ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಮಾರ್ಗಸೂಚಿ ಅನ್ವಯ ಕಾರ್ಯಾಚರಣೆಗೆ, ಪೈಲಟ್‌ಗಳ ಕೊರತೆ ಕಾರಣಕ್ಕೆ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸಂಚಾರ ಮೇ 1 ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
- Home
- News
- State
- State News Live: ಡಿಜಿಸಿಎ ನಿಯಮಗಳ ಬೆನ್ನಿಗೆ ಇಂಡಿಗೋ ಶಾಕ್ - ಶಿವಮೊಗ್ಗ-ಬೆಂಗಳೂರು ವಿಮಾನ ಕಾರ್ಯಾಚರಣೆ ಸ್ಥಗಿತ
State News Live: ಡಿಜಿಸಿಎ ನಿಯಮಗಳ ಬೆನ್ನಿಗೆ ಇಂಡಿಗೋ ಶಾಕ್ - ಶಿವಮೊಗ್ಗ-ಬೆಂಗಳೂರು ವಿಮಾನ ಕಾರ್ಯಾಚರಣೆ ಸ್ಥಗಿತ

ಬೆಂಗಳೂರು (ಮೇ.1): ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ನಾಯಕತ್ವ ಬದಲಾವಣೆಯ ಗೊಂದಲವನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಮತ್ತು ಸಮಯ ಬಂದಾಗ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.

Karnataka News Live 1st May: ಡಿಜಿಸಿಎ ನಿಯಮಗಳ ಬೆನ್ನಿಗೆ ಇಂಡಿಗೋ ಶಾಕ್ - ಶಿವಮೊಗ್ಗ-ಬೆಂಗಳೂರು ವಿಮಾನ ಕಾರ್ಯಾಚರಣೆ ಸ್ಥಗಿತ
Karnataka News Live 1st May: ಮೇ.4ರ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತೋ ಗೊತ್ತಿಲ್ಲ - ಸಂಸದ ಬೊಮ್ಮಾಯಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುವ ಆಸೆ ಇದೆ ಅಂದಿದ್ದಾರೆ, ಮೇ 4ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ ಇಲ್ಲವೊ ಗೊತ್ತಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Karnataka News Live 1st May: ಬೆಂಗಳೂರಿನ ಪೀಣ್ಯ ಫ್ಲೈಓವರ್ ಮೇಲೆ 4 ದಿನ ಎಲ್ಲಾ ವಾಹನ ಸಂಚಾರ ಬಂದ್, ಬದಲಿ ಮಾರ್ಗ ಪಟ್ಟಿ
ಬೆಂಗಳೂರಿನ ಪೀಣ್ಯ ಫ್ಲೈಓವರ್ ನಾಲ್ಕು ದಿನ ಎಲ್ಲಾ ವಾಹನ ಸಂಚಾರ ಬಂದ್, ಬದಲಿ ಮಾರ್ಗ ಪಟ್ಟಿ ಬಿಡುಗಡೆ ಮಾಡಲಾಗಿದೆ. ಯಾವ ದಿನದಿಂದ ಫ್ಲೈಓವರ್ ಬಂದ್ ಮಾಡಲಾಗುತ್ತಿದೆ. ಪರ್ಯಾಯ ಮಾರ್ಗ ವಿವರ ಇಲ್ಲಿದೆ.
Karnataka News Live 1st May: ನಿಮ್ಮ ಹಿಂದೆ ನಾವು ಇದ್ದೇವೆ - ಕೊಲೆಯಾದ ವೆಂಕಟೇಶ ಕುರಬರ ಕುಟುಂಬಕ್ಕೆ ಪೊಲೀಸರ ಭರವಸೆ
ಗಂಗಾವತಿಯಲ್ಲಿ ವೆಂಕಟೇಶ ಕುರಬರ ಕೊಲೆ ಪ್ರಕರಣದಲ್ಲಿ 6 ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿದ ಬಳಿಕ, ಪೊಲೀಸ್ ಅಧಿಕಾರಿಗಳು ಕುಟುಂಬಕ್ಕೆ ಭೇಟಿ ನೀಡಿ ಧೈರ್ಯ ತುಂಬಿದರು. ಕುಟುಂಬವು ನ್ಯಾಯ ದೊರೆತಿದೆ ಎಂದು ಪ್ರತಿಕ್ರಿಯಿಸಿದೆ.
Karnataka News Live 1st May: ಬಿಎಸ್‌ವೈ ಅಭಿಮಾನೋತ್ಸವಕ್ಕೆ ಗಂಗಾವತಿಯ 10 ಸಾವಿರ ಕಾರ್ಯಕರ್ತರು - ಜನಾರ್ದನ ರೆಡ್ಡಿ
ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರ 50ನೇ ಅಭಿಮಾನೋತ್ಸವಕ್ಕೆ ಗಂಗಾವತಿ ವಿಧಾನ ಸಭಾ ಕ್ಷೇತ್ರದಿಂದ 10 ಸಾವಿರ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
Karnataka News Live 1st May: ದಕ್ಷಿಣ ಕನ್ನಡದ ಮಹಿಳೆಯರಿಗೆ ಸಿಹಿಸುದ್ದಿ, ವಿವಿಧ ತಾಲೂಕುಗಳ ಅಂಗನವಾಡಿಯಲ್ಲಿ ಖಾಲಿ ಇರೋ ಹುದ್ದೆಗಳಿಗೆ ಅರ್ಜಿ ಅಹ್ವಾನ
Karnataka News Live 1st May: ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ - ಕುಲದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕುಲದೇವತೆ ಹಾಗೂ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಪತ್ನಿ ಜತೆ ಆಗಮಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು.
Karnataka News Live 1st May: ಅಶೋಕ್ ಸಾರಿಗೆ ಸಚಿವರಾಗಿದ್ದಾಗಲೇ ನೌಕರರ ಮುಷ್ಕರ ಆರಂಭ - ಸಚಿವ ರಾಮಲಿಂಗಾರೆಡ್ಡಿ ಕಿಡಿ
ಹಾಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗಲೇ 2012ರಲ್ಲಿ ವೇತನ ಪರಿಷ್ಕರಣೆಗಾಗಿ ಸಾರಿಗೆ ನೌಕರರ ಮುಷ್ಕರ ನಡೆಸುವ ಪದ್ಧತಿ ಆರಂಭವಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
Karnataka News Live 1st May: ಶಿವಮೊಗ್ಗ ಏರ್‌ಪೋರ್ಟ್ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಒತ್ತಾಯ, ರಾಜ್ಯ ಸರ್ಕಾರದ ಮುಂದೆ ಹಲವು ಬೇಡಿಕೆ
Karnataka News Live 1st May: ಬೀದರ್‌ನ ಬಾನಿಗೆ ಮರಳಿದ ಲೋಹದ ಹಕ್ಕಿ! ಬೀದರ್-ಬೆಂಗಳೂರು ವಿಮಾನ ಸೇವೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
Karnataka News Live 1st May: ಬೆಂಗಳೂರು ಜಲಮಂಡಳಿಯಿಂದ ನಿವಾಸಿಗಳಿಗೆ ಕಾವೇರಿ ನೀರಿನ ದರ ಏರಿಕೆ ಶಾಕ್, ಮತ್ತೆ ಶೇ.3ರಷ್ಟು ಹೆಚ್ಚಳ!
Karnataka News Live 1st May: ಹನಿಯೂರು ಚಂದ್ರೇಗೌಡನ ಅಶ್ಲೀಲ ವಿಡಿಯೋ ಪ್ರಕರಣ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಿ ನಾಯಿಯಂತೆ ಬಿಂಬಿಸಿಕೊಂಡಿದ್ದ ಆಸಾಮಿ!
Karnataka News Live 1st May: Vasudeva Kutumba Serial - ತಿಂಗಳಾದರೂ ಸಂಭಾವನೆ ಕೊಡದ ಪ್ರೊಡಕ್ಷನ್ ಹೌಸ್; ತಿರುಗಿಬಿದ್ದ ಸೀರಿಯಲ್ ಕಲಾವಿದರು
Vasudeva Kutumba Serial Producer: ಕಲಾವಿದರು ಧಾರಾವಾಹಿ ಬಿಡ್ತಾರೆ ಎಂದು ಕೆಲವರು ಆರೋಪ ಮಾಡೋದುಂಟು. ಆದರೆ ಇದಕ್ಕೆಲ್ಲ ಕಾರಣ ಬೇರೆ ಇರುತ್ತದೆ. ವಸುದೇವ ಕುಟುಂಬ ಸೀರಿಯಲ್ ಪ್ರೊಡಕ್ಷನ್ ಹೌಸ್ ಸಂಭಾವನೆ ಕೊಡ್ತಿಲ್ಲ ಎಂದು ಕಲಾವಿದರು ಆರೋಪ ಮಾಡಿದ್ದಾರೆ.
Karnataka News Live 1st May: ಎಚ್ಎಎಲ್ ನೇತೃತ್ವ ವಹಿಸಿದ ಹೆಮ್ಮೆಯ ಕನ್ನಡಿಗ, ಎಲ್‌ಸಿಎ ಮ್ಯಾನ್ - ಕೋಟ ರವಿ
ಉಡುಪಿ ಮೂಲದ ಕನ್ನಡಿಗ ಕೋಟ ರವಿ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 'ಎಲ್‌ಸಿಎ ಮ್ಯಾನ್' ಎಂದೇ ಖ್ಯಾತರಾದ ಅವರು, ತೇಜಸ್ ಯುದ್ಧ ವಿಮಾನ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Karnataka News Live 1st May: ಪೋಕ್ಸೋ, ಕೊ*ಲೆ ಪ್ರಕರಣದ ಅಪರಾಧಿಯ ಮರಣದಂಡನೆ ರದ್ದು ಮಾಡಿ ಜೀವಾವಧಿಗೆ ಇಳಿಸಿದ ಧಾರವಾಡ ಹೈಕೋರ್ಟ್ ಪೀಠ
ಅಪ್ರಾಪ್ತೆಯ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣದಲ್ಲಿ ಬೆಳಗಾವಿ ಸೆಷನ್ ಕೋರ್ಟ್ ವಿಧಿಸಿದ್ದ ಮರಣದಂಡನೆಯನ್ನು ಧಾರವಾಡ ಹೈಕೋರ್ಟ್ ಪೀಠವು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ಮಹತ್ವದ ತೀರ್ಪು ನೀಡಿದೆ. ಅಲ್ಲದೆ, ಸಂತ್ರಸ್ತೆಯ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.
Karnataka News Live 1st May: ಮೊದಲ ಭೇಟಿಗೆ ಸ್ಮಶಾನಕ್ಕೆ ಕರೆದೊಯ್ಯುವ ಸಾಹಸ; ಇದು 'ಗ್ರೇವ್‌ಯಾರ್ಡ್' ಎಂಬ ಲೇಟೆಸ್ಟ್ ಡೇಟಿಂಗ್ ಟ್ರೆಂಡ್!
ಕೇಳಲು ವಿಚಿತ್ರ ಹಾಗೂ ಸ್ವಲ್ಪ ಮಟ್ಟಿಗೆ ಭಯಾನಕ ಎನಿಸಿದರೂ, 'ಗ್ರೇವ್‌ಯಾರ್ಡ್ ಡೇಟಿಂಗ್' ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ, ಈ 'ಸತ್ತವರ ನಡುವಿನ ಸಮಾಲೋಚನೆ' ಎಲ್ಲರಿಗೂ ಇಷ್ಟವಾಗಲಿಕ್ಕಿಲ್ಲ. ನೀವು ನಿಮ್ಮ ಸಂಗಾತಿಯನ್ನು ಮೊದಲ ಭೇಟಿಗೆ ಸ್ಮಶಾನಕ್ಕೆ ಕರೆದೊಯ್ಯುವ ಸಾಹಸ ಮಾಡುತ್ತೀರಾ?
Karnataka News Live 1st May: ಬೆಂಗಳೂರು - ಕಾಮುಕ ನಕಲಿ ಅಧಿಕಾರಿಗೆ ವಿವಾಹಿತ ಮಹಿಳೆಯರೇ ಬೇಕು, ಬಲೆಗೆ ಬೀಳಿಸಿ ಅಶ್ಲೀಲ ವಿಡಿಯೋ ಮಾಡಿ ಹಣಕ್ಕೆ ಬೆದರಿಕೆ!
Karnataka News Live 1st May: ತುಮಕೂರಲ್ಲಿ ನವಿಲುಗಳ ಸರಣಿ ಸಾವಿನ ಸತ್ಯಾಂಶ ಬಹಿರಂಗ, ಸಾರ್ವಜನಿಕರಿಗೆ ಜಾಗೃತಿ, ಹೈ ಅಲರ್ಟ್
Karnataka News Live 1st May: ಬೆಂಗಳೂರಿನಲ್ಲಿ ಅಮೆರಿಕದ ಸೆಮಿಕಂಡಕ್ಟರ್ ದೈತ್ಯ - ಅಪ್ಲೈಡ್ ಮೆಟೀರಿಯಲ್ಸ್‌ಗೆ 140 ಎಕರೆ ಜಮೀನು ನೀಡಲು ರಾಜ್ಯ ಸರ್ಕಾರ ಅಸ್ತು!
ಕರ್ನಾಟಕವನ್ನು ಸೆಮಿಕಂಡಕ್ಟರ್ ಹಬ್ ಆಗಿ ರೂಪಿಸಲು, ರಾಜ್ಯ ಸರ್ಕಾರವು ಅಮೆರಿಕದ 'ಅಪ್ಲೈಡ್ ಮೆಟೀರಿಯಲ್ಸ್ ಇಂಕ್' ಕಂಪನಿಗೆ ಬೆಂಗಳೂರಿನಲ್ಲಿ 140 ಎಕರೆ ಜಮೀನು ಹಂಚಿಕೆ ಮಾಡಲು ಅನುಮೋದನೆ ನೀಡಿದೆ.
Karnataka News Live 1st May: ಸಿಎಂ ಬದಲಾವಣೆ ವಿಚಾರ - 'ಡೇಟ್ ಫಿಕ್ಸ್ ಆಗಿಲ್ಲ' ಎನ್ನುತ್ತಲೇ ಕುತೂಹಲ ಉಳಿಸಿದ ಮಲ್ಲಿಕಾರ್ಜುನ ಖರ್ಗೆ!
ಕಲಬುರಗಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿನ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಹೈಕಮಾಂಡ್ ಸೂಕ್ತ ಸಮಯದಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಿದ್ದು, ಅಲ್ಲಿಯವರೆಗೆ ಗೊಂದಲ ಸೃಷ್ಟಿಸಬಾರದು ಎಂದಿದ್ದಾರೆ.