ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸೌಪಿಕಾ ಎಂಬ ಯುವತಿ ವಿಡಿಯೋ ಹಂಚಿಕೊಂಡಿದ್ದರು. ಈ ಘಟನೆಯ ನಂತರ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.

ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿ ಸೌಪಿಕಾ, ಅಪರಿಚಿತ ವ್ಯಕ್ತಿಯೊಬ್ಬ ತನ್ನ ವಿಡಿಯೋ ಮಾಡಿ ಕಿರುಕುಳ ನೀಡುತ್ತಿದ್ದಾನೆ. ಈತ ಎಲ್ಲ ಹುಡುಗಿಯರ ವಿಡಿಯೋ ಮಾಡಿ ಕೆಟ್ಟದಾಗಿ ಶೇರ್ ಮಾಡುತ್ತಾನೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು. ಸೌಪಿಕಾ ವಿಡಿಯೋ ಹಂಚಿಕೊಂಡಾಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ 5,000 ಇದ್ದ ಫಾಲೋವರ್ಸ್‌ಗಳ ಸಂಖ್ಯೆ ಒಂದೇ ದಿನದಲ್ಲಿ ಬರೋಬ್ಬರಿ 27,000ಕ್ಕೆ ಏರಿಕೆಯಾಗಿದೆ. ಜೊತೆಗೆ ಸೌಪಿಕಾ ಅವರು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ₹399ಗೆ ಸಬ್‌ಸಟ್ಕ್ರಿಪ್ಷನ್ (subscription) ಖಾತೆಯನ್ನು ಕೂಡ ಆರಂಭಿಸಿದ್ದಾರೆ. ಇದರ ಬೆನ್ನಲ್ಲಿಯೇ ಆ ಯುವತಿ ಮೆಟ್ರೋದಲ್ಲಿ ಕಿರುಕುಳ ನೀಡಿದ್ದಾರೆಂದು ಮಾಡಿದ ವಿಡಿಯೋ ತಾನು ಫೇಮಸ್ ಆಗುವುದಕ್ಕೆ ಮಾಡಿದ್ದಾರೆಂದು ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ.

27 ಸಾವಿರಕ್ಕೆ ರೀಚ್ ಆದ ಫಾಲೋವರ್ಸ್

ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ತನ್ನನ್ನು ವಿಡಿಯೋ ಮಾಡಿದ್ದಾನೆ, ಕಿರುಕುಳ ನೀಡಿದ್ದಾನೆಂದು ಯುವತಿ ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ (24 ಗಂಟೆಗಳು) ಫಾಲೋವರ್ಸ್ ಸಂಖ್ಯೆ 5 ಪಟ್ಟು ಹೆಚ್ಚಾಗಿದೆ. ಅಂದರೆ, ವಿಡಿಯೋ ಹಾಕುವ ಮುನ್ನ ಕೇವಲ 5 ಸಾವಿರ ಇದ್ದ ಫಾಲೋವರ್ಸ್ ಸಂಖ್ಯೆ ದಿಢೀರನೇ 27 ಸಾವಿರಕ್ಕೆ ಹೆಚ್ಚಳವಾಗಿದೆ. ಇದರ ಜೊತೆಗೆ, ಆ ಯುವತಿ ಸೌಪಿಕಾ ತನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಸಬ್‌ಸ್ಕ್ರಿಪ್ಷನ್ ಅಕೌಂಟ್‌ ಆರಂಭಿಸಿದ್ದಾರೆ. ಇದರಕ್ಕೆ ಯಾರಾದರೋ ಲಾಗಿನ್ ಆಗಬೇಕು ಎಂದರೆ ₹399 ರೂ. ಹಣವನ್ನು ಪಾವತಿ ಮಾಡಬೇಕು.

ವಿಡಿಯೋ ಮಾಡುತ್ತಿದ್ದಾಗ ರೆಡ್‌ಹ್ಯಾಂಡ್ ಲಾಕ್!

ವೈಟ್‌ಫೀಲ್ಡ್ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ, ಅದೇ ಬೋಗಿಯಲ್ಲಿದ್ದ ಯುವತಿಯನ್ನು ತನ್ನ ಮೊಬೈಲ್‌ನಲ್ಲಿ ರಹಸ್ಯವಾಗಿ ವಿಡಿಯೋ ಚಿತ್ರೀಕರಣ (Secret Video Recording) ಮಾಡುತ್ತಿದ್ದನಂತೆ. ಇದನ್ನು ಗಮನಿಸಿದ ಯುವತಿ, ತಕ್ಷಣವೇ ಆತನ ಬಳಿ ತೆರಳಿ ಆತನ ಮೊಬೈಲ್ ಫೋನ್‌ ಕಿತ್ತುಕೊಂಡಿದ್ದಾಳೆ. ನಂತರ, ರೈಲು ನಿಲ್ದಾಣ ತಲುಪುತ್ತಿದ್ದಂತೆ ಮೆಟ್ರೋದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ (Security Staff) ವಿಷಯ ತಿಳಿಸಿ, ಆತನ ಮೊಬೈಲ್ ಅನ್ನು ಅವರ ಕೈಗೆ ನೀಡಿದ್ದಾಳೆ. ಆದರೆ, ಆ ವ್ಯಕ್ತಿ ತಾನು ವಿಡಿಯೋ ಮಾಡಿಲ್ಲ, ಅದರಲ್ಲಿ ನನ್ನ ಪರ್ಸನಲ್ ಮಾಹಿತಿಯಿದೆ ಎಂದು ಹೇಳುತ್ತಾ ಮೊಬೈಲ್ ಕಿತ್ತುಕೊಂಡು ಓಡಿ ಹೋಗಿದ್ದನು.

ಈ ಬಗ್ಗೆ ಯುವತಿ ಸೌಪಿಕಾ ಎಲ್ಲ ಘಟನಾವಳಿಯನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಜೊತೆಗೆ, ತಮ್ಮ ವಿಡಿಯೋ ಮಾಡಿ ಕಿರುಕುಳ ನೀಡಿದ್ದಾರೆಂದು ವ್ಯಕ್ತಿಯ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದಾದ ನಂತರ ಮೆಟ್ರೋ ನಿಲ್ದಾಣದಲ್ಲಿರುವ ಎಲ್ಲ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲನೆ ಮಾಡಿದ ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದರು.

Scroll to load tweet…

ಜಾಮೀನು ಪಡೆದು ಪೊಲೀಸರ ಮುಂದೆ ಹಾಜರಾದ ವ್ಯಕ್ತಿ:

ಮೆಟ್ರೋ ರೈಲಿನಲ್ಲಿ ಸಹ-ಪ್ರಯಾಣಿಕ ಯುವತಿಯೊಬ್ಬರನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ ಎಂಬ ಆರೋಪಕ್ಕೆ ಗುರಿಯಾಗಿದ್ದ 35 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್, ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯದಿಂದ ಜಾಮೀನು ಪಡೆದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾನೆ. ಕಾಡುಗೋಡಿ ಪೊಲೀಸ್ ಠಾಣೆಗೆ ಆಗಮಿಸಿದ ಆರೋಪಿ ಸಂತೋಷ್ ಕೆ.ಟಿ., 'ನಾನು ಯಾವುದೇ ಮಹಿಳೆಯ ವಿಡಿಯೋ ಚಿತ್ರೀಕರಣ ಮಾಡಿಲ್ಲ' ಎಂದು ಪೊಲೀಸರ ಮುಂದೆ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾನೆ.