ಕೇವಲ 2 ಗಂಟೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ; ಗಂಟೆಗೆ 220 ಕಿ.ಮೀ ವೇಗದ ಹೊಸ ರೈಲು!
ಭಾರತದಲ್ಲಿ ಗಂಟೆಗೆ 220 ಕಿ.ಮೀ ವೇಗದಲ್ಲಿ ಚಲಿಸುವ ಹೊಸ ರೈಲುಗಳು ಸಂಚಾರ ಆರಂಭಿಸಿದರೆ, ರಾಜಧಾನಿ ಬೆಂಗಳೂರಿನಿಂದ ಹುಬ್ಬಳ್ಳಿ ನಗರಕ್ಕೆ ಕೇವಲ 2 ಗಂಟೆಗಳಲ್ಲಿ ತಲುಪಬಹುದು. ವಂದೇ ಭಾರತ್ ರೈಲುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೂರದ ಪ್ರಯಾಣ
ವಂದೇ ಭಾರತ್
ಕೇಂದ್ರ ರೈಲ್ವೆ ಮಂಡಳಿಯ ಒಪ್ಪಿಗೆ
ವಂದೇ ಭಾರತ್ ರೈಲುಗಳ ವಿನ್ಯಾಸದ ವೇಗ ಗಂಟೆಗೆ 180 ಕಿ.ಮೀ. ಆದರೆ, ಇದಕ್ಕಿಂತಲೂ ವೇಗವಾಗಿ, ಅಂದರೆ ಗಂಟೆಗೆ 220 ಕಿ.ಮೀ ವೇಗದಲ್ಲಿ ಚಲಿಸುವ ಎರಡು ಹೊಸ ರೈಲುಗಳನ್ನು ತಯಾರಿಸಲು ಕೇಂದ್ರ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ.
ಚೆನ್ನೈನ ಐಸಿಎಫ್ (ICF) ಮತ್ತು ಬಿಇಎಂಎಲ್ (BEML) ಸಂಸ್ಥೆಗಳು ಜಂಟಿಯಾಗಿ ಈ ರೈಲುಗಳನ್ನು ತಯಾರಿಸಲಿವೆ. ಇವು ಸ್ಟೇನ್‌ಲೆಸ್ ಸ್ಟೀಲ್‌ನಿಂದ ನಿರ್ಮಾಣವಾಗಲಿದ್ದು, ಆಧುನಿಕ ಏರೋಡೈನಾಮಿಕ್ ವಿನ್ಯಾಸ ಮತ್ತು ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುತ್ತವೆ.
ಗಂಟೆಗೆ 220 ಕಿ.ಮೀ ವೇಗದ ಹೊಸ ರೈಲು
ಗಂಟೆಗೆ 220 ಕಿ.ಮೀ ವೇಗದ ಹೊಸ ರೈಲುಗಳು ಬಂದರೆ, ಚೆನ್ನೈನಿಂದ ಕೊಯಮತ್ತೂರು ಮತ್ತು ಮಧುರೈಗೆ 4 ಗಂಟೆಗಳಲ್ಲಿ ತಲುಪಬಹುದು. ಅಷ್ಟೇ ಅಲ್ಲ, ಚೆನ್ನೈನಿಂದ ಬೆಂಗಳೂರಿಗೆ ಕೇವಲ 2 ಗಂಟೆಗಳಲ್ಲಿ, ಹಾಗೆಯೇ ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೇವಲ 2 ಗಂಟೆಯಲ್ಲಿ ಹೋಗಿಬಿಡಬಹುದು. ಈ ರೈಲುಗಳ ಮೂಲಕ ದೂರ ಪ್ರಯಾಣದ ಅವಧಿ ಕಡಿಮೆಯಾಗಲಿದೆ.
ಸದ್ಯ ಭಾರತದ ಅತಿ ವೇಗದ ರೈಲು 'ವಂದೇ ಭಾರತ್' ಗರಿಷ್ಠ 160 ಕಿ.ಮೀ ವೇಗದಲ್ಲಿ ಮಾತ್ರ ಚಲಿಸುತ್ತಿದೆ. ಭವಿಷ್ಯದ ಹೈ-ಸ್ಪೀಡ್ ರೈಲು ಮಾರ್ಗಗಳಿಗೆ ಈ 220 ಕಿ.ಮೀ ವೇಗದ ರೈಲುಗಳು ಬಹಳ ಮುಖ್ಯವಾಗಲಿವೆ.
ಇದನ್ನೂ ಓದಿ: ಬೇಸಿಗೆ ರಜೆ ಹಿನ್ನೆಲೆ, ಮೈಸೂರಿನಿಂದ ಪೂರ್ವ ಭಾರತಕ್ಕೆ ವಿಶೇಷ ರೈಲು, ಕರ್ನಾಟಕದ ಯಾವ ನಿಲ್ದಾಣಗಳಲ್ಲಿ ನಿಲುಗಡೆಯಿದೆ?
ರೈಲ್ವೆ ಹಳಿಗಳ ಮೇಲ್ದರ್ಜೆ ಅಗತ್ಯ
ಭಾರತದಲ್ಲಿ ಈಗಿರುವ ರೈಲ್ವೆ ಹಳಿಗಳು ಗಂಟೆಗೆ 130 ರಿಂದ 160 ಕಿ.ಮೀ ವೇಗವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ, 220 ಕಿ.ಮೀ ವೇಗದ ರೈಲುಗಳು ಬಂದರೂ, ಆ ವೇಗವನ್ನು ತಡೆದುಕೊಳ್ಳುವಂತೆ ಹಳಿಗಳನ್ನು ಮೇಲ್ದರ್ಜೆಗೇರಿಸಿದರೆ ಮಾತ್ರ ಅವುಗಳನ್ನು ಓಡಿಸಲು ಸಾಧ್ಯ.
ಇದನ್ನೂ ಓದಿ: ರಿಸರ್ವೇಶನ್ ಇರಲಿಲ್ಲ, ಟಾಯ್ಲೆಟ್ ಬಳಿ ಮಲಗಿದ್ದ ಸೈನಿಕರಿಗೆ ಸೀಟ್ ಕೊಟ್ಟ TTE; ಹೃದಯ ಗೆದ್ದ ವಿಡಿಯೋ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

