ಭಾರತದ ಆಪರೇಶನ್ ಸಿಂದೂರ್‌ನಿಂದ ದೇಶವನ್ನು ಕಾಪಾಡಿ,ನಮ್ಮ ಸುರಕ್ಷತೆಯನ್ನು ಅಲ್ಲಾ ಕಾಪಾಡಬೇಕು ಎಂದು ಸಂಸತ್ತಿನಲ್ಲಿ ಸಂಸದ ಕಣ್ಣೀರಿಟ್ಟ ಘಟನೆ ನಡೆದಿದೆ.

ಇಸ್ಲಾಮಾಬಾದ್(ಮೇ.08) ಭಾರತ ಪ್ರತಿ ಉಗ್ರ ದಾಳಿಯನ್ನು ಸಹಿಸಿಕೊಂಡಿದೆ. ಪ್ರತಿದಾಳಿ ನಡೆಸಿದೇ ಶಾಂತಿ ಮಂತ್ರ ಪಠಿಸುತ್ತಾ ಉತ್ತಮ ಸಂಬಂಧ ವೃದ್ಧಿಸಲು ಮುಂದಾಗಿದೆ. 2008ರ ಮುಂಬೈ ಭಯೋತ್ಪಾದಕ ದಾಳಿ ಹಿಂದೆ ಪಾಕಿಸ್ತಾನದ ನೇರ ಕೈವಾಡವಿದೆ ಅನ್ನೋದು ಸಾಬೀತಾಗಿದೆ. ಪಾಕಿಸ್ತಾನ ಉಗ್ರ ಅಜ್ಮಲ್ ಕಸಬ್ ಕೂಡ ಜೀವಂತವಾಗಿ ಸೆರೆಯಾಗಿದ್ದ. ಆದರೆ ಭಾರತ ಅಂದೂ ಕೂಡ ಶಾಂತಿಯಿಂದಲೇ ವರ್ತಿಸಿತ್ತು. ಆದರೆ ಇದೀಗ ಭಾರತ ಇಂತಹ ದಾಳಿಯನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಇದೀಗ ಪೆಹಲ್ಗಾಂ ಉಗ್ರ ದಾಳಿಗೆ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ಭಾರತ ಧ್ವಂಸಗೊಳಿಸಿದೆ. ಭಾರತದ ಆಪರೇಶನ್ ಸಿಂದೂರ್ ದಾಳಿಗೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಪ್ರತಿದಾಳಿಗೆ ಮುಂದಾದ ಪಾಕಿಸ್ತಾನ ಗಡಿಯಲ್ಲಿನ ಸೇನಾ ಬಂಕರ್ ಸೇರಿ, ಲಾಹೋರ್‌ಗೆ ನುಗ್ಗಿ ಪಾಕಿಸ್ತಾನದ ಡಿಫೆನ್ಸ್ ಸಿಸ್ಟಮ್ ಹೊಡೆದುರುಳಿಸಿದೆ. ಭಾರತದ ಪ್ರತಿದಾಳಿಯಿಂದ ಪಾಕಿಸ್ತಾನ ಅಕ್ಷರಶಃ ನಲುಗಿದೆ. ಇಂದು ಪಾಕಿಸ್ತಾನ ಸಂಸತ್ತಿನಲ್ಲಿ ಪಾಕಿಸ್ತಾನದ ಸಂಸದ ತಾಹೀರ್ ಇಕ್ಬಾಲ್ ಕಣ್ಣೀರಿಟ್ಟಿದ್ದಾರೆ. ಅಲ್ಲಾನೇ ದೇಶವವನ್ನು ಕಾಪಾಡಬೇಕು ಎಂದು ಅಸಾಹಯಕತೆ ತೋಡಿಕೊಂಡಿದ್ದಾರೆ.

ಕಣ್ಣೀರಿಟ್ಟ ಸಂಸದ ತಾಹೀರ್ ಇಕ್ಬಾಲ್
ಸಂಸದ ತಾಹೀರ್ ಇಕ್ಬಾಲ್, ಪಾಕಿಸ್ತಾನದ ಮಾಜಿ ಸೇನಾಧಿಕಾರಿಯಾಗಿದ್ದಾರೆ. ಪಾಕಿಸ್ತಾನದ ಮೇಲೆ ಭಾರತದ ಆಪರೇಶನ್ ಸಿಂದೂರ್ ದಾಳಿಯಿಂದ ಬೆಚ್ಚಿ ಬಿದ್ದಿದ್ದಾರೆ. ಭಾರತದ ದಾಳಿಯನ್ನು ಪಾಕಿಸ್ತಾನ ಸೇನೆಗೆ ತಡೆಯಲು ಸಾಧ್ಯವಾಗಿಲ್ಲ. ಇದು ಪಾಕಿಸ್ತಾನ ಜನರ ಆತಂಕ ಮತ್ತಷ್ಟು ಹೆಚ್ಚಿಸಿದೆ. ಇದೀಗ ಪಾಕಿಸ್ತಾನ ಸಂಸತ್ತಿನಲ್ಲಿ ಭಾರತಕ್ಕೆ ಶಕ್ತವಾಗಿ ತಿರುಗೇಟು ನೀಡಬೇಕು ಎಂದು ಹಲವು ಸಂಸದರು ಆಗ್ರಹಿಸಿದ್ದಾರೆ. ಇದೇ ವೇಳೆ ಮಾತನಾಡಿದ ಸಂಸದ ತಾಹೀರ್ ಇಕ್ಬಾಲ್ ಕಣ್ಣೀರಿಡುತ್ತಲೇ ಈ ದೇಶವನ್ನು ಅಲ್ಲಾ ಕಾಪಾಡಬೇಕು ಎಂದಿದ್ದಾರೆ.

ಪಾಕಿಸ್ತಾನ ಸಂಸತ್ತಿನಲ್ಲಿ ಮನವಿ 
ತಾಹೀರ್ ಇಕ್ಬಾಲ್ ಕಣ್ಣೀರಿಡುತ್ತಾ ಆಡಿದ ಮಾತುಗಳು ವೈರಲ್ ಆಗಿದೆ. ಸತತ ದಾಳಿಯಾಗುತ್ತಿದೆ. ನಾವು ದುರ್ಬಲರಾಗುತ್ತಿದ್ದೇವೆ. ಮುಗ್ದ ಜನರನ್ನು ಕಾಪಾಡಬೇಕಿದೆ. ಈ ಸಂದರ್ಭದಲ್ಲಿ ನಾನು ಎಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ. ನಾವೆಲ್ಲಾ ಒಗ್ಗಟ್ಟಾಗಬೇಕು. ನಾವು ಅಲ್ಲಾನ ಬಳಿ ಪ್ರಾರ್ಥಿಸಬೇಕು. ಅಲ್ಲಾ ಈ ದೇಶವನ್ನು ಕಾಪಾಡಬೇಕು ಎಂದು ತಾಹೀರ್ ಇಕ್ಬಾಲ್ ಕಣ್ಣೀರಿಟ್ಟಿದ್ದಾರೆ.

Scroll to load tweet…

ಪಾಕಿಸ್ತಾನ ಮೇಲೆ ಭಾರತದ ದಾಳಿಗೆ 100ಕ್ಕೂ ಉಗ್ರರು ಖತಂ
ಪಾಕಿಸ್ತಾನದ ಮೇಲೆ ಭಾರತ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಖತಂ ಆಗಿದ್ದಾರೆ. ಪಾಕಿಸ್ತಾನದ 9 ಉಗ್ರ ನೆಲೆಯನ್ನು ಟಾರ್ಗೆಟ್ ಮಾಡಿ ಭಾರತ ದಾಳಿ ಮಾಡಿತ್ತು. ಪಾಕಿಸ್ತಾನ ಸೇನೆಗೆ ಏನಾಗುತ್ತಿದ ಅನ್ನುವಷ್ಟರಲ್ಲಿ ಮಿಸೈಲ್ ದಾಳಿ ನಡೆದಿತ್ತು. ರೇಡಾರ್‌ಗೂ ಗೊತ್ತಾಗದಂತೆ ಭಾರತ ದಾಳಿ ನಡೆಸಿತ್ತು. ಭಾರತದ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಕೆರಳಿತ್ತು. ತಕ್ಷಣವೇ ಗಡಿಯಲ್ಲಿ ಅಪ್ರಚೋದಿತನ ಗುಂಡಿನ ದಾಳಿ ನಡೆಸಿತ್ತು. ನಾಗರೀಕರ ಮೇಲೆ ದಾಳಿ ನಡೆಸಿತ್ತು. ಭಾರತದ 15 ನಗರಗಳನ್ನು ಟಾರ್ಗೆಟ್ ಮಾಡಿ ಮಿಸೈಲ್ ದಾಳಿ ಮಾಡಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿತ್ತು. ಪಾಕಿಸ್ತಾನ ಮಿಸೈಲ್ ದಾಳಿಯನ್ನು ಭಾರತದ ರೇಡಾರ್ ಹೊಡೆದುರುಳಿಸಿತ್ತು. ಇಷ್ಟೇ ಅಲ್ಲ ಭಾರತದ ಡ್ರೋನ್ ಲಾಹೋರ್‌ಗೆ ನುಗ್ಗಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ಹೊಡೆದುರುಳಿಸಿತ್ತು. ಇದರಿಂದ ಪಾಕಿಸ್ತಾನ ಜನತೆ ಬೆಚ್ಚಿ ಬಿದ್ದಿದ್ದಾರೆ. ಪಾಕಿಸ್ತಾನ ಸೇನೆ ಏನು ಮಾಡಲುತ್ತಿಲ್ಲ ಅನ್ನೋ ಆತಂಕ ಪಾಕಿಸ್ತಾನ ಜನತೆಯಲ್ಲಿ ಮನೆ ಮಾಡಿದೆ. ಇದರ ಹಿನ್ನಲೆಯಲ್ಲಿ ತಾಹೀರ್ ಇಕ್ಬಾಲ್ ಮನವಿ ವೈರಲ್ ಆಗಿದೆ. ತಾಹೀರ್ ಇಕ್ಬಾಲ್ ಮಾಜಿ ಸೇನಾಧಿಕಾರಿಯಾಗಿದ್ದಾರೆ. ಹೀಗಾಗಿ ತಾಹೀರ್ ವಿಡಿಯೋ ಸದ್ಯದ ಪಾಕಿಸ್ತಾನದ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಹೇಳುತ್ತಿದೆ ಎಂದು ಹಲವರು ವ್ಯಾಖ್ಯಾನಿಸಿದ್ದಾರೆ. 

ಆಪರೇಶನ್ ಸಿಂದೂರ ದಾಳಿಗೆ ತತ್ತರಿಸಿದ ಪಾಕಿಸ್ತಾನಕ್ಕೆ ಮೇ.9 ನಿರ್ಣಾಯಕ, ಡೂ ಆರ್ ಡೈ