MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಭದ್ರಾ ಹಿನ್ನೀರಿಂದ ದೂರವಾಗಿದ್ದವರನ್ನು ಹತ್ತಿರಕ್ಕೆ ತಂದ ಹೊನ್ನೇಕೊಡಿಗೆ ಸೇತುವೆ, NR ಪುರದ 65 ವರ್ಷಗಳ ಕನಸು ನನಸು!

ಭದ್ರಾ ಹಿನ್ನೀರಿಂದ ದೂರವಾಗಿದ್ದವರನ್ನು ಹತ್ತಿರಕ್ಕೆ ತಂದ ಹೊನ್ನೇಕೊಡಿಗೆ ಸೇತುವೆ, NR ಪುರದ 65 ವರ್ಷಗಳ ಕನಸು ನನಸು!

ವರದಿ: ಯಡಗೆರೆ ಮಂಜುನಾಥ್1957ರಲ್ಲಿ ನಿರ್ಮಾಣವಾದ ಭದ್ರಾ ಅಣೆಕಟ್ಟಿನಿಂದಾಗಿ ನರಸಿಂಹರಾಜಪುರ ತಾಲೂಕಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದವು. ಇದೀಗ, ₹38 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯು 19 ಹಳ್ಳಿಗಳ 2 ಸಾವಿರಕ್ಕೂ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸಿದೆ.

3 Min read
Author : Gowthami K
Published : Apr 11 2026, 07:46 PM IST
Share this Photo Gallery
  • FB
  • TW
  • Linkdin
  • Whatsapp
16
₹ 38 ಕೋಟಿ ವೆಚ್ಚದಲ್ಲಿ ಹೊನ್ನೇಕೊಡಿಗೆ ಸಂಪರ್ಕ ಸೇತುವೆ
Image Credit : Asianet News

₹ 38 ಕೋಟಿ ವೆಚ್ಚದಲ್ಲಿ ಹೊನ್ನೇಕೊಡಿಗೆ ಸಂಪರ್ಕ ಸೇತುವೆ

ಚಿಕ್ಕಮಗಳೂರು: ಬಯಲು ಸೀಮೆಯ ದಾಹ ತಣಿಸಲು 1957ರಲ್ಲಿ ನಿರ್ಮಾಣವಾದ ಭದ್ರಾ ಡ್ಯಾಂನಿಂದ ಎನ್‌.ಆರ್.ಪುರ ತಾಲೂಕಿನ ಅರ್ಧ ಭಾಗದಲ್ಲಿ ಭದ್ರೆಯ ಹಿನ್ನೀರು ನಿಂತು ತಾಲೂಕಿನ ಕೆಲವು ಗ್ರಾಮಗಳೇ ಪಟ್ಟಣದಿಂದ ಬೇರ್ಪಟ್ಟಿತ್ತು. ಇದರಿಂದ ಉಂಟಾಗಿದ್ದ ಅನಾನುಕೂಲ ನಿವಾರಿಸುವ ಬಹುದಿನದ ಕನಸು ನನಸಾಗುವ ಕಾಲ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯಿಂದ ಸನ್ನಿಹಿತವಾಗಿದೆ.

₹ 38 ಕೋಟಿ ವೆಚ್ಚದ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ನಿರ್ಮಾಣದಿಂದ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ 6 ಗ್ರಾಮಗಳ 19 ಹಳ್ಳಿಗಳ ಅಂದಾಜು 2 ಸಾವಿರ ಜನರಿಗೆ ಪಟ್ಟಣ ಹತ್ತಿರವಾಗಿದ್ದು ಹೊಸ ಇತಿಹಾಸ ಸೃಷ್ಟಿಯಾಗಿದೆ. ತಾಲೂಕಿನ ಹೊನ್ನೇಕೊಡಿಗೆ ಗ್ರಾಪಂನಲ್ಲಿ 8 ಗ್ರಾಮಗಳಿದ್ದು ಡ್ಯಾಂ ನಿರ್ಮಾಣದಿಂದ ಹಂದೂರು, ಸಾಲೂರು, ಹೊನ್ನೇ ಕೊಡಿಗೆ, ವರ್ಕಾಟೆ,ಸಾರ್ಯ, ಬಿಳಾಲು ಕೊಪ್ಪ ಗ್ರಾಮಗಳ ಹಲವು ಭಾಗಗಳು ನೀರಿನಿಂದ ಆವೃತವಾದವು.

26
19 ಹಳ್ಳಿಗಳ 2 ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು 20 ಕಿ.ಮೀ ಸುತ್ತಬೇಕಿತ್ತು
Image Credit : Asianet News

19 ಹಳ್ಳಿಗಳ 2 ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು 20 ಕಿ.ಮೀ ಸುತ್ತಬೇಕಿತ್ತು

ನಂದಿಗಾವೆ, ದಂಡು ಬಿಟ್ಟಹಾರ ಗ್ರಾಮಗಳು ಸಂಪರ್ಕ ಕಡಿತಗೊಂಡು ತರೀಕೆರೆ ತಾಲೂಕಿಗೆ ಹತ್ತಿರವಾದವು. ಹೊನ್ನೇಕೊಡಿಗೆಯಿಂದ ನರಸಿಂಹರಾಜಪುರ ಪಟ್ಟಣಕ್ಕಿದ್ದ ಮುಖ್ಯ ಸಂಪರ್ಕ ರಸ್ತೆ ಮುಳುಗಡೆಯಾಗಿ 6 ಗ್ರಾಮಗಳ ಹಳ್ಳಿ ಗಳಾದ ಹಂದೂರು, ಬಿಳಾಲುಕೊಪ್ಪ, ಸಾಲೂರು, ಕುಂಬಸಾಲೂರು, ಮೋರಿ ಮಠ, ಹೊನ್ನೇಕೊಡಿಗೆ, ಹಂತುವಾನಿ, ಹಂಚಿನಮನೆ, ಬಿದಿರುಮನೆ, ಕಲ್ಲು ಗಡ್ಡೆ, ವರ್ಕಾಟೆ, ಅಡ್ಡಟ್ಟೆ, ಹೊಸಗದ್ದೆ, ಕೋಡಿಗದ್ದೆ,ಬಸರಿಗಳಲೆ, ಸಾರ್ಯ, ಕೂಸಗಲ್ಲು, ಸಾರ್ಯ, ಕರ್ಕೂಟ ಸೇರಿದಂತೆ 19 ಹಳ್ಳಿಗಳ 2 ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ನರಸಿಂಹರಾಜಪುರಕ್ಕೆ ಬರಲು15-20 ಕಿ.ಮೀ. ಬಳಸಿಕೊಂಡು ಬಾಳೆಹೊನ್ನೂರು ರಸ್ತೆ, ಬಿ.ಎಚ್.ಕೈಮರ ಮೂಲಕ ಬರಬೇಕಾಯಿತು. ಭದ್ರಾ ಡ್ಯಾಂಗಾಗಿ ತಮ್ಮ ಜಮೀನು ಕಳೆದುಕೊಂಡ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಲು ಇಂಧನ ಮತ್ತು ಸಮಯ ವ್ಯಯಿಸಿ ಸುತ್ತು ಹಾಕಿಕೊಂಡು ಬರುವಂತಾಗಿತ್ತು. ಹಲವು ವರ್ಷ ಹೊನ್ನೇಕೊಡಿಗೆ ಗ್ರಾಪಂ ಗ್ರಾಮಸ್ಥರು ದೋಣಿ ಮೂಲಕವೇ ಪಟ್ಟಣಕ್ಕೆ ಬರುತ್ತಿದ್ದರು.

Related Articles

Related image1
ಅನುದಾನ ಕೊರತೆ ಸ್ಥಗಿತವಾದ ₹21 ಸಾವಿರ ಕೋಟಿ ಭದ್ರಾ ಮೇಲ್ದಂಡೆ ಯೋಜನೆ: ಕೆಲಸವೇ ಇಲ್ಲದೆ ಕಚೇರಿ ಕಾಯೋಕೆ ನೂರೆಂಟು ಮಂದಿ!
Related image2
Chikkamagaluru: ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ಭದ್ರಾ ಹಿನ್ನೀರಿನ ನೂತನ ಸೇತುವೆ ಈಗ ಪ್ರವಾಸಿಗರ ಹಾಟ್‌ಸ್ಪಾಟ್
36
ಹುಟ್ಟೂರಿನ ಅಭಿವೃದ್ಧಿಗಾಗಿ ಶ್ರಮಿಸಿದ ಎಂ.ಶ್ರೀನಿವಾಸ್
Image Credit : Asianet News

ಹುಟ್ಟೂರಿನ ಅಭಿವೃದ್ಧಿಗಾಗಿ ಶ್ರಮಿಸಿದ ಎಂ.ಶ್ರೀನಿವಾಸ್

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರ ಹುಟ್ಟೂರಾದ ನರಸಿಂಹರಾಜಪುರದ ಋಣ ತೀರಿಸಲು ತಾಲೂಕಿನ ಅಭಿವೃದ್ಧಿಗೆ ಮುಂದಾಗಿ ಶ್ರಮಿಸಿದವರು. ತಮ್ಮ ಊರಿನ ಜನರ ಬವಣೆ ಅರಿತಿದ್ದ ಅವರು ಕಡಹಿನ ಬೈಲು ಏತ ನೀರಾವರಿ ಯೋಜನೆ ಉದ್ಘಾಟನೆಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೊನ್ನೇಕೊಡಿಗೆ ಸಂಪರ್ಕ ಸೇತುವೆಗಾಗಿ ಮನವಿ ಮಾಡಿದ್ದರಿಂದ ಸಿದ್ದರಾಮಯ್ಯ ಸೇತುವೆಗೆ ಹಣ ಮಂಜೂರು ಮಾಡಿದ್ದರು. 2017ರಲ್ಲಿ ಸ್ವತಃ ಸಿದ್ದರಾಮಯ್ಯ ಆಗಮಿಸಿ ಹೊನ್ನೇಕೊಡಿಗೆ ಸೇತುವೆಗೆ ಶಂಕುಸ್ಥಾಪನೆ ಮಾಡಿದ್ದರು. 8 ವರ್ಷಗಳ ಬಳಿಕ ಸೇತುವೆ ಪೂರ್ಣ ಗೊಂಡಿದ್ದು ಸಿದ್ದರಾಮಯ್ಯ ಅವರಿಂದಲೇ ಏ.13 ರ ಸೋಮವಾರ ಬೆಳಿಗ್ಗೆ ಲೋಕಾರ್ಪಣೆಗೊಳ್ಳುತ್ತಿದೆ. ಈಗ ₹38.46 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಈ ಬೃಹತ್ ಸೇತುವೆ ಕಾರ್ಯಾರಂಭಿಸಲು ಮದು ಮಗನಂತೆ ಸಿಂಗಾರಗೊಂಡಿದೆ. ಸೇತುವೆ 504 ಮೀ. ಉದ್ದ, 7.50 ಮೀ. ಅಗಲವಿದೆ. 14 ಪಿಲ್ಲರ್ ಗಳಿಂದ ನಿಂತಿರುವ ಸೇತುವೆ ಎರಡೂ ಭಾಗದಲ್ಲಿ ಭದ್ರಾ ಹಿನ್ನೀರಿನ ದೃಶ್ಯದಿಂದ ಕಣ್ತುಂಬಿಕೊಳ್ಳುವಂತಿದೆ.

46
ನರಸಿಂಹರಾಜಪುರದ 2 ಸೇತುವೆಗಳ ಕಥೆ
Image Credit : Asianet News

ನರಸಿಂಹರಾಜಪುರದ 2 ಸೇತುವೆಗಳ ಕಥೆ

ನರಸಿಂಹರಾಜಪುರ ತಾಲೂಕಿನ 2 ಸೇತುವೆಗಳು ತಮ್ಮ ಕಥೆ ಹೇಳುತ್ತಿವೆ. ಒಂದು ಭದ್ರಾ ಹಿನ್ನೀರಿನಲ್ಲಿ ಮುಳುಗಡೆಯಾದ ತಡಸ ಸೇತುವೆ. ಇನ್ನೊಂದು ಸ್ಥಳೀಯರ ಬಹಳ ದಿನಗಳ ಕನಸು ನನಸಾಗಿಸುತ್ತಿರುವ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಹೊಸ ಕಥೆಗೆ ಮುನ್ನುಡಿ ಬರೆದಿದೆ.

ತಾಲೂಕಿನ ಅರ್ಧ ಭಾಗವನ್ನು ಭದ್ರಾ ಹಿನ್ನೀರು ಆಪೋಷನ ತೆಗೆದುಕೊಳ್ಳುವ ಮುನ್ನಾ ತರೀಕೆರೆಯಿಂದ ನರಸಿಂಹರಾಜ ಪುರಕ್ಕೆ ತಡಸ ಸೇತುವೆ ಮೂಲಕ ರೈಲು ಬರುತ್ತಿತ್ತು. ನರಸಿಂಹರಾಜಪುರದಿಂದ ಕೇವಲ 5 ಕಿ.ಮೀ.ದೂರದ ತಡಸ ಎಂಬಲ್ಲಿ ಇದ್ದ ದೊಡ್ಡ ಹಳ್ಳಕ್ಕೆ ಬ್ರಿಟಿಷರು ಕಲ್ಲಿನಿಂದಲೇ ಸೇತುವೆ ನಿರ್ಮಿಸಿದ್ದರಿಂದ ಅದರ ಮೇಲೆ ವಾಹನ ಹಾಗೂ ಒಂದು ಬದಿಯಲ್ಲಿ ರೈಲು ಸಂಚರಿಸುತ್ತಿತ್ತು. ಭದ್ರಾ ಹಿನ್ನೀರಿನಲ್ಲಿ ಈ ತಡಸ ಸೇತುವೆ ಮುಳುಗಡೆಯಾಗಿ ಗತಕಾಲ ಸೇರಿತು. ಬರಗಾಲದಲ್ಲಿ ಹಿನ್ನೀರು ಕ್ಷೀಣಿಸಿದಾಗ ಕಾಣುವ ತಡಸಾ ಸೇತುವೆ ವೀಕ್ಷಣೆಗೆ ತಂಡೋಪ ತಂಡವಾಗಿ ಜನ ಬರುತ್ತಾರೆ.

56
ಸಮೀಪ ಮಾರ್ಗ ಸೃಷ್ಟಿಸಿದ ಸೇತುವೆ
Image Credit : Asianet News

ಸಮೀಪ ಮಾರ್ಗ ಸೃಷ್ಟಿಸಿದ ಸೇತುವೆ

ಈ ನೂತನ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಮೂಲಕ ಮುಂದೆ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿಗೆ ಹೋಗಲು ಅನುಕೂಲವಾಗಲಿದೆ. ನರಸಿಂಹರಾಜಪುರದಿಂದ ಚಿಕ್ಕಮಗಳೂರಿಗೆ ಹೋಗಲು 90 ಕಿ.ಮೀ. ಆಗಲಿದೆ. ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಮೂಲಕ ಹಂದೂರು, ಸಾಲೂರು, ಮೋರಿಮಠ,ಹೆಬ್ಬೆ ಭವಾನಿ ಶಂಕರ ದೇವಸ್ಥಾನದ ಹತ್ತಿರದವರೆಗೆ ರಸ್ತೆ ಇದೆ. ಅಲ್ಲಿ ಭದ್ರಾ ನದಿಗೆ ಸೇತುವೆ ನಿರ್ಮಿಸಿದರೆ ಮುಂದೆ ಹಿಪ್ಲಾ, ಮಾಡ್ಲ, ಮುತ್ತೋಡಿ, ಮಲ್ಲಂದೂರು ಮಾರ್ಗವಾಗಿ ಇರುವ ರಸ್ತೆ ಮೂಲಕ ಚಿಕ್ಕಮಗಳೂರಿಗೆ ಸೇರಬಹುದು. ಈ ರಸ್ತೆಯಲ್ಲಿ ಹೋದರೆ 40 ಕಿ.ಮೀ.ಉಳಿತಾಯವಾಗಲಿದೆ.

66
ಇಂಧನ ಉಳಿತಾಯ
Image Credit : Asianet News

ಇಂಧನ ಉಳಿತಾಯ

ಹೊನ್ನೇಕೊಡಿಗೆ ಸೇತುವೆಯಿಂದ ಈ ಭಾಗದ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಸೇತುವೆ ನಿರ್ಮಾಣದಿಂದ ಹತ್ತಾರು ಕಿ.ಮೀ. ಸುತ್ತುವರಿದು ನರಸಿಂಹರಾಜಪುರಕ್ಕೆ ಹೋಗುವ ಸಮಯ, ಇಂಧನ ಉಳಿತಾಯವಾಗಲಿದೆ. ಇದಕ್ಕಾಗಿ ಶ್ರಮಿಸಿದ ಎಂ.ಶ್ರೀನಿವಾಸ್ ಹಾಗೂ ಶಾಸಕ ಟಿ.ಡಿ.ರಾಜೇಗೌಡರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಹೇಳುತ್ತೇವೆ.

-ಮೀನಾಕ್ಷಿ ಕಾಂತರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ, ಹೊನ್ನೇಕೊಡಿಗೆ

ಹೊನ್ನೇಕೊಡಿಗೆ ಸಂಪರ್ಕ ಸೇತುವೆ ನನಗೆ ತೃಪ್ತಿಕೊಟ್ಟ ಜೀವನದ ದೊಡ್ಡ ಸಾಧನೆ. ಹೊನ್ನೇಕೊಡಿಗೆ ಗ್ರಾಪಂ ಗ್ರಾಮಸ್ಥರ ಕನಸು ನನಸಾಗಿದೆ. ಕಳೆದ 65 ವರ್ಷದಿಂದ 15-20 ಕಿ.ಮೀ. ಸುತ್ತುವರಿದು ಪಟ್ಟಣಕ್ಕೆ ಬರುತ್ತಿದ್ದವರು ಈಗ ಕೇವಲ 4 ರಿಂದ 5 ಕಿ.ಮೀ. ಬಂದರೆ ಪಟ್ಟಣಕ್ಕೆ ಸೇರಬಹುದು. ₹60 ಕೋಟಿ ವೆಚ್ಚದಲ್ಲಿ ಎನ್.ಆರ್.ಪುರ ಪಟ್ಟಣದ ರಸ್ತೆ ಅಗಲೀಕರಣ ಸಹ ಆಗಲಿದೆ.

-ಎಂ.ಶ್ರೀನಿವಾಸ್, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಚಿಕ್ಕಮಗಳೂರು
ಸುದ್ದಿ
ಕರ್ನಾಟಕ ಸುದ್ದಿ
ತುಂಗಭದ್ರಾ ಅಣೆಕಟ್ಟು

Latest Videos
Recommended Stories
Recommended image1
ಚಿಕ್ಕಮಗಳೂರಲ್ಲಿ ಗೌಡರ ಕಾಫಿ ತೋಟಕ್ಕೆ ಬೆಂಕಿ; ಸುಟ್ಟು ಕರಕಲಾದ ಎಲ್ಲ ಗಿಡಕ್ಕೂ ಪರಿಹಾರ ಕೊಡಲು ಆಗ್ರಹ!
Recommended image2
ಆರ್‌ಡಿ ಪಾಟೀಲ್ ಜೈಲು ವರ್ಗಾವಣೆ ರದ್ದು, ಹೈಕೋರ್ಟ್ ಮಹತ್ವದ ತೀರ್ಪು ಮತ್ತೆ ಕಲಬುರಗಿಗೆ ಶಿಫ್ಟ್
Recommended image3
ಬೆಂಗಳೂರು: ಅಜ್ಜಿ ಮನೆಯಲ್ಲೇ 5 ಲಕ್ಷದ ಚಿನ್ನ ಕದ್ದ ಮೊಮ್ಮಗ! ಪೊಲೀಸರು ಬಂಧನಕ್ಕೆ ಬಂದಾಗ ಅದಾಗಲೇ ಅಪ್ರಾಪ್ತ ಜೈಲಲಿದ್ದ!
Related Stories
Recommended image1
ಅನುದಾನ ಕೊರತೆ ಸ್ಥಗಿತವಾದ ₹21 ಸಾವಿರ ಕೋಟಿ ಭದ್ರಾ ಮೇಲ್ದಂಡೆ ಯೋಜನೆ: ಕೆಲಸವೇ ಇಲ್ಲದೆ ಕಚೇರಿ ಕಾಯೋಕೆ ನೂರೆಂಟು ಮಂದಿ!
Recommended image2
Chikkamagaluru: ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ಭದ್ರಾ ಹಿನ್ನೀರಿನ ನೂತನ ಸೇತುವೆ ಈಗ ಪ್ರವಾಸಿಗರ ಹಾಟ್‌ಸ್ಪಾಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved