ಬುರ್ಖಾ ಧರಿಸಿ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಸಂಧ್ಯಾ ದೇವಿ ಎಂಬ ಮಹಿಳೆಯನ್ನು ಬಿಹಾರದ ಕತಿಹಾರ್‌ನಲ್ಲಿ ಅಬಕಾರಿ ಇಲಾಖೆ ಬಂಧಿಸಿದೆ. ಬುರ್ಖಾ ಒಳಗೆ ಸಾರಾಯಿ ಪ್ಯಾಕೆಟ್‌ಗಳನ್ನು ಸೊಂಟಕ್ಕೆ ಸುತ್ತಿಕೊಂಡಿದ್ದಳು. ಪೊಲೀಸರು ಬಟ್ಟೆ ಬಿಚ್ಚಿದಾಗ ಕಳ್ಳಸಾಗಣೆ ಬೆಳಕಿಗೆ ಬಂದಿತು. ಮಹಿಳೆಯ ಈ ವಿಧಾನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.

ಕಳ್ಳರು ಎಂದರೆ ಸಾಮಾನ್ಯವಾಗಿ ಪುರುಷರೇ ಕಣ್ಣೆದುರಿಗೆ ಬರುತ್ತಾರೆ. ಆದರೆ ಕಳ್ಳಿಯರು ಮಾತ್ರ ಪುರುಷರಿಗಿಂತಲೂ ಒಂದು ಹೆಜ್ಜೆ ಮುಂದಕ್ಕೇ ಇರುತ್ತಾರೆ ಎನ್ನುವುದು ಸುಳ್ಳಲ್ಲ. ಸಾಮಾನ್ಯವಾಗಿ ಮಹಿಳೆಯರ ಮೇಲೆ ಯಾರೂ ಡೌಟ್​ ಪಡುವುದಿಲ್ಲ ಎನ್ನುವ ಕಾರಣಕ್ಕೆ ಕಳ್ಳಿಯರ ಕಿತಾಪತಿ ಬೇರೆಯದ್ದೇ ರೀತಿಯಲ್ಲಿ ಇರುತ್ತದೆ. ಇವರ ಕರಾಮತ್ತು ಬಸ್​ಗಳಲ್ಲಿ, ರೈಲ್ವೆ ಒಳಗೆ, ರಶ್​ ಇರುವಲ್ಲಿ, ದೇವಸ್ಥಾನಗಳಲ್ಲಿ ಕಾಣಬಹುದಾಗಿದೆ. ಅದರಲ್ಲಿಯೂ ಸೀರೆಯ ಒಳಗೆ, ರವಿಕೆಯ ಕೆಳಗೆ ಪುಸಕ್ಕನೆ ಕದ್ದ ಮಾಲುಗಳನ್ನು ಸೇರಿಸಿಕೊಳ್ಳುವಲ್ಲಿ ಕಳ್ಳಿಯರು ನಿಸ್ಸೀಮರು. ಸೀರೆ ಅಂಗಡಿಗಳಿಗೆ ನುಗ್ಗಿಯೋ, ಚಿನ್ನದ ಅಂಗಡಿಗೆ ಹೋಗಿಯೋ ಅರೆ ಕ್ಷಣದಲ್ಲಿ ಅಲ್ಲಿರುವ ವಸ್ತುಗಳನ್ನು ಮಂಗಮಾಯ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿರುವುದನ್ನು ಎಲ್ಲರೂ ನೋಡಿಯೇ ಇರುತ್ತೀರಿ.

ಇದೀಗ ಅಂಥದ್ದೇ ಒಬ್ಬ ಕಳ್ಳಿಯ ಕರಾಮತ್ತು ವೈರಲ್​ ಆಗಿದೆ. ಇಂಥ ಕಳ್ಳಿಯರಿಗೆ ಬುರ್ಖಾ ರಕ್ಷಣೆ ಒದಗಿಸುವ ಮಾರ್ಗವಾಗಿ ಬಿಟ್ಟಿದೆ. ಬುರ್ಖಾದಲ್ಲಿ ಏನನ್ನಾದರೂ ಅಡಗಿಸಿಕೊಳ್ಳುವುದು ಸುಲಭ ಎನ್ನುವುದು ಒಂದೆಡೆಯಾದರೆ, ಬುರ್ಖಾ ಧರಿಸಿದರೆ ಸಾಮಾನ್ಯವಾಗಿ ಅದನ್ನು ಯಾರೂ ಬಿಚ್ಚಿಸುವುದಿಲ್ಲ ಎನ್ನುವ ಧೈರ್ಯ ಇನ್ನೊಂದೆಡೆ. ಅದೇ ರೀತಿ ಇಲ್ಲೊಬ್ಬ ಖತರ್ನಾಕ್​ ಲೇಡಿಯೊಬ್ಬಳು ಬುರ್ಖಾ ಧರಿಸಿ ಸಿಕ್ಕಿಬಿದ್ದಿದ್ದಾಳೆ. ಬುರ್ಖಾಕೆ ಪೀಚೆ ಕ್ಯಾ ಹೈ ಎಂದು ಕೇಳಿದ ಪೊಲೀಸರು ಸರಸರನೆ ಬಟ್ಟೆಯೆಲ್ಲಾ ಕಳಚಿದ್ದಾರೆ. ಬಟ್ಟೆ ಕಳಚಿದಷ್ಟೂ ಒಳಗಡೆ ಬಟ್ಟೆಗಳು ಬರುತ್ತಲೇ ಇವೆ. ಕೊನೆಗೆ ಕಂಡಿದ್ದು ಮಾತ್ರ ಅಬ್ಬಬ್ಬಾ ಎನ್ನುವಂಥ ವಸ್ತುಗಳು. ಅದೇ ಕಳ್ಳಭಟ್ಟ ಸಾರಾಯಿ ಪ್ಯಾಕೇಟ್​ಗಳು!

ಬುರ್ಖಾದೊಳಗೆ ಕೈಹಾಕಿದಷ್ಟೂ ಉದುರಿದ ಲಕ್ಷಾಂತರ ಮೌಲ್ಯದ ಕದ್ದ ವಸ್ತು- ವಿಡಿಯೋ ನೋಡಿದವರು ಸುಸ್ತೋ ಸುಸ್ತು!

 ಬಿಹಾರದಲ್ಲಿ, ಮದ್ಯ ಕಳ್ಳಸಾಗಣೆದಾರರ ವಿಧಾನಗಳು ಸಹ ವಿಶಿಷ್ಟವಾಗಿವೆ. ಕೆಲವೊಮ್ಮೆ ತೈಲ ಟ್ಯಾಂಕರ್‌ಗಳು ಮತ್ತು ಇನ್ನು ಕೆಲವೊಮ್ಮೆ ಐಷಾರಾಮಿ ಕಾರುಗಳಲ್ಲಿ ಮದ್ಯವನ್ನು ಸಾಗಾಟ ಮಾಡಲಾಗುತ್ತದೆ. ಆದರೆ ಇದಕ್ಕಿಂತ ದೊಡ್ಡದಾದ ಕುತೂಹಲದ ಪ್ರಕರಣ ಬೆಳಕಿಗೆ ಬಂದಿದೆ. ಹಳೆಯ ರೀತಿ ಮಾಡಿದರೆ ಪೊಲೀಸರ ಕೈಗೆ ಸಿಕ್ಕಿಬೀಳಬಹುದು ಎನ್ನುವ ಕಾರಣದಿಂದ ಮಹಿಳೆಯೊಬ್ಬಳು ಬುರ್ಖಾ ಧರಿಸಿ ಮದ್ಯ ಕಳ್ಳಸಾಗಣೆ ಮಾಡುವ ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದ್ದಾಳೆ.

ಈಕೆಯ ಹೆಸರು ಸಂಧ್ಯಾ ದೇವಿ. ಕತಿಹಾರ್‌ನಲ್ಲಿ, ಬುರ್ಖಾ ಧರಿಸಿ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಸಂಧ್ಯಾ ದೇವಿ ಎಂಬ ಮಹಿಳೆಯನ್ನು ಅಬಕಾರಿ ಇಲಾಖೆ ಹಿಡಿದಿದೆ. ಕತಿಹಾರ್‌ನಲ್ಲಿ ಮಹಿಳಾ ಮದ್ಯ ಕಳ್ಳಸಾಗಣೆದಾರರ ವಿಧಾನಗಳನ್ನು ನೋಡಿ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಪೊಲೀಸರು ಒಂದೊಂದೇ ಬಟ್ಟೆ ಬಿಚ್ಚಿದ ಬಳಿಕ ಅಂತಿಮವಾಗಿ ಪ್ಯಾಕೆಟ್​ಗಳನ್ನು ರ್ಯಾಪರ್​ನಲ್ಲಿ ಸೊಂಟಕ್ಕೆ ಸುತ್ತಿಕೊಂಡಿದ್ದಾಳೆ ಈಗ. ನಂತರ ಅದನ್ನು ಕಟ್​ ಮಾಡಿ ತೆಗೆಯಲಾಗಿದೆ. ಇವುಗಳ ಹೊರತಾಗಿಯೂ ಸಂಧ್ಯಾರಾಣಿ ಮಾತ್ರ ಏನೂ ಆಗದವಳಂತೆ ಆರಾಮಾಗಿ ನಿಂತಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. 

ಸೊಟ್ಟ ಮೂಗು ನೆಟ್ಟಗಾಗ್ತಿದ್ದಂಗೆ, ಡಿವೋರ್ಸ್​ ಕೊಟ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋ ಪಾಠ ಮಾಡ್ತಿದ್ದಾಳೆ ಈ ಮಹಿಳೆ!

View post on Instagram