ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನದ ಡ್ರೋನ್ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದೆ.
ಜಮ್ಮು (ಮೇ.8) ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಆಪರೇಷನ್ ಸಿಂದೂರ್ ಅಡಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ ನಂತರ, ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದ್ದು,, ಎಸ್ -400 ಹಲವಾರು ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ.. ಪಾಕಿಸ್ತಾನದಿಂದ ಕಳುಹಿಸಲಾದ ಡ್ರೋನ್‌ಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿದೆ. ಈ ಘಟನೆಯಿಂದ ಜಮ್ಮುವಿನ ವಾತಾವರಣ ಯುದ್ಧಮಯವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಜಮ್ಮುವಿನ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಪಾಕಿಸ್ತಾನ ವಿಫಲ ಪ್ರಯತ್ನ ಮಾಡಿತು. ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಮತ್ತೊಮ್ಮೆ ಪಾಕಿಸ್ತಾನದ ಡ್ರೋನ್ ಅನ್ನು ಆಕಾಶದಲ್ಲಿ ಹೊಡೆದುರುಳಿಸಿದೆ. ಇದಲ್ಲದೆ, ಜಮ್ಮುವಿನ ಇತರ ಪ್ರದೇಶಗಳಲ್ಲಿ ಡ್ರೋನ್ ದಾಳಿ ನಡೆಸಲು ವಿಫಲ ಪ್ರಯತ್ನಗಳು ನಡೆದವು, ಇವುಗಳನ್ನು S-400 ವಾಯು ರಕ್ಷಣಾ ವ್ಯವಸ್ಥೆಯಿಂದ ನಾಶಪಡಿಸಲಾಯಿತು.
ಇಡೀ ಜಮ್ಮು ಮತ್ತು ಕಾಶ್ಮೀರ ಕತ್ತಲೆಯಲ್ಲಿದೆ.
ಕೆಂಪು ಬಲೂನ್‌ಗಳು ಮತ್ತು ಸ್ಫೋಟದ ಶಬ್ದ:
ಅಖ್ನೂರ್‌ನ ಸ್ಥಳೀಯ ನಿವಾಸಿಯೊಬ್ಬರು, 'ಆಕಾಶದಲ್ಲಿ ಕೆಂಪು ಬಣ್ಣದ ಬಲೂನ್‌ಗಳಂತೆ ಕಾಣುವ ವಸ್ತುಗಳು ಹಾರಾಡುತ್ತಿದ್ದವು. ಕೆಲವೇ ಕ್ಷಣಗಳಲ್ಲಿ ಜೋರಾದ ಸ್ಫೋಟದ ಶಬ್ದ ಕೇಳಿತು. ಇಡೀ ಪ್ರದೇಶ ಕತ್ತಲೆಯಲ್ಲಿ ಏನೂ ಕಾಣದಂತಾಯಿತು. ವಾಹನಗಳ ದೀಪಗಳು ಮಾತ್ರ ಗೋಚರಿಸುತ್ತಿವೆ ಎಂದು ತಿಳಿಸಿದ್ದಾರೆ. ಪ್ರದೇಶದಲ್ಲಿ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸೈರನ್‌ಗಳ ಶಬ್ದಗಳು ಕೇಳಿಬರುತ್ತಿವೆ.
ಪಾಕಿಸ್ತಾನದ ಡ್ರೋನ್ ದಾಳಿ ವಿಫಲ: ವರದಿಗಳ ಪ್ರಕಾರ, ಪಾಕಿಸ್ತಾನವು ಜಮ್ಮುವಿನ ಗಡಿಭಾಗಕ್ಕೆ ಹಲವಾರು ಡ್ರೋನ್‌ಗಳನ್ನು ಕಳುಹಿಸಿತ್ತು. ಭಾರತೀಯ ಸೇನೆಯ ವಾಯು ರಕ್ಷಣಾ ವ್ಯವಸ್ಥೆಯು ಈ ಡ್ರೋನ್‌ಗಳನ್ನು ಗುರುತಿಸಿ, ನಿಖರವಾದ ದಾಳಿಯ ಮೂಲಕ ಹೊಡೆದುರುಳಿಸಿದೆ.
ಜಮ್ಮುವಿನಲ್ಲಿ ಡ್ರೋನ್ ದಾಳಿ ಎಲ್ಲಿ ನಡೆಯಿತು?
ಪಾಕಿಸ್ತಾನ ಡ್ರೋನ್‌ಗಳ ಮೂಲಕ ದಾಳಿ ಮಾಡಲು ಪ್ರಯತ್ನಿಸಿದ ಸ್ಥಳಗಳಲ್ಲಿ ಜಮ್ಮು ವಿಮಾನ ನಿಲ್ದಾಣ, ಜಮ್ಮು ರೈಲು ನಿಲ್ದಾಣ, ಚನ್ನಿ ಹಿಮ್ಮತ್ ಮತ್ತು ಜಮ್ಮುವಿಗೆ ಹೊಂದಿಕೊಂಡಿರುವ ಗಡಿ ಪ್ರದೇಶವಾದ ಆರ್‌ಎಸ್ ಪುರ ಸೇರಿವೆ. ಭಾರತದ ವಾಯು ರಕ್ಷಣಾ ವ್ಯವಸ್ಥೆ ಎಸ್ -400 ಪಾಕಿಸ್ತಾನದ ಈ ದಾಳಿ ಪ್ರಯತ್ನಗಳನ್ನು ವಿಫಲಗೊಳಿಸಿತು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಪ್ರವಾಹದ ಭೀತಿ: ನೆಲ, ಜಲ, ಆಗಸ ಮೂರು ಕಡೆಯಿಂದಲೂ ಭಾರತ ದಾಳಿ; ಕಂಗಾಲಾಗಿ ಕುಳಿತ ಪಾಕ್!
ಜಮ್ಮು ವಿಶ್ವವಿದ್ಯಾಲಯದ ಬಳಿ ಎರಡು ಪಾಕಿಸ್ತಾನಿ ಡ್ರೋನ್‌ಗಳು ಪತ್ತೆ
ಜಮ್ಮು ವಿಶ್ವವಿದ್ಯಾಲಯದ ಬಳಿ ಎರಡು ಪಾಕಿಸ್ತಾನಿ ಡ್ರೋನ್‌ಗಳು ಪತ್ತೆಯಾಗಿದ್ದು, ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ಹೊಡೆದುರುಳಿಸಿದೆ.


