ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ರೈಲ್ವೆ ಇಲಾಖೆಯು 19 ಹೊಸ ರೈಲು ಸೇವೆಗಳನ್ನು ಆರಂಭಿಸಿದೆ. ಇದರಲ್ಲಿ ಮೈಸೂರು-ತಾಳಗುಪ್ಪ, ಬೆಂಗಳೂರು-ಕಲಬುರಗಿ ಸೇರಿದಂತೆ ಹಲವು ಎಕ್ಸ್‌ಪ್ರೆಸ್, ಮೆಮು ಮತ್ತು ಡೆಮು ರೈಲುಗಳು ಸೇರಿದ್ದು, ಅವುಗಳ ಸಂಚಾರ ಮಾರ್ಗ ಮತ್ತು ವೇಳಾಪಟ್ಟಿಯ ವಿವರಗಳನ್ನು ನೀಡಲಾಗಿದೆ.

ಬಸ್ಸಿನ ದರ ಏರಿಕೆಯಿಂದಾಗಿ, ಸುರಕ್ಷಿತ ಪ್ರಯಾಣಕ್ಕೆ ಸೇರಿದಂತೆ ಹಲವಾರು ಕಾರಣಗಳಿಂದ ಇಂದು ರೈಲಿನ ಮೊರೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೇ ಕಾರಣಕ್ಕೆ ತಿಂಗಳುಗಟ್ಟಲೆ ಮೊದಲೇ ಬುಕ್​ ಮಾಡಿದರೂ ಸೀಟು ಸಿಗದ ಸ್ಥಿತಿ ಇದೆ. ಇಷ್ಟು ದಿನ ಹಬ್ಬ, ಸಾಲು ಸಾಲು ರಜೆ ಸಂದರ್ಭಗಳಲ್ಲಿ ಮಾತ್ರ ಕೆಲವು ರೂಟ್​ಗಳಿಗೆ ವಿಶೇಷ ರೈಲು ಸಂಚಾರ ಮಾಡಲಾಗುತ್ತಿತ್ತು. ಆದರೆ ಇದೀಗ ಪ್ರಯಾಣಿಕರಿಗೆ ಗುಡ್​ನ್ಯೂಸ್​ ಕೊಟ್ಟಿದೆ ರೈಲ್ವೆ ಇಲಾಖೆ. ಮೈಸೂರು ತಾಳಗುಪ್ಪ ಎಕ್ಸ್​ಪ್ರೆಸ್​ ಸೇರಿ 19 ರೈಲುಗಳ ಸಂಚಾರ ಆರಂಭಿಸಲಿದೆ. ಸದ್ಯ 6 ಎಕ್ಸ್‌ಪ್ರೆಸ್, 9 ಮೆಮು - ಡೆಮು, 4 ಪ್ಯಾಸೆಂಜರ್‌ ಸೇರಿ 19 ರೈಲುಗಳನ್ನು ರೈಲ್ವೇ ಮಂಡಳಿ ಓಡಿಸಲಿದ್ದು, ಯಾವ ರೈಲುಗಳು ಯಾವಾಗ ಲಭ್ಯ ಎನ್ನುವ ಡಿಟೇಲ್ಸ್​ ಇಲ್ಲಿ ಕೊಡಲಾಗಿದೆ.

ರೈಲುಗಳ ವಿವರ ಇಂತಿದೆ

* ಯಶವಂತಪುರ - ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು: ಇದು ಪ್ರತಿ ಶುಕ್ರವಾರ ರಾತ್ರಿ 10.45ಕ್ಕೆ ಹೆಚ್ಚುವರಿಯಾಗಿ ಸಂಚರಿಸಲಿದೆ. ಪ್ರತಿ ಶುಕ್ರವಾರ ರಾತ್ರಿ ಯಶವಂತಪುರದಿಂದ ಹೊರಡಲಿದ್ದು, ತಿಪಟೂರು, ಅರಸೀಕೆರೆ, ಬೀರೂರು, ತರಿಕೆರೆ, ಭದ್ರಾವತಿ, ಶಿವಮೊಗ್ಗ, ಆನಂದಪುರ, ಸಾಗರದಲ್ಲಿ ಪ್ರಮುಖ ಸ್ಟಾಪ್‌ ಇರಲಿದೆ. ಶನಿವಾರ ಬೆಳಿಗ್ಗೆ 5.30ಕ್ಕೆ ತಾಳಗುಪ್ಪ ಸೇರಲಿದೆ. ತಾಳಗುಪ್ಪದಿಂದ ಪ್ರತಿ ಶನಿವಾರ 10 ಗಂಟೆಗೆ ಹೊರಟು ಸಂಜೆ 5.15ಕ್ಕೆ ಬೆಂಗಳೂರು ತಲುಪಲಿದೆ.

* ಮೈಸೂರು - ಅಜ್ಮೀರ್ ಎಕ್ಸ್‌ಪ್ರೆಸ್ ರೈಲು: ರಾಜಸ್ಥಾನದ ಅಜ್ಮೀರ್‌ಗೆ ಹೋಗುವ ಈ ರೈಲು ಇನ್ಮುಂದೆ ವಾರಕ್ಕೊಮ್ಮೆ ಕಾಯಂ ಆಗಿ ಸಂಚರಿಸಲಿದೆ. ಇದು ಶನಿವಾರ ಮೈಸೂರಿನಿಂದ ಹೊರಟರೆ, ಸೋಮವಾರ ಅಜ್ಮೀರ್‌ನಿಂದ ವಾಪಸ್ ಬರಲಿದೆ. ಇದು ಹಾಸನ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಪುಣೆ ಹಾಗೂ ಸೂರತ್ ಮಾರ್ಗವಾಗಿ ಸಂಚರಿಸಲಿದೆ.

* ಬೆಂಗಳೂರು - ಕಲಬುರಗಿ ಎಕ್ಸ್‌ಪ್ರೆಸ್ ರೈಲು: ಈ ರೈಲು ವಾರಕ್ಕೊಮ್ಮೆ ಓಡಾಡಲಿದ್ದು, ಶನಿವಾರ ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೇ ನಿಲ್ದಾಣದಿಂದ ಹೊರಟರೆ, ಭಾನುವಾರ ಕಲಬುರಗಿಯಿಂದ ಮರಳಲಿದೆ. ಇದು ಧರ್ಮಾವರಂ, ಗುಂತಕಲ್, ರಾಯಚೂರು ಮೂಲಕ ಸಾಗಲಿದೆ.

ಹುಬ್ಬಳ್ಳಿ - ಯೋಗನಗರಿ ರಿಷಿಕೇಶ ಎಕ್ಸ್‌ಪ್ರೆಸ್ ರೈಲು: ಈ ರೈಲು ವಾರಕ್ಕೊಮ್ಮೆ ಅಂದ್ರೇ ಸೋಮವಾರ ಹುಬ್ಬಳ್ಳಿಯಿಂದ ಹೊರಡಲಿದ್ದು, ಮೀರಜ್, ಪುಣೆ, ಬಿನಾ, ಗ್ವಾಲಿಯರ್ ಮೂಲಕ ರಿಷಿಕೇಶವನ್ನು ತಲುಪಲಿದೆ.

* ಎಸ್‌ಎಂವಿಟಿ ಬೆಂಗಳೂರು ಹಾಗೂ ಬೀದರ್‌ ಎಕ್ಸ್‌ಪ್ರೆಸ್‌ ರೈಲು: ಈ ರೈಲು ವಾರಕ್ಕೆ ಎರಡು ದಿನ ಸಂಚರಿಸಲಿದ್ದು, ಶುಕ್ರವಾರ ಮತ್ತು ಭಾನುವಾರ ಬೆಂಗಳೂರಿನಿಂದ ಹೊರಡಲಿದೆ. ಇದು ಧರ್ಮಾವರಂ ಮತ್ತು ಕಲಬುರಗಿ ಮೂಲಕ ಬೀದರ್ ತಲುಪಲಿದೆ.

* ಮಡಗಾಂವ್ - ಕಾರವಾರ ಎಕ್ಸ್‌ಪ್ರೆಸ್ ರೈಲು ಕೂಡ ಇನ್ಮುಂದೆ ಪ್ರತಿದಿನ ಸಂಚರಿಸಲಿದೆ.

ಇದರ ಹೊರತಾಗಿ ಮೆಮು, ಡೆಮು ರೈಲುಗಳೂ ಸಂಚರಿಸಲಿವೆ. ಅವುಗಳ ಡಿಟೇಲ್ಸ್​ ಹೀಗಿದೆ.

ಬೆಂಗಳೂರು - ಹೊಸೂರು (ಮೆಮು)- ಪ್ರತಿದಿನ ಸಂಚರಿಸಲಿದೆ. ರೈಲ್ವೆ ಸಂಖ್ಯೆ: 66595/96

ಹುಬ್ಬಳ್ಳಿ - ವಿಜಯಪುರ (ಮೆಮು)- ಪ್ರತಿದಿನ ಸಂಚರಿಸಲಿದೆ. ರೈಲ್ವೆ ಸಂಖ್ಯೆ: 66501/02

ಬೆಂಗಳೂರು - ಅಶೋಕಪುರಂ (ಮೆಮು)- ಪ್ರತಿದಿನ ಸಂಚರಿಸಲಿದೆ. ರೈಲ್ವೆ ಸಂಖ್ಯೆ: 66597/98

ಬಂಗಾರಪೇಟೆ - SMVT ಬೆಂಗಳೂರು (ಮೆಮು)- ಪ್ರತಿದಿನ ಸಂಚರಿಸಲಿದೆ. ರೈಲ್ವೆ ಸಂಖ್ಯೆ: 66537/38

ಬೆಂಗಳೂರು - ಅಶೋಕಪುರಂ (ಮೆಮು)- ವಾರಕ್ಕೆ ಮೂರು ದಿನ ಸಂಚರಿಸಲಿದೆ. ರೈಲ್ವೆ ಸಂಖ್ಯೆ: 06213/14

ಹೊಸಪೇಟೆ - ಹುಬ್ಬಳ್ಳಿ (ಡೆಮು) ವಾರಕ್ಕೊಮ್ಮೆ ಸಂಚರಿಸಲಿದೆ. ರೈಲ್ವೆ ಸಂಖ್ಯೆ: 76507/08

ಬಳ್ಳಾರಿ - ದಾವಣಗೆರೆ (ಡೆಮು) ವಾರಕ್ಕೆ 6 ದಿನ ಸಂಚರಿಸಲಿದೆ. ರೈಲ್ವೆ ಸಂಖ್ಯೆ: 76509/10

ಬೆಂಗಳೂರು - ಹಾಸನ (ಡೆಮು) ವಾರಕ್ಕೆ 6 ದಿನ ಸಂಚರಿಸಲಿದೆ. ರೈಲ್ವೆ ಸಂಖ್ಯೆ: 66525/26

ಬಳ್ಳಾರಿ - ಹೊಸಪೇಟೆ ವಾರಕ್ಕೆ 6 ದಿನ ಸಂಚರಿಸಲಿದೆ. ರೈಲ್ವೆ ಸಂಖ್ಯೆ: 07397/98