11:53 PM (IST) Apr 25

ಈ ಬೀಜಗಳು ಕೋಳಿ, ಕುರಿ ಮಾಂಸಕ್ಕಿಂತ 10 ಪಟ್ಟು ಹೆಚ್ಚು ಶಕ್ತಿಶಾಲಿ!

ಪೈನ್ ಬೀಜಗಳು ಹೃದಯದ ಆರೋಗ್ಯ, ಮಧುಮೇಹ ನಿಯಂತ್ರಣ, ರೋಗನಿರೋಧಕ ಶಕ್ತಿ ವರ್ಧನೆ, ಚರ್ಮ ಮತ್ತು ಕೂದಲಿನ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೆ ಪ್ರಯೋಜನಕಾರಿ. ಒಮೆಗಾ-3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಸೂಪರ್‌ಫುಡ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಪೂರ್ತಿ ಓದಿ
11:23 PM (IST) Apr 25

Viral Video: ಪಾಕ್‌ ಸೇನೆ ಬೆಂಗಾವಲು ಪಡೆ ಮೇಲೆ ಬಲೂಚ್‌ ಆರ್ಮಿ ದಾಳಿ, ಕನಿಷ್ಠ 10 ಸೈನಿಕರ ಸಾವು!

ಜಮ್ಮು ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡದ ನಂತರ ಪಾಕಿಸ್ತಾನ ಭಾರತದ ಪ್ರತೀಕಾರಕ್ಕೆ ಭಯಭೀತವಾಗಿದೆ. ಬಲೂಚಿಸ್ತಾನ ಲಿಬರೇಷನ್ ಆರ್ಮಿ ಕೂಡ ಪಾಕಿಸ್ತಾನಿ ಸೇನೆಯ ಮೇಲೆ ದಾಳಿ ನಡೆಸುತ್ತಿದ್ದು, ಪಾಕಿಸ್ತಾನದ ಆತಂಕವನ್ನು ಹೆಚ್ಚಿಸಿದೆ.

ಪೂರ್ತಿ ಓದಿ
10:42 PM (IST) Apr 25

ಪಹಲ್ಗಾಮ್‌ ಪೈಶಾಚಿಕ ಕೃತ್ಯ: PSL ಪಂದ್ಯಗಳ ಸ್ಕೋರ್‌ಕಾರ್ಡ್‌ ನಿಲ್ಲಿಸಿದ ಕ್ರಿಕ್‌ಇನ್ಫೋ, ಕ್ರಿಕ್‌ಬಜ್‌, ಡ್ರೀಮ್‌ 11

ಪಹಲ್ಗಾಮ್ ದಾಳಿಯ ನಂತರ, ಭಾರತದ ಕ್ರೀಡಾ ವೇದಿಕೆಗಳು ಪಾಕಿಸ್ತಾನ ಸೂಪರ್ ಲೀಗ್‌ನಿಂದ ದೂರ ಸರಿದಿವೆ. ಡ್ರೀಮ್11, ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಮತ್ತು ಕ್ರಿಕ್‌ಬಜ್‌ ಪಿಎಸ್‌ಎಲ್‌ ಸ್ಕೋರ್‌ಗಳನ್ನು ತೋರಿಸುವುದನ್ನು ನಿಲ್ಲಿಸಿವೆ. ಈ ಕ್ರಮವು ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರೀಡಾ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಪೂರ್ತಿ ಓದಿ
10:38 PM (IST) Apr 25

ಕಾಶ್ಮೀರದಲ್ಲಿ ನೀರವ ಮೌನ ಪ್ರವಾಸಿ ತಾಣಗಳು ಬಿಕೋ 5 ಉಗ್ರರು, 3 ಸ್ಥಳ, 10 ನಿಮಿಷದ ದಾಳಿ

ಕಾಶ್ಮೀರದಲ್ಲಿ ನಡೆದ ಉಗ್ರದಾಳಿಯಿಂದಾಗಿ ಪ್ರವಾಸಿ ತಾಣಗಳು ಖಾಲಿಯಾಗಿವೆ. ಪಹಲ್ಗಾಂನಲ್ಲಿ ಸ್ಮಶಾನ ಮೌನ ಆವರಿಸಿದ್ದು, ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಉಗ್ರರು ಹೇಗೆ ದಾಳಿ ನಡೆಸಿದರು ಎಂಬ ಚಿತ್ರಣ ಬಯಲಾಗಿದೆ.

ಪೂರ್ತಿ ಓದಿ
10:14 PM (IST) Apr 25

ಜಾಬ್‌ ಬದಲಿಸಿದ್ರೆ ಇನ್ನು ಪಿಎಫ್‌ ಅಕೌಂಟ್‌ ವರ್ಗಾವಣೆ ಕೂಡ ಸುಲಭ ಮಾಡಿದ EPFO

ಇಪಿಎಫ್‌ಒ ಉದ್ಯೋಗ ಬದಲಾವಣೆಯಲ್ಲಿ ಪಿಎಫ್ ಖಾತೆ ವರ್ಗಾವಣೆ ಪ್ರಕ್ರಿಯೆ ಸರಳಗೊಳಿಸಿದೆ. ಉದ್ಯೋಗದಾತರ ಅನುಮೋದನೆ ಅಗತ್ಯವಿಲ್ಲ. ಪರಿಷ್ಕೃತ ಫಾರ್ಮ್ 13 ಸಾಫ್ಟ್‌ವೇರ್ ಮೂಲಕ ಗಮ್ಯಸ್ಥಾನ ಕಚೇರಿಯ ಅನುಮೋದನೆ ರದ್ದುಗೊಂಡಿದೆ.

ಪೂರ್ತಿ ಓದಿ
10:07 PM (IST) Apr 25

ಪಹಲ್ಗಾಮ್ ದಾಳಿ ಪ್ರಶ್ನಿಸಿದ ಪಾಕ್‌ ಪತ್ರಕರ್ತನನ್ನು ದೂರವಿಟ್ಟ ಅಮೆರಿಕ ವಿದೇಶಾಂಗ ವಕ್ತಾರೆ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅಮೆರಿಕ ಖಂಡಿಸಿದೆ ಮತ್ತು ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಅಮೆರಿಕದ ಅಧಿಕಾರಿಗಳು ಭಾರತದೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಪೂರ್ತಿ ಓದಿ
09:58 PM (IST) Apr 25

ಭಾರತ ಗಡಿ ಮುಚ್ಚಿದ್ರೆ ಪಾಕಿಸ್ತಾನದ ತಲೆನೋವಿಗೆ ಪ್ಯಾರಸಿಟಮಾಲ್ ಕೂಡ ಸಿಗೋಲ್ಲ!

ಪಹಲ್ಗಾಮ್ ದಾಳಿಯ ನಂತರ ಭಾರತವು ಅಟ್ಟಾರಿ ಗಡಿಯನ್ನು ಮುಚ್ಚಿದ್ದು, ಪಾಕಿಸ್ತಾನದೊಂದಿಗಿನ ವ್ಯಾಪಾರ ಸ್ಥಗಿತಗೊಂಡಿದೆ. ಇದರಿಂದ ಪಾಕಿಸ್ತಾನವು ಮೂರನೇ ದೇಶಗಳ ಮೂಲಕ ಭಾರತೀಯ ಸರಕುಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ, ಇದು ಬೆಲೆ ಏರಿಕೆಗೆ ಕಾರಣವಾಗಬಹುದು.

ಪೂರ್ತಿ ಓದಿ
09:44 PM (IST) Apr 25

ಒಂದು ಹನಿ ನೀರೂ ಪಾಕಿಸ್ತಾನಕ್ಕಿಲ್ಲ..ಸಿಂಧೂ ನದಿ ನೀರು ತಡೆಯಲು ಮೋದಿ ಸರ್ಕಾರದ 3 ಪ್ಲ್ಯಾನ್‌!

ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಲು ಭಾರತ ನಿರ್ಧರಿಸಿದೆ. ಈ ಕ್ರಮವನ್ನು ಮೂರು ಹಂತಗಳಲ್ಲಿ ಕಾರ್ಯಗತಗೊಳಿಸಲು ಯೋಜಿಸಲಾಗಿದೆ. ಒಮರ್ ಅಬ್ದುಲ್ಲಾ ಈ ಒಪ್ಪಂದವು ಜಮ್ಮು ಮತ್ತು ಕಾಶ್ಮೀರಕ್ಕೆ ಹಾನಿಕಾರಕ ಎಂದು ಹೇಳಿದ್ದಾರೆ.

ಪೂರ್ತಿ ಓದಿ
09:28 PM (IST) Apr 25

ತಾಳಿ ಕಟ್ಟೋದಕ್ಕೂ ಬಿಡದೇ ಮದುಮಗಳನ್ನೇ ಅಪಹರಿಸಿದ ವರನ ಸ್ನೇಹಿತರು!

ನಾನು ಪ್ರೀತಿಸಿ ಮದುವೆ ಆಗುತ್ತಿರುವ ಹುಡುಗಿ ಅವಳು. ತಾಳಿ ಕಟ್ಟಬೇಕು, ಮದುವೆ ಮಾಡಿಕೊಳ್ಳಬೇಕು ಬಿಟ್ಟುಬಿಡ್ರೋ ಎಂದರೂ ಬಿಡದೇ ವರನ ಸ್ನೇಹಿತರೇ ಸೇರಿಕೊಂಡು ವಧುವನ್ನು ಕಿಡ್ನಾಪ್ ಮಾಡಿದ ಘಟನೆ ನಡೆದಿದೆ. ಇದಕ್ಕೆ ಮದುವೆ ಸೇರಿದ್ದ ಜನರೂ ಕೂಡ ಸಾಥ್ ನೀಡಿದ್ದಾರೆ.

ಪೂರ್ತಿ ಓದಿ
09:03 PM (IST) Apr 25

ಪಾಕಿಸ್ತಾನ ಹೆಡೆಮುರಿ ಕಟ್ಟಬಹುದು, ದೇಶದ್ರೋಹಿ ಕೈ ನಾಯಕರ ಹರಕು ಬಾಯಿ ಮುಚ್ಚಿಸಲಾಗಲ್ಲ; ಆರ್.ಅಶೋಕ

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಖಂಡಿಸಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಉಗ್ರರ ಕೃತ್ಯವನ್ನು ಸಮರ್ಥಿಸುವಂತೆ ಮಾತನಾಡುವ ಕಾಂಗ್ರೆಸ್ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿದ್ದಾರೆ.

ಪೂರ್ತಿ ಓದಿ
08:50 PM (IST) Apr 25

Supreme Court: ರಾಹುಲ್‌ ಗಾಂಧಿಗೆ ಇತಿಹಾಸ, ಭೂಗೋಳ ಏನಾದ್ರೂ ಗೊತ್ತಿದ್ಯಾ? ಈ ರೀತಿಯೇ ಆದ್ರೆ ಸುಮೊಟೋ ಕೇಸ್‌ ಹಾಕ್ತೇವೆ

ಬ್ರಿಟಿಷರ ಜೊತೆ ವೀರ ಸಾವರ್ಕರ್ ಕೆಲಸ ಮಾಡಿದ್ದರು ಮತ್ತು ಪಿಂಚಣಿ ಪಡೆದಿದ್ದರು ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸುಪ್ರೀಂ ಕೋರ್ಟ್ ತೀವ್ರ ಛೀಮಾರಿ ಹಾಕಿದೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇಂತಹ ಹೇಳಿಕೆಗಳನ್ನು ಮುಂದುವರಿಸಿದರೆ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಪೂರ್ತಿ ಓದಿ
08:48 PM (IST) Apr 25

ಮೈಸೂರಿನಿಂದ ಕಲಬುರಗಿಗೆ ಆಗಮಿಸಿದ ಡಿಕೆಶಿ ಫ್ಲೈಟ್ ಲ್ಯಾಂಡಿಂಗ್ ಆಗದೇ ಆಗಸದಲ್ಲೇ ಎರಡು ಸುತ್ತು ಹಾಕಿ ವಾಪಸ್!

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೈಸೂರಿನಿಂದ ಕಲ್ಬುರ್ಗಿಗೆ ವಿಶೇಷ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಹವಾಮಾನ ವೈಪರಿತ್ಯದಿಂದಾಗಿ ವಿಮಾನವು ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗದೆ ಬೆಂಗಳೂರಿಗೆ ವಾಪಸ್ ಆಗಿದೆ. ಈ ಕಾರಣದಿಂದಾಗಿ ಕಲ್ಬುರ್ಗಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಪೂರ್ತಿ ಓದಿ
08:16 PM (IST) Apr 25

ಪ್ರವಾಸಿ ಮಹಿಳೆ ಕೊಟ್ಟ ಸುಳಿವು, ಹೇಸರಗತ್ತೆ ಮಾಲೀಕ, ಶಂಕಿತ ಉಗ್ರನ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ಬಂಧಿಸಲಾಗಿದೆ. ಪ್ರವಾಸಿಗರೊಬ್ಬರು ಹಂಚಿಕೊಂಡ ವೈರಲ್ ವೀಡಿಯೊ ಮತ್ತು ಫೋಟೋ ಆಧಾರದ ಮೇಲೆ ತನಿಖೆ ನಡೆಸಿ ಬಂಧನ ಮಾಡಲಾಗಿದೆ. ಶಂಕಿತನು ಕೋಡ್ ಭಾಷೆಯಲ್ಲಿ ಮಾತನಾಡುತ್ತಿದ್ದ ಮತ್ತು ಬಂದೂಕುಗಳು ಮತ್ತು ಹಿಂದೂ ಧರ್ಮದ ಬಗ್ಗೆ ಉಲ್ಲೇಖಿಸಿದ್ದ ಎಂದು ಪ್ರವಾಸಿ ತಿಳಿಸಿದ್ದಾರೆ.

ಪೂರ್ತಿ ಓದಿ
08:09 PM (IST) Apr 25

ರಾಜ್ಯದ 223 ಗ್ರಾಮ ಪಂಚಾಯಿತಿಗಳಿಗೆ ಉಪಚುನಾವಣೆ : ಮೇ 25 ರಂದು ಮತದಾನ

ರಾಜ್ಯದ 223 ಗ್ರಾಮ ಪಂಚಾಯಿತಿಗಳ 265 ಸ್ಥಾನಗಳಿಗೆ ಮೇ 25 ರಂದು ಉಪಚುನಾವಣೆ ನಡೆಯಲಿದೆ. ಮತ ಎಣಿಕೆ ಮೇ 28 ರಂದು ನಡೆಯಲಿದ್ದು, ಚುನಾವಣಾ ಆಯೋಗವು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದು, ಪ್ರಾಮಾಣಿಕ ಚುನಾವಣೆ ನಡೆಸಲು ಸೂಚನೆ ನೀಡಲಾಗಿದೆ.

ಪೂರ್ತಿ ಓದಿ
07:48 PM (IST) Apr 25

'ಪುತ್ರ ಶೋಕಂ ನಿರಂತರಂ..' ಗಂಗಾನದಿಯಲ್ಲಿ ಮಗನ ಅಸ್ಥಿ ವಿಸರ್ಜಿಸಿ ರೋಧಿಸಿದ ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌ ಅಪ್ಪ!

ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದ ನೌಕಾಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಅಸ್ಥಿಯನ್ನು ಹರ್ ಕಿ ಪೌರಿಯಲ್ಲಿ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು. ಭಾವನಾತ್ಮಕ ವಿದಾಯದಲ್ಲಿ ಕುಟುಂಬಸ್ಥರು ಮತ್ತು ನೂರಾರು ಜನರು ಭಾಗವಹಿಸಿದ್ದರು.

ಪೂರ್ತಿ ಓದಿ
07:42 PM (IST) Apr 25

ದೇಶದ ಪ್ರಶ್ನೆ ಬಂದಾಗ ರಾಜಕೀಯ ಬದಿಗಿಟ್ಟು ಕೇಂದ್ರದ ಜೊತೆ ನಿಲ್ಲಬೇಕು: ಯುಟಿ ಖಾದರ್

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಅವರ ಕುಟುಂಬಕ್ಕೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಸಾಂತ್ವನ ಹೇಳಿದರು. ಸರ್ಕಾರದ ಪರಿಹಾರ ಕಡಿಮೆ ಇದ್ದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಸ್ಥಳೀಯರ ಸಹಾಯವನ್ನು ಶ್ಲಾಘಿಸಿದರು.

ಪೂರ್ತಿ ಓದಿ
07:36 PM (IST) Apr 25

ಕಾಶ್ಮೀರ ಪುರವಾಸಿನಿಯ ಉಗ್ರರೂಪ: ದೇಶದ್ರೋಹಿಗಳ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ...

ಕಾಶ್ಮೀರದ ಪಹಲ್​ಗಾಮ್​ನಲ್ಲಿ ನಡೆದಿರುವ ಉಗ್ರರ ದಾಳಿಯ ಕುರಿತು ಬ್ರಹ್ಮಾಂಡ ಗುರೂಜಿ ಹೇಳಿದ್ದೇನು? ದೇಶದ್ರೋಹಿಗಳ ಬಗ್ಗೆ ಅವರು ನುಡಿದ ಭವಿಷ್ಯವೇನು? 

ಪೂರ್ತಿ ಓದಿ
07:31 PM (IST) Apr 25

ನೆಲಮಂಗಲ ಬಳಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ರೈತರ ವಿರೋಧ!

ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ನೆಲಮಂಗಲ ಸುತ್ತಮುತ್ತ ಗುರುತಿಸಲಾದ ಸ್ಥಳಗಳಿಗೆ ಕೇಂದ್ರ ತಂಡ ಭೇಟಿ ನೀಡಿದ ಬೆನ್ನಲ್ಲೇ ಸ್ಥಳೀಯ ರೈತರಿಂದ ವಿರೋಧ ವ್ಯಕ್ತವಾಗಿದೆ. ನೂರಾರು ರೈತರು ಸಭೆ ಸೇರಿ, ತಮ್ಮ ಮನೆ, ಜಮೀನುಗಳನ್ನು ಉಳಿಸಿಕೊಳ್ಳಲು ಹೋರಾಟ ರೂಪಿಸಲು ತೀರ್ಮಾನಿಸಿದ್ದಾರೆ.

ಪೂರ್ತಿ ಓದಿ
06:47 PM (IST) Apr 25

ಆಗಸದಲ್ಲಿ ಹಾರುವಾಗ IAF ಯುದ್ಧವಿಮಾನದಿಂದ ಬಿದ್ದ ಭಾರೀ ನಿಗೂಢ ವಸ್ತು, ಮನೆ ಪುಡಿಪುಡಿ!

ಶಿವಪುರಿಯಲ್ಲಿ ವಾಯುಪಡೆಯ ವಿಮಾನದಿಂದ ಲೋಹದ ವಸ್ತುವೊಂದು ಬಿದ್ದು ಮನೆಗೆ ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಐಎಎಫ್ ತನಿಖೆ ಆರಂಭಿಸಿದೆ.

ಪೂರ್ತಿ ಓದಿ
06:35 PM (IST) Apr 25

ಮದರಸಾ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ! ಇನ್ಮುಂದೆ ಹಿಂದಿನಂತಿರೋಲ್ಲ! ಯೋಗಿ ಸರ್ಕಾರದ ನಿರ್ಧಾರವೇನು?

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮದರಸಾ ಶಿಕ್ಷಣದಲ್ಲಿ ವ್ಯಾಪಕ ಸುಧಾರಣೆಗಳನ್ನು ಒತ್ತಿ ಹೇಳಿದ್ದಾರೆ. ಆಧುನಿಕ ಶಿಕ್ಷಣದ ಜೊತೆಗೆ ಉದ್ಯೋಗಾಧಾರಿತ ಶಿಕ್ಷಣ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಪೂರ್ತಿ ಓದಿ