Asianet Suvarna News Asianet Suvarna News

ಮಗಳನ್ನೇ ಅಪಹರಿಸಿದ ಒತ್ತೆಯಾಳು ತಂದೆ: 12 ಗಂಟೆಯಾದ್ರೂ ಏರ್‌ಪೋರ್ಟ್‌ ಬಂದ್‌; 60ಕ್ಕೂ ಹೆಚ್ಚು ವಿಮಾನ ಹಾರಾಟ ಸ್ಥಗಿತ!

ಕಾರಿನೊಳಗೆ 35 ವರ್ಷದ ವ್ಯಕ್ತಿ ಮತ್ತು 4 ವರ್ಷದ ಬಾಲಕಿ ಸೇರಿ ಇಬ್ಬರು ವ್ಯಕ್ತಿಗಳು ಇದ್ದು, ವಾಹನವನ್ನು ವಿಮಾನದ ಕೆಳಗೆ ಪಾರ್ಕ್‌ ಮಾಡಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

germany airport standoff drags for over 12 hours hostage negotiations on ash
Author
First Published Nov 5, 2023, 5:37 PM IST

ಬರ್ಲಿನ್ (ನವೆಂಬರ್ 5, 2023): ಉತ್ತರ ಜರ್ಮನಿಯ ನಗರವಾದ ಹ್ಯಾಂಬರ್ಗ್‌ನಲ್ಲಿರುವ ವಿಮಾನ ನಿಲ್ದಾಣವನ್ನು ಪ್ರಯಾಣಿಕರಿಗೆ ಮುಚ್ಚಾಗಿದೆ. ಇದಕ್ಕೆ ಕಾರಣ ಭದ್ರತೆಯನ್ನು ಭೇದಿಸಿ ವಾಹನವೊಂದು ವಿಮಾನ ನಿಲ್ದಾಣದ ಆವರಣವನ್ನೇ ಪ್ರವೇಶಿಸಿದೆ. ಈ ಕಾರಣದಿಂದ ಶನಿವಾರ ರಾತ್ರಿಯಿಂದ ವಿಮಾನಗಳನ್ನು ಬಂದ್‌ ಮಾಡಲಾಗಿದ್ದು, 12 ಗಂಟೆಗಳಾದ್ರೂ ತೆರೆದಿಲ್ಲ ಎಂದು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ವರದಿ ಮಾಡಿದೆ.

ಕಾರ್ಯಾಚರಣೆಯ ಪರಿಸ್ಥಿತಿ ಮುಂದುವರೆದಿದೆ ಮತ್ತು ವಿಮಾನ ನಿಲ್ದಾಣದ ಸುತ್ತಲೂ ಸಂಚಾರ ಕ್ರಮಗಳು ಇನ್ನೂ ಬಂದ್‌ ಆಗಿದೆ. ಈ ಹಿನ್ನೆಲೆ ವಿಮಾನ ನಿಲ್ದಾಣವನ್ನು ಪ್ರವೇಶಿಸುವುದು ಈಗಲೂ ಸಾಧ್ಯವಿಲ್ಲ ಎಂದು ಹ್ಯಾಂಬರ್ಗ್ ಪೊಲೀಸ್‌ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ಗಾಜಾ ಮೇಲೆ ಪರಮಾಣು ಬಾಂಬ್ ಹಾಕೋದೂ ಒಂದು ಆಯ್ಕೆ ಎಂದ ಇಸ್ರೇಲ್‌ ಸಚಿವ: ಪ್ರಧಾನಿ ನೆತನ್ಯಾಹು ಹೇಳಿದ್ದೀಗೆ..

ಇಂದು ಮುಂಜಾನೆ 2 ಗಂಟೆಗೆ (IST) ಒಬ್ಬ ಬಂದೂಕುಧಾರಿ ತನ್ನ ಕಾರನ್ನು ಹ್ಯಾಂಬರ್ಗ್ ವಿಮಾನ ನಿಲ್ದಾಣದ ಭದ್ರತಾ ಗೇಟ್‌ಗಳ ಮೂಲಕ ನುಗ್ಗಿಸಿ ಗಾಳಿಯಲ್ಲಿ ಎರಡು ಗುಂಡು ಹಾರಿಸಿ ಎರಡು ಬೆಂಕಿ ಹಚ್ಚಿದ್ದ ಬಾಟಲಿಗಳನ್ನು ವಾಹನದಿಂದ ಹೊರಗೆ ಎಸೆದಿದ್ದಾರೆ ಎಂದೂ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಅಲ್ಲದೆ, ಕಾರಿನೊಳಗೆ 35 ವರ್ಷದ ವ್ಯಕ್ತಿ ಮತ್ತು 4 ವರ್ಷದ ಬಾಲಕಿ ಸೇರಿ ಇಬ್ಬರು ವ್ಯಕ್ತಿಗಳು ಇದ್ದು,  ವಾಹನವನ್ನು ವಿಮಾನವೊಂದರ ಕೆಳಗೆ ಪಾರ್ಕ್‌ ಮಾಡಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ತನ್ನ ವಾಹನದೊಂದಿಗೆ ಗೇಟ್ ಅನ್ನು ಮುರಿದು ಆಯುಧದಿಂದ ಗಾಳಿಯಲ್ಲಿ ಎರಡು ಬಾರಿ ಗುಂಡು ಹಾರಿಸಿದ್ದಾನೆ ಎಂದು ಫೆಡರಲ್ ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ, ಮಗುವಿನ ಅಪಹರಣದ ಸಾಧ್ಯತೆಯ ಬಗ್ಗೆ ವ್ಯಕ್ತಿಯ ಪತ್ನಿ ಈ ಹಿಂದೆ ತಮ್ಮನ್ನು ಸಂಪರ್ಕಿಸಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಮಗುವನ್ನು ತನ್ನ ಕಸ್ಟಡಿಗೆ ಪಡೆಯುವ ಪ್ರಯತ್ನವಾಗಿ ಬಾಲಕಿಯ ತಂದೆ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನ.19ಕ್ಕೆ ಏರಿಂಡಿಯಾದಲ್ಲಿ ಪ್ರಯಾಣ ಮಾಡದಿರಿ: ಖಾಲಿಸ್ತಾನ್ ಉಗ್ರನಿಂದ ಸಿಖ್ಖರಿಗೆ ಎಚ್ಚರಿಕೆ

ಬಾಲಕಿ ತನ್ನ ತಾಯಿಯೊಂದಿಗೆ ಸ್ಟೇಜ್‌ನಲ್ಲಿ ವಾಸಿಸುತ್ತಿದ್ದಳು. ನಿನ್ನೆ ಬಕ್ಸ್ಟೆಹುಡ್‌ನ 35 ವರ್ಷದ ವ್ಯಕ್ತಿ ಮಹಿಳೆಯ ಮಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾನೆ ಎಂದು ಜರ್ಮನಿ ಮೂಲದ ನ್ಯೂಸ್ ಪೋರ್ಟಲ್ NDR ವರದಿ ಮಾಡಿದೆ. 

ಟರ್ಕಿಶ್ ಏರ್‌ಲೈನ್ಸ್ ವಿಮಾನ ಮತ್ತು ಇತರ ವಿಮಾನಯಾನ ಸಂಸ್ಥೆಗಳ ವಿಮಾನವನ್ನು ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದರಿಂದ 60 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದು, 3,000 ಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆಗೀಡಾದರು ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ವಿಮಾನ ಮಿಸ್ ಆಯ್ತು ಅಂತ ರನ್‌ವೇಲಿ ಓಡಿದ ಮಹಿಳೆ: ವೀಡಿಯೋ ವೈರಲ್, ಮಹಿಳೆ ಅಂದರ್‌

Follow Us:
Download App:
  • android
  • ios