ತಾಳಿ ಕಟ್ಟೋದಕ್ಕೂ ಬಿಡದೇ ಮದುಮಗಳನ್ನೇ ಅಪಹರಿಸಿದ ವರನ ಸ್ನೇಹಿತರು!
ನಾನು ಪ್ರೀತಿಸಿ ಮದುವೆ ಆಗುತ್ತಿರುವ ಹುಡುಗಿ ಅವಳು. ತಾಳಿ ಕಟ್ಟಬೇಕು, ಮದುವೆ ಮಾಡಿಕೊಳ್ಳಬೇಕು ಬಿಟ್ಟುಬಿಡ್ರೋ ಎಂದರೂ ಬಿಡದೇ ವರನ ಸ್ನೇಹಿತರೇ ಸೇರಿಕೊಂಡು ವಧುವನ್ನು ಕಿಡ್ನಾಪ್ ಮಾಡಿದ ಘಟನೆ ನಡೆದಿದೆ. ಇದಕ್ಕೆ ಮದುವೆ ಸೇರಿದ್ದ ಜನರೂ ಕೂಡ ಸಾಥ್ ನೀಡಿದ್ದಾರೆ.

ಸಾಮಾನ್ಯವಾಗಿ ಹಿಂದೂ ಮದುವೆ ಶಾಸ್ತ್ರಗಳ ವೇಳೆ ವರನ ಶೂಗಳನ್ನು ಕದಿಯುವ ಸಂಪ್ರದಾಯವಿದೆ. ಆದರೆ, ಇಲ್ಲಿ ವರನ ಸ್ನೇಹಿತರು ಮದುವೆ ಮಂಟಪಕ್ಕೆ ಬಂದುರವ ವಧುವನ್ನೇ ಕದಿಯುತ್ತಾರೆ. ಈ ಸಂಪ್ರದಾಯ ರೋಮ್, ಜೆಕ್ ಗಣರಾಜ್ಯದಂತಹ ಪೂರ್ವ ಯುರೋಪ್ ದೇಶಗಳಲ್ಲಿ ರೂಢಿಯಲ್ಲಿದೆ.
ಮದುವೆಗೆ ಮುನ್ನ ವರನ ಗೆಳೆಯರು ವಧುವನ್ನು ಅಪಹರಿಸಿ, ಹಣವನ್ನು ಕೇಳುತ್ತಾರೆ. ಇದು ಕೇವಲ ಮೋಜಿನ ಭಾಗವಾಗಿದ್ದು, ಯಾವುದೇ ಅಪಾಯ ತರುವಂತಹದ್ದಲ್ಲ. ಇಲ್ಲಿ ವಧುವನ್ನು ಕಿಡ್ನಾಪ್ ಮಾಡಿ ಬಚ್ಚಿಡಲು ಮದುವೆಗೆ ಸೇರಿದ ಜನರು ಕೂಡ ಸಾತ್ ನೀಡುತ್ತಾರೆ.
ಇಲ್ಲಿ ವಧುವಿನ ಬದಲು, ವರನಿಂದ ಹಣ ಮಾತ್ರವಲ್ಲ, ಮದ್ಯದ ಬಾಟಲಿಗಳನ್ನು ಕೇಳುತ್ತಾರೆ. ಹಾಡು, ನೃತ್ಯ ಮಾಡಲು ಹೇಳುತ್ತಾರೆ. ವರನ ಪ್ರೀತಿಯನ್ನು ಪರೀಕ್ಷಿಸುವ ಒಂದು ಆಟ ಇದಾಗಿದೆ.
ಈ ಸಂಪ್ರದಾಯದ ಹಿಂದೆ ಹಲವು ಕಾರಣಗಳಿವೆ. ವಧುವಿಗೆ ಮದುವೆಯ ದಿನವನ್ನು ಸ್ಮರಣೀಯವಾಗಿಸಲು ಈ ರೀತಿ ಮಾಡುತ್ತಾರೆ. ಇನ್ನು ಮದುವೆಯಾಗುವ ಹುಡುಗಿಯ ಮೇಲೆ ಎಷ್ಟು ಪ್ರೀತಿ ಇದೆ ಎಂದು ಹುಡುಕಲು ಈ ರೀತಿ ಮಾಡುತ್ತಾರೆ.
ಹೊಸ ಜೀವನಕ್ಕೆ ಕಾಲಿಡುವ ಮುನ್ನ ವಧುವಿಗೆ ಒಂದು ರೀತಿಯ ಉತ್ಸಾಹ, ಕುತೂಹಲ ಮೂಡಿಸುವ ಉದ್ದೇಶ ಇದರ ಹಿಂದಿದೆ. ಇನ್ನು ವರನ ಸ್ನೇಹಿತರ ಪರಿಚಯ ಹಾಗೂ ಕುಟುಂಬದವರೂ ಕೂಡ ವಧುವಿಗೆ ಇಲ್ಲಿ ಪರಿಚಿತರಾಗುತ್ತಾರೆ.
ಇದು ಕೇವಲ ಮೋಜಿನ ಆಚರಣೆಯಲ್ಲ, ಸಾಂಸ್ಕೃತಿಕ ಮಹತ್ವವನ್ನೂ ಹೊಂದಿದೆ. ಕುಟುಂಬ ಮತ್ತು ಗೆಳೆಯರನ್ನು ಒಂದುಗೂಡಿಸುವ ಸಂಪ್ರದಾಯ.