MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Wife Appreciation Day
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • Relationship
  • ಮತ್ತೆ ಅಪ್ಪನಾಗ್ತಿದ್ದಾರಾ ಹಾರ್ದಿಕ್‌? ರಾತ್ರೋರಾತ್ರಿ ಗೆಳತಿಯನ್ನು ಕರ್ಕೊಂಡು ಬೆಂಗಳೂರಿನ ಪ್ರೈಮಾ ಡಯಾಗ್ನೋಸ್ಟಿಕ್ಸ್‌ಗೆ ಬಂದ ಪಾಂಡ್ಯ!

ಮತ್ತೆ ಅಪ್ಪನಾಗ್ತಿದ್ದಾರಾ ಹಾರ್ದಿಕ್‌? ರಾತ್ರೋರಾತ್ರಿ ಗೆಳತಿಯನ್ನು ಕರ್ಕೊಂಡು ಬೆಂಗಳೂರಿನ ಪ್ರೈಮಾ ಡಯಾಗ್ನೋಸ್ಟಿಕ್ಸ್‌ಗೆ ಬಂದ ಪಾಂಡ್ಯ!

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಬೆಂಗಳೂರಿನ ಯಲಹಂಕದಲ್ಲಿರುವ ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ರಾತ್ರೋರಾತ್ರಿ ಭೇಟಿ ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು.

2 Min read
Author : Santosh Naik
Published : Jun 09 2026, 11:18 PM IST
Share this Photo Gallery
  • FB
  • TW
  • Linkdin
  • Whatsapp
16
ಬೆಂಗಳೂರಿನಲ್ಲಿ ಪ್ರತ್ಯಕ್ಷರಾದ ಹಾರ್ದಿಕ್‌ ಪಾಂಡ್ಯ
Image Credit : X

ಬೆಂಗಳೂರಿನಲ್ಲಿ ಪ್ರತ್ಯಕ್ಷರಾದ ಹಾರ್ದಿಕ್‌ ಪಾಂಡ್ಯ

ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸದಾ ತಮ್ಮ ಆಟದ ಜೊತೆಗೆ ವೈಯಕ್ತಿಕ ಜೀವನದ ಕಾರಣಕ್ಕೂ ಸುದ್ದಿಯಲ್ಲಿರುತ್ತಾರೆ. ಇದೀಗ ಹಾರ್ದಿಕ್ ಪಾಂಡ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗುವ ಮೂಲಕ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ. ಹೌದು, ಹಾರ್ದಿಕ್ ಪಾಂಡ್ಯ ರಾತ್ರೋರಾತ್ರಿ ತಮ್ಮ ಗೆಳತಿಯೊಂದಿಗೆ ಬೆಂಗಳೂರಿನ ಡಯಾಗ್ನೋಸ್ಟಿಕ್ಸ್ ಕೇಂದ್ರವೊಂದಕ್ಕೆ ಭೇಟಿ ನೀಡಿದ್ದು, ಸದ್ಯ ಕ್ರೀಡಾಲೋಕದಲ್ಲಿ ತರಹೇವಾರಿ ಚರ್ಚೆಗೆ ಗ್ರಾಸವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬೆಂಗಳೂರಿನ ಯಲಹಂಕಕ್ಕೆ ಹಾರ್ದಿಕ್ ಪಾಂಡ್ಯ ಎಂಟ್ರಿ!
Image Credit : X

ಬೆಂಗಳೂರಿನ ಯಲಹಂಕಕ್ಕೆ ಹಾರ್ದಿಕ್ ಪಾಂಡ್ಯ ಎಂಟ್ರಿ!

ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿರುವ ಪ್ರಸಿದ್ಧ 'ಪ್ರೈಮಾ ಡಯಾಗ್ನೋಸ್ಟಿಕ್ಸ್' (Prima Diagnostics) ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಯಾವುದೇ ಮುನ್ಸೂಚನೆ ಇಲ್ಲದೆ ರಾತ್ರೋರಾತ್ರಿ ಈ ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ಬಂದಿಳಿದಿರುವುದು ಈಗ ಹಲವು ಪ್ರಶ್ನೆಗಳನ್ನು ಹಾಗೂ ಕುತೂಹಲವನ್ನು ಹುಟ್ಟುಹಾಕಿದೆ. ಹಾರ್ದಿಕ್‌ ಮತ್ತೊಮ್ಮೆ ಅಪ್ಪನಾಗ್ತಿದ್ದಾರಾ ಅನ್ನೋ ಚರ್ಚೆಯೂ ಶುರುವಾಗಿದೆ.

Related Articles

Related image1
ಶೀಘ್ರದಲ್ಲೇ ಗುಡ್‌ನ್ಯೂಸ್‌ ಕೊಡೋಕೆ ರೆಡಿಯಾದ ಹಾರ್ದಿಕ್‌ ಪಾಂಡ್ಯ ಗರ್ಲ್‌ಫ್ರೆಂಡ್‌!
Related image2
ಐಪಿಎಲ್‌ ವೈಫಲ್ಯಕ್ಕೆ ಹಾರ್ದಿಕ್‌ ಪಾಂಡ್ಯ ಬೇಸರ, ಕಠಿಣ ನಿರ್ಧಾರ ಮಾಡಿದ ಮುಂಬೈ ಇಂಡಿಯನ್ಸ್‌ ನಾಯಕ!
36
ಕೋಟಿ ಬೆಲೆಯ ಫೆರಾರಿ ಕಾರಿನಲ್ಲಿ ಗೆಳತಿಯೊಂದಿಗೆ ಆಗಮನ
Image Credit : X

ಕೋಟಿ ಬೆಲೆಯ ಫೆರಾರಿ ಕಾರಿನಲ್ಲಿ ಗೆಳತಿಯೊಂದಿಗೆ ಆಗಮನ

ಹಾರ್ದಿಕ್ ಪಾಂಡ್ಯ ಅವರು ಈ ಕೇಂದ್ರಕ್ಕೆ ಒಬ್ಬರೇ ಬಂದಿಲ್ಲ, ಬದಲಿಗೆ ತಮ್ಮ ಗರ್ಲ್ ಫ್ರೆಂಡ್ ಮಹಿಕಾ ಶರ್ಮಾ (Mahika Sharma) ಅವರನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಇವರಿಬ್ಬರೂ ಅತ್ಯಂತ ಐಷಾರಾಮಿ ಹಾಗೂ ಕೋಟಿ ಬೆಲೆಯ 'ಫೆರಾರಿ' (Ferrari) ಸ್ಪೋರ್ಟ್ಸ್ ಕಾರ್‌ನಲ್ಲಿ ಯಲಹಂಕದ ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ಆಗಮಿಸಿದ್ದು ಎಲ್ಲರ ಗಮನ ಸೆಳೆದಿದೆ.

46
ಹಾರ್ದಿಕ್ ಮತ್ತು ಗೆಳತಿ ಮಹಿಕಾ ನೋಡಲು ಮುಗಿಬಿದ್ದ ಫ್ಯಾನ್ಸ್
Image Credit : X

ಹಾರ್ದಿಕ್ ಮತ್ತು ಗೆಳತಿ ಮಹಿಕಾ ನೋಡಲು ಮುಗಿಬಿದ್ದ ಫ್ಯಾನ್ಸ್

ಹಾರ್ದಿಕ್ ಪಾಂಡ್ಯ ತಮ್ಮ ಐಷಾರಾಮಿ ಫೆರಾರಿ ಕಾರಿನಲ್ಲಿ ಯಲಹಂಕಕ್ಕೆ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳದಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟಿಗ ಹಾಗೂ ಅವರ ಗೆಳತಿಯನ್ನು ಹತ್ತಿರದಿಂದ ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಕ್ಷಣಾರ್ಧದಲ್ಲೇ ಇಡೀ ಡಯಾಗ್ನೋಸ್ಟಿಕ್ಸ್ ಕೇಂದ್ರದ ಆವರಣ ಸಾರ್ವಜನಿಕರು ಹಾಗೂ ಅಭಿಮಾನಿಗಳಿಂದ ತುಂಬಿಹೋಗಿದೆ.

56
ಹೊರಗೆ ಬರಲಾಗದೆ ಡಯಾಗ್ನೋಸ್ಟಿಕ್ಸ್ ಒಳಗೇ ಲಾಕ್ ಆದ ಪಾಂಡ್ಯ!
Image Credit : X

ಹೊರಗೆ ಬರಲಾಗದೆ ಡಯಾಗ್ನೋಸ್ಟಿಕ್ಸ್ ಒಳಗೇ ಲಾಕ್ ಆದ ಪಾಂಡ್ಯ!

ಅಭಿಮಾನಿಗಳ ಅತಿರೇಕದ ವರ್ತನೆಯಿಂದಾಗಿ ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ತೀವ್ರ ಪರದಾಡುವಂತಾಯಿತು. ರೊಚ್ಚಿಗೆದ್ದ ಫ್ಯಾನ್ಸ್ ಇಡೀ ಡಯಾಗ್ನೋಸ್ಟಿಕ್ಸ್ ಕಟ್ಟಡ ಮತ್ತು ಅವರು ಬಂದಿದ್ದ ಫೆರಾರಿ ಕಾರಿಗೆ ಸುತ್ತುವರಿದು ಮುತ್ತಿಗೆ ಹಾಕಿದ್ದಾರೆ. ಮೈದಾನದಲ್ಲಿ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತುವ ಪಾಂಡ್ಯ, ಇಲ್ಲಿ ಅಭಿಮಾನಿಗಳ ಸಾಗರವನ್ನು ನೋಡಿ ಹೊರಗಡೆ ಬರಲಾಗದೆ ಡಯಾಗ್ನೋಸ್ಟಿಕ್ಸ್ ಕಟ್ಟಡದ ಒಳಗಡೆಯೇ ದೀರ್ಘಕಾಲ ಉಳಿಯಬೇಕಾದ ಪರಿಸ್ಥಿತಿ ಎದುರಾಯಿತು.

66
ಕೊನೆಗೆ ಪೊಲೀಸರ ಭದ್ರತೆ ನಡುವೆ ಹಾರ್ದಿಕ್ ಪಾಂಡ್ಯ ಎಸ್ಕೇಪ್!
Image Credit : Google

ಕೊನೆಗೆ ಪೊಲೀಸರ ಭದ್ರತೆ ನಡುವೆ ಹಾರ್ದಿಕ್ ಪಾಂಡ್ಯ ಎಸ್ಕೇಪ್!

ಸ್ಥಳದಲ್ಲಿ ಜನದಟ್ಟಣೆ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಹಾರ್ದಿಕ್ ರಕ್ಷಣೆಗೆ ಪೊಲೀಸರು ಧಾವಿಸಿದ್ದಾರೆ. ಕೊನೆಗೆ ಸ್ಥಳೀಯ ಪೊಲೀಸರು ಸಕಾಲದಲ್ಲಿ ಬಂದು ಭದ್ರತಾ ಕೋಟೆಯನ್ನು ನಿರ್ಮಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪೊಲೀಸರ ಕಟ್ಟುನಿಟ್ಟಿನ ಭದ್ರತೆಯ ನಡುವೆಯೇ ಹಾರ್ದಿಕ್ ಪಾಂಡ್ಯ ಮತ್ತು ಅವರ ಗೆಳತಿ ಮಹಿಕಾ ಶರ್ಮಾ ಹೆಣಗಾಡುತ್ತಾ ಅಲ್ಲಿಂದ ಕಾರು ಹತ್ತಿ ಸುರಕ್ಷಿತವಾಗಿ ನಿರ್ಗಮಿಸಿದರು. ಆದರೆ, ಇವರಿಬ್ಬರು ರಾತ್ರೋರಾತ್ರಿ ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ಬಂದ ಅಸಲಿ ಕಾರಣ ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಹಾರ್ದಿಕ್ ಪಾಂಡ್ಯ
ಸಂಬಂಧಗಳು
ಪ್ರೀತಿ
ಮದುವೆ
ಬೆಂಗಳೂರು
ಬೆಂಗಳೂರು ನಗರ
 

Latest Videos
Recommended Stories
Recommended image1
Wife Appreciation Day: ಮನೆಯ ನಗು, ಮನದ ನೆಮ್ಮದಿ - ಪ್ರತಿಯೊಬ್ಬ ಪತ್ನಿಯ ಶ್ರಮ ಗುರುತಿಸುವ ಸುಂದರ ಸಂದರ್ಭ!
Recommended image2
ಅರ್ಷದೀಪ್ ಸಿಂಗ್-ಸಮ್ರೀನ್ ಕೌರ್ ಪೋಸ್ಟ್‌ನಲ್ಲಿ ಚಾಹಲ್ ತಂಟೆಗೆ ಹೋದ ನೆಟ್ಟಿಗ: ಖಡಕ್ ಪಂಚ್ ಕೊಟ್ಟ ಸ್ಪಿನ್ನರ್‌
Recommended image3
ಗಣೇಶನಿಗೆ ಪೂಜೆ ಸಲ್ಲಿಸಿದ ವಿಡಿಯೋ ಶೇರ್​ ಮಾಡಿ ಕಮೆಂಟ್​ ಸೆಕ್ಷನ್​ ಆಫ್​ ಮಾಡಿದ ನಟಿ ಸೋನಾಕ್ಷಿ ಸಿನ್ಹಾ
Related Stories
Recommended image1
ಶೀಘ್ರದಲ್ಲೇ ಗುಡ್‌ನ್ಯೂಸ್‌ ಕೊಡೋಕೆ ರೆಡಿಯಾದ ಹಾರ್ದಿಕ್‌ ಪಾಂಡ್ಯ ಗರ್ಲ್‌ಫ್ರೆಂಡ್‌!
Recommended image2
ಐಪಿಎಲ್‌ ವೈಫಲ್ಯಕ್ಕೆ ಹಾರ್ದಿಕ್‌ ಪಾಂಡ್ಯ ಬೇಸರ, ಕಠಿಣ ನಿರ್ಧಾರ ಮಾಡಿದ ಮುಂಬೈ ಇಂಡಿಯನ್ಸ್‌ ನಾಯಕ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved