ಶಿವಪುರಿಯಲ್ಲಿ ವಾಯುಪಡೆಯ ವಿಮಾನದಿಂದ ಆಕಸ್ಮಿಕವಾಗಿ ಭಾಗವೊಂದು ಬಿದ್ದು ಮನೆಗೆ ಹಾನಿಯಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ವಾಯುಪಡೆ ವಿಷಾದ ವ್ಯಕ್ತಪಡಿಸಿ ತನಿಖೆ ಆರಂಭಿಸಿದೆ. ಬಿದ್ದ ವಸ್ತು ಗಟ್ಟಿಯಾಗಿದ್ದು, ಸುಟ್ಟ ಗುರುತುಗಳಿವೆ. ತಜ್ಞರ ತಂಡ ಪರಿಶೀಲಿಸುತ್ತಿದೆ.

ಭೋಪಾಲ್‌ (ಏ.25): ಮಧ್ಯಪ್ರದೇಶದ ಶಿವಪುರಿಯ ಪಿಚೋರೆ ಪಟ್ಟಣದಲ್ಲಿ ಭಾರತೀಯ ವಾಯುಪಡೆಯ ಯುದ್ಧವಿಮಾನದಲ್ಲಿ ಭಾರೀ ಪ್ರಮಾಣದ ಲೋಹದ ವಸ್ತುವೊಂದು ಬಿದ್ದಿದ್ದು, ಇದರಿಂದ ಮನೆಗೆ ಭಾರೀ ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲವಾದರೂ, ಮನೆಯ ಎರಡು ಕೋಣೆಗಳು ಭಾರೀ ಪ್ರಮಾಣದಲ್ಲಿ ಹಾನಿಗೆ ಒಳಗಾಗಿದೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ವಿಷಾದ ವ್ಯಕ್ತಪಡಿಸಿ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಐಎಎಫ್‌, 'ಶಿವಪುರಿ ಬಳಿಯ ಐಎಎಫ್ ವಿಮಾನದಿಂದ ಸ್ಫೋಟಕವಲ್ಲದ ಏರಿಯಲ್‌ ಸ್ಟೋರ್‌ (ವಿಮಾನದಲ್ಲಿರುವ ವಸ್ತು) ಆಕಸ್ಮಿಕವಾಗಿ ಬಿದ್ದಿತ್ತು. ಇದರಿಂದ ನೆಲದ ಮೇಲಿನ ಆಸ್ತಿಪಾಸ್ತಿಗೆ ಉಂಟಾದ ಹಾನಿಗೆ ಐಎಎಫ್ ವಿಷಾದ ವ್ಯಕ್ತಪಡಿಸಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ' ಎಂದು ಪೋಸ್ಟ್‌ ಮಾಡಿದೆ.'

Scroll to load tweet…

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಳಿಗ್ಗೆ 11 ಗಂಟೆ ಸುಮಾರಿಗೆ ಶಿಕ್ಷಕ ಮನೋಜ್ ಸಾಗರ್ ಅವರ ಮನೆಯ ಛಾವಣಿಯ ಮೇಲೆ ಗುರುತೇ ಸಿಗದಂತಿದ್ದ ಭಾರವಾದ ವಸ್ತುವೊಂದು ಬಿದ್ದು, ಎರಡು ಕೊಠಡಿಗಳು ಸಂಪೂರ್ಣವಾಗಿ ಹಾನಿಗೊಳಗಾದವು. ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಅವಶೇಷಗಳು ಬಿದ್ದವು.

ಸಾಗರ್ ತನ್ನ ಮಕ್ಕಳೊಂದಿಗೆ ಮನೆಯೊಳಗೆ ಊಟ ಮಾಡುತ್ತಿದ್ದಾಗ ಮತ್ತು ಅವರ ಪತ್ನಿ ಅಡುಗೆಮನೆಯಲ್ಲಿದ್ದಾಗ, ದೊಡ್ಡ ಸ್ಫೋಟದೊಂದಿಗೆ ಛಾವಣಿ ಒಡೆದು ಅಂಗಳದಲ್ಲಿ 8 ರಿಂದ 10 ಅಡಿ ಆಳದ ಹೊಂಡ ರೂಪುಗೊಂಡಿತು. ಸ್ಫೋಟದಿಂದ ಉಂಟಾದ ಕಂಪನಗಳು ಅಕ್ಕಪಕ್ಕದ ಮನೆಗಳಲ್ಲೂ ಅನುಭವಕ್ಕೆ ಬಂದವು.

"ಮನೋಜ್ ಸಾಗರ್ ಅವರ ಮನೆಯ ಮೇಲೆ ವಾಯುಪಡೆಯ ಜೆಟ್‌ ಆಕಾಶ ಮಾರ್ಗದಲ್ಲಿ ಹಾರುವಾಗ ಭಾರವಾದ ಲೋಹದ ವಸ್ತು ಬಿದ್ದಿದೆ... ಇದರಿಂದಾಗಿ ಎರಡು ಹೊರ ಕೊಠಡಿಗಳು ಹಾನಿಗೊಳಗಾಗಿವೆ. ಮನೆಯಲ್ಲಿ ನಾಲ್ವರು ಸದಸ್ಯರಿದ್ದರು, ಎಲ್ಲರೂ ಸುರಕ್ಷಿತರಾಗಿದ್ದಾರೆ. ಪೊಲೀಸರು ಮತ್ತು ಆಡಳಿತ ತಂಡ ಸ್ಥಳದಲ್ಲಿದೆ" ಎಂದು ಶಿವಪುರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಸಿಂಗ್ ರಾಥೋಡ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಡೀಸೆಲ್‌, ಜೆಟ್‌ ಫ್ಯುಯೆಲ್‌ ಸ್ಟಾಕ್‌ ಇರಿಸಿಕೊಳ್ಳಿ, ರಿಫೈನರಿಗಳಿಗೆ ಸೂಚಿಸಿದ ಪಾಕಿಸ್ತಾನ ಸರ್ಕಾರ!

ಈ ಘಟನೆಯನ್ನು ಐಎಎಫ್ ಮತ್ತು ಇತರ ಸಂಸ್ಥೆಗಳ ಸಮನ್ವಯದೊಂದಿಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಆದರೆ, ತನಿಖೆಯ ನಂತರವೇ ಆ ವಸ್ತು ಎಲ್ಲಿಂದ ಬಂತು ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪ್ರಶಾಂತ್ ಶರ್ಮಾ ಹೇಳಿದ್ದಾರೆ. ಅದು "ಅತ್ಯಂತ ಗಟ್ಟಿಯಾಗಿ" ಇರುವ ವಸ್ತು ಮತ್ತು ಸುಟ್ಟ ಗುರುತುಗಳನ್ನು ಹೊಂದಿತ್ತು ಎಂದು ಅವರು ಹೇಳಿದರು. "(ಐಎಎಫ್‌ನ) ಗ್ವಾಲಿಯರ್ ವಾಯುನೆಲೆಯನ್ನು ಸಂಪರ್ಕಿಸಲಾಗಿದೆ. ಅಲ್ಲಿಂದ ತಜ್ಞರ ತಂಡ ಬಂದ ನಂತರವೇ, ಈ ವಸ್ತು ಯಾವುದು ಮತ್ತು ಅದು ಎಲ್ಲಿಂದ ಬಿದ್ದಿದೆ ಎಂಬುದನ್ನು ದೃಢಪಡಿಸಬಹುದು" ಎಂದು ಶರ್ಮಾ ಹೇಳಿದ್ದಾರೆ.

ಭದ್ರತಾ ಲೋಪ ಒಪ್ಪಿಕೊಂಡ ಮೋದಿ ಸರ್ಕಾರ, ಸರ್ಕಾರದ ಯಾವುದೇ ನಿರ್ಧಾರಕ್ಕೂ ನಮ್ಮ ಬೆಂಬಲ ಎಂದ ವಿಪಕ್ಷ!

Scroll to load tweet…