ಅಮೆರಿಕದ ಉತ್ತರ ಕೆರೋಲಿನಾದ 70 ವರ್ಷದ ಉಬರ್ ಚಾಲಕ ಒಂದು ವರ್ಷದಲ್ಲಿ ತನ್ನ ಪ್ರಯಾಣದ ಶೇಕಡಾ 30ಕ್ಕಿಂತ ಹೆಚ್ಚಿನದನ್ನು ಕ್ಯಾನ್ಸಲ್‌ ಮಾಡುವ ಮೂಲಕವೇ 28,000 ಡಾಲರ್‌ ಅಂದರೆ 23.3 ಲಕ್ಷ ರೂ. ಆದಾಯ ಗಳಿಸಿದ್ದಾರೆ.

ನವದೆಹಲಿ (ನವೆಂಬರ್ 6, 2023): ನೀವು ಹೊರಗೆ ಹೋಗಲು ಆಟೋ ಅಥವಾ ಕ್ಯಾಬನ್ನು ಆ್ಯಪ್‌ನಲ್ಲಿ ಬುಕ್‌ ಮಾಡಿರುತ್ತೀರಾ. ಆ ಕ್ಯಾಬ್‌ ಡ್ರೈವರ್‌ ನಿಮ್ಮ ಸ್ಥಳದ ಬಳಿ ಬಂದ ಬಳಿಕ ನೀವು ರೈಡ್‌ ಕ್ಯಾನ್ಸಲ್‌ ಮಾಡಿದ್ರೆ ಫೈನ್‌ ಕಟ್ಬೇಕಾಗುತ್ತೆ. ಒಮ್ಮೊಮ್ಮೆ ಡ್ರೈವರ್‌ ತಪ್ಪಿಗೂ ನೀವು ದಂಡ ಕಟ್ಟಬೇಕು. ಇಂತಹ ಕಾರಣಗಳಿಂದಲೂ ಕ್ಯಾಬ್‌ ಡ್ರೈವರ್‌ಗಳು ಹಣ ಗಳಿಸುತ್ತಾರೆ. 

ಇದೇ ರೀತಿ ಅಮೆರಿಕದ ಉತ್ತರ ಕೆರೋಲಿನಾದ 70 ವರ್ಷದ ಉಬರ್ ಚಾಲಕ ಒಂದು ವರ್ಷದಲ್ಲಿ ತನ್ನ ಪ್ರಯಾಣದ ಶೇಕಡಾ 30ಕ್ಕಿಂತ ಹೆಚ್ಚಿನದನ್ನು ಕ್ಯಾನ್ಸಲ್‌ ಮಾಡುವ ಮೂಲಕವೇ 28,000 ಡಾಲರ್‌ ಅಂದರೆ 23.3 ಲಕ್ಷ ರೂ. ಆದಾಯ ಗಳಿಸಿದ್ದಾರೆ. "ಬಿಲ್" ಎಂಬ ಸರ್‌ನೇಮ್‌ ಹೊಂದಿರುವ ಚಾಲಕ, ತಾನು ಶೇಕಡಾ 10 ಕ್ಕಿಂತ ಕಡಿಮೆ ರಿಕ್ವೆಸ್ಟ್‌ಗಳನ್ನು ಸ್ವೀಕರಿಸಿದ್ದೇನೆ ಮತ್ತು 2022 ರಲ್ಲಿ ಸರಿಸುಮಾರು 1,500 ಟ್ರಿಪ್‌ಗಳನ್ನು ಕೈಗೊಂಡಿದ್ದೇನೆ ಎಂದು ಚಾಲಕ ಹೇಳಿರುವ ಬಗ್ಗೆ ಇನ್‌ಸೈಡರ್‌ನಲ್ಲಿನ ವರದಿ ತಿಳಿಸಿದೆ.

ಇದನ್ನು ಓದಿ: ರಾಷ್ಟ್ರ ರಾಜಧಾನಿಗೆ ಮತ್ತೆ ಕಾಲಿಟ್ಟ ಸಮ - ಬೆಸ ವಾಹನ ಸಂಚಾರ ವ್ಯವಸ್ಥೆ: ಶಾಲೆಗಳಿಗೂ ರಜೆ ಘೋಷಿಸಿದ ಕೇಜ್ರಿವಾಲ್‌ ಸರ್ಕಾರ!

ಈ ವ್ಯಕ್ತಿ 6 ವರ್ಷಗಳ ಹಿಂದೆ ಉದ್ಯೋಗದಿಂದ ನಿವೃತ್ತರಾಗಿದ್ದರು ಮತ್ತು ಹೆಚ್ಚುವರಿ ಆದಾಯವ ಗಳಿಸಲು ಉಬರ್‌ ಪ್ಲಾಟ್‌ಫಾರ್ಮ್‌ನಲ್ಲಿ ಅರೆಕಾಲಿಕ ಕೆಲಸ ಮಾಡಲು ಪ್ರಾರಂಭಿಸಿದರು. ಆದರೂ, ಅವರು ಯಾವುದೇ ರೈಡ್‌ ಅನ್ನು ಸ್ವೀಕರಿಸುವುದಿಲ್ಲ ಮತ್ತು ಟ್ರಿಪ್‌ಗಳು ತನ್ನ ಸಮಯಕ್ಕೆ ಯೋಗ್ಯವಾಗಿವೆ ಎಂದು ಖಚಿತಪಡಿಸಿಕೊಳ್ಳುತ್ತೇನೆ ಎಂದೂ ಹೇಳಿದ್ದಾರೆ.

ಅಲ್ಲದೆ, ತನ್ನ ಪ್ರದೇಶದಲ್ಲಿ ಸರ್ಜ್‌ ಪ್ರೈಸಿಂಗ್ ಕಡಿಮೆಯಾಗಿದೆ ಮತ್ತು ಇದು ತನ್ನ ಡ್ರೈವಿಂಗ್ ಸಮಯವನ್ನು ಕಡಿಮೆ ಮಾಡುವಂತೆ ಮಾಡಿದೆ ಎಂದೂ ಹೇಳಿದ್ದಾರೆ. ವಾರಕ್ಕೆ 40 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ಅವರು ಈಗ ಸರ್ಜ್‌ ಪ್ರೈಸ್‌ ಕಡಿಮೆಯಾದ ಕಾರಣ ಈಗ 30 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದೂ ಹೇಳಿಕೊಂಡಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ: ಮಗಳನ್ನೇ ಅಪಹರಿಸಿದ ಒತ್ತೆಯಾಳು ತಂದೆ: 12 ಗಂಟೆಯಾದ್ರೂ ಏರ್‌ಪೋರ್ಟ್‌ ಬಂದ್‌; 60ಕ್ಕೂ ಹೆಚ್ಚು ವಿಮಾನ ಹಾರಾಟ ಸ್ಥಗಿತ!

ಜತೆಗೆ, ನಾನು ಕ್ಯಾಬ್‌ ರೈಡ್‌ ಮನವಿಗಳಿಗೆ ನೋ ಎಂದೇ ಬಹಳ ಸಮಯ ಕಳೆಯುತ್ತೇನೆ, ಸರ್ಜ್‌ ಪ್ರೈಸ್‌ ಬರದಿದ್ದರೆ ನಾನು ಕೆಲಸ ಮಾಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಕೆಲವು ಚಾಲಕರು ಆರೋಗ್ಯದ ಕಾರಣದಿಂದ ತಾತ್ಕಾಲಿಕವಾಗಿ ಚಾಲನೆಯನ್ನು ನಿಲ್ಲಿಸಿದಾಗ ತಾನು ಮತ್ತು ಇತರ ಚಾಲಕರು ಗಂಟೆಗೆ 50 ಡಾಲರ್‌ ಗಳಿಸಲು ಸಾಧ್ಯವಾಯಿತು ಎಂದೂ ಬಿಲ್ ಹೇಳಿದ್ದಾರೆ. ಆದರೆ, ಈಗ, ಚಾಲಕರ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ, ಗಂಟೆಗೆ 15ಡಾಲರ್‌ನಿಂದ 20 ಡಾಲರ್‌ ಮಾತ್ರ ದುಡಿಯೋದಾಗಿಯೂ ಹೇಳಿದ್ದಾರೆ.

ಆದರೂ, ಹೆಚ್ಚು ಹಣವನ್ನು ಗಳಿಸಲು ಹಲವಾರು ತಂತ್ರಗಳನ್ನು ಬಳಸೋದಾಗಿಯೂ ಬಿಲ್‌ ಹೇಳಿದ್ದಾರೆ. ಶುಕ್ರವಾರ ಮತ್ತು ಶನಿವಾರದಂದು ರಾತ್ರಿ 10:00 ರಿಂದ 2:30 ರವರೆಗೆ ರಶ್‌ ಸಮಯದಲ್ಲಿ ವಿಮಾನ ನಿಲ್ದಾಣಗಳು ಮತ್ತು ಬಾರ್‌ಗಳಂತಹ ಸ್ಥಳಗಳಲ್ಲಿ ಇದ್ದರೆ, ಸರ್ಜ್ ಪ್ರೈಸ್‌ ಆಗಲು ಸಹಾಯ ಮಾಡುತ್ತದೆ ಎಂದೂ ಹೇಳಿದ್ದಾರೆ. ಅಲ್ಲದೆ, ವಿಮಾನ ಇಳಿಯುವಾಗ ಮತ್ತು ಜನರು ಉಬರ್‌ಗೆ ವಿನಂತಿಸಿದಾಗ ಬೆಲೆ ತೀವ್ರವಾಗಿ ಜಿಗಿಯುತ್ತದೆ. 20 - ನಿಮಿಷದ ಪ್ರಯಾಣವು 10 ರಿಂದ 20 ಡಾಲರ್‌ನಿಂದ 40 ಮತ್ತು ಕೆಲವೊಮ್ಮೆ 50 ಡಾಲರ್‌ಗೆ ಹೋಗುತ್ತದೆ. ಚಾಲಕನಿಗೆ 50 ಪ್ರತಿಶತದಷ್ಟು ಕಡಿಮೆ ಇರುತ್ತದೆ. ಆದ್ದರಿಂದ 35 ನಿಮಿಷಗಳ ಸವಾರಿಯಲ್ಲಿ ನೀವು 30 ಡಾಲರ್‌ನಿಂದ 60 ಡಾಲರ್‌ ಪಡೆಯಬಹುದು ಎಂದೂ 70 ವರ್ಷದ ಉಬರ್‌ ಚಾಲಕ ಇನ್‌ಸೈಡರ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ. 

ಇದನ್ನೂ ಓದಿ: ಭಾರತೀಯ ಪ್ರವಾಸಿಗರಿಗೆ ಸಿಹಿ ಸುದ್ದಿ: ಈ ದೇಶಕ್ಕೆ ಹೋಗಲು ಇನ್ಮುಂದೆ ವೀಸಾನೇ ಬೇಕಿಲ್ಲ!