ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೈಸೂರಿನಿಂದ ಕಲ್ಬುರ್ಗಿಗೆ ಆಗಮಿಸಿದ್ದ ವಿಶೇಷ ವಿಮಾನವು ಹವಾಮಾನ ವೈಪರಿತ್ಯದಿಂದಾಗಿ ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗದೆ ಬೆಂಗಳೂರಿಗೆ ವಾಪಸ್ ಆಗಿರುವ ಘಟನೆ ನಡೆದಿದೆ.

ಕಲ್ಬುರ್ಗಿ (ಏ.25): ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೈಸೂರಿನಿಂದ ಕಲ್ಬುರ್ಗಿಗೆ ಆಗಮಿಸಿದ್ದ ವಿಶೇಷ ವಿಮಾನವು ಹವಾಮಾನ ವೈಪರಿತ್ಯದಿಂದಾಗಿ ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗದೆ ಬೆಂಗಳೂರಿಗೆ ವಾಪಸ್ ಆಗಿರುವ ಘಟನೆ ನಡೆದಿದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು, ಇಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಕಲ್ಬುರ್ಗಿಗೆ ತೆರಳಿದ್ದರು. ಅಂದುಕೊಂಡಂತೆ ಆಗಿದ್ದರೆ ಸಂಜೆ 7:00 ಗಂಟೆಗೆ ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಗುಡುಗು, ಮಿಂಚು ಸಹಿತ ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ವಿಮಾನದ ಲ್ಯಾಂಡಿಂಗ್‌ಗೆ ಅನುಮತಿ ಸಿಗಲಿಲ್ಲ. ಹೀಗಾಗಿ ವಿಮಾನವು ಆಗಸದಲ್ಲಿ ಎರಡು ಸುತ್ತು ಹೊಡೆದು ನಂತರ ಬೆಂಗಳೂರಿಗೆ ವಾಪಸ್ ತೆರಳಿದೆ.

ಇದನ್ನೂ ಓದಿ:ದೇಶದ ಪ್ರಶ್ನೆ ಬಂದಾಗ ರಾಜಕೀಯ ಬದಿಗಿಟ್ಟು ಕೇಂದ್ರದ ಜೊತೆ ನಿಲ್ಲಬೇಕು: ಯುಟಿ ಖಾದರ್

 ಡಿಕೆ ಶಿವಕುಮಾರ್ ಅವರು ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಕ್ಯಾಂಡಲ್ ಮಾರ್ಚ್ ಮತ್ತು ಸಂತಾಪ ಸಭೆಯಲ್ಲಿ ಭಾಗವಹಿಸಬೇಕಿತ್ತು. ಆದರೆ, ವಿಮಾನ ಲ್ಯಾಂಡಿಂಗ್ ಆಗದ ಕಾರಣ ಈ ಕಾರ್ಯಕ್ರಮದಲ್ಲಿ ಅವರ ಭಾಗವಹಿಸುವಿಕೆ ಸಾಧ್ಯವಾಗಲಿಲ್ಲ. ಹವಾಮಾನ ವೈಪರಿತ್ಯದಿಂದಾಗಿ ಉಂಟಾದ ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಲ್ಬುರ್ಗಿಯ ಕಾಂಗ್ರೆಸ್ ಕಾರ್ಯಕರ್ತರು ಈ ಘಟನೆಯಿಂದ ನಿರಾಸೆಗೊಂಡರು.