ರೈಲ್ವೆ ಇಲಾಖೆಯು ಜೂನ್ 20 ಮತ್ತು 21 ರಂದು ಹುಬ್ಬಳ್ಳಿಯಿಂದ ಚಿಕ್ಕಮಗಳೂರಿಗೆ ವಿಶೇಷ ವಾರಾಂತ್ಯದ ರೈಲು ಸಂಚಾರವನ್ನು ಘೋಷಿಸಿದೆ. ಈ ರೈಲು ಹಾವೇರಿ, ದಾವಣಗೆರೆ, ಬೀರೂರು ಮುಂತಾದ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿದ್ದು, ಐದು ಜಿಲ್ಲೆಗಳ ಪ್ರವಾಸಿಗರಿಗೆ ಅನುಕೂಲವಾಗಲಿದೆ.

ಈ ವಾರಾಂತ್ಯದಲ್ಲಿ ಚಿಕ್ಕಮಗಳೂರು ಪ್ರವಾಸಕ್ಕೆ ಹೋಗಬಯಸುವ ಐದು ಜಿಲ್ಲೆಯವರಿಗೆ ರೈಲ್ವೆ ಇಲಾಖೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದೆ. ಹುಬ್ಬಳ್ಳಿ - ಚಿಕ್ಕಮಗಳೂರು ನಡುವೆ ವಿಶೇಷ ರೈಲು ಜೂನ್‌ 20 ಮತ್ತು 21 ಸಂಚಾರ ಮಾಡಲಿದ್ದು, ಇದು ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಕಡೂರು ಮತ್ತು ಬೀರೂರು ಸೇರಿ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿದೆ. ಇದರಿಂದ ಐದು ಜಿಲ್ಲೆಗಳ ಜನರಿಗೆ ಉಪಯೋಗ ಆಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹುಬ್ಬಳ್ಳಿಯಿಂದ ಹೊರಡುವ ರೈಲು

ರೈಲು ಬೆಳಿಗ್ಗೆ 5:00 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಬೆಳಿಗ್ಗೆ 11:15ಕ್ಕೆ ಚಿಕ್ಕಮಗಳೂರು ತಲುಪುತ್ತದೆ. ಇದರಿಂದ ಪ್ರವಾಸಿಗರಿಗೆ ಹೋಟೆಲ್ ತಲುಪಿ, ಮಧ್ಯಾಹ್ನದ ನಂತರ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಮುಂತಾದ ಕಡೆ ಸೈಟ್-ಸೀಯಿಂಗ್ ಮಾಡಲು ಸಾಕಷ್ಟು ಸಮಯ ಸಿಗುತ್ತದೆ. ಹಿಂದಿರುಗುವಾಗ ಸಂಜೆ 5:30ಕ್ಕೆ ಚಿಕ್ಕಮಗಳೂರಿನಿಂದ ಹೊರಡುವುದರಿಂದ, ಭಾನುವಾರ ಇಡೀ ದಿನ ಸುತ್ತಾಡಿ ಸಂಜೆ ಆರಾಮವಾಗಿ ರೈಲು ಹತ್ತಬಹುದು.

ಯಾವೆಲ್ಲಾ ಸ್ಥಳದಲ್ಲಿ ನಿಲುಗಡೆ ಇದೆ?

ಮರಳಿ ರೈಲು ಸಂಖ್ಯೆ 07342 ಜೂನ್ 21 ರಂದು ಭಾನುವಾರ ಸಂಜೆ 17:30 ಗಂಟೆಗೆ ಚಿಕ್ಕಮಗಳೂರಿನಿಂದ ಹೊರಟು ರಾತ್ರಿ 23:20 ಕ್ಕೆ ಹುಬ್ಬಳ್ಳಿ ತಲುಪಲಿದೆ. ಪ್ರಯಾಣ ಮಾರ್ಗದಲ್ಲಿ ಹಾವೇರಿ, ರಾಣೇಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಕಡೂರು ಮತ್ತು ಬೀರೂರು ಸೇರಿ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಲಿದ್ದು ಈ ಎಲ್ಲ ಸ್ಥಳಗಳ ಪ್ರಯಾಣಿಕರಿಗೂ ಅನುಕೂಲ.

10 ಬೋಗಿಗಳು

ಒಟ್ಟು 10 ಬೋಗಿಗಳ ಈ ವಿಶೇಷ ರೈಲಿನಲ್ಲಿ 1 ಸ್ಲೀಪರ್ ಕ್ಲಾಸ್ (GSCN), 7 ಸಾಮಾನ್ಯ ದ್ವಿತೀಯ ದರ್ಜೆ (GS) ಮತ್ತು 2 SLR ಬೋಗಿಗಳಿರಲಿದ್ದು ಸಾಮಾನ್ಯ ರೈಲ್ವೆ ದರದಲ್ಲೇ ಪ್ರಯಾಣಿಸಬಹುದು. ಪ್ಯಾಂಟ್ರಿ ಸೌಲಭ್ಯ ಇಲ್ಲದ ಕಾರಣ ಪ್ರಯಾಣಿಕರು ತಮ್ಮ ಆಹಾರ ತಾವೇ ತರಬೇಕು. ವಿಶೇಷ ರೈಲಿನ ಟಿಕೆಟ್ ಬಹಳ ಬೇಗ ಮುಗಿಯುವ ಸಾಧ್ಯತೆ ಇರುವುದರಿಂದ IRCTC ಆ್ಯಪ್ ಅಥವಾ ರೈಲ್ವೆ ಸ್ಟೇಷನ್ ಮೂಲಕ ತ್ವರಿತ ಬುಕಿಂಗ್ ಮಾಡಿ. ಹೆಚ್ಚಿನ ಮಾಹಿತಿಗೆ NTES ಅಥವಾ India Rail Info ಬಳಸಿ!

ಈ ವಿಶೇಷ ರೈಲುಗಳಲ್ಲಿ ಮುಖ್ಯವಾಗಿ 7 ಸಾಮಾನ್ಯ (GS) ಬೋಗಿಗಳು ಮತ್ತು 1 ಸ್ಲೀಪರ್ (SL / GSCN) ಬೋಗಿ ಇರುವುದರಿಂದ, ವಯಸ್ಕ ಪ್ರಯಾಣಿಕರಿಗೆ ಸಾಮಾನ್ಯ ಕೋಚ್‌ನಲ್ಲಿ ಸುಮಾರು 110 ರೂಪಾಯಿಗಳಿಂದ 150ರೂ.ಗಳು ಮತ್ತು ಸ್ಲೀಪರ್ ಕೋಚ್‌ನಲ್ಲಿ 180 ರೂ. ಯಿಂದ 250 ರೂನಷ್ಟು ಇದೆ. 5 ರಿಂದ 11 ವರ್ಷ ವಯಸ್ಸಿನ ಒಳಗಿರುವ ಮಕ್ಕಳಿಗೆ ಮಕ್ಕಳು ಅರ್ಧ ದರವಿದೆ. ಹಿರಿಯರು, ವಿಕಲಚೇತನರು ಮುಂತಾದವರಿಗೆ ರೈಲ್ವೆ ನಿಯಮಾನುಸಾರ ರಿಯಾಯಿತಿಗಳು ಲಭ್ಯವಿರುತ್ತವೆ.