11:18 PM (IST) Jun 09

Karnataka News Live 9 June 2026ಮತ್ತೆ ಅಪ್ಪನಾಗ್ತಿದ್ದಾರಾ ಹಾರ್ದಿಕ್‌? ರಾತ್ರೋರಾತ್ರಿ ಗೆಳತಿಯನ್ನು ಕರ್ಕೊಂಡು ಬೆಂಗಳೂರಿನ ಪ್ರೈಮಾ ಡಯಾಗ್ನೋಸ್ಟಿಕ್ಸ್‌ಗೆ ಬಂದ ಪಾಂಡ್ಯ!

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಬೆಂಗಳೂರಿನ ಯಲಹಂಕದಲ್ಲಿರುವ ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ರಾತ್ರೋರಾತ್ರಿ ಭೇಟಿ ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು.

Read Full Story
09:27 PM (IST) Jun 09

Karnataka News Live 9 June 2026ವಾಟ್ಸಾಪ್ ಯುನಿವರ್ಸಿಟಿ ಸುದ್ದಿಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ - ಸಂಸದ ಬೊಮ್ಮಾಯಿ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಂಸದರಿಗೆ ಟಿಕೆಟ್ ನೀಡುವ ಕುರಿತು ಹರಿದಾಡುತ್ತಿರುವ ಸುದ್ದಿಗಳು 'ವಾಟ್ಸಾಪ್ ಯುನಿವರ್ಸಿಟಿ'ಯ ಸೃಷ್ಟಿಯಾಗಿದ್ದು, ಅಂತಹ ಸುದ್ದಿಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Read Full Story
09:02 PM (IST) Jun 09

Karnataka News Live 9 June 2026ಪಕ್ಷದಲ್ಲಿ ಅನ್ಯಾಯವಾಗಿಲ್ಲ, ಸಿಗಬೇಕಾದ ಪ್ರಾಮುಖ್ಯತೆ ಸಿಕ್ಕಿದೆ - ಸಚಿವ ಸತೀಶ್ ಜಾರಕಿಹೊಳಿ

ಪಕ್ಷದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ಎಲ್ಲರಿಗೂ ಒಂದೇ ವೇಳೆ ಎಲ್ಲವೂ ಸಿಗಲು ಸಾಧ್ಯವಿಲ್ಲ. ಹೈಕಮಾಂಡ್ ನೀಡಿರುವ ಜವಾಬ್ದಾರಿಯನ್ನು ಸ್ವೀಕರಿಸಿ ಕೆಲಸ ಮಾಡುವುದು ಮುಖ್ಯ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

Read Full Story
07:00 PM (IST) Jun 09

Karnataka News Live 9 June 2026ಕನಕಗಿರಿಯಲ್ಲಿ ಬೆಚ್ಚಿಬೀಳಿಸುವ ಘಟನೆ - ಮಹಿಳೆ ಮೇಲೆ ಸಾಮೂಹಿಕ ಅತ್ಯಾ*ಚಾರ ಶಂಕೆ, ಬೆಂಕಿ ಹಚ್ಚಿ ಹ*ತ್ಯೆ?

ಸಮೀಪದ ಕನಕಗಿರಿ ಪಟ್ಟಣದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ (40) ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆಸಿ ನಂತರ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.

Read Full Story
06:45 PM (IST) Jun 09

Karnataka News Live 9 June 2026ಕಾಡುಗೋಡಿ ಮಗು ಹತ್ಯೆ ಪ್ರಕರಣ - ಐಸ್‌ಕ್ರೀಂ ಕೇಳಿದ್ದಕ್ಕೆ ಕಾರಲ್ಲೇ ಒದ್ದು ಕೊಂದೆ, ಪೊಲೀಸರೆದುರು ಬಾಯಿಬಿಟ್ಟ ಪ್ರಿಯಕರ!

ಬೆಂಗಳೂರಿನ ಕಾಡುಗೋಡಿಯಲ್ಲಿ, ಪ್ರಿಯಕರನೊಂದಿಗೆ ಸೇರಿ ಮಗಳನ್ನು ಕೊಂದ ಆರೋಪದ ಮೇಲೆ ತಾಯಿ ಪ್ರಿಯಾಂಕಾ ಮತ್ತು ಮೋಹನ್ ಸಿಕ್ಕಿಬಿದ್ದಿದ್ದಾನೆ. ಐಸ್‌ಕ್ರೀಂಗಾಗಿ ಹಠ ಹಿಡಿದ ಮಗುವನ್ನು ಮೋಹನ್ ಕಾರಿನಲ್ಲೇ ಒದ್ದು ಕೊಂದಿದ್ದು, ನಂತರ ಇಬ್ಬರೂ ಸೇರಿ ಕೊಲೆಯನ್ನು ಮುಚ್ಚಿಹಾಕಲು ನಾಟಕವಾಡಿದ್ದರು.

Read Full Story
05:25 PM (IST) Jun 09

Karnataka News Live 9 June 2026ಗದಗದಲ್ಲಿ ರಾಷ್ಟ್ರಕೂಟ ಕಾಲದ ವಿಶಿಷ್ಟ ವೀರಗಲ್ಲು ಪತ್ತೆ, ರಾಜನ ಮೇಲಿನ ಪ್ರೀತಿಗೆ ಪ್ರಾಣತ್ಯಾಗದ 'ಕೀಲುಗುಂಟೆ' ಪದ್ಧತಿ!

ಗದಗ ಜಿಲ್ಲೆಯ ಮೇವುಂಡಿಯಲ್ಲಿ ರಾಷ್ಟ್ರಕೂಟರ ಕಾಲದ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದೆ. ಇದು ತನ್ನ ಅರಸನ ಸಾವಿನ ನಂತರ, ರಾಜಭಕ್ತಿಯಿಂದ ಸ್ವಯಂಪ್ರೇರಿತವಾಗಿ ಪ್ರಾಣತ್ಯಾಗ ಮಾಡಿದ ರಟ್ಟೆಯಣ್ಣ ಎಂಬ ಸೇವಕನ ಕಥೆಯನ್ನು ಹೇಳುತ್ತದೆ. ಈ ವಿಶಿಷ್ಟ ಆಚರಣೆಯನ್ನು 'ಕೀಲುಗುಂಟೆ' ಎಂದು ಕರೆಯಲಾಗುತ್ತಿತ್ತು.
Read Full Story
04:24 PM (IST) Jun 09

Karnataka News Live 9 June 2026ದುನಿಯಾ ವಿಜಯ್‌ಗೆ ನಡುಕ ಹುಟ್ಟಿಸಿದ ವಿಜಯ್ ಸೇತುಪತಿ - 'ಸ್ಲಮ್‌ಡಾಗ್' ಟೀಸರ್‌ನಲ್ಲಿ ಬಿಗ್ ಸಸ್ಪೆನ್ಸ್

ನಿರ್ದೇಶಕ ಪೂರಿ ಜಗನ್ನಾಥ್ ತಮ್ಮ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಆಕ್ಷನ್ ಸಿನಿಮಾ 'ಸ್ಲಮ್‌ಡಾಗ್: 33 ಟೆಂಪಲ್ ರೋಡ್' ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ. ಈ ಟೀಸರ್‌ನಲ್ಲಿ ರಾಷ್ಟ್ರ ಪ್ರಶಸ್ತಿ..

Read Full Story
04:07 PM (IST) Jun 09

Karnataka News Live 9 June 2026ರೆಸಾರ್ಟ್ ರಾಜಕೀಯ - ಅಡ್ಡ ಮತದಾನದ ಭೀತಿ, ಬೆಂಗಳೂರಿನ ರೆಸಾರ್ಟ್‌ಗೆ ಶಿಫ್ಟ್ ಆದ ಮಧ್ಯಪ್ರದೇಶದ 63 ಕಾಂಗ್ರೆಸ್ ಶಾಸಕರು!

ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮತ್ತು ಆಪರೇಷನ್ ಕಮಲದ ಭೀತಿಯಿಂದಾಗಿ, ಮಧ್ಯಪ್ರದೇಶದ 63 ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ವಂಡರ್‌ಲಾ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ಮತದಾನದವರೆಗೂ ಸುಮಾರು 10 ದಿನಗಳ ಕಾಲ ಶಾಸಕರು ಇಲ್ಲೇ ವಾಸ್ತವ್ಯ ಹೂಡಲಿದ್ದು, ಈ ರಾಜಕೀಯ ಹೈಡ್ರಾಮಾ ತೀವ್ರ ಕುತೂಹಲ ಕೆರಳಿಸಿದೆ.
Read Full Story
03:31 PM (IST) Jun 09

Karnataka News Live 9 June 2026ಬೆಂಗಳೂರಿಗೆ ಬಿಗ್‌ ಗಿಫ್ಟ್ - ಈ ರಸ್ತೆಲಿ 10.3 ಕಿ.ಮೀ ಉದ್ದದ ಬೃಹತ್ ಸೈಕ್ಲಿಂಗ್ ಕಾರಿಡಾರ್ ಜೂ.27ಕ್ಕೆ ಲೋಕಾರ್ಪಣೆ?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದ ಟ್ರಾಫಿಕ್ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು 10.3 ಕಿ.ಮೀ ಉದ್ದದ ವಿಶೇಷ ಸೈಕ್ಲಿಂಗ್ ಕಾರಿಡಾರ್ ನಿರ್ಮಿಸುತ್ತಿದೆ. ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ಈ ಪರಿಸರ ಸ್ನೇಹಿ ಮಾರ್ಗವು ಸೈಕಲ್ ಸವಾರರಿಗೆ ಸುರಕ್ಷಿತ ಸಂಚಾರವನ್ನು ಒದಗಿಸಲಿದೆ.

Read Full Story
02:35 PM (IST) Jun 09

Karnataka News Live 9 June 2026ಶಿವಮೊಗ್ಗಕ್ಕೆ ವಿಮಾನ ಹಾರಾಟ ಸ್ಥಗಿತ, ಮರು ಚಾಲನೆಗೆ ಪ್ರಯತ್ನಿಸುವೆ ಎಂದ ಸಂಸದ ರಾಘವೇಂದ್ರ, ಸರ್ಕಾರದ ವಿರುದ್ಧ ಕಿಡಿ!

ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಇಂಡಿಗೋ ಮತ್ತು ಸ್ಪೈಸ್‌ಜೆಟ್ ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿವೆ. ರಾಜ್ಯ ಸರ್ಕಾರದ ಸಬ್ಸಿಡಿ ನಿಲುಗಡೆಯೇ ಇದಕ್ಕೆ ಕಾರಣವೆಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದು, 'ಉಡಾನ್' ಯೋಜನೆ ಮೂಲಕ ಸೇವೆ ಪುನರಾರಂಭಿಸುವ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಸ್ಟಾರ್ ಏರ್ ಮಾತ್ರ ಹೈದರಾಬಾದ್, ತಿರುಪತಿ ಮತ್ತು ಗೋವಾಗೆ ಸೇವೆ ಮುಂದುವರಿಸಿದೆ.
Read Full Story
12:16 PM (IST) Jun 09

Karnataka News Live 9 June 2026ಉತ್ತರ ಕರ್ನಾಟಕ ಪ್ರವಾಸೋದ್ಯಮ - ಹಿಡಕಲ್ ಡ್ಯಾಂ ಇನ್ನು ಮುಂದೆ ಪ್ರವಾಸಿ ತಾಣ, ಉದ್ಯಾನ, ಮಕ್ಕಳ ರೈಲು, ಬೋಟಿಂಗ್, ತಾರಾಲಯ

ಹಿಡಕಲ್ ಡ್ಯಾಂ ಅನ್ನು ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರು ಬೃಂದಾವನ ಮಾದರಿಯ 'ರಾಜಾ ಲಖಮಗೌಡ ಉದ್ಯಾನಕಾಶಿ'ಯ ಎರಡನೇ ಹಂತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದಿ, ಮಕ್ಕಳ ರೈಲು, ಬೋಟಿಂಗ್, ತಾರಾಲಯ ಸೇರಿದಂತೆ ಹಲವು ಆಕರ್ಷಣೆಗಳು ತಲೆ ಎತ್ತಲಿವೆ.

Read Full Story
11:46 AM (IST) Jun 09

Karnataka News Live 9 June 2026ಬಿಟ್‌ಕಾಯಿನ್ ಹಗರಣ - ನೆಪ ಹೇಳಿ ತಪ್ಪಿಸಿಕೊಂಡ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಗೆ ಇಡಿ 3ನೇ ಸಮನ್ಸ್!

ಬಹುಕೋಟಿ ಬಿಟ್‌ಕಾಯಿನ್ ಹಗರಣದ ತನಿಖೆ ತೀವ್ರಗೊಂಡಿದ್ದು, ಮೊಹಮ್ಮದ್ ನಲಪಾಡ್‌ಗೆ ಇಡಿ ಮೂರನೇ ಸಮನ್ಸ್ ಜಾರಿ ಮಾಡಿದೆ. ಎಸ್‌ಐಟಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿಯೂ ನಲಪಾಡ್ ಹೆಸರು ಉಲ್ಲೇಖವಾಗಿದ್ದು, ಹ್ಯಾಕರ್ ಶ್ರೀಕಿಯಿಂದ ಬಿಟ್‌ಕಾಯಿನ್‌ಗಳನ್ನು ಹವಾಲಾ ಮೂಲಕ ನಗದೀಕರಣ ಮಾಡಿಕೊಟ್ಟ ಆರೋಪವಿದೆ

Read Full Story
11:07 AM (IST) Jun 09

Karnataka News Live 9 June 2026ತೀರ್ಥಹಳ್ಳಿಯಲ್ಲಿ ಅಡಿಕೆ ಕಳ್ಳರು ಅರೆಸ್ಟ್, ಹಾವೇರಿಯ ಇಬ್ಬರಿಂದ 4.50 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ!

ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಗ್ರಾಮದಲ್ಲಿ ನಡೆದಿದ್ದ ಸರಣಿ ಅಡಿಕೆ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಮೂಲದ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಲಾಗಿದ್ದು, ಅವರಿಂದ 4.50 ಲಕ್ಷ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
Read Full Story
11:05 AM (IST) Jun 09

Karnataka News Live 9 June 2026ಡಿಕೆಶಿ ಸರ್ಕಾರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ; ಜಮೀರ್ ಪರ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು!

ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸ್ಥಾನ ಮತ್ತು ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಆಗ್ರಹಿಸಿ ಹೊಸಪೇಟೆ ಹಾಗೂ ಶಿವಮೊಗ್ಗದಲ್ಲಿ ಪ್ರತಿಭಟನೆಗಳು ನಡೆದಿವೆ. ತಮ್ಮ ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಜಮೀರ್ ಅವರ ಅಭಿಮಾನಿಗಳು ಮತ್ತು ರೈತ ಸಂಘಟನೆಗಳು ಎಚ್ಚರಿಕೆ.

Read Full Story
09:26 AM (IST) Jun 09

Karnataka News Live 9 June 2026ಗಾಂಧೀಜಿ ಹತ್ಯೆ ಪ್ರಕರಣ - ವಿಚಾರಣಾ ಆಯೋಗ ರಚನೆ ವಿಳಂಬ ಪ್ರಶ್ನಿಸಿದ್ದ ಅರ್ಜಿ ವಜಾ, ಅರ್ಜಿದಾರನಿಗೆ 10,000 ದಂಡ ವಿಧಿಸಿದ ಹೈಕೋರ್ಟ್‌!

ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಅರ್ಜಿದಾರರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
Read Full Story
09:19 AM (IST) Jun 09

Karnataka News Live 9 June 2026ಬೆಲೆ ಏರಿಕೆ ನಡುವೆ ಬೆಂಗಳೂರಿಗರಿಗೆ ಬಿಗ್ ರಿಲೀಫ್, ಕೆಲ ವಲಯದಲ್ಲಿ ದರ ಹೆಚ್ಚಳ ಇಲ್ಲ

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ಕೆಲ ರಿಲೀಫ್ ಸಿಕ್ಕಿದೆ. ಯಾವೆಲ್ಲಾ ವಲಯದಲ್ಲಿ ಬೆಲೆ ಹೆಚ್ಚಳಕ್ಕೆ ಬ್ರೇಕ್ ಹಾಕಲಾಗಿದೆ?

Read Full Story
09:02 AM (IST) Jun 09

Karnataka News Live 9 June 2026ಸಿಎಂ ಘೋಷಿಸಿದ್ರೂ ವಿದ್ಯಾರ್ಥಿಗಳಿಗಿಲ್ಲ ಉಚಿತ ಪ್ರಯಾಣದ ಸೌಲಭ್ಯ! ಬಾರದ ಅಧಿಕೃತ ಸುತ್ತೋಲೆ

ರಾಜ್ಯ ಸರ್ಕಾರದ ಉಚಿತ ಬಸ್ ಪಾಸ್ ಘೋಷಣೆ ಇನ್ನೂ ಜಾರಿಗೆ ಬಂದಿಲ್ಲ. ಅಧಿಕೃತ ಸುತ್ತೋಲೆ ಬಾರದಿರುವುದರಿಂದ, ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಪಾಸ್ ಪಡೆಯುವಂತಾಗಿದ್ದು, ಇದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅಸಮಾಧಾನ ಮೂಡಿಸಿದೆ.
Read Full Story
08:54 AM (IST) Jun 09

Karnataka News Live 9 June 2026ತಾಯಿಯ ಮಮತೆಗೆ ಗಡಿಗಳಿಲ್ಲ - ದಾವಣಗೆರೆಯ 4 ಅನಾಥ ಮಕ್ಕಳನ್ನು ದತ್ತು ಪಡೆದ ವಿದೇಶಿ ದಂಪತಿಗಳು!

ದಾವಣಗೆರೆಯ ಸರ್ಕಾರಿ ದತ್ತು ಸಂಸ್ಥೆಯಿಂದ ಇತ್ತೀಚೆಗೆ ನಾಲ್ಕು ಮಕ್ಕಳನ್ನು ಸ್ವದೇಶ ಮತ್ತು ವಿದೇಶಗಳಿಗೆ ದತ್ತು ನೀಡಲಾಗಿದೆ. ಈ ಪೈಕಿ ಇಟಲಿಯ ದಂಪತಿಗಳು ಅನಾಥ ಮಗುವೊಂದನ್ನು ಕಾನೂನುಬದ್ಧವಾಗಿ ದತ್ತು ಪಡೆದಿದ್ದು, ಈ ಪ್ರಕ್ರಿಯೆಯು ಅನಾಥ ಮಕ್ಕಳಿಗೆ ಹೊಸ ಬದುಕನ್ನು ನೀಡುತ್ತಿದೆ.
Read Full Story
08:45 AM (IST) Jun 09

Karnataka News Live 9 June 2026ಬಳ್ಳಾರಿ–ರಾಯದುರ್ಗ–ತುಮಕೂರು ನಡುವಿನ ರೈಲ್ವೆ ಮಾರ್ಗ ಆರಂಭ ಯಾವಾಗ? ಜಿ.ಪರಮೇಶ್ವರ ಮಾಹಿತಿ

ಬಳ್ಳಾರಿ-ರಾಯದುರ್ಗ-ತುಮಕೂರು ರೈಲ್ವೆ ಮಾರ್ಗವನ್ನು 2027ರೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಜಿ.ಪರಮೇಶ್ವರ ತಿಳಿಸಿದ್ದಾರೆ. ಭೂಸ್ವಾಧೀನ ವಿಳಂಬದಿಂದ ಕುಂಠಿತಗೊಂಡಿದ್ದ ಈ ಯೋಜನೆಯ ಜೊತೆಗೆ, ಎಸ್ಕಾಂಗಳ ಖಾಸಗೀಕರಣ ವಿರೋಧಿಸಿ ನೌಕರರು ಸಲ್ಲಿಸಿದ ಮನವಿಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Read Full Story
08:31 AM (IST) Jun 09

Karnataka News Live 9 June 2026ನನ್ನ ಬಳಿ ಕೆಜಿಗಟ್ಟಲೇ ಕದ್ದ ಚಿನ್ನ ಐತಿ, ಬನ್ನಿ ಎಂದು ಪಂಗನಾಮ ಹಾಕಿದ ಶಿಗ್ಲಿ ಬಸ್ಯಾ

ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ, ದಾವಣಗೆರೆ ಜಿಲ್ಲೆಯ ಸುರಹೊನ್ನೆ ಗ್ರಾಮದ ಶಿವರಾಜ ಎಂಬುವವರಿಗೆ ಶಿಗ್ಲಿ ಬಸ್ಯಾ ಎಂಬಾತ ₹70 ಸಾವಿರ ವಂಚಿಸಿದ್ದಾನೆ. ಜಗಳೂರಿನಲ್ಲಿ ಹಣ ಪಡೆದು ನಾಪತ್ತೆಯಾದ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
Read Full Story