ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ಕೆಲ ರಿಲೀಫ್ ಸಿಕ್ಕಿದೆ. ಯಾವೆಲ್ಲಾ ವಲಯದಲ್ಲಿ ಬೆಲೆ ಹೆಚ್ಚಳಕ್ಕೆ ಬ್ರೇಕ್ ಹಾಕಲಾಗಿದೆ?

ಬೆಂಗಳೂರು (ಜೂ.09) ದೇಶದಲ್ಲೆಡೆ ಬೆಲೆ ಏರಿಕೆಯಿಂದ ಜನ ಕಂಗಲಾಗಿದ್ದಾರೆ. ಇದಕ್ಕೆ ತಕ್ಕಂತೆ ಕರ್ನಾಟಕದಲ್ಲೂ ಬೆಲೆ ಏರಿಕೆಯಿಂದ ಜನರು ಪರದಾಡುವಂತಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಇತ್ತ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಅಗತ್ಯ ವಸ್ತು, ಸೇವೆಗಳ ದರ ಏರಿಕೆಯಾಗಿದೆ. ಇದರ ನಡುವೆ ಬೆಂಗಳೂರಿನ ಜನತೆಗೆ ಕೊಂಚ ರಿಲೀಫ್ ಸಿಕ್ಕಿದೆ. ಕರಾವಳಿ ಭಾಗದಲ್ಲಿ ಈಗಾಗಲೇ ಖಾಸಗಿ ಬಸ್ ದರ ಏರಿಕೆಯಾಗಿದೆ. ಇಂದಿನಿಂದ ಹೊಸ ದರ ಜಾರಿಗೆ ಬಂದಿದೆ. ಆದರೆ ಬೆಂಗಳೂರಿನಲ್ಲಿ ಖಾಸಗಿ ಬಸ್ ದರ ಏರಿಕೆ ಇಲ್ಲ ಎಂದು ಬೆಂಗಳೂರು ಯೂನಿಯನ್ ಸ್ಪಷ್ಟಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡೀಸೆಲ್ ಬೆಲೆ ಏರಿಕೆ, ಬಸ್ ನಿರ್ವಹಣಾ ವೆಚ್ಚಗಳು ಹೆಚ್ಚಳವಾಗಿರುವ ಕಾರಣ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿನ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಜೂನ್ 9 ರಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ಸದ್ಯಕ್ಕೆ ಬೆಂಗಳೂರಲ್ಲಿ ಖಾಸಗಿ ಬಸ್ ದರ ಏರಿಕೆ ಇಲ್ಲ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ವಿದ್ಯಾರ್ಥಿಗಳಿಗೂ ಈಗಾಗಲೇ ಉಚಿತ ಪಾಸ್ ನೀಡಲಾಗಿದೆ. ಹೀಗಾಗಿ ಖಾಸಗಿ ಬಸ್‌ಗಳಿಗೆ ಜನ ಬರುತ್ತಿಲ್ಲ. ಪ್ರಯಾಣಿಕರು ಕಾದು ಸಾರಿಗೆ ವಾಹನಗಳಲ್ಲೇ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಬೆಲೆ ಏರಿಕೆ ಮಾಡಿದರೆ ಮತ್ತಷ್ಟು ನಷ್ಟವಾಗಲಿದೆ ಎಂದು ಬೆಂಗಳೂರು ಯೂನಿಯನ್ ಹೇಳಿದೆ.

ಬಸ್‌ ಮಾಲೀಕರು ಯಾವಾಗ ಟಿಕೆಟ್ ಏರಿಕೆ ‌ಮಾಡಿ ಅಂತಾರೆ ಅವಾಗ‌ ಮಾಡಬೇಕು. ಇರೋದ್ರಲ್ಲಿ ಬಸ್ ನಿರ್ವಹಣೆ ‌ಮಾಡಿಕೊಂಡು ಓಡಿಸಬೇಕಾದ ಅನಿವಾರ್ಯತೆ ಇದೆ. ಡೀಸೆಲ್ ಬೆಲೆ, ಬಸ್ ನಿರ್ವಹಣಾ ವೆಚ್ಚಗಳು ಭಾರಿ ಏರಿಕೆಯಾಗಿದೆ. ಟೋಲ್ ದರ, ತೆರಿಗೆ ಸೇರಿದಂತೆ ಎಲ್ಲಾ ಬೆಲೆಗಳು ಏರಿಕೆಯಾಗಿದೆ. ಇತ್ತ ಖಾಸಗಿ ಬಸ್‌ಗಳತ್ತ ಜನವೂ ಬರುತ್ತಿಲ್ಲ. ಖಾಸಗಿ ಬಸ್ ಅವಲಂಬಿಸುತ್ತಿರುವವ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಮತ್ತಷ್ಟು ಅಪಾಯವಾಗಲಿದೆ ಎಂದು ಖಾಸಗಿ ಬಸ್ ಕಂಡಕ್ಟರ್ ದಿನೇಶ್ ಹೇಳಿದ್ದಾರೆ.

ರಾಜ್ಯ ಹೊಟೆಲ್ ಗ್ರಾಹಕರಿಗೆ ಬಿಗ್ ರಿಲೀಫ್

ಗ್ಯಾಸ್‌ ದರ ಏರಿಕೆಯಾದರೂ ಸದ್ಯಕ್ಕೆ ಹೋಟೆಲ್‌ ತಿಂಡಿ, ಊಟ ದರ ಏರಿಕೆ ಮಾಡಲ್ಲ ಎಂದು ರಾಜ್ಯ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಮಾಲೀಕರ ಸಂಘ ಸ್ಪಷ್ಟಪಡಿಸಿದೆ. ಮೊನ್ನೆಯಷ್ಟೆ ರಾಜ್ಯದಲ್ಲಿ ಕಮರ್ಷಿಯಲ್‌ ಗ್ಯಾಸ್‌ ದರ 46 ರೂ ಏರಿಕೆ ಮಾಡಲಾಗಿದೆ. ಪದೇ ಪದೆ ಉಟ ತಿಂಡಿ ಬೆಲೆ ಹೆಚ್ಚಳವಾದರೆ ಗ್ರಾಹಕರ ಕೊರತೆ ಎದುರಾಗಲಿದೆ. ಹೀಗಾಗಿ ಬೆಂಗಳೂರು ಸೇರಿ ರಾಜ್ಯದಲ್ಲಿ ಹೋಟೆಲ್‌ ತಿಂಡಿ, ಊಟ ದರ ಸದ್ಯಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಮೇ,ಜೂನ್‌ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್‌ ದರ ಹೆಚ್ಚಳವಾಗಿತ್ತು. ವಾಣಿಜ್ಯ ಸಿಲಿಂಡರ್‌ ದರ ಏರಿಕೆಯಿಂದ ಹೋಟೆಲ್‌ ಉದ್ಯಮಕ್ಕೆ ಅಧಿಕ ಹೊರೆಯಾಗಿದೆ. ಆದರೆ ಗ್ರಾಹಕರ ಹಿತದೃಷ್ಟಿಯಿಂದ ಹೋಟೆಲ್‌ ಆಹಾರ ದರ ಏರಿಕೆ ಮಾಡದಿರಲು ನಿರ್ಧಾರಿಸಲಾಗಿದೆ ಎಂದಿದೆ.