ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ರಫೇಲ್ ಯುದ್ಧ ವಿಮಾನವನ್ನು ಮೊದಲು ಹಾರಿಸಿದ ಭಾರತೀಯನ ಬಗ್ಗೆ ಇಲ್ಲಿದೆ ಮಾಹಿತಿ 

ಆಪರೇಷನ್ ಸಿಂಧೂರ್‌ನಲ್ಲಿ ಪ್ರಮುಖ ಪಾತ್ರವಹಿಸಿದ ರಫೇಲ್ ಯುದ್ಧ ವಿಮಾನವನ್ನು ಈ ಹಿಂದೆ ಮಿಲಿಟರಿ ತರಬೇತಿ ವೇಳೆ ಹಲವು ರಕ್ಷಣಾ ಪರಿಣಿತರು ಹಾರಿಸಿದ್ದರು. ಆದರೆ ಭಯೋತ್ಪಾದನೆ ವಿರುದ್ಧದ ಆಪರೇಷನ್‌ ಸಿಂಧೂರ್‌ನಂತಹ ನಿರ್ಣಾಯಕ ಕಾರ್ಯಾಚರಣೆಯಲ್ಲಿ ಈ ಯುದ್ಧ ವಿಮಾನವನ್ನು ಮೊದಲು ಹಾರಿಸಿದ್ದು ಯಾರು ಎಂಬ ಕುತೂಹಲ ನಿಮಗಿದ್ಯಾ ಹಾಗಿದ್ರೆ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ... 

ಅಂದಹಾಗೆ ಆಪರೇಷನ್ ಸಿಂಧೂರ್‌ನಂತಹ ಭಾರತದ ಮಹತ್ವದ ಕಾರ್ಯಾಚರಣೆಯಲ್ಲಿ ತೆರೆಮರೆಯ ಹೀರೋ ಆಗಿ ಕೆಲಸ ಮಾಡಿದವರ ಹೆಸರು ಏರ್ ವೈಸ್‌ ಮಾರ್ಷಲ್‌ ಹಿಲಾಲ್ ಅಹ್ಮದ್‌, ಇವರೇ ಈ ಭಾರತದ ಆಕ್ರಮಣಕಾರಿ ಕಾರ್ಯಾಚರಣೆಯಲ್ಲಿ ರಫೇಲ್ ಫೈಟ್ ಜೆಟನ್ನು ಮೊದಲು ಹಾರಿಸಿದವರು. ಇವರು ಭಾರತದ ಮಿಲಿಟರಿ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.

ಜಮ್ಮುಕಾಶ್ಮೀರದ ಅನಂತ್‌ನಾಗ್‌ನ ಮೂಲದ ಅಹ್ಮದ್, ಭಾರತೀಯ ವಾಯುಪಡೆಯಲ್ಲಿ (IAF) ವಿಶಿಷ್ಟ ವೃತ್ತಿಜೀವನವನ್ನು ಹೊಂದಿದ್ದಾರೆ. ಇವರು ಅಪಘಾತ ರಹಿತವಾದ 3,000 ಗಂಟೆಗಳಿಗೂ ಅಧಿಕ ಸಮಯ ಹಾರಾಟ ನಡೆಸಿದ್ದಾರೆ. ಮಿರಾಜ್ 2000 ಮತ್ತು MiG-21 ಸೇರಿದಂತೆ ವಿವಿಧ ವಿಮಾನಗಳನ್ನು ಹಾರಾಟ ನಡೆಸುವಲ್ಲಿ ಅವರಿಗಿದ್ದ ಅನುಭವ ಅವರನ್ನು ರಫೇಲ್ ಜೆಟ್ ಅನ್ನು ಹಾರಿಸಿದ ಮೊದಲ ಭಾರತೀಯನಾಗಲು ಅವಕಾಶ ದಾರಿ ಮಾಡಿಕೊಟ್ಟಿದೆ. 

ಫ್ರಾನ್ಸ್ ಮೂಲದ ಈ ರಫೇಲ್‌ ಜೆಟ್‌ಗಳ ಮೇಲ್ವಿಚಾರಣೆಯಲ್ಲಿ ಹಿಲಾಲ್ ಅಹ್ಮದ್‌ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಈ ಸಾಮರ್ಥ್ಯವೂ ಯುದ್ಧ ವಿಮಾನಗಳು ಭಾರತದ ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸುವುದನ್ನು ಖಚಿತಪಡಿಸಿದವು. ಜೊತೆಗೆ ಇದು ದೇಶದ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ನಿರ್ಣಾಯಕ ಹೆಜ್ಜೆ ಆಗಿತ್ತು. ಅಹ್ಮದ್ ಹಿಲಾಲ್ ಅವರು ಇದಕ್ಕೂ ಮೊದಲು ಭಾರತದ ರಕ್ಷಣಾ ವ್ಯವಹಾರಗಳ ಭಾಗವಾಗಿ ರಫೇಲ್‌ಗಳನ್ನು ಫ್ರಾನ್ಸ್‌ನಿಂದ ಭಾರತಕ್ಕೆ ಹಾರಿಸಿದ್ದರು. ಹೀಗಾಗಿ ಅವರಿಗೆ ಅದರ ಬಗ್ಗೆ ಒಳ್ಳೆಯ ಜ್ಞಾನವಿತ್ತು.

ರಫೇಲ್‌ನ ಈ ಕೆಲಸದಲ್ಲಿ ಅವರ ಭಾಗವಹಿಸುವಿಕೆ ಉತ್ತಮವಾಗಿ ದಾಖಲಾಗಿದ್ದೂ, ಅಹ್ಮದ್ ಅವರ ಕೊಡುಗೆಗಳು ವಾಯುಪಡೆಯನ್ನು ಮೀರಿ ವಿಸ್ತರಿಸಿವೆ. ಅವರ ನಾಯಕತ್ವವು ಭಾರತದ ವಾಯುಪಡೆಯನ್ನು ಆಧುನೀಕರಿಸಲು ಸಹಾಯ ಮಾಡಿದೆ. ಇದು ಸಮಕಾಲೀನ ಸವಾಲುಗಳನ್ನು ಎದುರಿಸಲು ಹೆಚ್ಚು ಸಮರ್ಥವಾಗಿದೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಬುಧವಾರ ಪ್ರಾರಂಭಿಸಲಾದ ಇತ್ತೀಚಿನ ಆಪರೇಷನ್ ಸಿಂಧೂರ್‌ನ ಕಾರ್ಯಾಚರಣೆಯ ವಿವರಗಳಿಗೆ ಅವರ ಹೆಸರು ನೇರವಾಗಿ ಸಂಬಂಧಿಸಿಲ್ಲವಾದರೂ, ಭಾರತದ ಮಿಲಿಟರಿ ಮೂಲಸೌಕರ್ಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಅವರ ಸ್ಥಾನವು ನಿಸ್ಸಂದೇಹವಾಗಿ ರಾಷ್ಟ್ರದ ಸನ್ನದ್ಧತೆಗೆ ಕೊಡುಗೆ ನೀಡಿದೆ.

Scroll to load tweet…


ಇತ್ತ ಆಪರೇಷನ್ ಸಿಂದೂರ್ ಮುಂದುವರೆದಿದ್ದು, ಭಾರತದ ಡ್ರೋಣ್ ದಾಳಿಗೆ ರಾವಲ್ಪಿಂಡಿಯ ಕ್ರಿಕೆಟ್ ಸ್ಟೇಡಿಯಂ ಧ್ವಂಸಗೊಂಡಿದೆ. ಭಾರತದಲ್ಲಿ ಐಪಿಎಲ್‌ ನಡೆಯುವಂತೆಯೇ ಪಾಕಿಸ್ತಾನದಲ್ಲಿ ಕ್ರಿಕೆಟ್ ಸೂಪರ್ ಲೀಗ್‌ ಮ್ಯಾಚ್‌ ನಡೆಯುತ್ತಿದ್ದು, ಈ ಮ್ಯಾಚ್‌ ನಡೆಯುವುದಕ್ಕೆ ಕೆಲವು ಗಂಟೆಗಳ ಮೊದಲು ಭಾರತ ಈ ಡ್ರೋಣ್ ದಾಳಿ ನಡೆಸಿದ್ದು, ಸ್ಟೇಡಿಯಂ ಧ್ವಂಸವಾಗಿದೆ ಎಂದು ವರದಿಯಾಗಿದೆ. ಇಂದು ರಾತ್ರಿ 8 ಗಂಟೆಗೆ ಇಲ್ಲಿ ಪಾಕಿಸ್ತಾನ್‌ ಸೂಪರ್ ಲೀಗ್‌ನ ಪಂದ್ಯಾವಳಿಗಳು ನಡೆಯಬೇಕಿತ್ತು. ಪೇಶಾವರ್‌ ಝಲ್ಮಿ ಹಾಗೂ ಕರಾಚಿ ಕಿಂಗ್ಸ್ ಮಧ್ಯೆ ರಾವಲ್ಪಿಂಡಿ ಸ್ಟೇಡಿಂಯನಲ್ಲಿ ಕ್ರಿಕೆಟ್ ಮ್ಯಾಚ್ ನಿಗದಿಯಾಗಿತ್ತು. ಆದರೆ ಈಗ ಪಾಕಿಸ್ತಾನವೂ ಭಾರತದ ಪ್ರಮುಖ 15 ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಪ್ರಯತ್ನವನ್ನು ಧ್ವಂಸಗೊಳಿಸುವ ಭಾರತದ ಕಾರ್ಯಾಚರಣೆ ವೇಳೆ ರಾವಲ್ಪಿಂಡಿ ಸ್ಟೇಡಿಯಂ ಕೂಡ ಧ್ವಂಸಗೊಂಡಿದೆ. 

ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ಕಾರ್ಮೋಡ ದಟ್ಟವಾಗಿರುವ ಹಿನ್ನೆಲೆಯಲ್ಲಿ ಭಾರತದ ಜಮ್ಮು ಕಾಶ್ಮೀರ ಹಾಗೂ ಪಾಕಿಸ್ತಾನಕ್ಕೆ ಭೇಟಿ ನೀಡದಂತೆ ಹಲವು ದೇಶಗಳು ತಮ್ಮ ನಾಗರಿಕರಿಗೆ ಎಚ್ಚರಿಕೆಯ ಹೊಸ ಸುತ್ತೋಲೆ ಹೊರಡಿಸಿವೆ. ಸಿಂಗಾಪುರ್‌, ಚೀನಾ ಅಮೆರಿಕಾ ದೇಶಗಳು ಈ ದೇಶಗಳಿಂದ ಕೂಡಲೇ ಹೊರಡುವಂತೆ ತಮ್ಮ ನಾಗರಿಕರಿಗೆ ಕರೆ ನೀಡಿವೆ. ಇನ್ನೂ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್‌ ಲೀಗ್ ಪಂದ್ಯಾವಳಿಗಳಲ್ಲಿ ಹಲವು ವಿದೇಶಿ ಕ್ರಿಕೆಟಿಗರು ಕೂಡ ಆಟವಾಡುತ್ತಿದ್ದಾರೆ. ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ದೇಶದ ಹಲವು ಏರ್‌ಪೋರ್ಟ್‌ಗಳಲ್ಲಿ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ.