ಕಾರಿನಲ್ಲಿ ಬಂದು ದುಬಾರಿ ಮೌಲ್ಯದ ಶೂಗಳನ್ನು ಕದಿಯುವ ಕೃತ್ಯ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಒಂದು ಅಪಾರ್ಟ್‌ಮೆಂಟ್‌ನಿಂದ ಬರೋಬ್ಬರಿ 1.35 ಲಕ್ಷ ರೂ ಮೌಲ್ಯದ ಶೂಗಳನ್ನು ಕದಿಯಲಾಗಿದೆ.
ಬೆಂಗಳೂರು (ಜೂ.28) ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಿಂದ ಶೂಗಳನ್ನು ಕದಿಯು ಘಟನೆ ಬೆಳೆಕಿಗೆ ಬಂದಿದೆ. ಇಬ್ಬರು ಕಾರಿನಲ್ಲಿ ಬಂದು ಅಪಾರ್ಟ್‌ಮೆಂಟ್‌ಗೆ ನುಗ್ಗಿ ಮನೆಯ ಹೊರಗಿಟ್ಟಿದ್ದ ಶೂಗಳನ್ನು ಕದಿಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕದ್ದ ಶೂಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಕಾರು ಹತ್ತಿ ಪರಾರಿಯಾಗುತ್ತಿರುವ ದೃಶ್ಯ ದಾಖಲಾಗಿದೆ. ಬ್ರ್ಯಾಂಡೆಡ್ ಶೂಗಳನ್ನು ಮಾತ್ರ ಈ ಕಳ್ಳರು ಕದ್ದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಕಾರಿನಲ್ಲಿ ಓಡಾಡುವ ಕಳ್ಳರು
ಬೆಂಗಳೂರಿನ ಸದಾನಂದನಗರಲ್ಲಿ ಶ್ರೀಧಾಮ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಓರ್ವ ಅಪಾರ್ಟ್‌ಮೆಂಟ್ ಒಳಗೆ ನುಗ್ಗಿ ತನಗೆ ಬೇಕಾದ ಬ್ರಾಂಡೆಡ್ ಶೂಗಳನ್ನು ಮಾತ್ರ ಆರಿಸಿಕೊಳ್ಳುತ್ತಾನೆ. ಕದ್ದ ಶೂಗಳನ್ನು ಗೋಣಿ ಚೀಲದಲ್ಲಿ ತುಂಬಿ ಯಾವುದೇ ಆತಂಕವಿಲ್ಲದೆ ಹೊರಗೆ ನಡೆದಿದ್ದಾರೆ. ಇದೇ ವೇಳೆ ಮತ್ತೊಬ್ಬ ಕಾರಿನಲ್ಲಿ ಬಂದು ಪಿಕ್ ಮಾಡಿದ್ದಾನೆ. ಇಬ್ಬರು ಕಾರಿನಲ್ಲಿ ಸ್ಥಳದಿಂದ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಒಟ್ಟು 1.35 ಲಕ್ಷ ರೂಪಾಯಿ ಮೌಲ್ಯದ 27 ಜೊತೆ ಶೂಗಳ ಕಳುವಾಗಿದೆ. ಬುಕಾರೋ, ಪುಮಾ, ಸ್ಕೆಚಸ್, ವರ್ಸಾ, ವಾಕರೋ ಸೇರಿದಂತೆ ಹಲವು ಬ್ರ್ಯಾಂಡೆಡ್ ಶೂಗಳನ್ನು ಕದ್ದಿದ್ದಾರೆ. ಕಳೆದ ಬುಧವಾರ ಬೆಳಗಿನ ಜಾವ 4:30 ರ ಸುಮಾರಿಗೆ ನಡೆದ ಕೃತ್ಯ ನಡೆದಿದೆ. ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶೂ ಕಳೆದುಕೊಂಡ ಮಾಲೀಕರು ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದರೆ.
ಬೆಳಗ್ಗೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ, ರಾತ್ರಿ ಬೈಕ್ ಕಳ್ಳತನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸರ ಕಾರ್ಯಾಚರಣೆಯಲ್ಲಿ ಕುಖ್ಯಾತ ಬೈಕ್ ಕಳ್ಳನ ಬಂಧನವಾಗಿದೆ. ಬೆಳಗ್ಗೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ವಿಜಯಪುರ ಮೂಲದ ಖಲೀಲ್ ಅಹ್ಮದ್ ರಾತ್ರಿಯಾದರೆ ಬೈಕ್ ಕಳ್ಳತನಕ್ಕೆ ಇಳಿಯುತ್ತಿದ್ದ. ಕಳೆದ ಒಂದೂವರೆ ವರ್ಷದಿಂದ ಈತ ಬೈಕ್ ಕಳ್ಳತನ ಮಾಡುತ್ತಿದ್ದ. ಬಸ್ ನಿಲ್ಥಾಣ, ಜನನಿಬೀಡ ಪ್ರದೇಶ ಸೇರಿದಂತೆ ಪೊಲೀಸ್ ಠಾಣೆ ಮುಂದೆಯು ಬೈಕ್ ಕದಿಯುತ್ತಿದ್ದ. ಹೆಚ್ಚಾಗಿ ಸ್ಪ್ಲೆಂಡರ್ ಬೈಕ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ವಿಜಯಪುರ ಕೋಲಾರ ಹಾಗೂ ಚಿಕ್ಕಬಳ್ಳಾಪುರಗಳಲ್ಲೂ ಬೈಕ್ ಕಳ್ಳತನ ಮಾಡುತ್ತಿದ್ದ.
ನಕಲಿ ಕೀಗಳನ್ನು ಹಿಡಿದು ಬೈಕ್ ಕಳ್ಳತನ ಮಾಡುತ್ತಿದ್ದ. ಪೊಲೀಸರ ಕಾರ್ಯಾಚರಣೆಯಲ್ಲಿ ಖಲೀಲ್ ಅಹಮ್ಮದ್ ಸಿಕ್ಕಿಬಿದ್ದಿದ್ದಾರೆ. ಬಂಧಿತ ಖಲೀಲ್ ಅಹಮ್ಮದ್‌ನಿಂದ 20 ಲಕ್ಷ ಮೌಲ್ಯದ 42 ದ್ವೀಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ.


