11:17 PM (IST) Oct 30

Karnataka News Live ಹಾಲಿನ ಕಥೆ ಒಂದೆಡೆಯಾದರೆ, ಒಂದು ನಂದಿನಿ ಮೊಸರಿನಲ್ಲೂ ಗ್ರಾಹಕನಿಗೆ ಗುನ್ನಾ, ಲೀಟರ್‌ಗೆ 14 ರೂಪಾಯಿ ಬರೆ!

ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಕೆಎಂಎಫ್ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ನವೆಂಬರ್ 1, 2026 ರಿಂದ ನೂತನ ದರಗಳು ಜಾರಿಗೆ ಬರಲಿದ್ದು, ಹಾಲಿನ ದರ ಲೀಟರ್‌ಗೆ ₹8 ಹಾಗೂ ಮೊಸರಿನ ದರ ₹14 ಏರಿಕೆಯಾಗಿದೆ.

Read Full Story
10:17 PM (IST) Oct 30

Karnataka News Live ಮೆಟ್ರೋದಿಂದ ಕರೆಂಟ್‌ವರೆಗೆ, ಹಾಲಿನಿಂದ ನೀರಿನವರೆಗೆ - ಇದು ರಾಜ್ಯ ಸರ್ಕಾರದ ಬೆಲೆ ಏರಿಕೆ ABCD

ಕರ್ನಾಟಕದಲ್ಲಿ ನಿತ್ಯೋಪಯೋಗಿ ವಸ್ತುಗಳು, ಸಾರಿಗೆ, ಇಂಧನ, ವಿದ್ಯುತ್, ನೀರು ಹಾಗೂ ಆಸ್ತಿ ತೆರಿಗೆ ಸೇರಿದಂತೆ A to Z ಸೇವೆಗಳ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. ಸರ್ಕಾರ ಜಾರಿಗೆ ತಂದಿರುವ ಸರಣಿ ಬೆಲೆ ಏರಿಕೆಗಳು ಸಾರ್ವಜನಿಕರ ಮಾಸಿಕ ಬಜೆಟ್ ಮೇಲೆ ತೀವ್ರ ಪರಿಣಾಮ ಬೀರಿವೆ.

Read Full Story
09:54 PM (IST) Oct 30

Karnataka News Live 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿ - ಸಾವಿತ್ರಿ, ಜಮುನಾಗೂ ಪೈಪೋಟಿ ನೀಡಿದ್ದ ಕನ್ನಡದ ಈ ನಟಿ ಯಾರು?

ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಎನ್‌ಟಿಆರ್, ಎಂಜಿಆರ್ ಜೊತೆಗಿನ ಸಿನಿಮಾಗಳು, ಪದ್ಮಶ್ರೀ ಮತ್ತು ಪದ್ಮಭೂಷಣ ಗೌರವಗಳ ಕುರಿತ ವಿಶೇಷ ಮಾಹಿತಿ ಇಲ್ಲಿದೆ.

Read Full Story
09:47 PM (IST) Oct 30

Karnataka News Live Breaking - ಮಾಜಿ ಸಿಎಂ ಸಿದ್ದರಾಮಯ್ಯಗೆ ಖೆಡ್ಡಾ ತೋಡಿದ್ದ ಸ್ಟಿಂಗ್ ಲೇಡಿ ಕೃಪಾ ಆಳ್ವಾ ಕಾಂಗ್ರೆಸ್‌ನಿಂದ ಉಚ್ಛಾಟನೆ!

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಆರೋಪ ಎದುರಿಸುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

Read Full Story
08:17 PM (IST) Oct 30

Karnataka News Live ಡಾ. ವಿಷ್ಣುವರ್ಧನ್‌, ಬಿ. ಸರೋಜಾದೇವಿಗೆ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರಧಾನ; ರಜನಿಕಾಂತ್‌ ಮುಖ್ಯ ಅತಿಥಿ? ನಟಿಯರಲ್ಲಿ ಯಾರು?

ಈ ಇಬ್ಬರು ಕಲಾವಿದರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮವು ಕೇವಲ ಪ್ರಶಸ್ತಿ ಸಮಾರಂಭವಾಗಿರದೆ, ಕನ್ನಡ ಚಿತ್ರರಂಗದ ಸುವರ್ಣಯುಗವನ್ನು ನೆನಪಿಸುವ ವಿಶೇಷ ಸಂದರ್ಭವಾಗಲಿದೆ. ಅದರಲ್ಲೂ ರಜನಿಕಾಂತ್ ಅವರೇ ಬರಬಹುದು ಎಂಬ ಸಂಗತಿ ಎಲ್ಲರಿಗೂ ರೋಮಾಂಚನ ಉಂಟುಮಾಡಿದೆ.

Read Full Story
08:07 PM (IST) Oct 30

Karnataka News Live ಈ ಊರಿನ ಜನ್ರು ಪುಣ್ಯಾ ಮಾಡ್ರಿ; ಪುರಿ,ಇಡ್ಲಿ ಏನೇ ತೊಗೊಂಡ್ರು 12 ರೂ ಅಷ್ಟೇ ನೋಡ್ರಿ

ಶ್ರೀ ರಾಮೇಶ್ವರ ಹೋಟೆಲ್‌ನಲ್ಲಿ ಕೇವಲ 12 ರೂಪಾಯಿಗೆ ಇಡ್ಲಿ, ಪುರಿ, ಉಪ್ಪಿಟ್ಟು ಮತ್ತು ಮಿರ್ಚಿ ಬಜ್ಜಿ ನೀಡಲಾಗುತ್ತಿದೆ. ದುಬಾರಿ ಜಗತ್ತಿನಲ್ಲೂ ಮಾಲೀಕ ಶಿವಬಸಪ್ಪ ತಮ್ಮ ಮಗನೊಂದಿಗೆ ಸೇರಿ ಕೆಲಸಗಾರರಿಲ್ಲದೆ ಹೋಟೆಲ್ ನಡೆಸುತ್ತಾ ಗ್ರಾಹಕರ ತೃಪ್ತಿಯೇ ಮುಖ್ಯ ಎಂದು ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುತ್ತಿದ್ದಾರೆ.

Read Full Story
07:33 PM (IST) Oct 30

Karnataka News Live ನಕಲಿ ಖಾತೆಗಳ ಕಾಟಕ್ಕೆ ಬೇಸತ್ತು ಹೈರಾಣು - ದಳಪತಿ ವಿಜಯ್ ಮಗ ಜೇಸನ್ ಸಂಜಯ್ ಅಭಿಮಾನಿಗಳಿಗೆ ಕೊಟ್ಟ ಖಡಕ್ ಎಚ್ಚರಿಕೆ ಏನು?

ಒಂದೆಡೆ ನಿರ್ದೇಶಕರಾಗಿ ಗೆಲುವು ಕಾಣದೇ, ನಟರಾಗಲು ಹೊರಟಿರುವ ದಳಪತಿ ವಿಜಯ್ ಮಗ ಜೇಸನ್ ಸಂಜಯ್, ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ಖಾತೆಗಳ ವಿರುದ್ಧ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ, ಸಿನಿಮಾ ಮತ್ತು ಸಾಮಾಜಿಕ ಜಾಲತಾಣದ ವಿಚಾರಗಳೆರಡರಲ್ಲೂ ಜೇಸನ್ ಸಂಜಯ್ ಸದ್ಯ ಸುದ್ದಿಯಲ್ಲಿದ್ದಾರೆ.

Read Full Story
07:06 PM (IST) Oct 30

Karnataka News Live ನಾಳೆ ಕೊಪ್ಪಳ ಬಂದ್‌ಗೆ ಕರೆ ಕೊಟ್ಟ ಕ್ರಿಯಾ ಸಮಿತಿ, ಬೆಳಗ್ಗೆ 6 ಗಂಟೆಯಿಂದ ಸ್ತಬ್ಧ

ನಾಳೆ ಕೊಪ್ಪಳ ಬಂದ್‌ಗೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ. ಬೆಳಗ್ಗೆ 6 ಗಂಟೆಯಿಂದ ಕೊಪ್ಫಳ ಬಂದ್ ಆಗಲಿದೆ. ಸಂಘಟನೆಗಳು, ಸ್ಥಳೀಯರು, ಮಠಾಧೀಶರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Read Full Story
07:05 PM (IST) Oct 30

Karnataka News Live ರೈತನ ಹೆಗಲ ಮೇಲೆ ಬಂದೂಕಿಟ್ಟು ಗ್ರಾಹಕನ ಎದೆಗೆ ಗುಂಡು ಹೊಡೆದ ಸರ್ಕಾರ - ಹಾಲು, ಬಸ್‌, ವಿದ್ಯುತ್‌ ಎಲ್ಲದರ ಬೆಲೆ ಏರಿಕೆ, ಬಡವ ಬದುಕೋದು ಹೇಗೆ ಸ್ವಾಮಿ?

ಉಚಿತ ಗ್ಯಾರಂಟಿ ಯೋಜನೆಗಳು, ಬರಗಾಲ ಹಾಗೂ ವೆಚ್ಚಗಳ ಏರಿಕೆಯಿಂದಾಗಿ ಕರ್ನಾಟಕ ಸರ್ಕಾರದ ಮೇಲೆ ತೀವ್ರ ಆರ್ಥಿಕ ಒತ್ತಡ ಉಂಟಾಗಿದ್ದು, ಕಂದಾಯ ಕೊರತೆ ಎದುರಾಗಿದೆ. ಇದನ್ನು ಸರಿದೂಗಿಸಲು ನಂದಿನಿ ಹಾಲಿನ ದರ ಏರಿಕೆ ಮಾಡಲಾಗಿದ್ದು, ಬಸ್ ಪ್ರಯಾಣ ದರವೂ ಹೆಚ್ಚಾಗುವ ಸಾಧ್ಯತೆಯಿದೆ.

Read Full Story
06:46 PM (IST) Oct 30

Karnataka News Live ವಾಯು ಮಾಲಿನ್ಯದಿಂದ ತಪ್ಪಿಸಿಕೊಳ್ಳೋದು ಕಷ್ಟ! ಆದಾಗ್ಯೂ, ನಮ್ಮನ್ನು ರಕ್ಷಿಸಿಕೊಳ್ಳಲು ಎಂಥಾ ಮಾಸ್ಕ್‌ ಧರಿಸಬೇಕು?

ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಸೂಕ್ತ ಮಾಸ್ಕ್ ಬಳಕೆ, ಮಾಲಿನ್ಯ ಹೆಚ್ಚಿರುವ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವುದು ಮತ್ತು ಮನೆಯ ಒಳಗಿನ ಗಾಳಿಯ ಗುಣಮಟ್ಟದ ಬಗ್ಗೆಯೂ ಗಮನಹರಿಸುವುದು ಮುಖ್ಯ. ಮಾಸ್ಕ್ ಸಂಪೂರ್ಣ ರಕ್ಷಣೆಗೆ ಪರ್ಯಾಯವೇ? ನೋಡಿ..

Read Full Story
06:38 PM (IST) Oct 30

Karnataka News Live ಕರ್ನಾಟಕದಲ್ಲಿ ದೀಪಾವಳಿ ಪಟಾಕಿ ಸಿಡಿಸಲು ಸರ್ಕಾರದಿಂದ ಎರಡೇ ಗಂಟೆ ಅವಕಾಶ, ಹಸಿರು ಪಟಾಕಿಗೆ ಮಾತ್ರವೇ ಅನುಮತಿ!

ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಯು ಮತ್ತು ಶಬ್ದ ಮಾಲಿನ್ಯ ನಿಯಂತ್ರಿಸಲು ಕರ್ನಾಟಕ ಸರ್ಕಾರವು ಹಸಿರು ಪಟಾಕಿ ಬಳಕೆ ಹಾಗೂ ಪಟಾಕಿ ಸಿಡಿಸಲು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಕಾಲಾವಕಾಶ ನೀಡಿ ಮಾರ್ಗಸೂಚಿ ಹೊರಡಿಸಿದೆ.

Read Full Story
06:28 PM (IST) Oct 30

Karnataka News Live ಮೆಟ್ರೋದಲ್ಲಿ ಕಿರುಕುಳವೆಂದ ಯುವತಿ ಇನ್‌ಸ್ಟಾಗ್ರಾಂ ಅಕೌಂಟ್ ಭರ್ಜರಿ ಹಿಟ್; ₹399ಗೆ Subscription ಖಾತೆ ತೆರೆದ ಸೌಪಿಕ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸೌಪಿಕಾ ಎಂಬ ಯುವತಿ ವಿಡಿಯೋ ಹಂಚಿಕೊಂಡಿದ್ದರು. ಈ ಘಟನೆಯ ನಂತರ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.

Read Full Story
06:15 PM (IST) Oct 30

Karnataka News Live ಬೆಂಗಳೂರಿನ ಜಂಜಾಟ ಸಾಕು ಅಂತ ಗೋವಾಗೆ ಶಿಫ್ಟ್‌ ಆದ ಜೋಡಿ - ₹75,500 ವೆಚ್ಚದಲ್ಲಿ ನೆಮ್ಮದಿಯ ಸ್ಲೋ ಲೈಫ್ ಕಂಡುಕೊಂಡ ದಂಪತಿ!

ಬೆಂಗಳೂರಿನ ಇಕ್ಕಟ್ಟಿನ ಬದುಕಿನಿಂದ ಹೊರಬಂದು ಗೋವಾದಲ್ಲಿ ನೆಲೆಸಿರುವ ಐಟಿ ದಂಪತಿ ರಾಧಿಕಾ ಮತ್ತು ಏಕಾಂಶ್, ತಮ್ಮ ಶಿಫ್ಟಿಂಗ್ ಅನುಭವ ಮತ್ತು ತಗುಲಿದ ಖರ್ಚಿನ ವಿವರಗಳನ್ನು ಹಂಚಿಕೊಂಡಿದ್ದಾರೆ. ಒಟ್ಟು ₹75,500 ವೆಚ್ಚವಾಗಿದ್ದು, ಈ ನಿರ್ಧಾರ ಸಂಪೂರ್ಣ ಯೋಗ್ಯ ಎಂದು ತಿಳಿಸಿದ್ದಾರೆ.

Read Full Story
05:59 PM (IST) Oct 30

Karnataka News Live 40 ಕೋಟಿ ರೂ ಸರ್ಕಾರಿ ಆಸ್ತಿ ಕಬಳಿಕೆ; 10 ಲಕ್ಷ ಚಾಲೆಂಜ್ ಡಿಪಾಸಿಟ್ ಮಾಡಿದ ವ್ಯಕ್ತಿ

ನೆಲಮಂಗಲದಲ್ಲಿ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಸಿಎ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಕಬಳಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 10 ಲಕ್ಷ ರೂ. ಚಾಲೆಂಜ್ ಡಿಪಾಸಿಟ್‌ನೊಂದಿಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.

Read Full Story
05:31 PM (IST) Oct 30

Karnataka News Live ₹2500 ಕೋಟಿ ವೆಚ್ಚದಲ್ಲಿ ಹೊಸಕೋಟೆಗೆ ಕಾವೇರಿ ನೀರು; ಇತ್ತ ಮೆಟ್ರೋ ಸಂಪರ್ಕಕ್ಕೆ ಡಿಪಿಆರ್

ಹೊಸಕೋಟೆ ನಗರಕ್ಕೆ ಕಾವೇರಿ 6ನೇ ಹಂತದ ಯೋಜನೆಯಡಿ ₹2500 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸಲು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದ್ದಾರೆ. ಜೊತೆಗೆ ಕೆ.ಆರ್. ಪುರಂನಿಂದ ಹೊಸಕೋಟೆಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ನಗರದಲ್ಲಿ ₹93 ಕೋಟಿಗೂ ಹೆಚ್ಚು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
Read Full Story
05:13 PM (IST) Oct 30

Karnataka News Live Belagavi - ರೈತರ ಹೆದ್ದಾರಿ ಬಂದ್‌ಗೆ ಶಾಕ್; 8 ಕಠಿಣ ಷರತ್ತು ವಿಧಿಸಿದ DC ರೋಷನ್

ಕಬ್ಬು ಬೆಳೆಗಾರರ ರಾಷ್ಟ್ರೀಯ ಹೆದ್ದಾರಿ ಬಂದ್ ಪ್ರತಿಭಟನೆಗೆ ಬೆಳಗಾವಿ ಜಿಲ್ಲಾಡಳಿತವು ಬಿಎನ್ಎಸ್ ಕಾಯ್ದೆ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ಆಘಾತ ನೀಡಿದೆ. ಹೆದ್ದಾರಿಗಳು, ಟೋಲ್ ಪ್ಲಾಜಾಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸದಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಎಂಟು ಕಠಿಣ ಷರತ್ತುಗಳನ್ನು ವಿಧಿಸಿದ್ದಾರೆ.

Read Full Story
05:04 PM (IST) Oct 30

Karnataka News Live 71ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ - ಕಾಗೋಡು ತಿಮ್ಮಪ್ಪ, ನಟ ಅಶೋಕ್ ಸೇರಿ 71 ಸಾಧಕರಿಗೆ ಒಲಿದ ಗೌರವ!

71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 71 ಮಂದಿ ಗಣ್ಯರಿಗೆ ರಾಜ್ಯ ಸರ್ಕಾರವು ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ಕಾಗೋಡು ತಿಮ್ಮಪ್ಪ, ನಟ ಅಶೋಕ್, ಬಿ.ವಿ. ಆಚಾರ್ಯ ಸೇರಿದಂತೆ ಹಲವು ದಿಗ್ಗಜರು ಈ ಗೌರವಕ್ಕೆ ಭಾಜನರಾಗಿದ್ದಾರೆ.

Read Full Story
04:48 PM (IST) Oct 30

Karnataka News Live ಅಮೃತಧಾರೆ ಭೂಮಿಕಾಗೆ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಡಬಲ್ ಸರ್ಪ್ರೈಸ್ - ಪತಿಯನ್ನು ಕಂಡು ಕಣ್ಣೀರಿಟ್ಟ ನಟಿ

ಅಮೃತಧಾರೆ ಧಾರಾವಾಹಿಯ ಭೂಮಿಕಾ ಖ್ಯಾತಿಯ ಛಾಯಾ ಸಿಂಗ್ ಅವರಿಗೆ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಡಬಲ್ ಸರ್ಪ್ರೈಸ್ ಸಿಕ್ಕಿದೆ. ಪತಿ ಕೃಷ್ಣ ಅವರ ವಿಶೇಷ ಎಂಟ್ರಿ ಹಾಗೂ ಜೀ ಕನ್ನಡ ನೀಡಿದ ನಾಯಿ ಮರಿ ಉಡುಗೊರೆ ನಟಿಯನ್ನು ಭಾವುಕರನ್ನಾಗಿಸಿದೆ.

Read Full Story
04:47 PM (IST) Oct 30

Karnataka News Live ಬೆಂಗಳೂರಿನ ಇರಡು ಪ್ರಮುಖ ಎಲಿವೇಟೆಡ್ ಕಾರಿಡಾರ್ ಯೋಜನೆಗಳಿಗೆ ಬಿ-ಸ್ಮೈಲ್ ಮರು ಟೆಂಡರ್, ಅಂದಾಜು ವೆಚ್ಚ ಭಾರಿ ಕಡಿತ!

B-SMILE ಸಂಸ್ಥೆಯು ಬೆಂಗಳೂರಿನ ಪ್ರಮುಖ ಎಲಿವೇಟೆಡ್ ಕಾರಿಡಾರ್ ಯೋಜನೆಗಳ ನಿರ್ಮಾಣ ವೆಚ್ಚವನ್ನು ಪರಿಷ್ಕರಿಸಿ ಹೊಸ ಟೆಂಡರ್ ಆಹ್ವಾನಿಸಿದೆ. ಮಿನರ್ವ ವೃತ್ತದಿಂದ ಹಡ್ಸನ್ ವೃತ್ತ ಹಾಗೂ ಶೂಲೇ ವೃತ್ತದಿಂದ ಸೇಂಟ್ ಜಾನ್ಸ್ ಆಸ್ಪತ್ರೆ ರಸ್ತೆಯವರೆಗಿನ ಯೋಜನೆಗಳ ವೆಚ್ಚ ಕಡಿತದಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗಲಿದೆ. ರದ್ದುಗೊಂಡಿದ್ದ 9 ಯೋಜನೆಗಳ ಪೈಕಿ ಪ್ರಮುಖ ಕಾಮಗಾರಿಗಳಿಗೆ ಮರು ಬಿಡ್ ಕರೆಯಲಾಗಿದೆ.

Read Full Story
04:38 PM (IST) Oct 30

Karnataka News Live Bengaluru - 50 ಕೋಟಿ ಮೌಲ್ಯದ 2 ನಿವೇಶನ ವಶಕ್ಕೆ ಪಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾರ್ಯಾಚರಣೆ ನಡೆಸಿ ಸುಮಾರು ₹50 ಕೋಟಿ ಮೌಲ್ಯದ ಸಿಎ ನಿವೇಶನಗಳನ್ನು ವಶಪಡಿಸಿಕೊಂಡಿದೆ. ಮತ್ತೊಂದೆಡೆ ಗ್ರೇಟರ್‌ ಬೆಂಗಳೂರು ಪ್ರದೇಶಕ್ಕಾಗಿ ₹16.60 ಕೋಟಿ ವೆಚ್ಚದಲ್ಲಿ ಜಿಐಎಸ್‌ ಆಧಾರಿತ ಹೊಸ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.

Read Full Story