ್ತಿಪರರಾಗಿ ರೂಪಿಸಲು ಸಂಸ್ಥೆಯಿಂದ ತರಬೇತಿ ನೀಡಲಾಗುತ್ತಿದೆ. ಇದರಡಿ ತಂತ್ರಜ್ಞಾನ ಆಧಾರಿತ ಸೇವೆ ಮತ್ತು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವೆಚ್ಚ ಸರಿದೂಗಿಸಲು ಮೀಟರ್‌ ಶುಲ್ಕದ ಜತೆಗೆ .10 ಹೆಚ್ಚುವರಿಯಾಗಿ ಪಡೆದುಕೊಳ್ಳತ್ತೇವೆ ಎಂದರು.

ಆಸ್ತಿ ತೆರಿಗೆ ಪಾವತಿಸದವರ ಹೆಸರು ಕ್ಯೂಆರ್‌ ಕೋಡ್‌ನಲ್ಲೆ ಬಹಿರಂಗ!

ಬಿ.ಪ್ಯಾಕ್‌ ಮುಖ್ಯಸ್ಥೆ ರೇವತಿ ಅಶೋಕ್‌ ಮಾತನಾಡಿ, ನಗರದ ಸಂಚಾರ ದಟ್ಟಣೆಗೆ ಕಡಿವಾಣಕ್ಕಾಗಿ ಮುಂದಿನ ದಿನಗಳಲ್ಲಿ ವೈಟ್‌ಫೀಲ್ಡ್‌ ಮತ್ತು ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಮೆಟ್ರೋ ಮಾರ್ಗ ಕಾರ್ಯಾರಂಭ ಆಗಲಿದೆ. ಈ ಪ್ರದೇಶದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ‘ಪರ್ಸನಲ್‌ ಟು ಪಬ್ಲಿಕ್‌ ಅಭಿಯಾನ’ಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಸಮೀಕ್ಷೆಯಲ್ಲಿ ಮೆಟ್ರೋ ಪ್ರಯಾಣಿಕರ ಕುಂದುಕೊರತೆ, ಆಗಬೇಕಾದ ಕಾರ್ಯಗಳ ಕುರಿತು ತಿಳಿದುಕೊಳ್ಳಲಾಗುವುದು. ಇದರಲ್ಲಿ ಸಾರ್ವಜನಿಕ ಸಂಸ್ಥೆಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳು ಭಾಗವಹಿಸುತ್ತಿವೆ ಎಂದು ತಿಳಿಸಿದರು.

ಡಬ್ಲ್ಯೂಆರ್‌ಐನ ಶ್ರೀನಿವಾಸ್‌ ಅಲವಲ್ಲಿ, ಮನೆಯಿಂದ ಮೆಟ್ರೊ ನಿಲ್ದಾಣಕ್ಕೆ ಹೋಗುವುದಕ್ಕೆ ಸಾರಿಗೆ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಸಾರ್ವಜನಿಕರ ಸಾರಿಗೆ ಬಳಸುತ್ತಿಲ್ಲ. ಈ ಕುಂದುಕೊರತೆಗಳನ್ನು ಸರಿಪಡಿಸಲು ಈ ಅಭಿಯಾನ ಹಮ್ಮಿಕೊಂಡಿದ್ದೇವೆ. #Personal2Public (P2P) ಈ ಲಿಂಕ್‌ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದರು.

ಮೆಟ್ರೋ ಮಿತ್ರದ ಅನುಕೂಲ:
ಮೊದಲ ಮತ್ತು ಕೊನೆಯ ಮೈಲಿ: ಆಟೋ-ರಿಕ್ಷಾ ಮೆಟ್ರೋ ನಿಲ್ದಾಣಗಳ ಆರಂಭದಿಂದ ಕೊನೆವರೆಗೂ ಸೇವೆ ಲಭ್ಯ.
ತಂತ್ರಜ್ಞಾನ ಮತ್ತು ಪಿಕ್-ಅಪ್ ವೆಚ್ಚಗಳಿಗಾಗಿ ರೂ 10 ನೊಂದಿಗೆ ಮೀಟರ್ ಆಧಾರಿತ ದರಗಳು 
ತರಬೇತಿ ಪಡೆದ, ಸಂವೇದನಾಶೀಲತೆ ಮತ್ತು ವೃತ್ತಪರ ಚಾಲಕರು
ಚಾಲಕರಿಗೆ QR ಕೋಡ್ ಆಧಾರಿತ ನೇರ ಪ್ರತಿಕ್ರಿಯೆ

ಮೆಟ್ರೋ ಮಿತ್ರಾ ಆ್ಯಪ್ ಹೇಗೆ ಕಾರ್ಯ ನಿರ್ವಹಿಸುತ್ತೆ ಮತ್ತು ಚಾರ್ಜ್ ಎಷ್ಟಿರುತ್ತೆ?
1.ಆ್ಯಪ್‌ ಆಧಾರಿತ ಸೇವೆಗೆ ಜು.15ರಿಂದ ಪ್ರಾಯೋಗಿಕವಾಗಿ ಚಾಲನೆ
2. ಓಪನ್-ಮೊಬಿಲಿಟಿ ನೆಟ್‌ವರ್ಕ್” ನಲ್ಲಿ ವಿನ್ಯಾಸಗೊಳಿಸಲಾದ ಮೆಟ್ರೋ ಮಿತ್ರ
3.ಕೇವಲ ಡಿಜಿಟಲ್ ವಾಣಿಜ್ಯಕ್ಕಾಗಿ ಓಪನ್ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸಲಿರುವ ಆ್ಯಪ್
4.ಈ ಮೆಟ್ರೋ ಮಿತ್ರಕ್ಕೆ ಈಗಾಗಲೇ ಮೀಟರ್ ದರ ನಿಗದಿಪಡಿಸಲಾಗಿದೆ
5.ಮೊದಲ ಎರಡು ಕಿಲೋಮೀಟರ್‌ಗಳಿಗೆ 30 ರೂ. 
5.ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂ. 
6.ಜೊತೆಗೆ 10 ರೂ. ಇತರೆ ಚಾರ್ಜಸ್​ಗೆ ಎಂದು ದರ ನಿಗದಿಪಡಿಸಲಾಗಿದೆ
7.ಮಿನಿಮಮ್ ಚಾರ್ಜ್ 40 ರೂಪಾಯಿ ತೆಗೆದುಕೊಳ್ಳಲು ಚಿಂತನೆ

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಆಹಾರದಲ್ಲಿ ಉಗುರು ಪತ್ತೆ, IRCTCಯಿಂದ ಅಡುಗೆ

ಆಟೋ ಚಾಲಕರಿಗೆ 10,000 ಪರಿಹಾರ ನೀಡದಿದ್ದರೆ ಧರಣಿ
ಬೆಂಗಳೂರು: ಬೈಕ್‌ ಟ್ಯಾಕ್ಸಿ, ಸರ್ಕಾರದ ‘ಶಕ್ತಿ’ ಯೋಜನೆಯಿಂದಾಗಿ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ಸರ್ಕಾರ ಪ್ರತಿ ತಿಂಗಳು 10 ಸಾವಿರ ರು. ಪರಿಹಾರ ನೀಡಬೇಕು. ಇಲ್ಲದಿದ್ದರೆ ಜು.28ಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್‌ ಯೂನಿಯನ್‌ ಅಧ್ಯಕ್ಷ ಎಂ.ಮಂಜುನಾಥ್‌, ಬೈಕ್‌ ಟ್ಯಾಕ್ಸಿಗಳಿಂದ ಆಟೋ ಚಾಲಕರು ನಷ್ಟಅನುಭವಿಸುತ್ತಿದ್ದರು. ಇದರ ನಡುವೆ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಕರ್ಯ ಕಲ್ಪಿಸಿರುವುದರಿಂದ ಆಟೋ ಚಾಲಕರು ನಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

ಸರ್ಕಾರ ಭರವಸೆ ನೀಡಿದ್ದಂತೆ ರಾರ‍ಯಪಿಡ್‌ ಬೈಕ್‌ ಟ್ಯಾಕ್ಸಿ ನಿಷೇಧಿಸಬೇಕು, ಅಸಂಘಟಿತ ವಾಣಿಜ್ಯ ಚಾಲಕರಿಗಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳಿಗೆ ರಹದಾರಿ ನೀಡಬೇಕು. ಇಲ್ಲದಿದ್ದರೆ ಜು.28ರಂದು ರಾಜ್ಯಾದ್ಯಂತ ಆಟೋಗಳನ್ನು ಚಲಾಯಿಸದೆ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios