09:07 PM (IST) Dec 23

Karnataka News Live 23 December 2025ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಆರ್‌ಡಿಪಿಆರ್ ಎಇಇ ಡಿ. ವಿಜಯಲಕ್ಷ್ಮಿ ಅವರ ಮನೆ, ಕಚೇರಿ ಸೇರಿದಂತೆ ಐದು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಶೋಧ ಕಾರ್ಯದಲ್ಲಿ 50ಕ್ಕೂ ಹೆಚ್ಚು ಆಸ್ತಿ ದಾಖಲೆಗಳು, 33 ಎಕರೆ ಜಮೀನು, ಅಪಾರ ಪ್ರಮಾಣದ ಚಿನ್ನ ಹಾಗೂ ನಗದು ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ.
Read Full Story
08:38 PM (IST) Dec 23

Karnataka News Live 23 December 2025ಬೆಚ್ಚಿಬಿದ್ದ ಬೆಂಗಳೂರು, ಡಿವೋರ್ಸ್ ಕೇಳಿದ ಪತ್ನಿಯನ್ನು ನಡುರಸ್ತೆಯಲ್ಲಿ ಗುಂಡಿಟ್ಟು ಕೊಂದ ಪತಿ!

ಬೆಂಗಳೂರಿನ ಬಸವೇಶ್ವರ ನಗರದಲ್ಲಿ, ವಿಚ್ಛೇದನ ಪ್ರಕರಣದ ವಿಚಾರಣೆ ಮುಗಿಸಿ ಬಂದ ಪತಿ ಬಾಲ ಮುರುಗನ್, ಪತ್ನಿ ಭುವನೇಶ್ವರಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ದಾಂಪತ್ಯ ಕಲಹ ಮತ್ತು ಅನುಮಾನವೇ ಈ ಕೃತ್ಯಕ್ಕೆ ಕಾರಣವಾಗಿದ್ದು, ಆರೋಪಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
Read Full Story
07:47 PM (IST) Dec 23

Karnataka News Live 23 December 2025ವಿದೇಶದ ಅತಿಥಿಗಳಿಗೆ ನೆಲೆಯಾದ ಸಿಂಗಟಾಲೂರಿನ ಹಿನ್ನೀರು, ಹಿಮಾಲಯ ದಾಟಿ ಬಂದ ರಹಸ್ಯವಿದು!

ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರು, ಮಧ್ಯ ಏಷ್ಯಾ ಮತ್ತು ಯುರೋಪ್‌ನಿಂದ ವಲಸೆ ಬರುವ ಬ್ರಾಹ್ಮಣಿ ಬಾತುಕೋಳಿಗಳಂತಹ ವಿದೇಶಿ ಹಕ್ಕಿಗಳಿಗೆ ಚಳಿಗಾಲದ ಆಶ್ರಯತಾಣವಾಗಿದೆ. ಹಿಮಾಲಯವನ್ನು ದಾಟಿ ಬರುವ ಈ ಹಕ್ಕಿಗಳು ಸಂತಾನೋತ್ಪತ್ತಿ ಮುಗಿಸಿ ಹಿಂದಿರುಗುತ್ತವೆ.

Read Full Story
07:20 PM (IST) Dec 23

Karnataka News Live 23 December 2025ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಗುಡ್‌ನ್ಯೂಸ್‌ ನೀಡಿದ ಇಲಾಖೆ, ಋತುಚಕ್ರ ರಜೆಗೆ ಗ್ರೀನ್‌ ಸಿಗ್ನಲ್‌!

ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ, NWKRTC, ಮತ್ತು KKRTCಯ ಮಹಿಳಾ ನೌಕರರಿಗೆ ರಾಜ್ಯ ಸರ್ಕಾರವು ಋತುಚಕ್ರ ರಜೆಯನ್ನು ಮಂಜೂರು ಮಾಡಿದೆ. ಜನವರಿ 1 ರಿಂದ ಜಾರಿಗೆ ಬರುವ ಈ ಆದೇಶದ ಅಡಿಯಲ್ಲಿ, ಅರ್ಹ ಮಹಿಳಾ ನೌಕರರು ಪ್ರತಿ ತಿಂಗಳು ಒಂದು ದಿನದ ರಜೆಯನ್ನು ಪಡೆಯಬಹುದು.

Read Full Story
07:07 PM (IST) Dec 23

Karnataka News Live 23 December 2025ಬರೋಬ್ಬರಿ 22 ಖಾಸಗಿ ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಿದ ಮಂಗಳೂರು ವಿಶ್ವವಿದ್ಯಾಲಯ! ಕಾರಣವೇನು?

ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ನಿರಂತರವಾಗಿ ಕುಸಿದ ಹಿನ್ನೆಲೆಯಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯವು ತನ್ನೊಂದಿಗೆ ಸಂಯೋಜಿತವಾಗಿರುವ 22 ಖಾಸಗಿ ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಿದೆ. ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ಅವಕಾಶವಿದೆ.

Read Full Story
06:57 PM (IST) Dec 23

Karnataka News Live 23 December 2025ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ

ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ, ನಿರ್ಗಮನ ಸಮಯ, ಮಾರ್ಗ ಸೇರಿದಂತೆ ಕೆಲ ಮಹತ್ತರ ಬದಲಾವಣೆ ಮಾಡಲಾಗಿದೆ. ರೈಲು ಬದಲಾವಣೆ ವಿವರವನ್ನು ಸಚಿವಾಲಯ ಪ್ರಕಟಿಸಿದೆ.

Read Full Story
06:56 PM (IST) Dec 23

Karnataka News Live 23 December 2025Darshan Vs Sudeep War - ಅವ್ರಿಗೆ ಪಾಪ ಏನು ನೋವಿದ್ಯೋ ಗೊತ್ತಿಲ್ಲ- ಸುದೀಪ್​ ರಿಯಾಕ್ಷನ್​ಗೆ ಎಲ್ಲರೂ ಗಪ್​ಚುಪ್​!

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ತಾನು ಯಾರ ಬಗ್ಗೆ ಮಾತನಾಡಿದ್ದೇನೆ ಎಂದು ತಿಳಿಯದೆ ನನ್ನನ್ನು ಪ್ರಶ್ನಿಸುವುದು ಸರಿಯಲ್ಲ ಎಂದಿರುವ ಅವರು, 'ದೇವಸ್ಥಾನದ ಘಂಟೆ ಹೊಡೆದುಕೊಂಡರೆ ಆ ಘಂಟೆಯನ್ನೇ ಕೇಳಬೇಕು' ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
Read Full Story
06:47 PM (IST) Dec 23

Karnataka News Live 23 December 2025ಸೆಲ್ಫಿ ವಿಡಿಯೋ ಮಾಡಿ ಪ್ರಾಣಬಿಟ್ಟ ಮಹಿಳೆ ಕೇಸಿಗೆ ಟ್ವಿಸ್ಟ್; ಗಂಡನ ಬಿಟ್ಟು ಬಂದರೂ ನರಕ ತೋರಿಸಿದ್ದ ಪ್ರೇಮಿ!

ಬಳ್ಳಾರಿಯಲ್ಲಿ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಿಯಕರನಿಂದ ಮನನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಚಿತ್ರೀಕರಿಸಿ, ತಮ್ಮ ಸಾವಿಗೆ ಪ್ರಿಯಕರ ಶೇಕ್ಷಾವಲಿ ಮತ್ತು ಆತನ ಕುಟುಂಬವೇ ಕಾರಣ ಎಂದು ಆರೋಪಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story
06:18 PM (IST) Dec 23

Karnataka News Live 23 December 2025ಬಿಕ್ಲು ಶಿವ ಹತ್ಯೆ ಪ್ರಕರಣ, ಬೈರತಿಗೆ ಮತ್ತಷ್ಟು ಬಿಗಿಯಾದ ಕಾನೂನು, ಮತ್ತೊಮ್ಮೆ ಜಾಮೀನು ವಜಾ

ಭಾರತೀನಗರದ ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವರಾಜು ಅವರಿಗೆ ಮತ್ತೆ ಹಿನ್ನಡೆಯಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

Read Full Story
06:12 PM (IST) Dec 23

Karnataka News Live 23 December 2025ಕಿಶೋರ್‌ ಬಳಿಕ ಪ್ರಕಾಶ್‌ ರಾಜ್‌ಗೆ ಜಾಕ್‌ಪಾಟ್‌, 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನೇಮಕ!

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹಿರಿಯ ನಟ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ. ಜನವರಿ 29 ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ ಈ ಚಿತ್ರೋತ್ಸವವು 'ಮಹಿಳಾ ಸಬಲೀಕರಣ' ಥೀಮ್ ಹೊಂದಿದ್ದು, 60ಕ್ಕೂ ಹೆಚ್ಚು ದೇಶಗಳ 200 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

Read Full Story
06:06 PM (IST) Dec 23

Karnataka News Live 23 December 2025ದರ್ಶನ್ ನಟನೆಯ​ The Devil ಚಿತ್ರ ರಿಜೆಕ್ಟ್​ ಮಾಡಿರುವುದಕ್ಕೆ ಶಾಕಿಂಗ್​ ಕಾರಣ ಕೊಟ್ಟ ನಟಿ ರಾಗಿಣಿ ದ್ವಿವೇದಿ!

ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ನಟಿ ರಾಗಿಣಿ ದ್ವಿವೇದಿ, ದರ್ಶನ್ ಅಭಿನಯದ 'ದಿ ಡೆವಿಲ್' ಚಿತ್ರದ ಪಾತ್ರವನ್ನು ತಿರಸ್ಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ಬಗ್ಗೆಯೂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Read Full Story
05:55 PM (IST) Dec 23

Karnataka News Live 23 December 2025ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಫೀಡರ್ ಬಸ್ ಗಿಫ್ಟ್ - ಇಲ್ಲಿದೆ ಪೂರ್ಣ ವೇಳಾಪಟ್ಟಿ

ಬೆಂಗಳೂರು ಮೆಟ್ರೋ ಪ್ರಯಾಣಿಕರೇ ಗಮನಿಸಿ! ಜ್ಞಾನಭಾರತಿ, ಕೆ.ಆರ್. ಪುರ, ಬೆನ್ನಿಗಾನಹಳ್ಳಿ ನಿಲ್ದಾಣಗಳಿಂದ ಹೊಸ ಬಿಎಂಟಿಸಿ ಫೀಡರ್ ಬಸ್ ಸೇವೆ ಆರಂಭ. ಮಾರ್ಗ, ಸಮಯ ತಿಳಿಯಲು ಕ್ಲಿಕ್ ಮಾಡಿ.

Read Full Story
05:43 PM (IST) Dec 23

Karnataka News Live 23 December 2025ಅಂಡರ್-19 ಏಷ್ಯಾಕಪ್ - ಭಾರತದ ಆಟಗಾರರ ಮೇಲೆ ಮೊಹ್ಸಿನ್ ನಖ್ವಿ ಗರಂ, ಐಸಿಸಿಗೆ ದೂರು ನೀಡಲು ರೆಡಿಯಾದ ಪಾಕ್ ಸಚಿವ!

ಅಂಡರ್ 19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತೀಯ ಆಟಗಾರರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಐಸಿಸಿಗೆ ಅಧಿಕೃತ ದೂರು ನೀಡಲು ನಿರ್ಧರಿಸಿದೆ. ಪಾಕ್ ತಂಡದ ಕೋಚ್ ಸರ್ಫರಾಜ್ ಅಹ್ಮದ್ ಅವರ ಆರೋಪದ ಬೆನ್ನಲ್ಲೇ ನಖ್ವಿ ಈ ಕ್ರಮವನ್ನು ಖಚಿತಪಡಿಸಿದ್ದಾರೆ. 

Read Full Story
05:37 PM (IST) Dec 23

Karnataka News Live 23 December 2025ಹೊಸಕೋಟೆಗೆ ಬಿರಿಯಾನಿ ತಿನ್ನಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಕಿಡ್ನಾಪ್ ಮಾಡಿ ಹಣ ವಸೂಲಿ!

ಹೊಸಕೋಟೆಗೆ ಬಿರಿಯಾನಿ ತಿನ್ನಲು ತೆರಳಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿಗಳನ್ನು ದುಷ್ಕರ್ಮಿಗಳ ಗುಂಪೊಂದು ಅಡ್ಡಗಟ್ಟಿ ಸುಲಿಗೆ ಮಾಡಿದೆ. ವಿದ್ಯಾರ್ಥಿಗಳನ್ನು ಒಂದು ಗಂಟೆ ಕಾಲ ಒತ್ತೆಯಾಳಾಗಿರಿಸಿ, ಯುಪಿಐ ಮೂಲಕ ಹಣ ವರ್ಗಾಯಿಸಿಕೊಂಡು, ದೈಹಿಕ ಹಿಂಸೆ ನೀಡಿ ಪರಾರಿಯಾಗಿದ್ದಾರೆ. 

Read Full Story
05:30 PM (IST) Dec 23

Karnataka News Live 23 December 2025BBK 12 ಗೆಲ್ಲೋದು ಯಾರು? ಗಿಲ್ಲಿ ನಟನ ಮುಂದಿನ ಜೀವನ ಹೇಗಿರಲಿದೆ? ಮಂತ್ರಾಲಯದ ಗಿಣಿ ಭವಿಷ್ಯ ನುಡೀತು

Bigg Boss Kannada Season 12 Winner: ದಿನದಿಂದ ದಿನಕ್ಕೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಕುತೂಹಲದಿಂದ ಕೂಡಿದೆ. ಇನ್ನು ಫಿನಾಲೆಯಲ್ಲಿ ಯಾರು ಗೆಲ್ಲಲಿದ್ದಾರೆ? ಯಾರು ಟ್ರೋಫಿ ಪಡೆಯಲಿದ್ದಾರೆ ಎಂಬ ಕುತೂಹಲವಿದೆ. ಈ ಬಗ್ಗೆ ಮಂತ್ರಾಲಯ ಗಿಣಿ ಹೇಳಿದ್ದೇನು?

Read Full Story
05:12 PM (IST) Dec 23

Karnataka News Live 23 December 2025ಚೀನಾದಲ್ಲಿ ಡ್ರೋನ್​ ಹಾರಿಸಲು ಹೋಗಿ ಚೀನಿ ಬೆಡಗಿ ಜೊತೆ Bigg Boss ಪ್ರತಾಪನ ಡ್ಯುಯೆಟ್​!

ವಿವಾದಗಳಿಂದಲೇ ಖ್ಯಾತರಾಗಿದ್ದ ಡ್ರೋನ್ ಪ್ರತಾಪ್, ಬಿಗ್ ಬಾಸ್ ಮೂಲಕ ಮತ್ತೆ ಜನಪ್ರಿಯತೆ ಗಳಿಸಿದ್ದರು. ಇದೀಗ ಚೀನಾಕ್ಕೆ ಹಾರಿದ್ದು, ಅಲ್ಲಿ ಚೀನಿ ಯುವತಿಯೊಂದಿಗೆ ಕಾಣಿಸಿಕೊಂಡು ಡ್ರೋನ್ ಬಗ್ಗೆ ಪಾಠ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. 

Read Full Story
05:07 PM (IST) Dec 23

Karnataka News Live 23 December 2025ಅಂದು ನಡೆದ ಘಟನೆ ಬಳಸ್ಕೊಂಡು, ದೇಶ-ವಿದೇಶದಲ್ಲಿ ಉದ್ಯಮ ಮಾಡಿ ಗೆದ್ದ Bigg Boss ಸ್ಪರ್ಧಿ! ಯಾರದು?

Bigg Boss Shrutika Arjun: ಇಂದು ಅನೇಕರು ಉದ್ಯಮ ಮಾಡಿ ಗೆದ್ದ ಉದಾಹರಣೆಯೂ ಇದೆ, ಕೆಲವರು ಉದ್ಯಮ ಮಾಡಿ ಕೈ ಸುಟ್ಟುಕೊಂಡ ಉದಾಹರಣೆಯೂ ಇದೆ. ಕೆಲವೊಮ್ಮೆ ನಾವು ಏನೂ ಪ್ಲ್ಯಾನ್‌ ಮಾಡದೆ, ಏನೇನೋ ಆಗುವುದುಂಟು. ಅಂತೆಯೇ ಈ ನಟಿ ಕೂಡ ಉದ್ಯಮ ಆರಂಭಿಸಿ, ಇಂದು ದೊಡ್ಡ ಮಟ್ಟದದಲ್ಲಿ ಯಶಸ್ಸು ಪಡೆದಿದ್ದಾರೆ. 

Read Full Story
04:43 PM (IST) Dec 23

Karnataka News Live 23 December 2025ಕಿಚ್ಚ ಸುದೀಪ್ ಪರ ಬ್ಯಾಟ್ ಬೀಸಿದ ಜೆಡಿಎಸ್ ಮುಖಂಡ ಪ್ರವೀಣ್ - 'ಅಂದಾಭಿಮಾನಿಗಳು ಚಿತ್ರರಂಗಕ್ಕೆ ಶಾಪ' ಎಂದು ಆಕ್ರೋಶ!

ಕಿಚ್ಚ ಸುದೀಪ್-ದರ್ಶನ್ ಅಭಿಮಾನಿಗಳ ವಾರ್‌ಗೆ ರಾಜಕೀಯದ ಎಂಟ್ರಿ! ಜೆಡಿಎಸ್ ಮುಖಂಡನ ಪ್ರವೀಣ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಸುದೀಪ್ 'ಯುದ್ಧ'ದ ಹೇಳಿಕೆ, ವಿಜಯಲಕ್ಷ್ಮಿ ಕೌಂಟರ್ ವಿವರ ತಿಳಿಯಲು ಓದಿ.

Read Full Story
04:26 PM (IST) Dec 23

Karnataka News Live 23 December 2025ಇದನ್ನು ಕುಡಿಯಿರಿ, ವೈದ್ಯರಿಂದ ದೂರವಿರಿ - ಚೀನಿಯರ ಸೌಂದರ್ಯ, ಆರೋಗ್ಯ, ದೀರ್ಘಾಯಸ್ಸಿನ ಗುಟ್ಟು ರಟ್ಟು

ಭಾರತೀಯರು ಆಯುರ್ವೇದವನ್ನು ಕಡೆಗಣಿಸುತ್ತಿದ್ದರೆ, ಚೀನಿಯರು ಆರೋಗ್ಯಕ್ಕಾಗಿ ವಿಶೇಷ ಕಷಾಯವನ್ನು ಅವಲಂಬಿಸಿದ್ದಾರೆ. ನಮ್ಮ ಅಡುಗೆಮನೆಯಲ್ಲಿಯೇ ಪದಾರ್ಥಗಳಿಂದ ಚೀನಿಯರು ವೈದ್ಯರಿಂದ ದೂರ ಇರುವುದು ಹೇಗೆ? ಇಲ್ಲಿದೆ ಅವರ ರೆಸಿಪಿ.

Read Full Story
04:21 PM (IST) Dec 23

Karnataka News Live 23 December 20258 ತಿಂಗಳಲ್ಲೇ ದೇವನಹಳ್ಳಿ ಪ್ಲ್ಯಾಂಟ್‌ನಲ್ಲಿ 30 ಸಾವಿರ ಉದ್ಯೋಗಿಗಳ ನೇಮಿಸಿಕೊಂಡ ಫಾಕ್ಸ್‌ಕಾನ್‌!

ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಫಾಕ್ಸ್‌ಕಾನ್ ದೇವನಹಳ್ಳಿಯಲ್ಲಿ ಐಫೋನ್ ಉತ್ಪಾದನೆಯನ್ನು ಪ್ರಾರಂಭಿಸಿತು. ಇದು ಐಫೋನ್ 16 ಉತ್ಪಾದನೆಯೊಂದಿಗೆ ಪ್ರಾರಂಭವಾಯಿತು ಮತ್ತು ಈಗ ಐಫೋನ್ 17 ಪ್ರೊ ಮ್ಯಾಕ್ಸ್ ಮಾದರಿಗಳನ್ನು ಉತ್ಪಾದಿಸುತ್ತಿದೆ.

Read Full Story