11:38 PM (IST) May 08

ಪಶ್ಚಿಮ ಭಾರತದ ಎಲ್ಲಾ ಏರ್‌ಪೋರ್ಟ್‌ ಬಂದ್; 8000 ಪಾಕ್ ಖಾತೆ ಮೇಲೆ ಡಿಜಿಟಲ್ ಸ್ಟ್ರೈಕ್!

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಯಾವುದೇ ಸಾವುನೋವುಗಳಿಲ್ಲ. ಪಶ್ಚಿಮ ಭಾರತದ ಹಲವು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಮತ್ತು ಭಾರತ ವಿರೋಧಿ ಪ್ರಚಾರ ಮಾಡುವ 8,000 ಎಕ್ಸ್ ಖಾತೆಗಳನ್ನು ನಿರ್ಬಂಧಿಸಲಾಗಿದೆ.

ಪೂರ್ತಿ ಓದಿ
11:35 PM (IST) May 08

ಪ್ರತಿಷ್ಠಿತ ಕಂಪೆನಿಯಲ್ಲಿ ಲೇಆಫ್;‌ ಕಣ್ಣೀರು ಹಾಕ್ತಾ ಹೊರಬಂದ 200 ಉದ್ಯೋಗಿಗಳು!

Google Layoff News: ಟೆಕ್ ಉದ್ಯಮದಲ್ಲಿ ಲೇಆಫ್‌ಗಳು ಹೆಚ್ಚುತ್ತಿವೆ, ಗೂಗಲ್ ತನ್ನ ಜಾಗತಿಕ ವ್ಯಾಪಾರ ಘಟಕದಲ್ಲಿ 200 ಉದ್ಯೋಗಿಗಳನ್ನು ಕಡಿತಗೊಳಿಸಿದೆ. AI ಮತ್ತು ಆಟೋಮೇಷನ್‌ನ ಹೆಚ್ಚಿನ ಬಳಕೆ ಲೇಆಫ್‌ಗಳಿಗೆ ಪ್ರಮುಖ ಕಾರಣವಾಗಿದೆ. ಇದು ಗೂಗಲ್‌ನ ಎರಡನೇ ಸುತ್ತಿನ ಉದ್ಯೋಗ ಕಡಿತವಾಗಿದ್ದು, ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.

ಪೂರ್ತಿ ಓದಿ
11:04 PM (IST) May 08

Breaking ಪಾಕಿಸ್ತಾನ ಫೈಟರ್ ಜೆಟ್ ಹೊಡೆದುರುಳಿಸಿ ಪೈಲೆಟ್ ವಶಕ್ಕೆ ಪಡೆದ ಭಾರತ

ಫಾಕಿಸ್ತಾನದ ಫೈಟರ್ ಜೆಟ್ ಹೊಡೆದುರುಳಿಸಿದ ಭಾರತ ಪೈಲೆಟನ್ನು ಜೀವಂತವವಾಗಿ ವಶಕ್ಕೆ ಪಡೆದಿದೆ. ಇದೀಗ

ಪೂರ್ತಿ ಓದಿ
11:00 PM (IST) May 08

ಪಹಲ್ಗಾಮ್ ದಾಳಿ ಬಗ್ಗೆ ಕೇಂದ್ರದ ವಿರುದ್ಧ ಸುಳ್ಳು ಸುದ್ದಿ; ಮುನೀರ್ ಖಾನ್ ಖುರೇಷಿ ವಿರುದ್ಧ ಎಫ್‌ಐಆರ್

ಪಹಲ್ಗಾಮ್ ದಾಳಿಯನ್ನು ಕೇಂದ್ರ ಸರ್ಕಾರದ ಪೂರ್ವ ನಿಯೋಜಿತ ಕೃತ್ಯ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕೋಲಾರದ ಯುವಕನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಈತ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸುಳ್ಳು ಸುದ್ದಿ ಹಬ್ಬಿಸಿದ್ದ.

ಪೂರ್ತಿ ಓದಿ
10:39 PM (IST) May 08

ಉಗ್ರ ಹಫೀಸ್ ಸಯೀದ್ ಮನೆ ಟಾರ್ಗೆಟ್; ಲಾಹೋರ್ ಮೇಲೆ ಭಾರತೀಯ ಸೇನೆ ಡ್ರೋನ್ ಅಟ್ಯಾಕ್!

ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ದಾಳಿಗಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯು ಲಾಹೋರ್‌ನಲ್ಲಿ ಡ್ರೋನ್ ದಾಳಿ ನಡೆಸಿದೆ. ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಸ್ ಸಯೀದ್‌ನ ಮನೆ ಗುರಿಯಾಗಿದೆ ಎನ್ನಲಾಗಿದೆ. ರಕ್ಷಣಾ ಸಚಿವರು ತುರ್ತು ಸಭೆ ನಡೆಸಿದ್ದಾರೆ ಮತ್ತು ಪ್ರಧಾನಿ ಮೋದಿಗೆ ಮಾಹಿತಿ ನೀಡಲಾಗಿದೆ.

ಪೂರ್ತಿ ಓದಿ
10:39 PM (IST) May 08

ಪಾಕಿಸ್ತಾನಕ್ಕೆ ಇಂದೇ ಮತ್ತೊಂದು ಶಾಸ್ತಿ, ಕಾಶ್ಮೀರದ ಹಲವು ಗ್ರಾಮದಿಂದ ಜನರನ್ನು ಸ್ಥಳಾಂತರ

ಗಡಿಯಲ್ಲಿ ಸಂಘರ್ಷ ತೀವ್ರಗೊಳಿಸಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಇಂದೇ ರಾತ್ರಿ ಆಗುವ ಸಾಧ್ಯತೆ ದಟ್ಟವಾಗಿದೆ. ಗಡಿ ಭಾಗದಿಂದ ಮಾತ್ರವಲ್ಲ ಕಾಶ್ಮೀರ ಟಾರ್ಗೆಟ್ ಮಾಡಿದ್ದ ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳಿಂದ ಮಕ್ಕಳನ್ನು ಈಗಾಗಲೇ ಸೇನೆ ಸ್ಥಳಾಂತರ ಮಾಡಿದ್ದು, ಇತರರನ್ನೂ ತಕ್ಷಣವೇ ಬೇರೆಡೆಗೆ ತೆರಳಲು ಸೂಚಿಸಿದೆ. 

ಪೂರ್ತಿ ಓದಿ
10:11 PM (IST) May 08

ದೇಶದ ಸೈ‌ನಿಕರಿಗೆ ಶಕ್ತಿ ತುಂಬಲು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಸಚಿವ ಜಮೀರ್ ಸೂಚನೆ

ಆಪರೇಷನ್ ಸಿಂದೂರ್‌ನ ಯಶಸ್ಸಿನ ಹಿನ್ನೆಲೆಯಲ್ಲಿ ಸೈನಿಕರಿಗೆ ಶಕ್ತಿ ತುಂಬಲು ವಕ್ಫ್‌ಗೆ ಸೇರಿದ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಸೂಚಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ.

ಪೂರ್ತಿ ಓದಿ
10:00 PM (IST) May 08

ಸೇನೆ ಸೂಚನೆ ಮೇರೆಗೆ ಲೈಟ್ ಆಫ್, ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ರದ್ದು

ಪಾಕಿಸ್ತಾನ ಗಡಿಯಲ್ಲಿ ನಡೆಸುತ್ತಿರುವ ಸತತ ಮಿಸೈಲ್ ಹಾಗೂ ಡ್ರೋನ್ ದಾಳಿಯಿಂದ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಡೆಲ್ಲಿ ನಡುವಿನ ಪಂದ್ಯ ರದ್ದಾಗಿದೆ. ಸೇನೆ ಸೂಚನೆ ಮೇರೆಗೆ ತಕ್ಷಣವೇ ಲೈಟ್ ಆಫ್ ಮಾಡಲಾಗಿದೆ.

ಪೂರ್ತಿ ಓದಿ
09:44 PM (IST) May 08

ಬುರ್ಖಾ ಕೇ ಪೀಚೆ ಕ್ಯಾ ಹೈ? ಬಟ್ಟೆ ಬಿಚ್ಚಿ ಬಿಚ್ಚಿ ಸುಸ್ತಾದ ಪೊಲೀಸ್ರು- ಸೊಂಟದಲ್ಲಿತ್ತು ಗ'ಮ್ಮತ್ತು'

ಬುರ್ಖಾ ಧರಿಸಿ ಬಂದ ಮಹಿಳೆಯೊಬ್ಬಳನ್ನು ಅನುಮಾನದಿಂದ ಲೇಡಿ ಪೊಲೀಸರು ಬಟ್ಟೆ ಬಿಚ್ಚಿಸಿದ್ದಾಗ ಕಂಡಿದ್ದು ಮಾತ್ರ ನಂಬಲಸಾಧ್ಯವಾದ ವಸ್ತುಗಳು! 

ಪೂರ್ತಿ ಓದಿ
09:21 PM (IST) May 08

ಜಮ್ಮುವಿನಲ್ಲಿ ಕ್ಷಿಪಣಿ ದಾಳಿ ಯತ್ನ; ಪಾಕಿಸ್ತಾನಿ ಡ್ರೋನ್‌ಗಳನ್ನ ಹೊಡೆದುರುಳಿಸಿದ ಸೇನೆ!

ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನದ ಡ್ರೋನ್ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದೆ.

ಪೂರ್ತಿ ಓದಿ
09:17 PM (IST) May 08

Breaking ಜನಾರ್ಧನ ರೆಡ್ಡಿಗೆ ಮತ್ತೊಂದು ಶಾಕ್, ಶಾಸಕನ ಸ್ಥಾನದಿಂದ ಅನರ್ಹ

ಅಕ್ರಮ ಗಣಿಗಾರಿಕೆಯಲ್ಲಿ ಶಾಸಕ ಜನಾರ್ಧನ ರೆಡ್ಡಿಗೆ 7 ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗಿರುವ ಹಿನ್ನಲೆಯಲ್ಲಿ ಇದೀಗ ಶಾಸಕ ಸ್ಥಾನಕ್ಕೆ ಕುತ್ತು ಬಂದಿದೆ. ಜನಾರ್ಧನ ರೆಡ್ಡಿ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. 

ಪೂರ್ತಿ ಓದಿ
08:46 PM (IST) May 08

ನಾಳೆ ರಾಯಚೂರಿನ ಶಕ್ತಿನಗರದಲ್ಲಿ ಮಾಕ್ ಡ್ರಿಲ್; ಅಪರೇಷನ್ ಅಭ್ಯಾಸ್ ವೀಕ್ಷಿಸಲು ಜಿಲ್ಲಾಧಿಕಾರಿ ಮನವಿ

ಕೇಂದ್ರ ಗೃಹಸಚಿವಾಲಯವು ರಾಯಚೂರು ಸೇರಿದಂತೆ 244 ಜಿಲ್ಲೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಿದೆ. ಮೇ 9 ರಂದು ಆರ್‌ಟಿಪಿಎಸ್ ಹೆಲಿಪ್ಯಾಡ್‌ನಲ್ಲಿ ನಾಗರಿಕ ರಕ್ಷಣಾ ಅಣಕು ಪ್ರದರ್ಶನ 'ಆಪರೇಷನ್ ಅಭ್ಯಾಸ್' ನಡೆಯಲಿದೆ. ಯುದ್ಧದಂತಹ ಸನ್ನಿವೇಶಗಳನ್ನು ಎದುರಿಸಲು ನಾಗರಿಕರಲ್ಲಿ ಆತ್ಮಸ್ಥೈರ್ಯ ತುಂಬುವುದು ಇದರ ಉದ್ದೇಶ.

ಪೂರ್ತಿ ಓದಿ
08:34 PM (IST) May 08

'ಆಪರೇಷನ್ನೇ ಮಾಡಿಲ್ಲ' ಎಂದು ಮಧ್ಯರಾತ್ರಿ ಗಹಗಹಿಸಿ ನಕ್ಕಿದ್ದ ಪಾಕ್​ ಯುಟ್ಯೂಬರ್​! ಮುಂದೆನಾಯ್ತು ನೋಡಿ...

ಭಾರತದ ಗಡಿಯಲ್ಲಿ ನಿಂತು ಭಾರತೀಯ ಸೇನೆ ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ಪಾಕಿಸ್ತಾನದ ಯುಟ್ಯೂಬರ್​ ಒಬ್ಬರು ಗಹಗಹಿಸಿ ನಕ್ಕಿರುವ ವಿಡಿಯೋ ವೈರಲ್​ ಆಗಿದೆ.

ಪೂರ್ತಿ ಓದಿ
08:26 PM (IST) May 08

ಕರ್ನಾಟಕ ಹೈಕೋರ್ಟ್‌ನಿಂದ ಪಾಕಿಸ್ತಾನಿ ಮಕ್ಕಳ ವೀಸಾ ವಿಸ್ತರಣೆ ಅರ್ಜಿ ವಜಾ! ಏನಿದು ಪ್ರಕರಣ?

ಮೂವರು ಪಾಕಿಸ್ತಾನಿ ಮಕ್ಕಳ ವೀಸಾ ವಿಸ್ತರಣೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಮಕ್ಕಳ ತಾಯಿ ರಾಂಷಾ ಜಹಾನ್, ಮೈಸೂರಿನವರಾಗಿದ್ದು, ಪಾಕಿಸ್ತಾನಿ ವ್ಯಕ್ತಿಯನ್ನು ವಿವಾಹವಾಗಿದ್ದರು. ಕೇಂದ್ರ ಸರ್ಕಾರ ಮಕ್ಕಳ ವೀಸಾ ರದ್ದುಗೊಳಿಸಿ, ದೇಶ ತೊರೆಯುವಂತೆ ಸೂಚಿಸಿತ್ತು.

ಪೂರ್ತಿ ಓದಿ
08:08 PM (IST) May 08

ಆಪರೇಶನ್ ಸಿಂದೂರ್‌ನಿಂದ ದೇಶವನ್ನು ಕಾಪಾಡು ಅಲ್ಲಾ, ಸಂಸತ್ತಿನಲ್ಲಿ ಕಣ್ಣೀರಿಟ್ಟ ಪಾಕ್ ಸಂಸದ

ಭಾರತದ ಆಪರೇಶನ್ ಸಿಂದೂರ್‌ನಿಂದ ದೇಶವನ್ನು ಕಾಪಾಡಿ,ನಮ್ಮ ಸುರಕ್ಷತೆಯನ್ನು ಅಲ್ಲಾ ಕಾಪಾಡಬೇಕು ಎಂದು ಸಂಸತ್ತಿನಲ್ಲಿ ಸಂಸದ ಕಣ್ಣೀರಿಟ್ಟ ಘಟನೆ ನಡೆದಿದೆ.

ಪೂರ್ತಿ ಓದಿ
08:06 PM (IST) May 08

ಪಾಕ್​ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್​ ಸಿಂದೂರ'ದ ಹೀರೋ ಸ್ಟೋರಿ ಇದು!

ಆಪರೇಷನ್​ ಸಿಂದೂರ್​ನಂಥ ಹಲವು ಕಾರ್ಯಾಚರಣೆಗಳ ಅದ್ಭುತ ಶಕ್ತಿ, ಪ್ರಧಾನಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ಕುಮಾರ್​ ಅವರ ಜೀವನ ಯಾವ ಸಿನಿಮಾಗೂ ಕಡಿಮೆ ಇಲ್ಲ. 

ಪೂರ್ತಿ ಓದಿ
07:59 PM (IST) May 08

ಪ್ರತ್ಯೇಕ ಅಪಘಾತ 9 ಜನರು ದುರ್ಮರಣ! ಹನುಮ ಜಯಂತಿ ಡಿಜೆ ನೋಡಲು ಹೋಗಿದ್ದ ಬಾಲಕರು ಮಸಣಕ್ಕೆ!

ಬಾಗಲಕೋಟೆ ತಾಲೂಕಿನಲ್ಲಿ ಕ್ಯಾಂಟರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹನುಮ ಜಯಂತಿ ಆಚರಣೆ ವೀಕ್ಷಿಸಲು ಹೊರಟಿದ್ದ ಬಾಲಕರು ಈ ದುರಂತಕ್ಕೆ ಸಿಲುಕಿದ್ದಾರೆ. ಹಾವೇರಿಯಲ್ಲಿ ಇದೇ ರೀತಿಯ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.

ಪೂರ್ತಿ ಓದಿ
07:21 PM (IST) May 08

ಆಪರೇಷನ್ ಸಿಂಧೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಫೇಲ್ ಹಾರಿಸಿದ ಮೊದಲ ಭಾರತೀಯ ಇವರು

ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ರಫೇಲ್ ಯುದ್ಧ ವಿಮಾನವನ್ನು ಮೊದಲು ಹಾರಿಸಿದ ಭಾರತೀಯನ ಬಗ್ಗೆ ಇಲ್ಲಿದೆ ಮಾಹಿತಿ 

ಪೂರ್ತಿ ಓದಿ
07:16 PM (IST) May 08

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪಾಕ್ ಪ್ರಜೆಗಳನ್ನ ಹೊರದಬ್ಬಿದ್ರೂ, ಕರ್ನಾಟಕದಲ್ಲೇಕೆ ಮೀನಾಮೇಷ? ಬಿಜೆಪಿ ಕಿಡಿ

ಕರ್ನಾಟಕದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರದಬ್ಬುವಂತೆ ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದೆ. ಈ ಕುರಿತು ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿದೆ ಎಂದು ಬಿಜೆಪಿ ಪ್ರಕೋಷ್ಠಗಳ ಅಧ್ಯಕ್ಷ ಎಸ್ ದತ್ತಾತ್ರಿ ತಿಳಿಸಿದ್ದಾರೆ.

ಪೂರ್ತಿ ಓದಿ
07:09 PM (IST) May 08

ಈ ಜಿಲ್ಲೆಗೆ 34 ಸಾವಿರ ಕೋಟಿ ಖರ್ಚಾದರೂ ಪ್ರಗತಿ ಇಲ್ಲ! ಹಾಕಿದ ಹಣವೆಲ್ಲ ಎಲ್ಲೋಯ್ತು?

ಯಾದಗಿರಿ ಜಿಲ್ಲೆಯಲ್ಲಿ 34 ಸಾವಿರ ಕೋಟಿ ರೂ. ಖರ್ಚಾದರೂ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಜಿಲ್ಲೆ ತೀವ್ರ ಹಿಂದುಳಿದಿದೆ. ಮಾನವ ಸೂಚ್ಯಂಕದಲ್ಲಿಯೂ ಹಿಂದುಳಿದಿರುವುದಕ್ಕೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕೊರತೆಯೇ ಕಾರಣ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಪೂರ್ತಿ ಓದಿ