09:57 PM (IST) Jun 28

Karnataka News Live:ನಾಳೆಯಿಂದ ವಿದ್ಯಾರ್ಥಿ ಬಸ್ ಪಾಸ್ ಹಣ ಮರುಪಾವತಿ ಅರ್ಜಿ ಪ್ರಕ್ರಿಯೆ ಆರಂಭ, ಆ್ಯಪ್ಲಿಕೇಶನ್ ಸಲ್ಲಿಕೆ ಹೇಗೆ?

ರಾಜ್ಯ ಸರ್ಕಾರ ಗಂಡು ಮಕ್ಕಳಿಗೂ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದೆ. ಈಗಾಗಲೇ ಬಸ್ ಪಾಸ್‌ಗೆ ಹಣ ಪಾವತಿ ಮಾಡಿದ ವಿದ್ಯಾರ್ಥಿಗಳಿಗೆ ನಾಳೆಯಿಂದ ಮರುಪಾವತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಅರ್ಜಿ ಸಲ್ಲಿಕೆ ಹೇಗೆ?

Read Full Story
08:56 PM (IST) Jun 28

Karnataka News Live:Kempegowdaರ ಕಥೆ ತೆರೆಗೆ ಬರ್ತಿದೆ... ನೆನಪಿರಲಿ ಪ್ರೇಮ್ ಹೊಸ ಅವತಾರ ನೋಡಿ ಅಭಿಮಾನಿಗಳು ಶಾಕ್!

Kempambudhi: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಆಡಳಿತ ವೈಭವ ಮತ್ತು ಜನಪರ ಚಿಂತನೆಗಳನ್ನು ತೆರೆಗೆ ತರುವ ಮಹತ್ವಾಕಾಂಕ್ಷೆಯ ಐತಿಹಾಸಿಕ ಸಿನಿಮಾ ‘ಕೆಂಪಾಂಬುಧಿ’ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

Read Full Story
08:34 PM (IST) Jun 28

Karnataka News Live:ಬಾಮಾ ಹರೀಶ್‌ ಪುತ್ರ ಉಲ್ಲಾಸ್‌ ಗೌಡ ದುರಂತ ಅಂತ್ಯದ ಕೊನೇ ಕ್ಷಣಗಳು ಹೀಗಿದ್ದವು; ಮಾಹಿತಿ ನೀಡಿದ ಆಪ್ತ ಸ್ನೇಹಿತ!

ಇಂದು ಬೆಂಗಳೂರಿನ ವಿಜಯನಗರದ ಸ್ವಂತ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸ್ಯಾಂಡಲ್‌ವುಡ್‌ನ ಗಣ್ಯರು ಹಾಗೂ ಬಂಧುಮಿತ್ರರು ಕಣ್ಣೀರಿನ ವಿದಾಯ ಕೋರಿದರು. ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿಯ ಚಿತಾಗಾರದಲ್ಲಿ ಉಲ್ಲಾಸ್ ಅವರ ಅಂತ್ಯಕ್ರಿಯೆ ನೆರವೇರಿದೆ.

Read Full Story
07:55 PM (IST) Jun 28

Karnataka News Live:Radhika Pandit - ಯಶ್ ಪತ್ನಿ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ಬಗ್ಗೆ ನಿಮಗೆ ಈ ಆಸಕ್ತಿಕರ ಸಂಗತಿಗಳು ಗೊತ್ತಾ?

Radhika Pandit: ಗ್ಲಾಮರ್‌ಗಿಂತ ಪ್ರತಿಭೆಗೆ ಹೆಚ್ಚು ಮೌಲ್ಯ ನೀಡಿದ ನಟಿಯರಲ್ಲಿ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಹೆಸರು ಮೊದಲ ಸಾಲಿನಲ್ಲಿ ಕೇಳಿಬರುತ್ತದೆ. ಅವರ ಜನಪ್ರಿಯತೆ ಮಾತ್ರ ಇಂದಿಗೂ ಅಷ್ಟೇ ಗಟ್ಟಿಯಾಗಿದೆ.

Read Full Story
07:13 PM (IST) Jun 28

Karnataka News Live:Chanakya Niti - ತಂದೆ, ತಾಯಿ, ಹೆಂಡತಿ, ಮಗ... ಇವ್ರೇ ನಿಮಗೆ ಶತ್ರುಗಳಾಗೋದು ಯಾವಾಗ? ಚಾಣಕ್ಯ ಹೇಳೋದೇನು?

Chanakya Niti for Family: ಆಚಾರ್ಯ ಚಾಣಕ್ಯರು ತಮ್ಮ ಒಂದು ನೀತಿಯಲ್ಲಿ, ಕೆಲವು ವಿಶೇಷ ಸಂದರ್ಭಗಳಲ್ಲಿ ತಂದೆ-ತಾಯಿ, ಮಗ ಮತ್ತು ಹೆಂಡತಿಯೇ ಶತ್ರುಗಳಾಗುತ್ತಾರೆ ಎಂದು ಹೇಳಿದ್ದಾರೆ. ಆ ನೀತಿ ಏನು ಹೇಳುತ್ತೆ? ಇಲ್ಲಿದೆ ವಿವರ.

Read Full Story
07:10 PM (IST) Jun 28

Karnataka News Live:K Bhagyaraj Kannada remakes list - ಕೆ. ಭಾಗ್ಯರಾಜ್ ಸಿನಿಮಾಗಳನ್ನು ರೀಮೇಕ್ ಮಾಡಿ ಗೆದ್ದಿರುವ ಕನ್ನಡದ ಹೀರೋಗಳು ಇವರೇ ನೋಡಿ; ಇದು ಆ ಚಿತ್ರಗಳ ಲಿಸ್ಟ್!‌

ಶಿವರಾಜ್‌ಕುಮಾರ್ ನಟನೆಯ ಈ ಸಿನಿಮಾ ತಮಿಳಿನ ‘ಸುಂದರಕಾಂಡಂ’ ಚಿತ್ರದ ರಿಮೇಕ್. ಇದು ಶಿಕ್ಷಕ ಮತ್ತು ವಿದ್ಯಾರ್ಥಿನಿಯ ನಡುವಿನ ಸೂಕ್ಷ್ಮ ಕಥೆಯನ್ನು ಒಳಗೊಂಡಿತ್ತು. ಇನ್ನು, ಅನಂತ್ ನಾಗ್-ಸೌಂದರ್ಯ ನಟನೆಯ ‘ತೂಗುವೆ ಕೃಷ್ಣನ’ ಚಿತ್ರವು ತಮಿಳಿನ 'ಆರಾರೋ ಆರಿರಾರೋ' ಚಿತ್ರದ ರೂಪಾಂತರ.

Read Full Story
06:49 PM (IST) Jun 28

Karnataka News Live:ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ, ನಿಯಂತ್ರಣಕ್ಕೆ ಬಾರದ ಬೆಂಕಿ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಕೆಮಿಕಲ್ ಕಂಪನಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಭಾನುವಾರವಾದರೂ ಸುಮಾರು 20 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದೆ.

Read Full Story
06:32 PM (IST) Jun 28

Karnataka News Live:ಕಾರಿನಲ್ಲಿ ಬಂದು ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಿಂದ ಶೂ ಕಳ್ಳತನ, ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಕಾರಿನಲ್ಲಿ ಬಂದು ದುಬಾರಿ ಮೌಲ್ಯದ ಶೂಗಳನ್ನು ಕದಿಯುವ ಕೃತ್ಯ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಒಂದು ಅಪಾರ್ಟ್‌ಮೆಂಟ್‌ನಿಂದ ಬರೋಬ್ಬರಿ 1.35 ಲಕ್ಷ ರೂ ಮೌಲ್ಯದ ಶೂಗಳನ್ನು ಕದಿಯಲಾಗಿದೆ.

Read Full Story
06:14 PM (IST) Jun 28

Karnataka News Live:Gardening Tips - ಮೆಣಸಿನ ಗಿಡಕ್ಕೆ ಕೀಟಗಳ ಕಾಟವೇ? ದುಬಾರಿ ಸ್ಪ್ರೇ ಬೇಡ, ಈ ಮನೆಮದ್ದು ಟ್ರೈ ಮಾಡಿ!

Gardening Tips: ನಿಮ್ಮ ಮೆಣಸಿನ ಗಿಡದ ಎಲೆಗಳು ಇದ್ದಕ್ಕಿದ್ದಂತೆ ಮುದುಡಿಕೊಳ್ಳುತ್ತಿವೆಯೇ? ಹೊಸ ಚಿಗುರುಗಳು ಕುಗ್ಗಿವೆಯೇ? ಅಥವಾ ಎಲೆಗಳ ಕೆಳಗೆ ಸಣ್ಣಗೆ ಹಸಿರು, ಕಪ್ಪು ಅಥವಾ ಬಿಳಿ ಬಣ್ಣದ ಹುಳುಗಳು ಕಾಣಿಸುತ್ತಿವೆಯೇ?

Read Full Story
05:54 PM (IST) Jun 28

Karnataka News Live:Tomato Varieties - ಟೊಮೆಟೊದಲ್ಲಿ ಇಷ್ಟೊಂದು ವೆರೈಟಿ ಇದ್ಯಾ? ವರ್ಷಪೂರ್ತಿ ಫಸಲು ಕೊಡುವ ಬೆಸ್ಟ್ ತಳಿ ಯಾವುದು?

Tomato Varieties: ಎಲ್ಲಾ ಟೊಮೆಟೊ ಒಂದೇ ರೀತಿ ಇರಲ್ಲ. ಚೆರಿ, ದೇಸಿ, ರೋಮಾ ಮತ್ತು ಹೈಬ್ರಿಡ್ ಟೊಮೆಟೊಗಳದ್ದೇ ಆದ ಪ್ರತ್ಯೇಕ ವಿಶೇಷತೆಗಳಿವೆ. ಯಾವ ತಳಿಯ ಟೊಮೆಟೊ ಹೆಚ್ಚು ಕಾಲ ಫಸಲು ಕೊಡುತ್ತದೆ ಮತ್ತು ಭರ್ಜರಿ ಇಳುವರಿಗಾಗಿ ಅದರ ಆರೈಕೆ ಹೇಗೆ ಮಾಡಬೇಕು? ಇಲ್ಲಿದೆ ಮಾಹಿತಿ.

Read Full Story
02:22 PM (IST) Jun 28

Karnataka News Live:Tumakuru ದೇವರಾಯನದುರ್ಗ ಬೆಟ್ಟದಲ್ಲಿ ರೀಲ್ಸ್ ಹುಚ್ಚು - ಪ್ರಪಾತಕ್ಕೆ ಬಿದ್ದ ಉಪನ್ಯಾಸಕ!

ತುಮಕೂರಿನ ದೇವರಾಯನದುರ್ಗ ಬೆಟ್ಟದಲ್ಲಿ ರೀಲ್ಸ್ ಮಾಡಲು ಹೋಗಿ ಕಾಲೇಜು ಉಪನ್ಯಾಸಕರೊಬ್ಬರು ಪ್ರಪಾತಕ್ಕೆ ಬಿದ್ದಿದ್ದಾರೆ. ಸ್ಥಳೀಯರ ಸಮಯೋಚಿತ ರಕ್ಷಣೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಿಗಾಗಿ ಪ್ರಾಣ ಪಣಕ್ಕಿಡುವ ಅಪಾಯಕಾರಿ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ.
Read Full Story
02:02 PM (IST) Jun 28

Karnataka News Live:2027 Caste census - ದಲಿತರು ಧರ್ಮದ ಕಲಾಂನಲ್ಲಿ ಬೌದ್ಧ ಎಂದು ಬರೆಸಿ - ಅಂಬೇಡ್ಕರ್‌ ಮೊಮ್ಮಗ ಕರೆ!

ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶ್ವಂತ್ ಅಂಬೇಡ್ಕರ್, 2027ರ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ 'ಬೌದ್ಧ', ಜಾತಿಯಲ್ಲಿ 'ಮಹಾರ್' ಮತ್ತು ಭಾಷೆಯಲ್ಲಿ 'ಪಾಲಿ' ಎಂದು ನಮೂದಿಸಲು ಕರೆ ನೀಡಿದ್ದಾರೆ. 

Read Full Story
02:02 PM (IST) Jun 28

Karnataka News Live:Ba Ma Harish Son Ullas Gowda Death - ವಿಜಯನಗರ ನಿವಾಸದಲ್ಲಿ ಅಂತಿಮ ದರ್ಶನ; ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ

'ಈ ನೋವು ಕಳೆದುಕೊಂಡವ್ರಿಗೆ ಗೊತ್ತು. ಉಲ್ಲಾಸ್ ಒಬ್ಬ ಕನ್ನಡ ಚಿತ್ರರಂಗಕ್ಕೆ ಬೆಳಕು ಕೊಡುವ ನಿರ್ದೇಶಕನಾಗಿ ಬರಬೇಕಿತ್ತು. ಗೋವಾಗೆ ಫಿಲ್ಮ್ ಫೆಸ್ಟ್‌ಗೆ ಹೋದಾಗ ಬಾಡಿಗೆಗೆ ಬೈಕ್ ತೊಗೊಂಡು ಓಡಾಡಿಸಿದ್ದ. ಆ ನೆನಪುಗಳು ಹಚ್ಚ ಹಸಿರಾಗಿವೆ. ಉಲ್ಲಾಸ್ ನಿಂದ ಸ್ನೇಹಜೀವಿ, ಸಮಯ ಪ್ರಜ್ಞೆ, ದೊಡ್ಡವ್ರಿಗೆ ಕೊಡಬೇಕಾದ ಗೌರವ ಎಲ್ಲವೂ ಇತ್ತು.

Read Full Story
01:04 PM (IST) Jun 28

Karnataka News Live:ಬೆಂಗಳೂರು ನಗರ ಯೋಜನೆ - ಉದ್ಯಾನ ನಗರಿಯ ಕಳೆದುಹೋದ ವೈಭವದ ಕಥೆ ಹೇಳಿದ ಕಿರಣ್ ಮಜುಂದಾರ್ ಶಾ! ತರಹೇವಾರಿ ಕಮೆಂಟ್‌

ಕಿರಣ್ ಮಜುಂದಾರ್-ಶಾ ಅವರು ಬೆಂಗಳೂರಿನ ಅವೈಜ್ಞಾನಿಕ ನಗರೀಕರಣದ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡ ಚಿತ್ರವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಕಾಂಕ್ರೀಟ್ ರಸ್ತೆಗಳು ಮತ್ತು ಹಸಿರು, ಸುಸ್ಥಿರ ರಸ್ತೆಗಳ ನಡುವಿನ ವ್ಯತ್ಯಾಸವನ್ನು ತೋರಿಸುವ ಈ ಪೋಸ್ಟ್, ನಗರದ ಕಳಪೆ ಯೋಜನೆ ಮತ್ತು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story
01:02 PM (IST) Jun 28

Karnataka News Live:ಕಾರಹುಣ್ಣಿಮೆ ಸಂಭ್ರಮಕ್ಕೆ ಜೀವ ತುಂಬುತ್ತಿದ್ದ ಈ ಕಸುಬು ಕಣ್ಮರೆ! ಎತ್ತುಗಳ ಕೊಂಬಿಗೆ ಬಣ್ಣ ಹಚ್ಚಿದ ಕೈಗಳು ಈಗ ಖಾಲಿ!

ಕೃಷಿಯಲ್ಲಿ ಯಾಂತ್ರೀಕರಣದಿಂದಾಗಿ ಎತ್ತುಗಳ ಬಳಕೆ ಕಡಿಮೆಯಾಗಿದ್ದು, ಕಾರ ಹುಣ್ಣಿಮೆಯ ಸಂದರ್ಭದಲ್ಲಿ ಮಹತ್ವ ಪಡೆಯುವ ಎತ್ತುಗಳ ಕೊಂಬು ಕೆತ್ತುವ ದೇಶಿ ಕಸುಬು ನೇಪಥ್ಯಕ್ಕೆ ಸರಿಯುತ್ತಿದೆ. ಈ ಕಾಯಕವನ್ನೇ ನಂಬಿ ಬದುಕುತ್ತಿರುವ ವರದಾಪುರದ ನೂರ್‌ ಸಾಹೇಬ್‌ರಂತಹ ಕೆಲವೇ ಕುಶಲಕರ್ಮಿಗಳು ಮಾತ್ರ ಉಳಿದುಕೊಂಡಿದೆ.

Read Full Story
11:53 AM (IST) Jun 28

Karnataka News Live:SN Shankar Death - ನಿನ್ನೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ 'ಉಲ್ಟಾ ಪಲ್ಟಾ' ಸಿನಿಮಾದ ನಿರ್ದೇಶಕ ಇನ್ನಿಲ್ಲ

Director SN Shankar Death: ಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ನಿರ್ದೇಶಖ ಎಸ್‌ ಎನ್‌ ಶಂಕರ್‌ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಅವರು ಇಂದು ಇನ್ನಿಲ್ಲ ಎನ್ನೋದು ಅನೇಕರಿಗೆ ಶಾಕ್‌ ನೀಡಿದೆ.

Read Full Story
09:56 AM (IST) Jun 28

Karnataka News Live:ಇ-ಕೆವೈಸಿ, ಆಧಾರ ಲಿಂಕ್ ಮಾಡಿಸದ 6 ಲಕ್ಷ ರೈತರಿಗೆ ಬಂದಿಲ್ಲ ‘ಕಿಸಾನ್‌ ಸಮ್ಮಾನ್‌’ ಹಣ! ನಿಮಗೂ ಬಂದಿಲ್ವ? ಮೊದಲು ಈ ಕೆಲಸ ಮಾಡಿ

ಕೇಂದ್ರ ಸರ್ಕಾರದ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್' ಯೋಜನೆಯ 23ನೇ ಕಂತಿನ ಹಣವು ರಾಜ್ಯದ 6 ಲಕ್ಷಕ್ಕೂ ಅಧಿಕ ರೈತರಿಗೆ ತಲುಪಿಲ್ಲ. ಇ-ಕೆವೈಸಿ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡದಿರುವುದು ಈ ತಾಂತ್ರಿಕ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಹಣ ಬರದಿದ್ದರೆ ತಡಮಾಡದೆ ಈ ಕೆಲಸ ಮಾಡಿ.

Read Full Story
09:54 AM (IST) Jun 28

Karnataka News Live:Sharmila Mandre Engagement - ಹೀರೋಯಿನ್‌ ಆಗಿ 20 ವರ್ಷ; ರಿಯಲ್‌ ಲೈಫ್‌ ಹೀರೋ ಹುಡ್ಕೊಂಡ ಶರ್ಮಿಳಾ ಮಾಂಡ್ರೆ

Kannada Actress Sharmiela Mandre: ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಎಂಗೇಜ್‌ ಆಗಲಿದ್ದಾರೆ ಎನ್ನಲಾಗಿತ್ತು, ಆಮೇಲೆ ಅವರೇ ಹೌದು ಎಂದು ಹೇಳಿದ್ದರು. ಈಗ ನಿಶ್ಚಿತಾರ್ಥದ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story
08:55 AM (IST) Jun 28

Karnataka News Live:Bloom Avenue Greening Project - ಬೆಂಗಳೂರು ರಸ್ತೇಲಿ ವರ್ಷವಿಡೀ ಅರಳಲಿವೆ ಬಣ್ಣದ ಹೂಗಳು!

Bloom Avenue Greening Project: ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೇಜರ್‌ ಆರ್ಟಿರಿಯಲ್‌ ರಸ್ತೆಯು (MAR) ವರ್ಷದ 365 ದಿನವೂ ಹಳದಿ, ನೇರಳೆ, ಗುಲಾಬಿ ಸೇರಿ ವಿವಿಧ ಹೂವುಗಳಿಂದ ಕಂಗೊಳಿಸುವಂತೆ ಮಾಡಲು ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಸಂಸ್ಥೆ ‘ಬ್ಲೂಮ್‌ ಅವೆನ್ಯೂ’ ಪ್ರಾಜೆಕ್ಟ್‌.

Read Full Story
08:53 AM (IST) Jun 28

Karnataka News Live:ಬೈರಕುಪ್ಪ ಸೇತುವೆ - ಕರ್ನಾಟಕ-ಕೇರಳ ಸಂಪರ್ಕ, ದಶಕದ ಕನಸಿಗೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಮರುಜೀವ!

ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರು, ಕರ್ನಾಟಕ ಮತ್ತು ಕೇರಳವನ್ನು ಸಂಪರ್ಕಿಸುವ ಬೈರಕುಪ್ಪ ಸೇತುವೆ ಯೋಜನೆಯನ್ನು ತ್ವರಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬಂಡೀಪುರ ಅರಣ್ಯ ಮಾರ್ಗವನ್ನು ತಪ್ಪಿಸಿ, ಕಬಿನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಈ ಯೋಜನೆಯು 30 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.
Read Full Story