07:46 PM (IST) Apr 11

Karnataka News Live 11th April: ಭದ್ರಾ ಹಿನ್ನೀರಿಂದ ದೂರವಾಗಿದ್ದವರನ್ನು ಹತ್ತಿರಕ್ಕೆ ತಂದ ಹೊನ್ನೇಕೊಡಿಗೆ ಸೇತುವೆ, NR ಪುರದ 65 ವರ್ಷಗಳ ಕನಸು ನನಸು!

ವರದಿ: ಯಡಗೆರೆ ಮಂಜುನಾಥ್

1957ರಲ್ಲಿ ನಿರ್ಮಾಣವಾದ ಭದ್ರಾ ಅಣೆಕಟ್ಟಿನಿಂದಾಗಿ ನರಸಿಂಹರಾಜಪುರ ತಾಲೂಕಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದವು. ಇದೀಗ, ₹38 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯು 19 ಹಳ್ಳಿಗಳ 2 ಸಾವಿರಕ್ಕೂ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸಿದೆ.

Read Full Story
07:35 PM (IST) Apr 11

Karnataka News Live 11th April: ಟೀಂ ಇಂಡಿಯಾ ಸೇರ್ತಾರಾ ವೈಭವ್‌ ಸೂರ್ಯವಂಶಿ? BCCIಗೆ ಹೋಯ್ತು ಹೈ ಇನ್‌ಫ್ಲುಯೆನ್ಸ್ ಮೆಸೇಜ್!

Vaibhav Sooryavanshi: 15ನೇ ವರ್ಷದ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಎಂಟ್ರಿ ಕೊಡ್ತಾರಾ ಎಂಬ ಚರ್ಚೆ ಶುರುವಾಗಿದೆ. ಐಪಿಎಲ್ 2026ರಲ್ಲಿ ಸಂಚಲನ ಮೂಡಿಸಿದ ಬಿಹಾರದ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಹಾಗಾದರೆ ಸತ್ಯ ಏನು?

Read Full Story
07:33 PM (IST) Apr 11

Karnataka News Live 11th April: ಉಜ್ಜಯಿನಿ ಮಹಾಕಾಳನ ದರ್ಶನ ಪಡೆದ ಧುರಂಧರ್ ನಟಿ ಸಾರಾ ಅರ್ಜುನ್ - ಭಸ್ಮಾರತಿಯಲ್ಲಿ ಭಾಗಿ

ನಟಿ ಸಾರಾ ಅರ್ಜುನ್ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪವಿತ್ರ ಭಸ್ಮಾರತಿಯಲ್ಲಿ ಭಾಗಿಯಾಗಿದ್ದಾರೆ. ಈ ಆಧ್ಯಾತ್ಮಿಕ ಅನುಭವದಿಂದ ತಮಗೆ 'ತುಂಬಾ ಸಂತೋಷವಾಗಿದೆ' ಎಂದು ಅವರು ಹೇಳಿಕೊಂಡಿದ್ದಾರೆ. ಈ ದೇವಸ್ಥಾನವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

Read Full Story
06:55 PM (IST) Apr 11

Karnataka News Live 11th April: ಬ್ಯಾಟ್ ಬೀಸಿದರೆ ಸಿಕ್ಸರ್ ಪಕ್ಕಾ! ವೈಭವ್‌ ಸೂರ್ಯವಂಶಿ ಯಶಸ್ಸಿಗೆ ಜ್ಯೋತಿಷ್ಯದ ಕೈವಾಡವಿದೆಯೇ?‌ ಸಾಕ್ಷಿ ಸಿಕ್ತು!

Vaibhav Suryavanshi: ವೈಭವ್‌ ಸೂರ್ಯವಂಶಿ ಅವರು ಜ್ಯೋತಿಷ್ಯ ಅಥವಾ ಸಂಖ್ಯಾಶಾಸ್ತ್ರದ ಮೂಲಕ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಆ ಬಳಿಕ ಅವರು ಐಪಿಎಲ್‌ನಲ್ಲಿ ಒಂದಿಷ್ಟು ಸಿಕ್ಸರ್‌, ಫೋರ್‌ ಹೊಡೆದು ದಾಖಲೆ ಮಾಡಿದ್ದಾರೆ ಎನ್ನಲಾಗಿದೆ. ಏನದು?

Read Full Story
06:50 PM (IST) Apr 11

Karnataka News Live 11th April: ಕೇವಲ 2 ಗಂಟೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ; ಗಂಟೆಗೆ 220 ಕಿ.ಮೀ ವೇಗದ ಹೊಸ ರೈಲು!

ಭಾರತದಲ್ಲಿ ಗಂಟೆಗೆ 220 ಕಿ.ಮೀ ವೇಗದಲ್ಲಿ ಚಲಿಸುವ ಹೊಸ ರೈಲುಗಳು ಸಂಚಾರ ಆರಂಭಿಸಿದರೆ, ರಾಜಧಾನಿ ಬೆಂಗಳೂರಿನಿಂದ ಹುಬ್ಬಳ್ಳಿ ನಗರಕ್ಕೆ ಕೇವಲ 2 ಗಂಟೆಗಳಲ್ಲಿ ತಲುಪಬಹುದು. ವಂದೇ ಭಾರತ್ ರೈಲುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read Full Story
06:50 PM (IST) Apr 11

Karnataka News Live 11th April: ಆರ್‌ಡಿ ಪಾಟೀಲ್ ಜೈಲು ವರ್ಗಾವಣೆ ರದ್ದು, ಹೈಕೋರ್ಟ್ ಮಹತ್ವದ ತೀರ್ಪು ಮತ್ತೆ ಕಲಬುರಗಿಗೆ ಶಿಫ್ಟ್

ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಅವರನ್ನು ಮೈಸೂರು ಜೈಲಿಗೆ ವರ್ಗಾಯಿಸಿದ್ದ ಕೆಳಹಂತದ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ನೈಸರ್ಗಿಕ ನ್ಯಾಯತತ್ವಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟ ಪೀಠ, ಪಾಟೀಲ್ ಅವರನ್ನು ತಕ್ಷಣವೇ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಮರಳಿ ಸ್ಥಳಾಂತರಿಸಲು ಆದೇಶಿಸಿದೆ.
Read Full Story
06:35 PM (IST) Apr 11

Karnataka News Live 11th April: ಸ್ಮೋಕಿಂಗ್​ ಸ್ಟೈಲ್​ನಲ್ಲಿ ಹುಟ್ಟುಹಬ್ಬದ ದೀಪ ಹಚ್ಚಿದ Bigg Boss ಹಂಸಾ ನಾರಾಯಣಸ್ವಾಮಿ- Video viral

ಬಿಗ್‌ ಬಾಸ್‌ ಹಾಗೂ 'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಖ್ಯಾತಿಯ ನಟಿ ಹಂಸಾ ನಾರಾಯಣಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಸಿಗರೇಟ್ ಮಾದರಿಯಲ್ಲಿ ಕೇಕ್ ಹಚ್ಚುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡಿದ್ದು, ಈ ವಿಡಿಯೋ ಗಮನ ಸೆಳೆದಿದೆ.
Read Full Story
06:22 PM (IST) Apr 11

Karnataka News Live 11th April: ದೆಹಲಿ ಕರ್ನಾಟಕ ಸಂಘ - ಜೂಮ್‌ ಮೀಟಿಂಗ್‌ಗಾಗಿಸದಸ್ಯರು-ಅಧ್ಯಕ್ಷರ ನಡುವೆ ತೀವ್ರ ಮಾತಿನ ಚಕಮಕಿ

ದೆಹಲಿ ಕರ್ನಾಟಕ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ, ಜೂಮ್ ಮೀಟಿಂಗ್‌ಗೆ ಅವಕಾಶ ನೀಡುವ ವಿಚಾರವಾಗಿ ಸದಸ್ಯರು ಮತ್ತು ಅಧ್ಯಕ್ಷರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರ ವಿರೋಧದಿಂದಾಗಿ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಿಂದ ಹೊರನಡೆದರು.

Read Full Story
06:09 PM (IST) Apr 11

Karnataka News Live 11th April: Numerology - ಮೊದಲ ಪ್ರೇಮವೇ ಕೊನೆಯ ಪ್ರೀತಿ - ಈ ದಿನಾಂಕದಂದು ಜನಸಿದವರಿಗೆ ಗಂಡನೇ ಸರ್ವಸ್ವ!

ಮಹಿಳೆಯರು ವಿಶಿಷ್ಟ ಗುಣಗಳನ್ನು ಹೊಂದಿರುತ್ತಾರೆ. ಇವರು ಗಂಡನಿಗೆ ಸಂಪೂರ್ಣ ಬೆಂಬಲ ನೀಡುವುದಲ್ಲದೆ, ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ ಮತ್ತು ವ್ಯವಹಾರದಲ್ಲಿಯೂ ಜಾಣತನ ಪ್ರದರ್ಶಿಸುತ್ತಾರೆ. ತಮ್ಮ ಭಾವನೆಗಳನ್ನು ಸುಲಭವಾಗಿ ಬಹಿರಂಗಪಡಿಸದ ಇವರು ಆಳವಾದ ಚಿಂತನಾಶಕ್ತಿಯನ್ನು ಹೊಂದಿರುತ್ತಾರೆ.

Read Full Story
06:07 PM (IST) Apr 11

Karnataka News Live 11th April: ಬೆಂಗಳೂರು - ಅಜ್ಜಿ ಮನೆಯಲ್ಲೇ 5 ಲಕ್ಷದ ಚಿನ್ನ ಕದ್ದ ಮೊಮ್ಮಗ! ಪೊಲೀಸರು ಬಂಧನಕ್ಕೆ ಬಂದಾಗ ಅದಾಗಲೇ ಅಪ್ರಾಪ್ತ ಜೈಲಲಿದ್ದ!

ಬೆಂಗಳೂರಿನಲ್ಲಿ ತನ್ನ ಅಜ್ಜಿಯ ಮನೆಯಲ್ಲೇ ₹5 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಅಪ್ರಾಪ್ತ ಬಾಲಕನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಅಜ್ಜ-ಅಜ್ಜಿ ಆಸ್ಪತ್ರೆಗೆ ಹೋಗಿದ್ದಾಗ ಕೃತ್ಯ ಎಸಗಿದ್ದ ಈತ, ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಚಿಕ್ಕಮಗಳೂರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದನು.

Read Full Story
05:32 PM (IST) Apr 11

Karnataka News Live 11th April: ಹಾವೇರಿ - ಏಕಾಏಕಿ ಹಸು ದಾಳಿ, ಒಂದೇ ಗುದ್ದಿಗೆ ಟಾಟಾ ಎಸಿ ವಾಹನದ ಮೇಲೆ ಹೋಗಿ ಬಿದ್ದ ಅಜ್ಜಿ! ದೃಶ್ಯ ವೈರಲ್

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಮ್ಮನಹಳ್ಳಿ ಗ್ರಾಮದಲ್ಲಿ, ಮನೆಯ ಮುಂದೆ ನಿಂತಿದ್ದ ಪಾರ್ವತವ್ವ ಎಂಬ ವೃದ್ಧೆಯ ಮೇಲೆ ಹಸುವೊಂದು ದಾಳಿ ನಡೆಸಿದೆ. ಹಸು ಗುದ್ದಿದ ರಭಸಕ್ಕೆ ಅವರು ವಾಹನದ ಮೇಲೆ ಬಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Read Full Story
05:28 PM (IST) Apr 11

Karnataka News Live 11th April: Netflix Series - ಅಬ್ಬಬ್ಬಾ..ಒಂದಕ್ಕಿಂತ ಒಂದು ರೋಚಕ ಸಸ್ಪೆನ್ಸ್‌ ಥ್ರಿಲ್ಲರ್‌ 10 ಸಿನಿಮಾ, ಸಿರೀಸ್‌ ರಿಲೀಸ್!

Netflix Series To Watch: ಈ ವಾರ ನೆಟ್‌ಫ್ಲಿಕ್ಸ್ ಇಂಡಿಯಾದ ಟಾಪ್ 10 ಟ್ರೆಂಡಿಂಗ್ ಸೀರೀಸ್‌ಗಳ ಪಟ್ಟಿಯಲ್ಲಿ ಹೆಚ್ಚಾಗಿ ಇಂಗ್ಲಿಷ್ ಸರಣಿಗಳೇ ಇವೆ.4 ಹಿಂದಿ ವೆಬ್ ಸೀರೀಸ್‌ಗಳು ಕೂಡ ಇದರಲ್ಲಿ ಸ್ಥಾನ ಪಡೆದಿವೆ. ಇತ್ತೀಚೆಗೆ ಬಿಡುಗಡೆಯಾದ ಹಿಂದಿ ವೆಬ್ ಸೀರೀಸ್ ಒಂದು ನಂಬರ್ 1 ಸ್ಥಾನದಲ್ಲಿದೆ.

Read Full Story
05:25 PM (IST) Apr 11

Karnataka News Live 11th April: ರಾಮಾಯಣ ಸಿನಿಮಾದ ರಾವಣ ಪಾತ್ರವನ್ನು ಯಶ್‌ ಒಪ್ಪಿದ್ದು ಏಕೆ? ನಿತೀಶ್‌ ತಿವಾರಿ ಹೇಳಿದ್ದೇನು?

ಕೆಜಿಎಫ್‌-2 ನಂತರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ನಟಿಸುತ್ತಿರುವ ರಾಕಿಂಗ್‌ ಸ್ಟಾರ್‌. ರಾವಣ ಪಾತ್ರದಲ್ಲಿ ಅಭಿನಯಿಸುತ್ತಿರುವ ಯಶ್‌. ರಾವಣನ ಪಾಸಿಟಿವ್‌, ನೆಗೆಟಿವ್‌ ವ್ಯಕ್ತಿತ್ಳವನ್ನು ಹೇಳಿದ ಬಳಿಕ ಅವರು ಪಾತ್ರ ಮಾಡಲು ಒಪ್ಪಿಗೆ ಕೊಟ್ಟರು ಅಂತಾರೆ ನಿರ್ದೇಶಕ ನಿತೀಶ್‌ ತಿವಾರಿ.

Read Full Story
05:05 PM (IST) Apr 11

Karnataka News Live 11th April: ಕ್ಯಾಲೆಂಡರ್ ಸಿನಿಮಾ ವಿಮರ್ಶೆ - ಭಗ್ನಪ್ರೇಮ, ತನಿಖೆ, ಗೊಂದಲ ಮತ್ತು ಕುತೂಹಲದ ನಡುವೆ ಕಥೆ

ಆತ ಪ್ರೇಕ್ಷಕನಿಗೆ ಎದುರಾಗುವುದು ಮೂರು ಹೊತ್ತೂ ಕುಡಿದು ತೂರಾಡುವ ಭಗ್ನಪ್ರೇಮಿಯಾಗಿ. ಇಂಥಾ ಅವಸ್ಥೆಯಲ್ಲಿ ನಾಯಕನ ಗ್ರಹಗತಿಗಳೆಲ್ಲ ಉಲ್ಟಾ ಹೊಡೆದು ಇಡೀ ಪರಿಸ್ಥಿತಿ ಆತನ ವಿರುದ್ಧ ತಿರುಗುತ್ತ ಹೋಗುತ್ತದೆ.

Read Full Story
04:54 PM (IST) Apr 11

Karnataka News Live 11th April: ಒಂದೇ ಒಂದು ಬೆಳ್ಳುಳ್ಳಿ ಸಾಕು; ನಾಲಿಗೆ ಚುರುಕು ಮುಟ್ಟಿಸೋ 'ಮರಿಗೆ ಗೊಜ್ಜು' ಮಾಡಬಹುದು!

Garlic Gojju Recipe In Kannada: ಮನೆಯಲ್ಲಿ ತರಕಾರಿ ಇಲ್ಲ, ಊಟಕ್ಕೆ ಏನು ಮಾಡೋದು ಎಂದು ಕೆಲವರು ಅಂದುಕೊಂಡಿರಬಹುದು. ಅದರಲ್ಲಿಯೂ ಬೇಸಿಗೆಯಲ್ಲಿ ತಂಪು ಆಹಾರವೇ ಇಷ್ಟ ಆಗುತ್ತದೆ. ಬೇಸಿಗೆಯಲ್ಲಿ ಅನ್ನ ಸಾಂಬಾರ್‌ ಊಟ ಮಾಡೋದು ಕೂಡ ಕಷ್ಟ. ಈಗ ಒಂದೇ ಬೆಳ್ಳುಳ್ಳಿಯಿಂದ ಮರಿಗೆ ಗೊಜ್ಜು ಮಾಡೋದು ಹೇಗೆ?

Read Full Story
04:53 PM (IST) Apr 11

Karnataka News Live 11th April: ಪೀಟರ್ ಸಿನಿಮಾ ವಿಮರ್ಶೆ - ಪ್ರೀತಿಯ ಬಿರುಕು, ಚಂಡೆ ನಾದದೊಳಗಿನ ವಿಷಾದದ ಕಥೆ

ಪೀಟರ್‌ ಎಂಬ ತರುಣ ನಮಗೆ ಎದುರಾಗುವುದೂ ಇಂಥಾದ್ದೊಂದು ವಿಷಾದದಲ್ಲಿ ಅದ್ದಿ ತೆಗೆದಂಥಾ ಮುಖದಲ್ಲಿ. ಆತನ ವೇದನೆಗೆ ಕಾರಣವಾದ ಸಂಗತಿಗಳು ಅಸ್ಪಷ್ಟವಾಗಿ ತೆರೆದುಕೊಳ್ಳುತ್ತಾ, ಭೂತ ವರ್ತಮಾನಗಳ ನಡುವೆ ಕಣ್ಣಾಮುಚ್ಚಾಲೆಯಾಡುತ್ತದೆ.

Read Full Story
04:42 PM (IST) Apr 11

Karnataka News Live 11th April: ಬೆಳಗಾವಿ - ಲೋಕಾಯುಕ್ತ ದಾಳಿಯಲ್ಲಿ ಅಧಿಕಾರಿಯ ₹14 ಕೋಟಿ ಅಕ್ರಮ ಆಸ್ತಿ ಪತ್ತೆ! ಕೆಜಿ ಗಟ್ಟಲೆ ಚಿನ್ನ!

ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ಅಜಯಸಿಂಗ್ ರಜಪೂತ ಅವರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ₹14 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 18 ನಿವೇಶನಗಳು, ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಸೇರಿದೆ.

Read Full Story
04:35 PM (IST) Apr 11

Karnataka News Live 11th April: ಗ್ಯಾಂಗ್ಸ್ ಆಫ್‌ ಯುಕೆ ಸಿನಿಮಾ ವಿಮರ್ಶೆ - ಪ್ರೀತಿ ಇಲ್ಲ, ಹಿಂಸೆಯೇ ಪ್ರಧಾನ, ರಕ್ತದ ಹರಿವಿನ ನಡುವೆ ಕಥೆ

ಚಿತ್ರದ ಆರಂಭದಿಂದ ಅಂತ್ಯದವರೆಗೂ ದ್ವೇಷ, ಹಿಂಸೆ, ಕೊಲೆ, ರಕ್ತದಿಂದ ತೊಯ್ದು ಮುದ್ದೆಯಾಗಿದೆ. ಆ ಮುದ್ದೆಗಳನ್ನು ನಿರ್ದೇಶಕ ರವಿ ಶ್ರೀವತ್ಸ ಅವರು ‘ಗ್ಯಾಂಗ್ಸ್‌ ಆಫ್‌ ಯುಕೆ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಸುರಿದಿದ್ದಾರೆ.

Read Full Story
04:33 PM (IST) Apr 11

Karnataka News Live 11th April: ನಂಗೂ ಫ್ರೀ, ನಿಂಗೂ ಫ್ರೀ ಎಂದ ರಾಮೇಶ್ವರಂ ಕೆಫೆ - ಸುಡು ಬಿಸಿಲನ್ನೂ ಲೆಕ್ಕಿಸದೆ ಪಾಪ ಹೇಗೆ ನಿಂತಿದ್ದಾರೆ ನೋಡಿ ಜನ

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಹೊಸದಾಗಿ ಆರಂಭವಾದ ರಾಮೇಶ್ವರಂ ಕೆಫೆ, ಉದ್ಘಾಟನೆಯ ಅಂಗವಾಗಿ ಉಚಿತ ಊಟದ ವ್ಯವಸ್ಥೆ ಮಾಡಿತ್ತು. ಈ ಉಚಿತ ಊಟಕ್ಕಾಗಿ ಸುಡು ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಜನರು ಕಿಲೋಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು, ಈ ದೃಶ್ಯದ ವಿಡಿಯೋ ವೈರಲ್ ಆಗಿದೆ.
Read Full Story
04:22 PM (IST) Apr 11

Karnataka News Live 11th April: ಟೆರರ್ ಸಿನಿಮಾ ವಿಮರ್ಶೆ - ಟ್ರಸ್ಟ್ ಮಾಫಿಯಾ, ಅಧಿಕಾರದ ಆಟ, ಗುದ್ದಾಟದ ಮಧ್ಯೆ ಕಥೆಯ ಹರಿವು

ಯಾರು ಯಾರಿಗೆ ಯಾಕೆ ಹೊಡೆಯುತ್ತಿದ್ದಾರೆ ಅಂತ ಯೋಚಿಸಲೂ ಪುರುಸೊತ್ತಿಲ್ಲದಂತೆ ಹೊಡೆತ ಬೀಳುತ್ತಿರುತ್ತದೆ, ಗನ್ ಘರ್ಜಿಸುತ್ತಿರುತ್ತದೆ. ಇನ್ನೊಂದು ಬಗೆಯಲ್ಲಿ ನೋಡಿದರೆ ಇದು ಶ್ರೀಮಂತನಾಗಿ ಬೆಳೆದ ರಾಯ್‌ ಸಾಹಸಯಾತ್ರೆ.

Read Full Story