MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • Bloom Avenue Greening Project: ಬೆಂಗಳೂರು ರಸ್ತೇಲಿ ವರ್ಷವಿಡೀ ಅರಳಲಿವೆ ಬಣ್ಣದ ಹೂಗಳು!

Bloom Avenue Greening Project: ಬೆಂಗಳೂರು ರಸ್ತೇಲಿ ವರ್ಷವಿಡೀ ಅರಳಲಿವೆ ಬಣ್ಣದ ಹೂಗಳು!

Bloom Avenue Greening Project: ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೇಜರ್‌ ಆರ್ಟಿರಿಯಲ್‌ ರಸ್ತೆಯು (MAR) ವರ್ಷದ 365 ದಿನವೂ ಹಳದಿ, ನೇರಳೆ, ಗುಲಾಬಿ ಸೇರಿ ವಿವಿಧ ಹೂವುಗಳಿಂದ ಕಂಗೊಳಿಸುವಂತೆ ಮಾಡಲು ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಸಂಸ್ಥೆ ‘ಬ್ಲೂಮ್‌ ಅವೆನ್ಯೂ’ ಪ್ರಾಜೆಕ್ಟ್‌. 

2 Min read
Author : Kannadaprabha News| Kannada Prabha
Published : Jun 28 2026, 08:55 AM IST
Share this Photo Gallery
  • FB
  • TW
  • Linkdin
  • Whatsapp
13
Bloom Avenue Greening Project ಏನಿದು ‘ಬ್ಲೂಮ್ ಅವೆನ್ಯೂ’ ಯೋಜನೆ?
Image Credit : Asianet News

Bloom Avenue Greening Project ಏನಿದು ‘ಬ್ಲೂಮ್ ಅವೆನ್ಯೂ’ ಯೋಜನೆ?

ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡ ಲೇಔಟ್‌ನ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯನ್ನು ಸಂಪರ್ಕಿಸುವ ಮೇಜರ್‌ ಆರ್ಟಿರಿಯಲ್‌ ರಸ್ತೆಯ (ಎಂಎಆರ್‌) 8 ಕಿ.ಮೀ. ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದೆ. ರಾಜ್ಯ ಸರ್ಕಾರದ 15 ಲಕ್ಷ ಸಸಿ ನೆಟ್ಟು ಗಿನ್ನಿಸ್‌ ವಿಶ್ವದಾಖಲೆ ನಿರ್ಮಿಸುವ ಅಭಿಯಾನದ ಭಾಗವಾಗಿ, ಬಿಡಿಎ ಸಹಯೋಗದಲ್ಲಿ ಆರು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಗಿದೆ.

‘ಬ್ಲೂಮ್ ಅವೆನ್ಯೂ’ ಯೋಜನೆಯು ಹಲವು ವಿಶೇಷ ಅಂಶಗಳನ್ನು ಒಳಗೊಂಡಿದೆ. ಸ್ಥಳೀಯ ಹೂಬಿಡುವ ಏಳು ವಿಭಿನ್ನ ಜಾತಿಯ ಮರಗಳನ್ನು ಗುರುತಿಸಲಾಗಿದೆ. ಇದರಲ್ಲಿ ಬಹುತೇಕ ಸ್ಥಳೀಯ ಮತ್ತು ಕೆಲ ವಿದೇಶಿ ಮರಗಳಾಗಿವೆ. ಸಂಪಿಗೆ, ಬೌಹಿನಿಯಾ (ಕಂಚುವಾಳ), ಕಾರ್ವಿಯಾ ಸೆಬೆಸ್ಟೇನಾ, ಹೊಳೆದಾಸವಾಳ, ಟ್ಯಾಬೆಬುಯಾ ಇತ್ಯಾದಿ ತಳಿಗಳ ಸಸಿಗಳನ್ನು ಬಣ್ಣಗಳ ಆಧಾರದಲ್ಲಿ ಕ್ರಮಬದ್ಧವಾಗಿ ಆಯ್ಕೆ ಮಾಡಲಾಗಿದೆ. ಇದರ ಪರಿಣಾಮವಾಗಿ ವರ್ಷಪೂರ್ತಿ ರಸ್ತೆಯ ಯಾವುದಾದರೂ ಭಾಗದಲ್ಲಿ ಹೂಗಳು ಅರಳುವಂತಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಬ್ಲೂಮ್ ಅವೆನ್ಯೂ ಯೋಜನೆ ಮಹತ್ವ
Image Credit : Asianet News

ಬ್ಲೂಮ್ ಅವೆನ್ಯೂ ಯೋಜನೆ ಮಹತ್ವ

ಅಲ್ಲದೆ, ಮರಗಳು ಬೆಳೆದಂತೆ ಪಕ್ಷಿಗಳು ಹಾಗೂ ಚಿಟ್ಟೆಗಳನ್ನು ಆಕರ್ಷಿಸುವ ಪರಿಸರ ವ್ಯವಸ್ಥೆ ನಿರ್ಮಿಸುವ ಗುರಿಯನ್ನೂ ಯೋಜನೆ ಹೊಂದಿದೆ. ಸಸಿಗಳ ಸಂರಕ್ಷಣೆಗಾಗಿ ನೀರುಣಿಕೆ, ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನೊಳಗೊಂಡಂತೆ ಮೂರು ವರ್ಷಗಳ ಕಾಲ ವಿಶೇಷ ಪಾಲನಾ ಯೋಜನೆಯನ್ನೂ ರೂಪಿಸಲಾಗಿದೆ.

ಈ ಯೋಜನೆಯು ಬೆಂಗಳೂರಿನ ಸಸ್ಯಶಾಸ್ತ್ರ ಮತ್ತು ಪರಿಸರ ಪರಂಪರೆ ಮುಂದುವರಿಸುವ ಪ್ರಯತ್ನವಾಗಿದೆ. ಜರ್ಮನ್ ತೋಟಗಾರ ಹಾಗೂ ಸಸ್ಯಶಾಸ್ತ್ರಜ್ಞ ಗುಸ್ತಾವ್ ಹರ್ಮನ್‌ ಕ್ರುಂಬೀಗಲ್ ಮತ್ತು ಪರಿಸರ ತಜ್ಞ ಎಸ್.ಜಿ.ನೆಗಿನಹಾಳ್ ಅವರ ಪರಂಪರೆಯಿಂದ ಪ್ರೇರಿತವಾಗಿ ಯೋಜನೆ ರೂಪಿಸಲಾಗಿದೆ. ಯೋಜನೆಗೆ ಅಗತ್ಯವಿರುವ ಸಸಿಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒದಗಿಸಿದ್ದು, ಅನ್‌ಬಾಕ್ಸಿಂಗ್ ಬಿಎಲ್‌ಆರ್ (ಯುಬಿಎಲ್‌ಆರ್) ಸಂಸ್ಥೆಯು ಯೋಜನೆಗೆ ಹಣಕಾಸು ನೆರವು ನೀಡಿ, ನೆಲಮಟ್ಟದ ಎಲ್ಲ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದೆ. ನಗರದ ಹಸಿರು ಸಂಪತ್ತು ಹೆಚ್ಚಿಸುವ ಜತೆಗೆ ಪರಿಸರ ಸಂರಕ್ಷಣೆ, ಜೀವ ವೈವಿಧ್ಯವೃದ್ಧಿ ಹಾಗೂ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಬ್ಲೂಮ್ ಅವೆನ್ಯೂ’ ಯೋಜನೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Related Articles

Related image1
ವಿಶೇಷ ವರದಿ: ಪ್ರಧಾನಿ ಮೋದಿ ರೀತಿಯಲ್ಲಿ ಗಿವ್ ಇಟ್ ಅಪ್‌ಗೆ ರಾಜ್ಯದಲ್ಲೂ ಕರೆ?
Related image2
ಬೆಂಗಳೂರು ಜನರಿಗೆ ಗುಡ್‌ನ್ಯೂಸ್! ನಗರದ ಮೊದಲ ಟನಲ್‌ ರಸ್ತೆಗೆ ಇಂದು ಸಿಎಂ ಶಂಕು, ಎಲ್ಲಿಂದ ಎಲ್ಲಿವರೆಗೆ? ಟ್ರಾಫಿಕ್ ಸಮಸ್ಯೆಗೆ ಸಿಗುತ್ತಾ ಶಾಶ್ವತ ಪರಿಹಾರ?
33
ಪ್ರಾಜೆಕ್ಟ್‌ ಬ್ಲೂಮ್‌:
Image Credit : Asianet News

ಪ್ರಾಜೆಕ್ಟ್‌ ಬ್ಲೂಮ್‌:

ಹಲವು ವರ್ಷಗಳ ಹಿಂದೆ ಜರ್ಮನ್ ಸಸ್ಯಶಾಸ್ತ್ರಜ್ಞ ಕ್ರುಂಬಿಗಲ್‌ ಅವರು, ಬೆಂಗಳೂರನ್ನು ವರ್ಷಪೂರ್ತಿ ಅರಳುವ ಹೂವುಗಳ ನಗರವನ್ನಾಗಿ ರೂಪಿಸಿದ್ದರು. ಇದು ದಶಕಗಳ ನಂತರವೂ ಬೆಂಗಳೂರಿನ ಸೌಂದರ್ಯಕ್ಕೆ ಹೊಸ ಮೆರುಗು ನೀಡುತ್ತಿದೆ. ಅದರಿಂದ ಪ್ರೇರಣೆ ಪಡೆದಿರುವ ‘ಪ್ರಾಜೆಕ್ಟ್ ಬ್ಲೂಮ್’ ಸ್ಥಳೀಯ ಸಸ್ಯಪ್ರಭೇದಗಳು ಹೂವಿನ ಅಲಂಕಾರಗಳ ಮೂಲಕ ಮುಂದಿನ ಪೀಳಿಗೆಗಾಗಿ ನಗರದ ನೈಸರ್ಗಿಕ ಪರಂಪರೆ ಹೆಚ್ಚಿಸಲಿದೆ. ನಾಗರಿಕರು, ಸಂಸ್ಥೆಗಳು ಮತ್ತು ಸರ್ಕಾರ ಈ ಯೋಜನೆಗೆ ಕೈಜೋಡಿಸಿರುವುದು ವಿಶೇಷ.

- ಪ್ರಶಾಂತ್‌ ಪ್ರಕಾಶ್‌, ಅಧ್ಯಕ್ಷ, ಅನ್‌ಬಾಕ್ಸಿಂಗ್‌ಬಿಎಲ್‌ಆರ್‌ 

ಮಾದರಿ ರಸ್ತೆ

‘ಬ್ಲ್ಯೂಮ್‌ ಅವೆನ್ಯೂ’ ಯೋಜನೆಯಡಿ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯುದ್ದಕ್ಕೂ ಹಸಿರು ಹಾಗೂ ಅರಳುವ ವಾತಾವರಣ ನಿರ್ಮಾಣವಾಗುವುದರಿಂದ ಸ್ಥಳೀಯ ನಿವಾಸಿಗಳು ಮತ್ತು ಸಮುದಾಯಗಳಿಗೆ ಅಪಾರ ಪ್ರಯೋಜನವಾಗಲಿದೆ. ಪ್ರಮುಖ ರಸ್ತೆಗಳನ್ನು ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ಇದು ಮಾದರಿಯಾಗಲಿದೆ.

- ಎನ್.ಎ ಹ್ಯಾರಿಸ್, ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)

ಸಂಪೂರ್ಣ ಸಹಕಾರ

ಬ್ಲ್ಯೂಮ್‌ ಅವೆನ್ಯೂ ಯೋಜನೆಗೆ ಬಿಡಿಎ ಸಂಪೂರ್ಣ ಸಹಕಾರ ನೀಡಿದೆ. ಇಂಥ ಮಾದರಿಯ ಸಹಭಾಗಿತ್ವಗಳು ನಗರಾದ್ಯಂತ ಇನ್ನಷ್ಟು ಬೆಳೆಯಲಿ ಎಂಬುದು ನಮ್ಮ ಆಶಯ. ಇದರಿಂದ ಮಾಗಡಿ ರಸ್ತೆ–ಮೈಸೂರು ರಸ್ತೆ ಕಾರಿಡಾರ್ ಇನ್ನಷ್ಟು ಹಸಿರಿನಿಂದ ಕೂಡಿದ್ದು, ಆಕರ್ಷಕವಾಗಲಿದೆ.

-ಮೇಜರ್‌ ಪಿ.ಮಣಿವಣ್ಣನ್‌, ಆಯುಕ್ತರು, ಬಿಡಿಎ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಬೆಂಗಳೂರು
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಬೈರಕುಪ್ಪ ಸೇತುವೆ: ಕರ್ನಾಟಕ-ಕೇರಳ ಸಂಪರ್ಕ, ದಶಕದ ಕನಸಿಗೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಮರುಜೀವ!
Recommended image2
Illegal Foreign Migrants: ರಾಜ್ಯದಲ್ಲಿ 13,675 ಅಕ್ರಮ ವಿದೇಶಿ ವಲಸಿಗರ ಪತ್ತೆ: ಬೆಂಗಳೂರಲ್ಲೇ 10,650! ಗೃಹ ಸಚಿವರೇ ಕ್ರಮ ಯಾವಾಗ?
Recommended image3
ಕಾಂಗ್ರೆಸ್ಸಿಗೆ ಹೆಚ್ಚು ಅಡ್ಡಮತ ಬಂದಿದ್ದು ಬೆಳಗಾವಿಯಿಂದ! 4-5 ಮತ ನಿರೀಕ್ಷಿಸಿದ್ದ ಕೈಗೆ ಸಿಕ್ಕಿದ್ದು ಭರ್ಜರಿ 11!
Related Stories
Recommended image1
ವಿಶೇಷ ವರದಿ: ಪ್ರಧಾನಿ ಮೋದಿ ರೀತಿಯಲ್ಲಿ ಗಿವ್ ಇಟ್ ಅಪ್‌ಗೆ ರಾಜ್ಯದಲ್ಲೂ ಕರೆ?
Recommended image2
ಬೆಂಗಳೂರು ಜನರಿಗೆ ಗುಡ್‌ನ್ಯೂಸ್! ನಗರದ ಮೊದಲ ಟನಲ್‌ ರಸ್ತೆಗೆ ಇಂದು ಸಿಎಂ ಶಂಕು, ಎಲ್ಲಿಂದ ಎಲ್ಲಿವರೆಗೆ? ಟ್ರಾಫಿಕ್ ಸಮಸ್ಯೆಗೆ ಸಿಗುತ್ತಾ ಶಾಶ್ವತ ಪರಿಹಾರ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved