'ಆಪರೇಷನ್ ಸಿಂದೂರ'ದ ರೂವಾರಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್. ಏಳು ವರ್ಷ ಪಾಕಿಸ್ತಾನದಲ್ಲಿ ಮುಸ್ಲಿಂ ವೇಷದಲ್ಲಿ ರಹಸ್ಯ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದರು. ಕಿವಿಯ ಚುಚ್ಚಿದ ಗುರುತು ಬಹಿರಂಗವಾದರೂ, ಚಾಣಾಕ್ಷತನದಿಂದ ಪಾರಾದರು. ಆಪರೇಷನ್ ಬ್ಲಾಕ್ ಥಂಡರ್ ಸೇರಿದಂತೆ ಹಲವು ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈಗ ಎಲ್ಲೆಲ್ಲೂ 'ಆಪರೇಷನ್ ಸಿಂದೂರ'ದ ಮಾತೇ. ಹಿಂದೂ ಪುರುಷರನ್ನು ಕೊಲೆ ಮಾಡಿ ಮೋದಿಗೆ ಹೋಗಿ ತಿಳಿಸು ಎಂದಿದ್ದ ಉಗ್ರರಲ್ಲಿ ಈಗ ನಡುಕ ಹುಟ್ಟುವಂಥ ಆಪರೇಷನ್ ನಡೆಯುತ್ತಿದೆ. ಭಾರತೀಯ ಸೇನೆ ಇದಾಗಲೇ 9 ಉಗ್ರರ ನೆಲೆಯನ್ನು ಸರ್ವನಾಶಗೊಳಿಸಿದೆ. ಇದರ ಭಯಾನಕತೆ ಎಷ್ಟಿದೆ ಎಂದರೆ, ಪಾಕಿಸ್ತಾನದ ಗಣ್ಯಾತಿಗಣ್ಯರೇ ಹೆದರಿ ಬೇರೆ ಕಡೆ ಓಡಿಹೋಗುತ್ತಿದ್ದಾರೆ. ಸಚಿವರು, ಸಂಸದರು ನಮ್ಮನ್ನು ಭಾರತದಿಂದ ಕಾಪಾಡಿ ಎಂದು ಸಂಸತ್ತಿನಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಇದಕ್ಕಾಗಿ ಭಾರತೀಯ ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಇನ್ನಿಲ್ಲದಂತೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಆದರೆ, ಆಪರೇಷನ್ ಸಿಂದೂರದ ಹಿಂದಿನ ಶಕ್ತಿಗಳಲ್ಲಿ ಬಹುಮುಖ್ಯವಾಗಿ ಇರುವುದು ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ ಅವರದ್ದು. ಇವರು ಒಂದರ್ಥದಲ್ಲಿ ಆಪರೇಷನ್ ಸಿಂದೂರ್ನಂಥ ಹಲವು ಆಪರೇಷನ್ಗಳ ಹಿಂದಿರುವ ಶಕ್ತಿಯೇ ಆಗಿದ್ದಾರೆ, ಆಪರೇಷನ್ ಸಿಂದೂರದ ಹೀರೋ ಎಂದರೂ ತಪ್ಪಾಗಲಿಕ್ಕಿಲ್ಲ. ಅಜಿತ್ ದೋವಲ್ ಅವರು ಭಾರತೀಯ ಗುಪ್ತಚರ ವ್ಯವಸ್ಥೆಯ ಬಹುದೊಡ್ಡ ಶಕ್ತಿಯಾಗಿದ್ದು, ಅವರ ಧೈರ್ಯ ಮತ್ತು ಕಾರ್ಯತಂತ್ರದ ಕೌಶಲಗಳನ್ನು ಹಲವರು ಉದಾಹರಣೆಯಾಗಿ ಉಲ್ಲೇಖಿಸುವುದು ಇದೆ. ಆದರೆ ಅವರ ಜೀವನದಲ್ಲಿ ಬಹಳ ಕಡಿಮೆ ಜನರಿಗೆ ತಿಳಿದಿರುವ ಒಂದು ಅಧ್ಯಾಯವೂ ಇದೆ. ಈ ಘಟನೆಯು ಅಜಿತ್ ದೋವಲ್ ಪಾಕಿಸ್ತಾನದಲ್ಲಿ ಐಬಿಯ ರಹಸ್ಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದುದು ಹಾಗೂ ಏಳು ವರ್ಷ ಮುಸ್ಲಿಂ ಅಂತೆಯೇ ಅಲ್ಲಿ ಇದ್ದ ರೋಚಕ ಕಥೆ ಇದಾಗಿದೆ. ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದ ರೋಮಾಂಚಕಾರಿ ಘಟನೆ ಅಜಿತ್ ದೋವಲ್ ಅವರದ್ದು.
Rafale Fighter Jet: 'ಆಪರೇಷನ್ ಸಿಂದೂರ'ದ ಹೀರೋ, ರಫೇಲ್ ಯುದ್ಧ ವಿಮಾನದ ರೋಚಕ ಮಾಹಿತಿ ಇಲ್ಲಿದೆ...
ಅಜಿತ್ ದೋವಲ್ ಭಾರತೀಯ ಪೊಲೀಸ್ ಸೇವೆಯ ಕೇರಳ ಕೇಡರ್ ಅಧಿಕಾರಿಯಾಗಿದ್ದಾರೆ. ಅವರು ಗುಪ್ತಚರ ಬ್ಯೂರೋ (ಐಬಿ) ಯಲ್ಲಿ ದೀರ್ಘಕಾಲ ಕೆಲಸ ಮಾಡಿದರು ಮತ್ತು 2004-2005ರಲ್ಲಿ ಅದರ ನಿರ್ದೇಶಕರಾದರು. ಇದಕ್ಕೂ ಮೊದಲು, ಅವರು ಮುಸ್ಲಿಂ ಎಂದು ನಟಿಸುತ್ತಾ ಪಾಕಿಸ್ತಾನದಲ್ಲಿ 1 ವರ್ಷ ರಹಸ್ಯ ಐಬಿ ಏಜೆಂಟ್ ಆಗಿ ಸೇವೆ ಸಲ್ಲಿಸಿದ್ದರು. ಸ್ವಲ್ಪ ಊಹಿಸಿಕೊಳ್ಳಿ. ಭಾರತದಲ್ಲಿ ಮುಸ್ಲಿಮರು ಭಾರತೀಯರಂತೆ ಇರುವುದು ದೊಡ್ಡ ವಿಷಯವಲ್ಲ, ಒಂದು ವೇಳೆ ಭಾರತೀಯರಿಗೆ ಅದು ತಿಳಿದರೂ ಮುಸ್ಲಿಮರ ಜೀವಕ್ಕಂತೂ ಅಪಾಯ ಇಲ್ಲವೇ ಇಲ್ಲ. ಆದರೆ ಅದೇ ಪಾಕಿಸ್ತಾನದಲ್ಲಿ ಹೇಗಿರಬೇಡ ಸ್ಥಿತಿ, ಇದನ್ನು ಬೇರೆ ಹೇಳಬೇಕಾಗಿಲ್ಲ ಅಲ್ಲವೆ? ಆದರೆ ಅಜಿತ್ ದೋವಲ್ ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶಕ್ಕಾಗಿ ಇಂಥದ್ದೊಂದು ಬಲಿದಾನಕ್ಕೂ ಸಿದ್ಧರಾದವರು. ಇನ್ನೂ ಕುತೂಹಲದ ವಿಷಯ ಏನೆಂದರೆ, ಅವರೊಬ್ಬರು ಹಿಂದೂ ಎನ್ನುವುದನ್ನು ತಿಳಿಯದೇ ಅವರನ್ನು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ 6 ವರ್ಷಗಳ ಕಾಲ ಅಧಿಕಾರಿಯಾಗಿ ನೇಮಿಸಲಾಗಿತ್ತು!
ಏಳು ವರ್ಷ ಹೇಗೋ ಇದ್ದುಬಿಟ್ಟರು. ಆದರೆ ಅದೊಮ್ಮೆ ಇವರು ಸಿಕ್ಕಿಬಿದ್ದೇಬಿಟ್ಟರು. ಅದು ಅವರ ಕಿವಿಯಿಂದಾಗಿ! ಹೌದು. ಮಸೀದಿಯ ಮೌಲಾನಾ ಒಬ್ಬರು ದೋವಲ್ ಅವರು ಹಿಂದೂ ಎಂದು ಗುರುತಿಸಿಯೇಬಿಟ್ಟರು! ಅಜಿತ್ ದೋವಲ್ ಅವರು ಒಮ್ಮೆ ಲಾಹೋರ್‌ನ ಒಂದು ದೊಡ್ಡ ಮಸೀದಿಯ ಬಳಿಯಿಂದ ಹಾದು ಹೋಗುತ್ತಿದ್ದಾಗ ಮೌಲಾನಾ ಅವರು ದೋವಲ್ ಅವರನ್ನು ಕರೆದು ನೀನು ಹಿಂದೂನಾ ಕೇಳಿದಾಗ ದೋವಲ್ಲ ಅರೆಕ್ಷಣ ಕಕ್ಕಾಬಿಕ್ಕಿಯಾದರು. ಈ ಪ್ರಶ್ನೆಯಿಂದ ಅವರು ಆಘಾತಕ್ಕೊಳಗಾದರು, ಆದರೆ ತಕ್ಷಣ ಉತ್ತರಿಸಿದರು ಇಲ್ಲ, ನಾನು ಮುಸ್ಲಿಂ. ಆದರೆ ಮೌಲಾನಾ ಅಷ್ಟು ಸುಲಭದಲ್ಲಿ ಬಿಡಬೇಕಲ್ಲ, ಅವರಿಗೆ ಸಾಕ್ಷಿ ಸಿಕ್ಕೇಬಿಟ್ಟಿತ್ತು. ದೊವಲ್ ಅವರನ್ನು ಹತ್ತಿರ ಕರೆದು, ನೀವು ಹಿಂದೂ ಎನ್ನುವುದು ನನಗೆ ಗೊತ್ತಾಗಿದೆ ಎಂದರು. ಅಚ್ಚರಿಯಿಂದ ದೋವಲ್, ಇದಕ್ಕೆ ಕಾರಣವೇನೆಂದು ಮೌಲಾನಾ ಅವರನ್ನು ಮಸೀದಿಯ ಕೋಣೆಗೆ ಕರೆದೊಯ್ದರು. ಅಲ್ಲಿ ದೋವಲ್ ಅವರ ಕಿವಿ ತೋರಿಸಿದರು. ನಿನ್ನ ಕಿವಿ ಚುಚ್ಚಿರುವ ಗುರುತು ಇದೆ. ಆದ್ದರಿಂದ ನೀನು ಹಿಂದೂ ಎನ್ನುವುದು ಗೊತ್ತಾಗಿದೆ. ನೀವು ಸಿಕ್ಕಿಬಿದ್ದಿದ್ದೀರಿ ಎಂದರು!
Operation Sindoor: ಕೊಂದಿದ್ದನ್ನು ಹೋಗಿ ಮೋದಿಗೆ ತಿಳಿಸು ಅಂದಿದ್ದ... ತಿಳಿಸಿದೆ ಅಷ್ಟೇ...
ಈ ಕಠಿಣ ಪರಿಸ್ಥಿತಿಯಿಂದ ಹೇಗೆ ಹೊರಬರುವುದು ಎಂದು ತಿಳಿಯದ ಅಜಿತ್ ದೋವಲ್ ಕೂಡಲೇ ತಲೆ ಉಪಯೋಗಿಸಿ, ನಿಜ ನಾನು ಹಿಂದೂ. ಆದರೆ ಬಳಿಕ ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿದಾಗ, ಮೌಲಾನಾ ಹಾಗಾದರೆ ನಿನ್ನ ಕಿವಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳು ಎಂದು ಹೇಳಿದರು. ಆದರೆ ಈ ಸಂಭಾಷಣೆಯ ಸಮಯದಲ್ಲಿ ಮೌಲಾನಾ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದರು. ಅವರು ನಾನು ಕೂಡ ಹಿಂದೂ. ನನ್ನ ಇಡೀ ಕುಟುಂಬ ಕೊಲ್ಲಲ್ಪಟ್ಟಿತು, ಆದ್ದರಿಂದ ನಾನು ನನ್ನ ಗುರುತನ್ನು ಮರೆಮಾಚಬೇಕಾಯಿತು. ಇದಾದ ನಂತರ, ಮೌಲಾನಾ ತಮ್ಮ ಬೀರು ತೆರೆದು ದುರ್ಗಾ ಮತ್ತು ಶಿವನ ವಿಗ್ರಹಗಳನ್ನು ದೋವಲ್‌ಗೆ ತೋರಿಸಿ, ನಾನು ಇನ್ನೂ ಅವುಗಳನ್ನು ಪೂಜಿಸುತ್ತೇನೆ ಎಂದು ಹೇಳಿದರು.
ಅಜಿತ್ ದೋವಲ್ ಅವರ ಈ ಅನುಭವವೂ ಸಹ ಅವರ ದೇಶ ಸೇವೆಯ ಹಾದಿಯಲ್ಲಿ ಅಡ್ಡಿಯಾಗಲು ಸಾಧ್ಯವಾಗಲಿಲ್ಲ. ಅಜಿತ್ ದೋವಲ್ ಅನೇಕ ಪ್ರಮುಖ ಗುಪ್ತಚರ ಕಾರ್ಯಾಚರಣೆಗಳ ಭಾಗವಾಗಿ ಮುಂದುವರೆದರು. ಅವರು 1988 ರಲ್ಲಿ ಆಪರೇಷನ್ ಬ್ಲಾಕ್ ಥಂಡರ್, ಇರಾಕ್‌ನಲ್ಲಿ 46 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು, 2015 ರಲ್ಲಿ ಮ್ಯಾನ್ಮಾರ್‌ನಲ್ಲಿ ಆಪರೇಷನ್ ಹಾಟ್ ಪರ್ಸ್ಯೂಟ್, ಪಿಎಫ್‌ಐ ವಿರುದ್ಧದ ಕಾರ್ಯಾಚರಣೆಗಳು ಮತ್ತು ಇತರ ಹಲವು ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ತಂತ್ರ ಮತ್ತು ಧೈರ್ಯದಿಂದಾಗಿ ಅವರನ್ನು 'ಆಧುನಿಕ ಚಾಣಕ್ಯ' ಎಂದು ಕರೆಯಲಾಗುತ್ತದೆ.
Operation Sindoor: ಸಿಂದೂರ ಕಸಿದ ಉಗ್ರರ ಮಟ್ಟ ಹಾಕಲು ನಿಂತ ಸೋಫಿಯಾ, ವ್ಯೋಮಿಕಾ


